ಪ್ಲಾಸ್ಟಿಕ್‌ ಪ್ರಾಣಿಗಳು


Team Udayavani, Jun 28, 2018, 6:00 AM IST

e-5.jpg

ಮನುಷ್ಯನ ಶವವನ್ನು ನೆಲದಲ್ಲಿ ಹೂಳಿದಾಗ ಅಥವಾ ಪ್ರಾಣಿಗಳು ಸತ್ತು ಮಣ್ಣು ಸೇರಿದಾಗ  ಏನಾಗುತ್ತದೆ? ದೇಹ ಕೊಳೆತು ಮಣ್ಣಿನಲ್ಲಿ ಲೀನವಾಗುತ್ತದೆ. ಆದರೆ, ನಿಸರ್ಗ ಸಹಜ ಈ ಕ್ರಿಯೆಗೆ ಸೆಡ್ಡು ಹೊಡೆಯುವಂಥ ಸಂಶೋಧನೆಯ ಬಗ್ಗೆ ನಿಮಗೆ ಗೊತ್ತಾ?   

ಬದುಕಿದ್ದ ಪ್ರಾಣಿಗಳು ಸತ್ತ ಮೇಲೆ, ಕೊಳೆತು ಮಣ್ಣಿನಲ್ಲಿ ಸೇರುವುದು ನಿಸರ್ಗ ನಿಯಮ. ಆದರೆ, ದೇಹದಲ್ಲಿರುವ ನೀರು ಮತ್ತು ಕೊಳೆಯುವ ಭಾಗಗಳನ್ನು ಬದಲಾಯಿಸುವ ಮೂಲಕ ದೇಹವನ್ನು ಪೂರ್ಣವಾಗಿ ರಕ್ಷಿಸಬಹುದು. ಆ ಶಾಸ್ತ್ರವೇ “ಪ್ಲಾಸ್ಟಿನೇಷನ್‌’ ಎನ್ನುತ್ತಾರೆ. 

ರಕ್ಷಣೆ ಹೇಗೆ? ಮೃತದೇಹದಿಂದ ನೀರು ಮತ್ತು ಕೊಳೆಯುವ ಭಾಗಗಳನ್ನು ಮೊದಲು ಬೇರ್ಪಡಿಸಲಾಗುತ್ತದೆ. ನಂತರ ಕೊಳೆಯದ ಅಂಗಗಳಿರುವ ಚರ್ಮಭಾಗವನ್ನು ಹೊಲೆದು, ಮೂಲ ಸ್ವರೂಪದಲ್ಲೇ ದೇಹವನ್ನು ರಕ್ಷಿಸಬಹುದು. ಈ ವಿಧಾನವನ್ನು ಸಂಶೋಧಿಸಿದವನು ಜರ್ಮನಿಯ ಅಂಗರಚನಾ ಶಾಸ್ತ್ರಜ್ಞ ಜಾನ್‌ ಗುಂಥರ್‌ವಾನ್‌ ಹೇಗೆನ್ಸ್‌. 

ಪ್ರದರ್ಶನಾಲಯವೇ ಇದೆ
ಪ್ಲಾಸ್ಟಿನೈಸೇಷನ್‌ ವಿಧಾನದಲ್ಲಿ ಜಾನ್‌, ಸಂರಕ್ಷಿಸಿದ ನೂರಕ್ಕಿಂತ ಅಧಿಕ ಪ್ರಾಣಿಗಳ ದೇಹವನ್ನು ಜರ್ಮನಿಯ ಹೈಡೆನ್‌ಬರ್ಗ್‌ನಲ್ಲಿರುವ ಪ್ರದರ್ಶನಾಲಯದಲ್ಲಿ ಇರಿಸಲಾಗಿದೆ. ಇಲ್ಲಿ ಪುಟ್ಟ ಟೈನಿಯೆಸ್ಟ್‌ ಕಪ್ಪೆಯಿಂದ ಹಿಡಿದು, 5.1ಮೀ. ಎತ್ತರದ ಜಿರಾಫೆಯೂ ಇದೆ. ಒಂಟೆ, ಜಿಂಕೆ, ನಾಯಿ, ದನ, ಚಿಂಪಾಂಜಿ, ಶಾರ್ಕ್‌, ಅಕ್ಟೋಪಸ್‌, ಕುದುರೆ, ಆಡು ಮೊದಲಾದವುಗಳ ಶವವನ್ನು ಜೀವಂತಗೊಳಿಸಿ ನಿಲ್ಲಿಸಿದ ಗುಂಥರ್‌ ಪ್ರಯತ್ನ ಶ್ಲಾಘನೀಯ! 


ತುಂಬಾ ಶ್ರಮ ಬೇಕು
ಹಾಗೆಂದು, ಕೊಳೆಯುವ ಭಾಗಗಳನ್ನು ದೇಹದಿಂದ ತೆಗೆದು ಶಾಶ್ವತವಾಗಿ ಸಂರಕ್ಷಿಸುವ ಕಾರ್ಯ ಅಂದುಕೊಂಡಷ್ಟು ಸುಲಭದ್ದಲ್ಲ. ಒಂದು ಮಾನವ ದೇಹವನ್ನು ಆ ರೀತಿ ಸಿದ್ಧಗೊಳಿಸಲು 35 ಸಾವಿರ ತಾಸುಗಳು ಬೇಕಾದರೆ, ಜಿರಾಫೆಯ ದೇಹವನ್ನು ಸಜ್ಜುಗೊಳಿಸಲು 64 ಸಾವಿರ ತಾಸುಗಳ ಶ್ರಮ ಅಗತ್ಯ. 

ಹಂತ ಹಂತವಾಗಿ ಸಂಶೋಧನೆ
ಗುಂಥರ್‌ 1977ರಲ್ಲಿ ಸಂಶೋಧಿಸಿದ ಈ ವಿಧಾನದಲ್ಲಿ ಮೊದಲಿಗೆ, ಇಡೀ ದೇಹವನ್ನು ಸಂರಕ್ಷಿಸಿ ಇಡಲು ಸಾಧ್ಯವಿರಲಿಲ್ಲ. ವೈದ್ಯಕೀಯ ಅಧ್ಯಯನಕ್ಕಾಗಿ, ದೇಹದ ಸಣ್ಣ ಸಣ್ಣ ಮಾದರಿಗಳನ್ನು ಮಾತ್ರ ಇದರ ಮೂಲಕ ಉಳಿಸಿಕೊಳ್ಳಬಹುದಿತ್ತು. ಸಂಶೋದನೆ ಮುಂದುವರಿದ ಹಾಗೆ 1990ರ ಆರಂಭದ ವೇಳೆಗೆ, ದೊಡ್ಡ ದೊಡ್ಡ ಅಂಗಗಳನ್ನು ಸಂರಕ್ಷಿಸುವ ಪ್ರಯತ್ನ ಕೈಗೂಡಿತು. 1995ರ ಹೊತ್ತಿಗೆ ಜಪಾನಿನಲ್ಲಿ ಪ್ಲಾಸ್ಟಿನೈಸೇಷನ್‌ ಮೂಲಕ ಉಳಿಸಿಕೊಂಡ ಪೂರ್ಣ ಮಾನವ ದೇಹದ ಪ್ರದರ್ಶನ ನಡೆಯಿತು. ಈ ವಿಷಯದಲ್ಲಿ ಪರ, ವಿರೋಧ ಚರ್ಚೆಗಳು ನಡೆದರೂ, ಜಗತ್ತಿನಾದ್ಯಂತ 50ಕ್ಕಿಂತ ಹೆಚ್ಚು ನಗರಗಳಲ್ಲಿ ಈ ಸಾಧನೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಾಯಿತು. 

ಹೈಡೆನ್‌ಬರ್ಗ್‌ ಪ್ರದರ್ಶನಾಲಯ
ಜೀವಜಗತ್ತಿನ ಅದ್ಭುತ ಜೀವಿಗಳ ಸಂಕೀರ್ಣ ಜೀವಶಾಸ್ತ್ರ, ಪ್ರಾಣಿ ಶಾಸ್ತ್ರ, ಶರೀರ ವಿಜಾnನದ ಬಗೆಗೆ ತಿಳಿದುಕೊಳ್ಳಲು ಜರ್ಮನಿಯ ಹೈಡೆನ್‌ಬರ್ಗ್‌ನಲ್ಲಿರುವ ಪ್ರದರ್ಶನಾಲಯ ಬಹಳ ಸೂಕ್ತವಾಗಿದೆ. ಮೂಳೆ, ನರ, ಸ್ನಾಯುಗಳು ಸೇರಿದಂತೆ ಜೀವಿಗಳ ಒಳ ಅಂಗರಚನೆಯನ್ನು ಇಲ್ಲಿ ಹತ್ತಿರದಿಂದ ಕಾಣಬಹುದು. ಗೂಳಿಯ ಹೃದಯದ ತೂಕ ಎಷ್ಟು? ಆಸ್ಟ್ರಿಚ್‌ ಯಾಕೆ ಹಾರುವುದಿಲ್ಲ? ಮುಂತಾದ ಸಂದೇಹಗಳಿಗೆ ಇಲ್ಲಿ ಉತ್ತರ ಸಿಗುತ್ತದೆ. 1000 ಮೀ. ವಿಸ್ತಾರವಿರುವ ಮೂರು ಸಭಾಂಗಣಗಳಲ್ಲಿ ಈ ದೇಹಗಳನ್ನು ಇಡಲಾಗಿದೆ. 

ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!

snehamayi krishna

Snehamayi Krishna ವಿರುದ್ಧ ಕಾಂಗ್ರೆಸ್‌ನಿಂದ ಪೊಲೀಸರಿಗೆ ಮತ್ತೊಂದು ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.