ಪೆಟ್ಟಿಗೆ ಒಳಗಡೆ ಏನಿತ್ತು?


Team Udayavani, Jun 28, 2018, 6:00 AM IST

e-9.jpg

ಬಹಳ ಕಾಲದ ಹಿಂದೆ ಒಂದು ಹಳ್ಳಿಯಲ್ಲಿ ಒಬ್ಬ ವರ್ತಕನಿದ್ದ. ಅವನ ಬಳಿ ಭೂಮಿ, ಚಿನ್ನಾಭರಣ ಹಾಗೂ ನಗದು ಸೇರಿದಂತೆ ಅಪಾರ ಸಂಪತ್ತಿತ್ತು. ಅವನಿಗೆ ಮೂವರು ಗಂಡು ಮಕ್ಕಳು. ಅವರು ಬೇರೆ ಬೇರೆ ಊರಿನಲ್ಲಿ ವೃತ್ತಿಯಲ್ಲಿದ್ದರು. ಪತ್ನಿ ತೀರಿ ಹೋಗಿದ್ದರಿಂದ ವರ್ತಕ ಒಬ್ಬಂಟಿಯಾಗಿದ್ದನು. ಮಕ್ಕಲು ವರ್ಷಕ್ಕೊಮ್ಮೆ ಮಾತ್ರ ಹಳ್ಳಿಗೆ ಬಂದು ಅಪ್ಪನ ಜೊತೆ ಕೆಲವು ದಿನ ಕಳೆದು ಹೋಗುತ್ತಿದ್ದರು. ವರ್ಷಗಳು ಉರುಳಿದಂತೆ ವರ್ತಕನಿಗೆ ಮುಂಚಿನಂತೆ ಊರೂರು ತಿರುಗಿ ವ್ಯಾಪಾರ ಮಾಡುವುದು ಕಷ್ಟವೆನಿಸಿತು. ಆದ್ದರಿಂದ ತನ್ನ ಉಳಿದ ಜೀವನವನ್ನು ಮಕ್ಕಳ ಮನೆಯಲ್ಲಿ ಕಳೆಯಲು ನಿರ್ಧರಿಸಿ, ತನ್ನ ಆಸ್ತಿಯನ್ನು ಮೂವರು ಮಕ್ಕಳಿಗೂ ಸಮನಾಗಿ ಹಂಚಿದನು. ತಾನು ಪ್ರತಿಯೊಬ್ಬ ಮಗನ ಮನೆಯಲ್ಲೂ ವರ್ಷಕ್ಕೆ ನಾಲ್ಕು ತಿಂಗಳಿನಂತೆ ಇರುತ್ತೇನೆ, ತನ್ನ ಕೊನೇ ಉಸಿರಿರುವವರೆಗೆ ಯಾವುದೇ ಕೊರತೆ‌ಯಾಗದಂತೆ ನೋಡಿಕೊಳ್ಳಬೇಕು ಎಂಬ ಶರತ್ತನ್ನೂ ಹಾಕಿದ್ದನು. 

ಪ್ರಾರಂಭದಲ್ಲಿ ಮಕ್ಕಳು ಮತ್ತು ಸೊಸೆಯಂದಿರು ವರ್ತಕನನ್ನು ಬಹಳ ಪ್ರೀತಿ ವಿಶ್ವಾಸಗಳಿಂದಲೇ ನೋಡಿಕೊಂಡರು. ಆದರೆ ವರ್ಷಗಳು ಉರುಳುತ್ತಿದ್ದಂತೆ ಅವನನ್ನು ಬೇಡದ ಅತಿಥಿಯಂತೆ ಕಾಣತೊಡಗಿದರು. ಹೊಟ್ಟೆ ತುಂಬಾ ಊಟವನ್ನೂ ಹಾಕುತ್ತಿರಲಿಲ್ಲ. ವರ್ತಕನಿಗೆ ಬದುಕೇ ಬೇಸರವೆನಿಸಿತು. ತಾನು ಆತುರಪಟ್ಟು ಆಸ್ತಿಯನ್ನೆಲ್ಲ ಮಕ್ಕಳಿಗೆ ಹಂಚಿ ದೊಡ್ಡ ತಪ್ಪು ಮಾಡಿದೆ ಎಂದುಕೊಂಡ.  

ಹೀಗಿದ್ದಾಗ ಒಮ್ಮೆ ವರ್ತಕನ ಆಪ್ತ ಸ್ನೇಹಿತನೊಬ್ಬ ಅವನನ್ನು ಕಾಣಲು ಬಂದ. ವರ್ತಕ ಅವನಿಗೆ ತನ್ನ ದುಃಸ್ಥಿತಿಯ ಬಗ್ಗೆ ವಿವರಿಸಿ ಕಣ್ಣೀರಿಟ್ಟ. ಸ್ನೇಹಿತ ಅವನಿಗೆ ಒಂದು ಉಪಾಯ ಹೇಳಿಕೊಟ್ಟು ತನ್ನೂರಿಗೆ ಹಿಂದಿರುಗಿದ. ಹಿಂದಿರುಗುವಾಗ ಪೆಟ್ಟಿಗೆಯೊಂದನ್ನು ವರ್ತಕನಿಗೆ ಕೊಟ್ಟು ಹೋದನು. ಅದಕ್ಕೆ ಬಲವಾದ ಬೀಗ ಹಾಕಲಾಗಿತ್ತು. ಅದರಲ್ಲಿ ಏನಿದೆಯೆಂದು ವರ್ತಕನ ಹೊರತಾಗಿ ಯಾರಿಗೂ ಗೊತ್ತಿರಲಿಲ್ಲ. ಸೊಸೆಯಂದಿರೆಲ್ಲರೂ ಸೇರಿ ಪೆಟ್ಟಿಗೆಯಲ್ಲೇನಿದೆ ಎಂದು ತಿಳಿದುಕೊಳ್ಳಲು ಪ್ರಯತ್ನಿಸಿದರು. ಆದರೆ ಪ್ರಯತ್ನ ವಿಫ‌ಲವಾಯಿತು. ವರ್ತಕನ ಸ್ನೇಹಿತ ಸಾಲ ಹಿಂದಿರುಗಿಸುವ ಸಲುವಾಗಿ ಪೆಟ್ಟಿಗೆ ತುಂಬಾ ಚಿನ್ನಾಭರಣಗಳನ್ನು ಕೊಟ್ಟು ಹೋಗಿದ್ದಾನೆ ಎಂಬ ಗುಲ್ಲು ಊರೆಲ್ಲಾ ಹರಡಿತು.

ಪೆಟ್ಟಿಗೆ ಮೇಲಿನ ಆಸೆಗಾಗಿ ಮನೆಯವರು ವರ್ತಕನನ್ನು ಚೆನ್ನಾಗಿ ನೋಡಿಕೊಳ್ಳತೊಡಗಿದರು. ವರ್ತಕ ಒಂದು ಕ್ಷಣವೂ ಪೆಟ್ಟಿಗೆ ಬಿಟ್ಟಿರುತ್ತಿರಲಿಲ್ಲ. ರಾತ್ರಿ ಮಲಗುವಾಗಲೂ ಅದನ್ನು ಪಕ್ಕದಲ್ಲೇ ಇಟ್ಟುಕೊಂಡಿರುತ್ತಿದ್ದ. ದೊಡ್ಡ ಮಗನಂತೂ ತನ್ನ ತಂದೆಯನ್ನು ಹಿಂದೆಂದೂ ತೋರದಷ್ಟು ಪ್ರೀತಿಯಿಂದ ನೋಡಿಕೊಂಡನು. ಪ್ರತಿದಿನ ಮಕ್ಕಳು ಪೆಟ್ಟಿಗೆ ಕುರಿತು ಕನಸು ಕಂಡಿದ್ದೇ ಕಂಡಿದ್ದು.

ಒಂದು ದಿನ ವರ್ತಕ ತನ್ನ ಕೊನೆಯ ಮಗನ ಮನೆಯಲ್ಲಿ ಕೊನೆಯುಸಿರೆಳೆದ. ಅದನ್ನೇ ಕಾಯುತ್ತಿದ್ದ ಕಿರಿಯ ಸೊಸೆ ಕೂಡಲೇ ಉಳಿದವರಿಗೆ ಸುದ್ದಿ ತಿಳಿಸಿದಳು. ಮಕ್ಕಳು ತಮ್ಮ ತಂದೆಯ ಅಂತ್ಯ ಸಂಸ್ಕಾರವನ್ನು ಯಾವುದೇ ಲೋಪವಾಗದಂತೆ ನೆರವೇರಿಸಿದರು. ಧಾರಾಳವಾಗಿ ಹಣ ಖರ್ಚು ಮಾಡಿದರು. ಕಾರ್ಯವೆಲ್ಲಾ ಮುಗಿದ ನಂತರ ಮನೆಗೆ ವಾಪಸ್ಸಾಗಿ ಪೆಟ್ಟಿಗೆಯನ್ನು ತೆರೆದರು. ಅವರಿಗೆ ನಿರಾಸೆ ಕಾದಿತ್ತು. ಪೆಟ್ಟಿಗೆ ತುಂಬಾ ಚಿನ್ನದ ನಾಣ್ಯಗಳಿಗೆ ಬದಲಾಗಿ ಜಲ್ಲಿಕಲ್ಲುಗಳಿದ್ದವು. ಜೊತೆಗೆ ಒಂದು ಪತ್ರವೂ ಇತ್ತು. ಅದರಲ್ಲಿ “ನಿಮ್ಮಷ್ಟು ದುರಾಶೆಯುಳ್ಳವರಿಗೆ ನಾನು ಬಿಟ್ಟು ಹೋಗುತ್ತಿರುವ ಸಂಪತ್ತು ಇದೇ’ ಎಂದು ಬರೆದಿತ್ತು.   

ಪದ್ಮಜಾ ಸುಂದರೇಶ್‌, ಮೈಸೂರು

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Power-Cable

Bantwala: ಬಿ.ಸಿ.ರೋಡಿನಲ್ಲಿ ರೈಲ್ವೇಯ ವಿದ್ಯುತ್‌ ಕೇಬಲ್‌ ಕಳವು

police

Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್‌ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.