ಆಸ್ಟ್ರೇಲಿಯ ವಿರುದ್ಧ ಎಡವಿದ ಭಾರತ
Team Udayavani, Jun 28, 2018, 6:00 AM IST
ಬ್ರೆಡಾ (ಹಾಲೆಂಡ್): ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಬುಧವಾರದ ಮುಖಾಮುಖೀಯಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ವಿರುದ್ಧ ಸಾಮಾನ್ಯ ಮಟ್ಟದ ಪ್ರದರ್ಶನ ನೀಡಿದ ಭಾರತ 2-3 ಗೋಲುಗಳ ಅಂತರದಿಂದ ಶರಣಾಗಿದೆ.
ಆಸ್ಟ್ರೇಲಿಯ ಪರ ಲಾಕ್ಲನ್ ಶಾರ್ಪ್ (6ನೇ ನಿಮಿಷ), ಟಾಮ್ ಕ್ರೆಗ್ (15ನೇ ನಿಮಿಷ) ಹಾಗೂ ಟ್ರೆಂಟ್ ಮಿಟ್ಟನ್ (33ನೇ ನಿಮಿಷ) ಗೋಲು ಬಾರಿಸಿದರು. ಭಾರತದ ಪರ ವರುಣ್ ಕುಮಾರ್ 10ನೇ ನಿಮಿಷದಲ್ಲೇ ಗೋಲು ಬಾರಿಸಿ ಪಂದ್ಯವನ್ನು ಸಮಬಲಕ್ಕೆ ತಂದರೂ ಬಳಿಕ ಕಾಂಗರೂ ಕೈ ಮೇಲಾಗುತ್ತ ಹೋಯಿತು. ಶ್ರೀಜೇಶ್ ಪಡೆ ಇನ್ನೊಂದು ಗೋಲಿಗಾಗಿ 58ನೇ ನಿಮಿಷದ ತನಕ ಕಾಯಬೇಕಾಯಿತು. ಈ ಗೋಲು ಹರ್ಮನ್‌ಪ್ರೀತ್ ಸಿಂಗ್ ಅವರಿಂದ ದಾಖಲಾಯಿತು. ಆಗ ಪಂದ್ಯವನ್ನು ಮತ್ತೆ ಸಮಬಲಕ್ಕೆ ತರುವ ಅವಕಾಶವೊಂದು ಭಾರತದ ಮುಂದಿತ್ತು. ಆದರೆ ಆಸ್ಟ್ರೇಲಿಯ ಬಿಗಿಯಾದ ಹೋರಾಟ ನಡೆಸಿ ಭಾರತವನ್ನು ಕಟ್ಟಿಹಾಕಿತು.
ಭಾರತ ತನ್ನ ಮೊದಲೆರಡು ಪಂದ್ಯಗಳಲ್ಲಿ ಪಾಕಿಸ್ಥಾನ (4-0) ಹಾಗೂ ಆರ್ಜೆಂಟೀನಾವನ್ನು ಮಣಿಸಿತ್ತು (2-1). ಆದರೆ ಆಸ್ಟ್ರೇಲಿಯ ವಿರುದ್ಧ ಸೋತು ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿದಿದೆ (6 ಅಂಕ). ಗೋಲು ಲೆಕ್ಕಾಚಾರದಲ್ಲಿ ಭಾರತಕ್ಕಿಂತ ಮುಂದಿರುವ ಆತಿಥೇಯ ಹಾಲೆಂಡ್ ದ್ವಿತೀಯ ಸ್ಥಾನದಲ್ಲಿದೆ (6 ಅಂಕ). ಒಟ್ಟು 7 ಅಂಕ ಹೊಂದಿರುವ ಆಸ್ಟ್ರೇಲಿಯ ಅಗ್ರಸ್ಥಾನಿಯಾಗಿದೆ. ಭಾರತ ತನ್ನ ಮುಂದಿನ ಪಂದ್ಯ ವನ್ನು ಗುರುವಾರ ಬೆಲ್ಜಿಯಂ ವಿರುದ್ಧ ಆಡಲಿದೆ. ಕೊನೆಯ ಪಂದ್ಯದಲ್ಲಿ ಹಾಲೆಂಡನ್ನು ಎದುರಿಸಲಿದೆ (ಜೂ. 30).
ರೌಂಡ್ ರಾಬಿನ್ ಮಾದರಿಯ ಕೂಟ ಇದಾಗಿದ್ದು, ಅಗ್ರಸ್ಥಾನ ಸಂಪಾ ದಿಸಿದ ತಂಡಗಳೆರಡು ರವಿವಾರದ ಪ್ರಶಸ್ತಿ ಸಮರದಲ್ಲಿ ಸೆಣಸಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.