ಸೋರುವ ಮನೆಯಲ್ಲಿ ಉಪನ್ಯಾಸಕಿ ಆಗುವ ಕನಸು ಕಾಣುತ್ತಿರುವ ಸವಿತಾ
Team Udayavani, Jun 28, 2018, 3:50 AM IST
ಕಾಸರಗೋಡು: ಈಗಲೋ ಆಗಲೋ ಕುಸಿವ ಭೀತಿಯಲ್ಲಿರುವ ಮನೆ. ಆದರೆ ಅದರೊಳಗೇ ಕೂತು ಇಲ್ಲೊಬ್ಬಳು ಪ್ರತಿಭಾವಂತ ವಿದ್ಯಾರ್ಥಿನಿ ಉಪನ್ಯಾಸಕಿಯಾಗುವ ಕನಸು ಕಾಣುತ್ತಿದ್ದಾಳೆ. ಆಕೆಯ ಮನೆಯ ಪರಿಸ್ಥಿತಿ ಉನ್ನತ ಕನಸಿಗೆ ಅಡ್ಡಿಯಾಗಿದೆ.
ಪ್ರತಿಭೆಗೆ ತಡೆ
ಕಾಸರಗೋಡು ತಾಲೂಕಿನ ಚೆರ್ಕಳ ಪಂಚಾಯತ್ ನ ಪಾಡಿಯ ಮಹಾಬಲ ರೈ ಹಾಗೂ ಸುಮಿತ್ರ ದಂಪತಿಯ ಪುತ್ರಿ ಸವಿತಾ ಕನ್ನಡ ಬಿಎ ಪದವೀಧರೆಯಾಗಿದ್ದು ಕಣ್ಣೂರು ವಿ.ವಿ. ಮಟ್ಟದಲ್ಲಿ ತೃತೀಯ ಸ್ಥಾನಿಯಾಗಿ ಹೊರಹೊಮ್ಮಿದಾಕೆ. ತಂದೆ ಕೃಷಿ ಕಾರ್ಯ ಮಾಡಿದರೆ, ತಾಯಿ ಬೀಡಿ ಕಟ್ಟಿ ಮಾಡುವ ಸಂಪಾದನೆಯೇ ಇವರಿಗೆ ಆಶ್ರಯ. ಓದಿನಲ್ಲಿ ಉತ್ತಮ ಸಾಧನೆ ಮಾಡಿದ ಸವಿತಾಗೆ ಉಪನ್ಯಾಸಕಿ ಆಗುವ ಮಹದಾಸೆ ಇದೆ. ಆದರೆ ಅದು ಈಡೇರುತ್ತಿಲ್ಲ!
ಗೋಡೆ ಜರಿದು ಬಿದ್ದ ಮನೆ
ಸವಿತಾಮತ್ತು ಹೆತ್ತವರು ಇರುವುದು 30 ವರ್ಷ ಹಳೆಯ ಮಣ್ಣಿನ ಮನೆಯಲ್ಲಿ. ಧಾರಾಕಾರ ಮಳೆಗೆ ಆ ಮನೆಯ ಗೋಡೆಯೆಲ್ಲ ಕರಗಿ ಜರಿದು ಬಿದ್ದಿದೆ. ಗೋಡೆಯ ಮೇಲೆ ಸೋಗೆ ಹಾಸಲಾಗಿದ್ದು, ಅದರ ಮೇಲಿಂದ ಟಾರ್ಪಾಲ್ ಹಾಕಲಾಗಿದೆ. ಟಾರ್ಪಾಲ್ ಮತ್ತು ಸೋಗೆಯನ್ನು ಪ್ರತಿವರ್ಷ ಈ ಕುಟುಂಬ ಹಾಸಿದರೂ ಸೋರುವ ಮಾಡಿಗೆ ಪರಿಹಾರವೇ ಕಂಡಿಲ್ಲ. ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ರಾತ್ರಿಯೂ ಛತ್ರಿ ಹಿಡಿದು ಕೂರುವ ಪರಿಸ್ಥಿತಿ ಇದೆ.
ಸಾಲದ ಹೊರೆ
ಸವಿತಾ ಅವರ ಸೋದರಿಯ ವಿವಾಹಕ್ಕಾಗಿ ಮಹಾಬಲ ರೈ ಬ್ಯಾಂಕ್ ನಲ್ಲಿ ಸಾಲ ಮಾಡಿದ್ದು, ಸಾಲ ತೀರಿಸಲು ಇದುವರೆಗೆ ಸಾಧ್ಯವಾಗಿಲ್ಲ. ಸುಮಾರು 1 ಲಕ್ಷ ರೂ. ಸಾಲವಿದ್ದು ವರ್ಷಂಪ್ರತಿ 20,000 ರೂ. ಬಡ್ಡಿ ಪಾವತಿಸಲು ಇವರು ಸಂಕಷ್ಟ ಪಡುತ್ತಿದ್ದಾರೆ. ಇನ್ನು ಇವರ ಮನೆಯಲ್ಲಿ ಶೌಚಾಲಯ ಇಲ್ಲ. ಕುಡಿಯುವ ನೀರಿಗೆ ಬಾವಿ ಇದ್ದರೂ ಅದು ಬೇಸಗೆಯಲ್ಲಿ ಬರಡಾಗಿ ನೀರಿಗೆ ಕಷ್ಟ ಪಡುವ ಸ್ಥಿತಿ ಇದೆ.
ಸವಿತಾಗೆ ನೆರವು ನೀಡಿ
ಸವಿತಾಳ ಕುಟುಂಬದ ಸ್ಥಿತಿಯನ್ನು ಮನಗಂಡು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಈ ಕುಟುಂಬಕ್ಕೆ ಪುಟ್ಟ ಸೂರೊಂದನ್ನು ನಿರ್ಮಿಸಲು ಮುಂದಾಗಿದೆ. ಇವರಿಗೆ ಸಹಾಯ ಮಾಡಲು ಇಚ್ಛಿಸುವವರು ಇಲ್ಲಿಗೆ ನೆರವು ನೀಡಬಹುದು.
ಯೂನಿಯನ್ ಬ್ಯಾಂಕ್ ಖಾತೆ ನಂಬ್ರ: 501002010008056
IFSC ಕೋಡ್: UBINO 550108.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.