ಪುಂಜಾಲಕಟ್ಟೆ: ಸಾಮೂಹಿಕ ವಿವಾಹ ದಂಪತಿಗೆ ಪ್ರೋತ್ಸಾಹಧನ ವಿತರಣೆ
Team Udayavani, Jun 28, 2018, 11:01 AM IST
ಪುಂಜಾಲಕಟ್ಟೆ : ಇಲ್ಲಿನ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಇದರ 10ನೇ ವರ್ಷದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ವಿವಾಹವಾಗಿರುವ ವಧುಗಳಿಗೆ ರಾಜ್ಯ ಸರಕಾರ ಮತ್ತು ಕ್ಲಬ್ ವತಿಯಿಂದ ತಲಾ 50,000 ರೂ. ಸಹಾಯಧನದ ಬಾಂಡ್ ವಿತರಣೆ ಕಾರ್ಯಕ್ರಮ ಪುಂಜಾಲಕಟ್ಟೆ ನಂದಗೋಕುಲ ಸಭಾಭವನದಲ್ಲಿ ಬುಧವಾರ ಜರಗಿತು. ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರು ನೂತನ ಜೋಡಿಗಳಿಗೆ ಸಹಾಯಧನವನ್ನು ವಿತರಿಸಿ, ಶುಭ ಹಾರೈಸಿದರು.
ಈ ಸಂದರ್ಭ ಕ್ಲಬ್‌ನ ಗೌರವಾಧ್ಯಕ್ಷ, ಸಂಗಬೆಟ್ಟು ಜಿ.ಪಂ. ಸದಸ್ಯ ತುಂಗಪ್ಪ ಬಂಗೇರ, ಪಿಲಾತಬೆಟ್ಟು ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಕುಮಂಗಿಲ, ನಂದಗೋಕುಲ ಸಭಾಭವನದ ಮಾಲಕ ಪ್ರಕಾಶ್ ಭಟ್, ವಾಮದಪದವು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಯಶೋಧರ ಶೆಟ್ಟಿ ದಂಡೆ, ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ರಮೇಶ್ ಶೆಟ್ಟಿ ಮಜಲೋಡಿ, ತಾ.ಪಂ. ಸದಸ್ಯ ರಮೇಶ್ ಕುಡ್ಮೇರು, ಹಾಪ್ ಕಾಮ್ಸ್ ನ ಸದಸ್ಯ ವಿಜಯ ರೈ ಆಲದಪದವು ಉಪಸ್ಥಿತರಿದ್ದರು.
ಕ್ಲಬ್‌ನ ಸ್ಥಾಪಕಾಧ್ಯಕ್ಷ ತುಂಗಪ್ಪ ಬಂಗೇರ ಪ್ರಸ್ತಾವಿಸಿದರು. ಶಾಸಕರನ್ನು ಕ್ಲಬ್ ವತಿಯಿಂದ ಸಮ್ಮಾನಿಸಲಾಯಿತು. ರಾಜೇಶ್ ಪುಳಿಮಜಲು ಸ್ವಾಗತಿಸಿ, ಲತಾ ಎಸ್. ವಂದಿಸಿದರು. ಅಮೃತಾ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Twist; ಛತ್ತೀಸ್ ಗಢ ಪತ್ರಕರ್ತನ ಹ*ತ್ಯೆ: ಸೋದರ ಸಂಬಂಧಿಯೇ ಪ್ರಮುಖ ಆರೋಪಿ!
Kannada Movie: ನಿರಂಜನ್ ಶೆಟ್ಟಿಯ ʼ31 ಡೇಸ್ʼ ಚಿತ್ರ
Bellary: ಪ್ರಿಯಾಂಕ್ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
Udupi; ಪಿಣರಾಯಿ ವಿಜಯನ್ ಸನಾತನ ಹಿಂದೂ ಧರ್ಮದ ಶತ್ರು: ಸುನಿಲ್ ಕುಮಾರ್ ಆಕ್ರೋಶ
Water Price Hike: ಬಸ್ ದರ ಏರಿಕೆ ಬೆನ್ನಲ್ಲೇ ನೀರಿನ ಬೆಲೆ ಹೆಚ್ಚಳ ಬಿಸಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.