ಏಡಿಗಳ ಹನ್ನೊಂದು ಪ್ರಭೇದ;ಒಂದು  ಕುಲ ಪತ್ತೆಹಚ್ಚಿದ ತೇಜಸ್‌ ಠಾಕ್ರೆ


Team Udayavani, Jun 28, 2018, 11:18 AM IST

5.jpg

ಮುಂಬಯಿ: ಠಾಕ್ರೆ ಕುಟುಂಬದ ಮೂರನೇ ತಲೆಮಾರು ಮತ್ತು ಶಿವಸೇನೆ ಅಧ್ಯಕ್ಷ ಉದ್ಧವ್‌ ಠಾಕ್ರೆ ಅವರ ಹಿರಿಯ ಮಗ ಆದಿತ್ಯ ಠಾಕ್ರೆ ಅವರು ರಾಜಕೀಯ ರಂಗದಲ್ಲಿ  ತಮ್ಮ ಛಾಪನ್ನು  ಪ್ರದರ್ಶಿಸುತ್ತಿದ್ದರೆ,ಆದಿತ್ಯ ಅವರ  ಸಹೋದರ ತೇಜಸ್‌ ಠಾಕ್ರೆ ಅವರು ವನ್ಯಜೀವಿ ಸಂಶೋಧನೆಯಲ್ಲಿ  ಹೊಸ ಸಾಧನೆಯನ್ನು ಮಾಡುತ್ತ,  ಸಂಶೋಧನಾ ಕ್ಷೇತ್ರದಲ್ಲಿ  ಠಾಕ್ರೆ ಕುಟುಂಬದ ಹೆಸರನ್ನು ರಾರಾಜಿಸುವಂತೆ ಮಾಡುತ್ತಿದ್ದಾರೆ.

ಉದ್ಧವ್‌  ಠಾಕ್ರೆ ಅವರ ಕಿರಿಯ ಮಗ ತೇಜಸ್‌ ಠಾಕ್ರೆ ಅವರು ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ  ಏಡಿಗಳ 11 ಅಪರೂಪದ ಪ್ರಭೇದಗಳನ್ನು ಮತ್ತು ತಾಜಾ ನೀರಿನ ಏಡಿಗಳ ಹೊಸ ಕುಲವನ್ನು ಕಂಡುಹಿಡಿದಿದ್ದಾರೆ.

20ರ ಹರೆಯದ ವಿದ್ಯಾರ್ಥಿ  ತೇಜಸ್‌ ಠಾಕ್ರೆ ಅವರ ಈ ವೈಜ್ಞಾನಿಕಾ ಸಂಶೋಧನೆಯು ನ್ಯೂಜಿಲ್ಯಾಂಡ್‌ ಮೂಲದ ಅಂತಾರಾಷ್ಟ್ರೀಯ ನಿಯತಕಾಲಿಕೆ ಜುಟಾಕ್ಸಾದಲ್ಲಿ  ಪ್ರಕಟವಾಗಿದೆ ಎಂದು ಉದ್ಧವ್‌ ಠಾಕ್ರೆ ಅವರ ಆಪ್ತ ಸಹಾಯಕ ಹರ್ಷಲ್‌ ಪ್ರಧಾನ್‌ ತಿಳಿಸಿದ್ದಾರೆ.

ಈ ಸಂಶೋಧನೆಗಳಲ್ಲಿ ಭಾಗವಹಿಸಿರುವ ತಂಡವು ತಾವು ಕಂಡು ಹಿಡಿದ ಏಡಿಗಳ ಹೊಸ ಕುಲಕ್ಕೆ “ಸಹ್ಯಾದ್ರಿಯಾನಾ’ (ಪಶ್ಚಿಮ ಘಟ್ಟಗಳಿಗೆ ಮರಾಠಿ ಹೆಸರು ಸಹ್ಯಾದ್ರಿ) ಎಂಬ ಹೆಸರನ್ನಿಟ್ಟಿದೆ ಎಂದವರು ಹೇಳಿದ್ದಾರೆ.

ತೇಜಸ್‌ ಅವರು  ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಪರ್ವತ ಸಮೂಹದಲ್ಲಿ ನೆಲೆಸಿರುವ ಕೊಂಕಣ, ಸತಾರ, ಕೊಲ್ಲಾಪುರ ಮತ್ತು ಅಹ್ಮದ್‌ನಗರ ಪ್ರದೇಶಗಳಲ್ಲಿ ಏಡಿಗಳ ಹೊಸ ಪ್ರಭೇದಗಳನ್ನು ಪತ್ತೆಮಾಡಿದ್ದಾರೆ. ತೇಜಸ್‌ ಅವರಿಗೆ ಈ ಕೆಲಸದಲ್ಲಿ  ಅವರ ಇಬ್ಬರು ಸಂಗಡಿಗರುಗಳಾದ ಡಾ| ಸಮೀರ್‌ ಕುಮಾರ್‌ ಪಾಟೀಲ್‌ ಮತ್ತು ಅನೀಲ್‌ ಖರೆ ಅವರು ಜೊತೆ ನೀಡಿದ್ದರು.

ಡಾ| ಎಸ್‌. ಕೆ. ಪಾಟೀಲ್‌ ಅವರು ಭಾರತೀಯ ಪ್ರಾಣಿವಿಜ್ಞಾನ ಸರ್ವೇಕ್ಷಣಾ ಇಲಾಖೆಗೆ ಸಂಬಂಧಪಟ್ಟವರಾಗಿದ್ದಾರೆ. ಇವರು ತೇಜಸ್‌ಗೆ ಸಂಶೋಧನಾ ದಾಖಲೆಗಳನ್ನು  ಬರೆಯಲು ಸಹಾಯ ಮಾಡಿದ್ದರು. 2015 ಮತ್ತು 2017ರ ಅವಧಿಯಲ್ಲಿ ಈ ಸಂಶೋಧನೆ ನಡೆದಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟ ಜೀವವೈವಧ್ಯತೆಯಿಂದ ಕೂಡಿದ್ದು, ಸಸ್ಯ ಮತ್ತು ಪ್ರಾಣಿಗಳ ಸಾವಿರಾರು ಪ್ರಭೇದಗಳು ಅಲ್ಲಿವೆ. ಕಳೆದ ಕೆಲವು ವರ್ಷಗಳಿಂದ ಈ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಸಂಶೋಧಕರು ವನ್ಯಜೀವಿಗಳು ಹಲವು ಬಗೆಯ ಪ್ರಭೇದಗಳನ್ನು ಇಲ್ಲಿ ಪತ್ತೆಮಾಡಿದ್ದಾರೆ.

2015ರ ಜುಲೈನಿಂದ ತೇಜಸ್‌ ಅವರು  ಏಡಿಯ ಹೊಸ ಪ್ರಭೇದವನ್ನು ಹುಡುಕುವ ಕೆಲಸವನ್ನು ಆರಂಭಿಸಿದ್ದರು. ಇದಕ್ಕಾಗಿ ಅವರಿಗೆ  ಹಲವು ತಿಂಗಳು ಕೊಂಕಣದಲ್ಲಿ  ನೆಲೆಸಿದ್ದರು. ಇಷ್ಟೇ ಅಲ್ಲದೆ, ಅವರು ತಮ್ಮ ಸಂಶೋಧನೆ ಕೆಲಸಕ್ಕಾಗಿ  ಹೆಚ್ಚಿನ ದಿನಗಳವರೆಗೆ ದಟ್ಟ ಕಾಡುಗಳಲ್ಲಿ  ಜಿಗಣೆ ಮತ್ತು ವಿಷಪೂರಿತ ಹಾವುಗಳ ನಡುವೆ  ಉಳಿದ್ದಿದ್ದರು. ಮಳೆಗಾಲದ ಸಮಯದಲ್ಲಿ ಕ್ಯಾಮೆರಾ ಮತ್ತು ಇತರ ಉಪಕರಣಗಳನ್ನು ಮಳೆನೀರಿನಿಂದ ರಕ್ಷಿಸುವುದು ತೇಜಸ್‌ ಅವರ ಮುಂದೆ ಸವಾಲಾಗಿತ್ತು.  ಎಲ್ಲಕ್ಕೂ ಮೊದಲಾಗಿ ಅವರು ಸರೀಸೃಪಗಳು ಮತ್ತು ಉಭಯಚರಗಳ ಮೇಲೆ ಸಂಶೋಧನೆಯನ್ನು ಪ್ರಾರಂಭಿಸಿದ್ದರು. ಏಡಿಗಳನ್ನು ಪತ್ತೆಹಚ್ಚುವ, ಅವುಗಳ ಫೋಟೋ ತೆಗೆಯುವ ಹಾಗೂ ಅವುಗಳ ಮಾದರಿಗಳನ್ನು  ಸಂಗ್ರಹಿಸುವ ಕೆಲಸವನ್ನು  ಕೇವಲ  ತೇಜಸ್‌ ಅವರೇ ಮಾಡಿದ್ದರು.  ತಂಡದ ಇತರ ಸದಸ್ಯರು ಶೋಧಿಸಲ್ಪಟ್ಟ  ಪ್ರಭೇದಗಳಿಗೆ  ಹೆಸರು ಸೂಚಿಸುವುದರಿಂದ ಹಿಡಿದು  ಅವುಗಳ ಬಗ್ಗೆ  ಬರೆಯುವ ಕೆಲಸ ಮಾಡಿದ್ದರು.

ಈ ಸಂಪೂರ್ಣ ಯೋಜನೆ ನನ್ನ ಫೀಲ್ಡ್‌ ಟೀಮ್‌ನ ಕಠಿನ ಪರಿಶ್ರಮದ ಫಲಿತಾಂಶವಾಗಿದೆ. ಈ ಸಂಶೋಧನೆಗಾಗಿ ನಮಗೆ ಪರವಾನಿಗೆಯನ್ನು ನೀಡಿದ್ದಕ್ಕಾಗಿ ನಾಮ ಮಹಾರಾಷ್ಟ್ರ ರಾಜ್ಯ ಅರಣ್ಯ ಇಲಾಖೆಯವರಿಗೆ ಧನ್ಯವಾದ ಹೇಳುತ್ತೇನೆ ಎಂದು ತೇಜಸ್‌ ನುಡಿದಿದ್ದಾರೆ. ತೇಜಸ್‌ ಅವರಿಗೆ ರಾಜಕೀಯದಲ್ಲಿ ಸೇರುವ ಯಾವುದೇ ಯೋಜನೆಗಳು ಇಲ್ಲವಂತೆ.

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Adani: ಲಂಚ ಕೇಸ್‌; ಜಗನ್‌ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ

Adani: ಲಂಚ ಕೇಸ್‌; ಜಗನ್‌ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ

Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ

Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.