ನಗರ ಜಿ.ಪಂ ಆಸ್ತಿಗೂ ಜಿಐಎಸ್‌


Team Udayavani, Jun 28, 2018, 3:16 PM IST

blore-1.jpg

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಎಲ್ಲ ಆಸ್ತಿಗಳನ್ನು ಭೌಗೋಳಿಕ ಮಾಹಿತಿ ಪದ್ಧತಿ (ಜಿಐಎಸ್‌) ಅಡಿಯಲ್ಲಿ ತರುವ ಬಿಬಿಎಂಪಿ ಕ್ರಮ ಯಶಸ್ವಿಯಾಗಿ ರುವ ಬೆನ್ನಲ್ಲೇ, ಬೆಂಗಳೂರು ನಗರ ಜಿಲ್ಲಾ
ಪಂಚಾಯಿತಿ ಕೂಡ ಇದೇ ಮಾದರಿ ಅನುಸರಿಸಲು ಸಿದ್ಧತೆ ನಡೆಸಿದೆ.

ಜಿಐಎಸ್‌ ಅನುಷ್ಠಾನದ ನಂತರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಾಗಿತ್ತು. ಹೀಗಾಗಿ ತೆರಿಗೆ ಸಂಗ್ರಹದಲ್ಲಿ ತೀರಾ ಕಳಪೆ ಪ್ರದರ್ಶನ ತೋರುತ್ತಿರುವ ನಗರ ಜಿಲ್ಲೆಯ ತಾಲೂಕುಗಳ ಆಯ್ದ ಗ್ರಾಮ ಪಂಚಾಯಿತಿಗಳನ್ನು ಈ ಪದ್ಧತಿ ವ್ಯಾಪ್ತಿಗೆ ತರಲು ಜಿ.ಪಂ ನಿರ್ಧರಿಸಿದೆ. 

ನಗರ ಜಿ.ಪಂ ವ್ಯಾಪ್ತಿಯಲ್ಲಿ 96 ಗ್ರಾ.ಪಂಗಳಿದ್ದು, ದಾಖಲೆಗಳ ಪ್ರಕಾರ 5,64,926 ಆಸ್ತಿಗಳಿವೆ. ಆದರೆ ಈ ಪೈಕಿ ತೆರಿಗೆ ಪಾವತಿ ಆಗುತ್ತಿರುವುದು 1,35,803 ಆಸ್ತಿಗಳಿಂದ ಮಾತ್ರ. ಅಂದರೆ, ಆಸ್ತಿ ತೆರಿಗೆ ಸಂಗ್ರಹ ಶೇ.25ರಷ್ಟೂ ಇಲ್ಲ. ಕಾರಣ, ತೆರಿಗೆ ಜಾಲದಿಂದ ತಪ್ಪಿ ಹೋಗಿರುವ ಭೂಮಿ ಅಥವಾ ಆಸ್ತಿಗಳನ್ನು ಜಿಐಎಸ್‌ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ.
 
ಮೊದಲ ಹಂತದಲ್ಲಿ ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ ಹಾಗೂ ಆನೇಕಲ್‌ ತಾಲೂಕಿನ 25 ಗ್ರಾ.ಪಂಗಳನ್ನು ಜಿಐಎಸ್‌ ವ್ಯಾಪ್ತಿಗೆ ತರಲಾಗುತ್ತಿದೆ. ಈ ಪ್ರಯತ್ನ ಯಶಸ್ವಿ ಯಾದರೆ ಎಲ್ಲ ಪಂಚಾಯಿತಿಗಳಲ್ಲೂ ವ್ಯವಸ್ಥೆ ಜಾರಿಗೊಳಿಸುವುದಾಗಿ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ವ್ಯವಸ್ಥೆ ಜಾರಿಗೆ ಮೊದಲು ಗ್ರಾ.ಪಂ ವ್ಯಾಪ್ತಿಯ ಗಣಕೀಕೃತ ಆಸ್ತಿ ನಕ್ಷೆ ರೂಪಿಸಿ, ಅದರಂತೆ ಪ್ರತಿಯೊಂದು ಆಸ್ತಿಯ ಮಾಹಿತಿಯನ್ನೂ ಡಿಜಿಟಲೀಕರಣ ಮಾಡಲಾಗುತ್ತದೆ. ಜತೆಗೆ ಜಿಪಿಎಸ್‌ ಆಧಾರಿತ ಭಾವಚಿತ್ರದೊಂದಿಗೆ ಆಸ್ತಿ ಗುರುತಿಸಲಾಗುತ್ತದೆ. ಹಾಗೇ, ಸರ್ಕಾರದಿಂದ ಮಂಜೂರಾದ ನಿವೇಶನಗಳ ವಿವರ, ಒಂದೊಮ್ಮೆ ಅಲ್ಲಿ ಕಟ್ಟಡ ನಿರ್ಮಾಣವಾಗಿದ್ದರೆ ನಿರ್ಮಾಣದ ದಿನಾಂಕ, ಆಸ್ತಿ ಮಾಲೀಕರ ಮತ್ತು ಪರಿವರ್ತಿತ ಕೃಷಿ ಭೂಮಿ ಮಾಹಿತಿ, ಕಟ್ಟಡದ ಚೆಕ್‌ಬಂದಿಗಳ ಸಂಪೂರ್ಣ ವಿವರ ಕೂಡ ದೊರೆಯಲಿದೆ. ಅಷ್ಟೇ ಅಲ್ಲ, ಭೂ ಮಾಲೀಕರು ಪಾವತಿಸಬೇಕಿರುವ ಬಾಕಿ
ತೆರಿಗೆ ವಿವರ ಕೂಡ ಲಭ್ಯವಾಗಲಿದೆ. 

ಜಿಐಎಸ್‌ ವ್ಯಾಪ್ತಿಗೆ ಬರಲಿರುವ ಗ್ರಾ.ಪಂಗಳು
ಬೆಂಗಳೂರು ಉತ್ತರ: ಚಿಕ್ಕಬಾಣಾವಾರ, ದಾಸನಪುರ, ದೊಡ್ಡಜಾಲ, ಚಿಕ್ಕಜಾಲ, ಸಾತನೂರು, ಕಡಬಗೆರೆ, ರಾಜಾನುಕುಂಟೆ, ಸಿಂಗನಾಯಕನಹಳ್ಳಿ, ಚಿಕ್ಕಬಿದರಕಲ್ಲು
ಬೆಂಗಳೂರು ದಕ್ಷಿಣ: ಸೋಮನಹಳ್ಳಿ, ರಾಮೋಹಳ್ಳಿ, ಚೋಳನಾಯಕನಹಳ್ಳಿ, ಕುಂಬಳಗೋಡು 
ಬೆಂಗಳೂರು ಪೂರ್ವ: ಅವಲಹಳ್ಳಿ, ಶೀಗೆಹಳ್ಳಿ, ಕಣ್ಣೂರು, ಬಿದರಹಳ್ಳಿ, ದೊಡ್ಡಗುಬ್ಬಿ ಆನೇಕಲ್‌ ತಾಲೂಕು: ಮಂಟಪ, ಹೆನ್ನಾಗರ, ಬಿದರಗುಪ್ಪೆ, ಶಾಂತಿಪುರ, ಹುಸ್ಕೂರು, ನೆರಳೂರು ಮತ್ತು ದೊಮ್ಮಸಂದ್ರ

ಭೌಗೋಳಿಕ ಮಾಹಿತಿ ಪದ್ಧತಿ ಜಾರಿಯಿಂದ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಆಸ್ತಿಗಳು ಒತ್ತುವರಿ ಯಾಗದಂತೆ ತಡೆಯಲು ಸಾಧ್ಯವಿದೆ. ಜಿ.ಪಂ ಆಸ್ತಿ ಕಬಳಿಕೆಯಾಗಿರುವುದು ಸಹ ಇದರಿಂದ ತಿಳಿಯಲಿದೆ. ಅಲ್ಲದೆ, ಜಿ.ಪಂ ಆಸ್ತಿ, ಕಟ್ಟಡಗಳು, ಸೇರಿ ಇನ್ನಿತರ ಮಾಹಿತಿ ಸುಲಭವಾಗಿ ಲಭ್ಯವಾಗಲಿದೆ. ತೆರಿಗೆ ಸಂಗ್ರಹ ವೃದ್ಧಿಗೂ ಜಿಐಎಸ್‌ ಸಹಕಾರಿ.
ಎಂ.ಎಸ್‌.ಅರ್ಚನಾ, ಬೆಂಗಳೂರು ನಗರ ಜಿ.ಪಂ ಸಿಇಒ

ಐದು ವರ್ಷಗಳಲ್ಲಿ ಗ್ರಾಮ ಪಂಚಾಯಿತಿಗಳಿಂದ ಶೇ.24ರಷ್ಟು ಆಸ್ತಿ ತೆರಿಗೆ ಸಂಗ್ರಹವಾಗಿದೆ. ಇನ್ನೂ ಶೇ.76ರಷ್ಟು ಆಸ್ತಿಗಳ ಮಾಲೀಕರು ತೆರಿಗೆ ಪಾವತಿಸಿಲ್ಲ. ಈ ಹಿನ್ನೆಲೆಯಲ್ಲಿ ಜಿಐಎಸ್‌ ಆಧಾರಿತ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದ್ದೇವೆ.
ಕೆ.ಜಿ.ಜಗದೀಶ್‌, ಸಹಾಯಕ ಯೋಜನಾಧಿಕಾರಿ

ದೇವೇಶ ಸೂರಗುಪ್ಪ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

KSD-

Kasaragodu: ಆದೂರು ಶ್ರೀಭಗವತಿ ದೈವಸ್ಥಾನ: 351 ವರ್ಷ ಬಳಿಕ ಪೆರುಂಕಳಿಯಾಟ ಸಂಭ್ರಮ

Police

Kodagu: ಬ್ಯಾಂಕ್‌ ಅಧಿಕಾರಿಗಳು, ಜುವೆಲರಿ ಮಾಲಕರ ಜೊತೆ ಎಸ್‌ಪಿ ಸಭೆ

cOurt

Mangaluru: ಪೋಕ್ಸೋ ಪ್ರಕರಣದ ಆರೋಪಿ ದೋಷಮುಕ್ತ

ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ

ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ

MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣMLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ

MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ

ಸಮಾಜಘಾತಕ ಶಕ್ತಿಗಳ ವಿರುದ್ಧ ಗಂಭೀರ ಕ್ರಮ: ಸಿದ್ದರಾಮಯ್ಯ ಎಚ್ಚರಿಕೆ

ಸಮಾಜಘಾತಕ ಶಕ್ತಿಗಳ ವಿರುದ್ಧ ಗಂಭೀರ ಕ್ರಮ: ಸಿದ್ದರಾಮಯ್ಯ ಎಚ್ಚರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬೈಕ್‌ಗಳ ಮಧ್ಯೆ ಡಿಕ್ಕಿ: ಸವಾರ 3 ಪಲ್ಟಿ ಹೊಡೆದರೂ ಪಾರು

Bengaluru: ಬೈಕ್‌ಗಳ ಮಧ್ಯೆ ಡಿಕ್ಕಿ: ಸವಾರ 3 ಪಲ್ಟಿ ಹೊಡೆದರೂ ಪಾರು

Metro Rail: ಮೆಟ್ರೋ ಹಳಿಗೆ ಜಿಗಿದ ಏರ್‌ಫೋರ್ಸ್‌ ನಿವೃತ ಅಧಿಕಾರಿ

Metro Rail: ಮೆಟ್ರೋ ಹಳಿಗೆ ಜಿಗಿದ ಏರ್‌ಫೋರ್ಸ್‌ ನಿವೃತ ಅಧಿಕಾರಿ

Bengaluru: ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾ*ಚಾರ!

Bengaluru: ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾ*ಚಾರ!

Arrested: ಪತ್ನಿ, ಅತ್ತೆ ಮೇಲೆ ಹಲ್ಲೆ; ಆರೋಪಿ ಬಂಧನ

Arrested: ಪತ್ನಿ, ಅತ್ತೆ ಮೇಲೆ ಹಲ್ಲೆ; ಆರೋಪಿ ಬಂಧನ

Bengaluru: ಟೆಕಿಯ 1 ತಿಂಗಳು ಡಿಜಿಟಲ್‌ ಅರೆಸ್ಟ್ ಮಾಡಿ 11.8 ಕೋಟಿ ರೂ. ವಂಚಿಸಿದ ಮೂವರ ಸೆರೆ

Bengaluru: ಟೆಕಿಯ 1 ತಿಂಗಳು ಡಿಜಿಟಲ್‌ ಅರೆಸ್ಟ್ ಮಾಡಿ 11.8 ಕೋಟಿ ರೂ. ವಂಚಿಸಿದ ಮೂವರ ಸೆರೆ

MUST WATCH

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

udayavani youtube

ಮಂಗಳೂರು | ಸ್ಥಳೀಯ ಮನೆಯಂಗಳಕ್ಕೆ ಹರಿಯುತ್ತಿರುವ ಡ್ರೈನೇಜ್ ಕೊಳಚೆ

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

ಹೊಸ ಸೇರ್ಪಡೆ

Suside-Boy

Manipal: ಪಶ್ಚಿಮ ಬಂಗಾಲದ ವ್ಯಕ್ತಿಯ ಶವ ಪತ್ತೆ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

Frud

Udupi: ಷೇರು ಮಾರುಕಟ್ಟೆಯಲ್ಲಿ 21ಲಕ್ಷ ರೂ. ಹೂಡಿಕೆ: ವಂಚನೆ

balaparadha

Kumbale: ಮೊಬೈಲ್‌ ಫೋನ್‌ ಕಳವು: ಆರೋಪಿ ಸೆರೆ

Suside-Boy

Vitla: ಅನಂತಾಡಿ: ಸೀರೆಗೆ ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.