ಅನ್ನಭಾಗ್ಯ ಅಕ್ಕಿ ಕಳಪೆ: ಕುಂದಾಪುರ ತಾ.ಪಂ. ಸಭೆಯಲ್ಲಿ ಆರೋಪ
Team Udayavani, Jun 29, 2018, 6:00 AM IST
ಕುಂದಾಪುರ: ಅನ್ನಭಾಗ್ಯದಲ್ಲಿ ನೀಡುತ್ತಿರುವ ಅಕ್ಕಿ ಕಳಪೆ ಗುಣಮಟ್ಟಾದ್ದಾಗಿದೆ ಎಂದು ಸದಸ್ಯ ಕರುಣ್ ಕುಮಾರ್ ಪೂಜಾರಿ ಆಪಾದಿಸಿದರು.
ಗುರುವಾರ ಇಲ್ಲಿನ ತಾ. ಪಂ.ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ, ಹಟ್ಟಿಯಂಗಡಿ ಗ್ರಾ. ಪಂ. ವ್ಯಾಪ್ತಿಯಲ್ಲಿ ವಿತರಿಸಿದ ಅಕ್ಕಿ ಕಳಪೆಯಾಗಿದೆ ಎಂದಾಗ ತನಿಖೆ ಮಾಡುವ ಭರವಸೆ ಯನ್ನು ತಹಶೀಲ್ದಾರ್ ರವಿ ನೀಡಿದರು.
ವಾರಾಹಿ ದೂರು
ವಾರಾಹಿ ಕಾಮಗಾರಿಗಾಗಿ ಭೂಸ್ವಾಧೀನ ಮಾಡಲಾಗಿದ್ದು ಅನೇಕ ವರ್ಷ ಕಳೆದರೂ ಅಳತೆಯಾಗಿ ಭೂವಿಂಗಡನೆ ಮಾಡಿಲ್ಲ. ಪಹಣಿಯಲ್ಲಿ ದಾಖಲಿಸಿದ ಕಾರಣ ಬ್ಯಾಂಕ್ ಸಾಲ ದೊರೆಯುತ್ತಿಲ್ಲ ಎಂದು ಉಮೇಶ್ ಶೆಟ್ಟಿ ಕಲ್ಗದ್ದೆ ಹೇಳಿದರು.ಈ ಕುರಿತು ಸಹಾಯಕ ಕಮಿಷನರ್ ಅವರಿಗೆ ಸೂಚಿಸಿದ್ದು ಕ್ರಮ ಕೈಗೊಳ್ಳದಿದ್ದರೆ ಮತ್ತೆ ಸೂಚಿಸುವುದಾಗಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.
415 ಮೀ. ಪೈಪ್‌ಲೈನ್ ಪೂರ್ಣ
ಗುಂಡೂರು ಯೋಜನೆ ನೀರು ಆಲೂರು ಬೈಲಿನಲ್ಲಿ ತುಂಬಿ ಹಾಳಾಗುತ್ತಿದೆ ಎಂದು ಸದಸ್ಯೆ ಇಂದಿರಾ ಶೆಟ್ಟಿ ಪ್ರಶ್ನಿಸಿದರು. ಸೌಪರ್ಣಿಕಾ ನೀರಾವರಿ ಯೋಜನೆಯಡಿ ಪೈಪ್‌ಲೈನ್ ದುರಸ್ತಿಗೆ ಒದಗಿಸಿದ ಅನುದಾನ ದಡಿ ಸುಮಾರು 415 ಮೀ. ಉದ್ದದ ಪೈಪ್‌ಲೈನ್ ಪೂರ್ಣಗೊಳಿಸಲಾಗಿದೆ. 425 ಮೀ. ಉದ್ದದ ಪೈಪ್‌ಲೈನ್ ಕಾಮಗಾರಿಗೆ ಈ ಸಾಲಿನಲ್ಲೂ ಅನುದಾನ ಕೋರಲಾಗಿದೆ. ಪೈಪ್‌ಲೈನ್ ಆದ ಬಳಿಕ ಲೀಕೇಜ್ ಸರಿಪಡಿಸಲಾಗುವುದು ಎಂದು ವಾರಾಹಿ ಕಾರ್ಯಪಾಲಕ ಎಂಜಿನಿಯರ್ ಅವರಿಂದ ಉತ್ತರ ದೊರೆಯಿತು.
ಸಿಬಂದಿ ಇಲ್ಲ
ವಂಡ್ಸೆ ಹೋಬಳಿಯಲ್ಲಿ ಕಂದಾಯ ನಿರೀಕ್ಷಕರಿಲ್ಲ. ಗ್ರಾಮ ಕರಣಿಕರಿಗೆ ಪ್ರಭಾರ ವಹಿಸಲಾಗಿದೆ. ತಾಲೂಕು ಕಚೇರಿಯಲ್ಲಿ ಉಪತಹಶೀಲ್ದಾರ್ ಇಲ್ಲ. ಸಿಬಂದಿಗಳ ಕೊರತೆ ಇದೆ ಎಂದು ತಹಶೀಲ್ದಾರ್ ರವಿ ಹೇಳಿದರು.
ಆಧಾರ್ ಸಮಸ್ಯೆ
ಗಂಗೊಳ್ಳಿ ಅಂಚೆ ಕಚೇರಿಗೆ ಉಪಕರಣಗಳು ಬಂದಿದ್ದರೂ ಕೇಂದ್ರ ಕಾರ್ಯಾಚರಿಸಿಲ್ಲ ಎಂದು ಸುರೇಂದ್ರ ಖಾರ್ವಿ ಹೇಳಿದರು. ತಾಲೂಕು ಕಚೇರಿಯಲ್ಲಿ ಆಧಾರ್ ಭಾವಚಿತ್ರ ತೆಗೆಯಲು 300 ರೂ. ಲಂಚ ಕೇಳುತ್ತಾರೆ ಎಂದು ಕರುಣ್ ಆಪಾದಿಸಿದರು. ಈ ಬಗ್ಗೆ ಎಚ್ಚರಿಕೆ ಕೊಡಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದರು.
ಜೆಟ್ಟಿ ಜಾಗ ಅತಿಕ್ರಮ
ಶಿರೂರು ಗ್ರಾಮದ ಅಳ್ವೆಗದ್ದೆ ಮೀನುಗಾರಿಕೆ ಜೆಟ್ಟಿ ಕಾಮಗಾರಿಯ ಅಂದಾಜು ಪಟ್ಟಿಯಂತೆ 17 ಪಿಲ್ಲರ್ ಹಾಕಬೇಕಿತ್ತು. ಆದರೆ 14 ಸ್ತಂಭ ಹಾಕಲಾಗಿದೆ. ಇಲಾಖಾ ಜಾಗ ಒತ್ತುವರಿ ತೆರವು ಮಾಡದೇ ಕಾಮಗಾರಿ ಅಪೂರ್ಣವಾಗಿದೆ ಎಂದು ಸದಸ್ಯಪುಷ್ಪರಾಜ್ ಶೆಟ್ಟಿ ಹೇಳಿದರು. ಒತ್ತುವರಿ ಯಾದ ಸರಕಾರಿ ಜಾಗ ತೆರವಿಗೆ ಶಾಸಕರು ಸೂಚಿಸಿದರು.
ಹಕ್ಕುಪತ್ರಕ್ಕೆ ಬ್ಯಾಂಕ್ ಸಾಲ
94ಸಿ ಹಕ್ಕುಪತ್ರಕ್ಕೆ ಬ್ಯಾಂಕ್ ಸಾಲ ದೊರೆಯುತ್ತಿಲ್ಲ ಎಂದು ಸದಸ್ಯರು ತಿಳಿಸಿದಾಗ ಬ್ಯಾಂಕ್‌ಗಳಿಗೆ ಪತ್ರ ಬರೆದು ತಿಳಿಸಲಾಗುವುದು.ಪ್ರತ್ಯೇಕ ಭೂ ಪರಿವರ್ತನೆ ಪತ್ರ ಕೊಡುವುದು ಅಸಾಧ್ಯ. ಭೂಪರಿವರ್ತನೆ ಪತ್ರ ಇಲ್ಲದೆ ಸಾಲ ಸಾಧ್ಯ ಎಂದು ತಹಶೀಲ್ದಾರ್ ಹೇಳಿದರು. ಅಧ್ಯಕ್ಷೆ ಜಯಶ್ರೀ ಎಸ್. ಮೊಗವೀರ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಉಪಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಕಡೆR, ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣ ಕೆ. ಗುಜ್ಜಾಡಿ, ಕಾರ್ಯರ್ನಿಹಣಾಧಿಕಾರಿ ಕಿರಣ್ ಕೆ. ಪೆಡೆ°àಕರ್,ತಹಶೀಲ್ದಾರ್ ರವಿ ಉಪಸ್ಥಿತರಿದ್ದರು.
ಮರುಸರ್ವೆಗೆ ಒತ್ತಾಯ
ಗಂಗೊಳ್ಳಿ ಮಡಿವಾಳ ಕೆರೆ ಮತ್ತು ಜೋಳದ ಕೆರೆ ಒತ್ತುವರಿ ಕುರಿತು ಕ್ರಮವಾಗಬೇಕೆಂದು ಕಳೆದ ಸಭೆಯಲ್ಲಿ ತಿಳಿಸಿದ್ದು ಸರ್ವೆ ಮಾಡಲಾಗಿದೆ ಎಂದು ಕಂದಾಯ ಇಲಾಖೆ ಉತ್ತರಿಸಿದೆ. ಆದರೆ ಅಲ್ಲಿ ಸರ್ವೆ ನಡೆದಿಲ್ಲ ಎಂದು ಸುರೇಂದ್ರ ಖಾರ್ವಿ ಹೇಳಿದರು. ಮರುಸರ್ವೆಗೆ ಆದೇಶ ಮಾಡುವುದಾಗಿ ತಹಶೀಲ್ದಾರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.