ಗಡಿಯಲ್ಲಿ ನಿಂತ ರಿಷಭ್; ಕಾಸರಗೋಡಿನಲ್ಲಿ ಕನ್ನಡ ಡಿಂಡಿಮ
Team Udayavani, Jun 29, 2018, 6:00 AM IST
ರಿಷಭ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಶೀತಲ್ ಶೆಟ್ಟಿ, ಯಜ್ಞಾ ಶೆಟ್ಟಿ, ಪ್ರಗತಿ ಶೆಟ್ಟಿ, ರವಿ ರೈ …
– ಹೀಗೆ ಮಂಗಳೂರು ಮೂಲದ ಶೆಟ್ರಾಗಳೆಲ್ಲರೂ ಒಂದೇ ವೇದಿಕೆಯಲ್ಲಿದ್ದರು. ಹಾಗಂತ ಅದೇನು ಶೆಟ್ರಾಗಳ ಸಮಾಗಮ ಕಾರ್ಯಕ್ರಮವಲ್ಲ. ರಿಷಭ್ ಶೆಟ್ಟಿ ನಿರ್ಮಾಣ, ನಿರ್ದೇಶನದ “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾದ ವಿಡಿಯೋ ಸಾಂಗ್ ಬಿಡುಗಡೆಗೆ ಅವರೆಲ್ಲಾ ಸೇರಿದ್ದರು. ರಕ್ಷಿತ್ ಶೆಟ್ಟಿ ಚಿತ್ರದ ವಿಡಿಯೋ ಸಾಂಗ್ ಅನ್ನು ಯುಟ್ಯೂಬ್‌ಗ
ಅಪ್‌ಲೋಡ್‌ಗೆ ಚಾಲನೆ ಕೊಟ್ಟು ಮಾತನಾಡಿದರು. “”ಕಿರಿಕ್ ಪಾರ್ಟಿ’ ನಂತರ ರಿಷಭ್‌ಗೆ ಸಾಕಷ್ಟು ದೊಡ್ಡ ದೊಡ್ಡ ಅವಕಾಶಗಳು ಬಂದರೂ ಆತ ಮಾತ್ರ ಇದೇ ಸಿನಿಮಾವನ್ನು ಮಾಡಬೇಕೆಂದು ಕೂತಿದ್ದ. ಅದರಂತೆ ಮಾಡಿದ್ದಾನೆ. ನಾನು ಈ ಕಥೆ ಕೇಳಿದ್ದೇನೆ. ಯಾವುದೋ ಚೆನ್ನಾಗಿರುವ ಹಾಡು ನೋಡಿ ದಾಗ, “ಈ ಹಾಡಲ್ಲಿ ನಾನಿದಿದ್ದರೆ ಚೆನ್ನಾಗಿರುತ್ತಿತ್ತು …’ ಎಂಬ ಆಸೆಯಾಗುತ್ತಲ್ಲ, ಆ ತರಹದ ಆಸೆ ಈಗ ಬಿಡುಗಡೆಯಾಗಿರುವ “ದಡ್ಡ’ ಸಾಂಗ್ ನೋಡಿದಾಗ ನನಗಾಗುತ್ತಿದೆ. ಸಿನಿಮಾವನ್ನು ಕೂಡಾ ಚೆನ್ನಾಗಿ ಮಾಡಿರುತ್ತಾನೆಂಬ ವಿಶ್ವಾಸವಿದೆ’ ಎನ್ನುತ್ತಾ ಗೆಳೆಯನಿಗೆ ಶುಭಕೋರಿದರು.
ಈ ಬಾರಿ ರಿಷಭ್ ಒಂದು ಸೂಕ್ಷ್ಮ ವಿಚಾರವನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಕಾಸರಗೋಡಿನಲ್ಲಿ ಕನ್ನಡ ಶಾಲೆಗಳ ಸ್ಥಿತಿಗತಿ ಹೇಗಿದೆ ಎಂಬ ಅಂಶವನ್ನು ಇಲ್ಲಿ ಹೇಳಲು ಹೊರಟಿದ್ದಾರಂತೆ. “ಇದು ರೆಗ್ಯುಲರ್ ಶೈಲಿಯ ಸಿನಿಮಾವಲ್ಲ. ಕನ್ನಡದ ಬಗೆಗಿನ ಹೋರಾಟ, ಅಲ್ಲಿನ ಶಾಲೆಗಳ ಪರಿಸ್ಥಿತಿಯನ್ನಿಟ್ಟುಕೊಂಡು ಸಿನಿಮಾ ಮಾಡಿದ್ದೇನೆ. ಹಾಗಂತ ಇಲ್ಲಿ ಬೋಧನೆ ಇಲ್ಲ. ವಿಷಯವನ್ನು ಮಜಾವಾಗಿ ಹೇಳಲು ಪ್ರಯತ್ನಿದ್ದೇನೆ. ಇದೊಂದು ಯುನಿವರ್ಸಲ್ ಸಬ್ಜೆಕ್ಟ್. ನಾನು ಕಾಸರಗೋಡನ್ನು ಮೂಲವಾಗಿಟ್ಟುಕೊಂಡು ಮಾಡಿದ್ದೇನೆ. ಇದನ್ನು ಯಾವ ಊರಿಗೆ ಬೇಕಾದರೂ ಕನೆಕ್ಟ್ ಮಾಡಿಕೊಂಡು ಮಾಡಬಹುದು’ ಎಂದು ಸಿನಿಮಾದ ಬಗ್ಗೆ ಹೇಳಿದರು ರಿಷಭ್. ಈ ಚಿತ್ರವನ್ನು ರಿಷಭ್ ನಿರ್ಮಾಣ ಮಾಡಲು ಕಾರಣ ನಿರ್ಮಾಪಕರನ್ನು ಒಪ್ಪಿಸೋದು ಕಷ್ಟ ಎಂಬುದು. “ಈ ತರಹದ ಕಥೆಯನ್ನು ಸಿನಿಮಾ ಮಾಡಲು ನಿರ್ಮಾಪಕರಿಗೆ ಒಪ್ಪಿಸೋದು ಕಷ್ಟ ಎಂಬ ಕಾರಣಕ್ಕೆ ನಾವೇ ನಿರ್ಮಾಣ ಮಾಡಲು ಮುಂದಾದೆವು. ನಿರ್ಮಾಣದಲ್ಲಿ ನನಗೆ ರವಿ ರೈ, ಅಕ್ಷತಾ ಸಾಥ್ ನೀಡಿದ್ದಾರೆ’ ಎಂದರು. ಇನ್ನು, ಚಿತ್ರದಲ್ಲಿ
ಅನಂತ್‌ನಾಗ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಅವರ ಎನರ್ಜಿ ಬಗ್ಗೆಯೂ ರಿಷಭ್ ಮಾತನಾಡಿದರು. ಚಿತ್ರದಲ್ಲಿನ 15 ನಿಮಿಷ 24 ಸೆಕೆಂಡಿನ ಒಂದು ದೃಶ್ಯವನ್ನು ಸಿಂಗಲ್ ಟೇಕ್‌ನಲ್ಲಿ ಮಾಡಿದ್ದಾಗಿ ಹೇಳಿಕೊಂಡರು ರಿಷಭ್.
ಅನಂತ್‌ನಾಗ್ ಅವರಿಗೆ ರಿಷಭ್ ಮಾಡಿಕೊಂಡಿರುವ ಕಥೆ ತುಂಬಾ ಹಿಡಿಸಿತಂತೆ. ಜೊತೆಗೆ ಭಾವನಾತ್ಮಕವಾಗಿಯೂ ಅವರನ್ನು ಮುಟ್ಟಿತಂತೆ. ಅದಕ್ಕೆ ಕಾರಣ ಅನಂತ್‌ನಾಗ್ ಅವರು ಕೂಡಾ ದಕ್ಷಿಣ ಕನ್ನಡದ ಭಾಗದಲ್ಲಿ ಓಡಾಡಿದವರು. ಕಾಸರಗೋಡಿನ ಕನ್ನಡ ಪರಿಸ್ಥಿತಿ, ರಾತ್ರೋರಾತ್ರಿ ಬದಲಾದ ಫಲಕಗಳನ್ನು ಕಣ್ಣಾರೆ ಕಂಡವರು. ಅದೇ ಕಾರಣದಿಂದ ಈ ಕಥೆ ಅವರಿಗೆ ಕನೆಕ್ಟ್ ಆಗಿದೆ. “ಈ ಪ್ರಪಂಚದಲ್ಲಿನ ಗಡಿ ವ್ಯವಸ್ಥೆಯನ್ನು ಯಾರು ತಂದರೋ ಗೊತ್ತಿಲ್ಲ. ಈ ಗಡಿ ವ್ಯವಸ್ಥೆಯಿಂದಾಗುವ ಸಾವು-ನೋವು ಸಮಸ್ಯೆಗಳನ್ನು ನಾನು ಇತಿಹಾಸದಲ್ಲಿ ಓದಿದ್ದೇನೆ. ಕಾಸರಗೋಡು ಭಾಗದ ಗಡಿ ಸಮಸ್ಯೆ, ರಾತ್ರೋರಾತ್ರಿ ಬದಲಾದ ಕನ್ನಡದ ಫಲಕಗಳನ್ನು ನಾನು ನೋಡಿದ್ದೇನೆ. ಆದರೆ, ಆಗ ನಮಗೆ ಏನೂ ಅರ್ಥವಾಗುತ್ತಿರಲಿಲ್ಲ. ಈಗ ಆ ವಿಷಯವನ್ನು ರಿಷಭ್ ಸಿನಿಮಾ ಮಾಡಿದ್ದಾರೆ. ಒಂದು ಗಂಭೀರ ವಿಷಯವನ್ನು ಜನರಿಗೆ ತಲುಪುವ ರೀತಿ ಹೇಳಿದ್ದಾರೆ’ ಎಂದು ಸಿನಿಮಾ ಬಗ್ಗೆ ಹೇಳಿಕೊಂಡರು. ರಂಜನ್ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. ಇನ್ನು ಚಿತ್ರದಲ್ಲಿ ಒಂಭತ್ತು ಹಾಡುಗಳಿದ್ದು, ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಸುಪ್ರಿತಾ, ಪ್ರಮೋದ್ ಶೆಟ್ಟಿ ಕೂಡಾ ನಟಿಸಿದ್ದಾರೆ. ರಿಷಭ್ ಪತ್ನಿ ಪ್ರಗತಿ ಶೆಟ್ಟಿ ಕಾಸ್ಟೂéಮ್ ಡಿಸೈನ್ ಚಿತ್ರಕ್ಕಿದೆ. ಚಿತ್ರ ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ರವಿ ರೈ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Actor Siddique: ಅತ್ಯಾಚಾರ ಆರೋಪ; ನಟ ಸಿದ್ದಿಕ್‌ಗೆ ನಿರೀಕ್ಷಣಾ ಜಾಮೀನು ಮಂಜೂರು
Air Pollutionಗೆ ಪಾಕಿಸ್ತಾನ ಕಂಗಾಲು- 3 ದಿನ ಸಂಪೂರ್ಣ ಲಾಕ್ ಡೌನ್…AQI ಮಟ್ಟ 2000!
Keerthy Suresh: ಬಾಲ್ಯದ ಗೆಳೆಯನೊಂದಿಗೆ ಈ ದಿನ ನೆರವೇರಲಿದೆ ಕೀರ್ತಿ ಸುರೇಶ್ ವಿವಾಹ?
Belthangady: ಪತ್ರಕರ್ತ ಭುವನೇಂದ್ರ ಪುದುವೆಟ್ಟು ನಿಧನ
Max Movie: ಬಿಗ್ ಬಾಸ್ ವೇದಿಕೆಯಲ್ಲಿ ʼಮ್ಯಾಕ್ಸ್ʼ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.