ಸ್ವಿಸ್‌ನಲ್ಲಿ ಹೆಚ್ಚುತ್ತಿದೆ ಭಾರತೀಯರ ಠೇವಣಿ!
Team Udayavani, Jun 29, 2018, 6:00 AM IST
ಹೊಸದಿಲ್ಲಿ: ಕಪ್ಪುಹಣ ನಿಯಂತ್ರಣಕ್ಕೆ ಸರಕಾರದ ಹಲವು ಕ್ರಮಗಳ ಮಧ್ಯೆಯೂ ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ಠೇವಣಿ ಮೊತ್ತ ಹೆಚ್ಚುತ್ತಲೇ ಇದೆ. 2017ರಲ್ಲಿ ಇದರ ಪ್ರಮಾಣ ಶೇ.50ರಷ್ಟು ಏರಿಕೆಯಾಗಿದ್ದು, 7 ಸಾವಿರ ಕೋಟಿ ರೂ.ಗೆ ತಲುಪಿದೆ. ಇನ್ನೊಂದೆಡೆ 2017ರಲ್ಲಿ ವಿಶ್ವದ ಇತರ ದೇಶಗಳಿಂದ ಸ್ವಿಜರ್ಲೆಂಡ್ ಬ್ಯಾಂಕ್‌ನಲ್ಲಿಟ್ಟ ಮೊತ್ತ ಶೇ.3ರಷ್ಟು ಏರಿಕೆಯಾಗಿ 100 ಲಕ್ಷ ಕೋಟಿ ರೂ. ಆಗಿದೆ ಎಂದು ಸ್ವಿಸ್ ನ್ಯಾಶನಲ್ ಬ್ಯಾಂಕ್ ವರದಿ ಹೇಳಿದೆ.
2016ರಲ್ಲಿ ಭಾರತೀಯರ ಠೇವಣಿ ಶೇ.45ರಷ್ಟು ಕುಸಿದು 4,500 ಕೋಟಿ ರೂ.ಗೆ ತಲುಪಿತ್ತು. 1987ರಲ್ಲೇ ಮೊದಲ ಬಾರಿಗೆ ಈ ಪ್ರಮಾಣದ ಕುಸಿತ ಕಂಡುಬಂದಿತ್ತು. ಕಳೆದ ಒಂದು ದಶಕದಲ್ಲಿ ಸ್ವಿಸ್ ಬ್ಯಾಂಕ್‌ನಲ್ಲಿ ಠೇವಣಿ ಮೊತ್ತದಲ್ಲಿ ಕುಸಿತವಾಗುತ್ತಲೇ ಇತ್ತು. 2006ರ ವೇಳೆಗೆ 23 ಸಾವಿರ ಕೋಟಿ ರೂ. ಭಾರತೀಯರ ಹಣವಿತ್ತು. ಅನಂತರದಲ್ಲಿ ಇಳಿಕೆ ಕಾಣುತ್ತಿದೆ. ಈ ದಶಕದಲ್ಲಿ ಕೇವಲ 3 ವರ್ಷಗಳಲ್ಲಿ ಮಾತ್ರವೇ ಠೇವಣಿ ಮೊತ್ತ ಏರಿಕೆಯಾಗಿತ್ತು. 2011, (ಶೇ. 12), 2013 (ಶೇ. 43) ಮತ್ತು ಈಗ 2017 (ಶೇ. 50.2) ರಲ್ಲಿ ಠೇವಣಿ ಮೊತ್ತ ಏರಿಕೆ ಕಂಡಿದೆ. ಈ ಹಿಂದೆ 2004ರಲ್ಲೂ ಶೇ. 56ರಷ್ಟು ಏರಿಕೆ ಕಂಡಿತ್ತು.
ಇದು ಕಪ್ಪು ಹಣವೇ?: ಗ್ರಾಹಕರ ಜಮೆ, ಇತರ ಬ್ಯಾಂಕ್‌ಗಳ ಮೂಲಕ ಜಮೆ ಮಾಡು ವಿಕೆ ಮತ್ತು ಇತರ ಬಾಧ್ಯತೆಗಳ ಅಡಿಯಲ್ಲಿ ಭಾರತೀಯರ ಹಣದ ಪ್ರಮಾಣ ಏರಿಕೆಯಾ ಗಿದೆ. ಆದರೆ ಇವೆಲ್ಲವನ್ನೂ ಕಪ್ಪು ಹಣ ಎಂದು ಪರಿಗಣಿಸಲಾಗದು. ಇದು ನಿಜವಾದ ವ್ಯಾಪಾರ, ರಫ್ತಿನಿಂದಲೂ ನಡೆದ ವಹಿವಾಟು ಆಗಿರಬಹುದು. ಇನ್ನೊಂದೆಡೆ ಭಾರತೀಯರು ಇತರ ದೇಶಗಳಿಂದ ಸಂಸ್ಥೆ ಹೆಸರಿನಲ್ಲಿ ಹೂಡಿಕೆ ಮಾಡಿದ ಮೊತ್ತವನ್ನೂ ಎಸ್‌ಎನ್‌ಬಿ ಬಿಡುಗಡೆ ಮಾಡಿದ ವರದಿ ವಿವರಿಸುವುದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipur: ಮತ್ತೆ ಸಶಸ್ತ್ರಪಡೆಗಳ ಕಾಯ್ದೆ ಜಾರಿ; ಸೇನಾ ಕಾರ್ಯಾಚರಣೆ:ಶಸ್ತ್ರಾಸ್ತ್ರಗಳು ವಶಕ್ಕೆ
Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್
Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು
Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ
Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.