ರಂಗಭೂಮಿ ದಾರ್ಶನಿಕ ಸಿಜಿಕೆ: ಡಿಂಗ್ರಿ ನರೇಶ್
Team Udayavani, Jun 29, 2018, 10:59 AM IST
ಬೀದರ: ಚಳ್ಳಿಕೇರೆ ಗೋವಿಂದನಾಯಕ ಕೃಷ್ಣಸ್ವಾಮಿ (ಸಿಜಿಕೆ) ಬೀದಿ ನಾಟಕಗಳ ಮಹಾನ್ ಕಲಾವಿದ, ರಂಗಭೂಮಿಯ ದಾರ್ಶನಿಕರಾಗಿದ್ದರು. ಅವರು ಅಂಗವೈಕಲ್ಯದಿಂದ ಬಳಲುತ್ತಿರುವ ಸಂದರ್ಭದಲ್ಲಿ ಕೂಡ ಜೀವನದಲ್ಲಿ ದೊಡ್ಡಮಟ್ಟದ ಸಾಧನೆ ಮಾಡಿ ಇಂದು ಪ್ರತಿಯೊಬ್ಬರು ಸ್ಮರಿಸುವಂತೆ ಮಾಡಿದ್ದಾರೆ ಎಂದು ರಂಗಭೂಮಿ ಕಲಾವಿದ ಡಿಂಗ್ರಿ ನರೇಶ ಹೇಳಿದರು.
ನಗರದ ರಂಗ ಮಂದಿರದಲ್ಲಿ ಕರ್ನಾಟಕ ಬೀದಿ ನಾಟಕ ಅಕಾಡೆಮಿ, ಆರ್ಟ್ ಫೌಂಡೇಶನ್ ಅವಿರತ ಪುಸ್ತಕ ಬೆಂಗಳೂರು, ಜಿಲ್ಲಾ ಜಾನಪದ ಕಲಾವಿದರ ಬಳಗ ಮತ್ತು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಸಂಯುಕ್ತಾಶ್ರಯದಲ್ಲಿ ನಡೆದ ನಾಟಕ ಕಲಾವಿದ, ಸಹ ಶಿಕ್ಷಕ ಎಂ.ಎಸ್. ಮನೋಹರ ಅವರಿಗೆ ಸಿಜಿಕೆ ರಂಗ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ರಂಗಭೂಮಿ ಸಂಘಟನೆ ಹಾಗೂ ಚಳವಳಿಯಲ್ಲಿ ಸಿಜಿಕೆ ಪಾತ್ರ ಮಹತ್ತರವಾಗಿದೆ. ಬೀದಿ ನಾಟಕಗಳ ಮೂಲಕ ಪ್ರೇಕ್ಷಕರನ್ನು ಸಂಘಟಿಸಿದ ಕಲಾಜೀವಿ ಸಿಜಿಕೆ. ಅವರು ಇಲ್ಲದಿದ್ದರೆ, ಬೀದಿ ನಾಟಕ ಬೆಳೆಯುತ್ತಿರಲಿಲ್ಲ. ಕವಿ ಸಿದ್ಧಲಿಂಗಯ್ಯ, ಚಿತ್ರನಟಿ ಉಮಾಶ್ರೀ, ನಾಟಕಕಾರ ನಾಗರಾಜ ಅವರ ಪರಿಚಯವೇ ರಾಜ್ಯಕ್ಕೆ ಆಗುತ್ತಿರಲಿಲ್ಲ. ರಂಗಭೂಮಿ, ಕಲೆ, ಸಾಹಿತ್ಯ, ನಾಟಕಗಳ ಬೆಳವಣಿಗೆಯಲ್ಲಿ ಸಿಜಿಕೆ ಅವರ ಪಾತ್ರ ಮಹತ್ತರವಾಗಿದೆ ಎಂದರು.
ಹಿರಿಯ ಕಲಾವಿದ ಚಂದ್ರಗುಪ್ತ ಚಾಂದಕವಠೆ ಮಾತನಾಡಿ, ಸಿಜಿಕೆ ರಂಗ ಪುರಸ್ಕಾರಕ್ಕೆ ಎಂ.ಎಸ್. ಮನೋಹರ ಅವರನ್ನು ಆಯ್ಕೆ ಮಾಡಿರುವುದು ಸಂತೋಷ ತಂದಿದೆ. ಎಂ.ಎಸ್. ಮನೋಹರ ಅವರು 25 ವರ್ಷಗಳಿಂದ ರಂಗ ಚಟುವಟಿಕೆಗಳಲ್ಲಿ ಶ್ರಮಿಸಿದ್ದಾರೆ. ಇಂತಹ ವ್ಯಕ್ತಿಗೆ ಇಂದು ಗೌರವ ದೊರೆಯುತ್ತಿರುವುದು ಹರ್ಷದ ವಿಷಯವಾಗಿದೆ ಎಂದರು.
ಸಮುದಾಯ ತಂಡ ರಚಿಸಿಕೊಂಡು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಬೀದರ ಜಿಲ್ಲೆಯ ಪ್ರತಿಯೊಂದು ಗ್ರಾಮಗಳಿಗೆ ಸಂಚರಿಸಿ ಮೌಡ್ಯ, ಭಾನಾಮತಿ ಮುಂತಾದ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಜನ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಪುರಸ್ಕಾರ ಪಡೆದ ಎಂ.ಎಸ್. ಮನೋಹರ ಮಾತನಾಡಿ, 1985ರಿಂದ ಶಂಭುಲಿಂಗ ವಾಲದೊಡ್ಡಿ ಮತ್ತು ಚಂದ್ರಪ್ಪ ಹೆಬ್ಟಾಳಕರ ಅವರ ಜೊತೆ ಸಕ್ರಿಯವಾಗಿ ಪಾಲ್ಗೊಂಡು ವಿವಿಧ ಕಾರ್ಯಕ್ರಮಗಳನ್ನು ನೀಡಿದ್ದೇನೆ. 22 ವರ್ಷಗಳಿಂದ ರಂಗಭೂಮಿಯಲ್ಲಿ ಅವಿರತವಾಗಿ ಭಾಗವಹಿಸುತ್ತಿದ್ದೇನೆ. ಮೊಟ್ಟ ಮೊದಲು ಬೀದಿ ನಾಟಕದಲ್ಲಿ ಹುಚ್ಚ ಮಾಸ್ತರನ ಪಾತ್ರ ಮಾಡಿ ಗುರುತಿಸಿಕೊಂಡ ನನ್ನನ್ನು ಇಂದಿಗೂ ಕೂಡ ಕಲಾವಿದ ಎಂದೇ ಜನರು ಗುರುತಿಸುತ್ತಾರೆ. ನನ್ನ ಕಲೆಗೆ ಗೌರವಿಸಿ ಇಂದು ನೀಡಿದ ಪುರಸ್ಕಾರ ಹರ್ಷ ತಂದಿದೆ ಎಂದರು.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯ ಎಸ್.ವಿ. ಕಲ್ಮಠ, ಬಯಲಾಟ ಅಕಾಡೆಮಿ ಸದಸ್ಯ ಸಂಜೀವಕುಮಾರ
ಜುಮ್ಮಾ, ಕರ್ನಾಟಕ ಚಿತ್ರಕಲಾ ಅಕಾಡೆಮಿ ಸದಸ್ಯ ಯೋಗೀಶ ಮಠ, ಕನ್ನಡ ಸಹಿತ್ಯ ಪರಿಷತ್ ಜಿಲ್ಲಾ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಬಸವರಾಜ ಬಲ್ಲೂರ, ರಂಗನಟ ಎಸ್.ಸಿ. ಗಿರೀಶ, ದಲಿತ ಮುಖಂಡ ಮಾರುತಿ ಬೌದ್ಧೆ, ಫರ್ನಾಂಡೀಸ್ ಹಿಪ್ಪಳಗಾಂವ, ವಿಜಯಕುಮಾರ ಸೋನಾರೆ, ರಾಜೇಂದ್ರಕುಮಾರ ಗಂದಗೆ, ರಾಜಕುಮಾರ ಮಾಳಗೆ, ಪಾರ್ವತಿ ಸೋನಾರೆ, ರಾಜಶೇಖರ ವಟಗೆ, ಸಂಗಮೇಶ ಅಂಗಡಿ, ದೇವಿದಾಸ ಜೋಶಿ, ಯೇಸುದಾಸ ಅಲಿಯಂಬುರೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Bidar: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೂ ಮೊದಲು ಹೊಟೇಲ್ ನಲ್ಲಿ ಓಡಾಡಿದ ದೃಶ್ಯ ಸೆರೆ
ಗುತ್ತಿಗೆದಾರ ಸಚಿನ್ ಕೇಸ್: ಪ್ರಕರಣ ಮುಚ್ಚಿಹಾಕಲು ಸರ್ಕಾರದ ಯತ್ನ: ಸಹೋದರಿ ಆರೋಪ
Bidar: ಸಚಿನ್ ಆತ್ಮಹತ್ಯೆ ಪ್ರಕರಣ; ನಿಗೂಢ ಸಾವಿನ ತನಿಖೆ, ಮೃತ ಕುಟುಂಬಕ್ಕೆ ಪರಿಹಾರ:ಆಗ್ರಹ
Contracter Case: ಸಿಐಡಿ ಮೇಲೆ ವಿಶ್ವಾಸವಿಲ್ಲ, ಸಿಬಿಐಗೆ ಕೊಡಿ: ಸಚಿನ್ ಸಹೋದರಿ ಸುರೇಖಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.