ನೀರಾವರಿ ಕಾಮಗಾರಿ ಕಳಪೆಯಾದರೆ ಕ್ರಮ
Team Udayavani, Jun 29, 2018, 12:19 PM IST
ಮುದ್ದೇಬಿಹಾಳ: ತಾಲೂಕಿನ ನೀರಾವರಿ ಕಾಮಗಾರಿಗಳನ್ನು ಕಳಪೆಯಾಗಿ ಕೈಗೊಂಡರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ನೀರಾವರಿ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ನೀರಾವರಿ ಯೋಜನೆ ಅಡಿ ಮುಖ್ಯ ಕಾಲುವೆ, ಡಿಸ್ಟ್ರಿಬ್ಯೂಟರ್, ಲ್ಯಾಟರಲ್, ಹೊಲಗಾಲುವೆ, ಕೆರೆ ತುಂಬುವ
ಯೋಜನೆ ಮುಂತಾದ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರ ಬಗ್ಗೆ ನನಗೆ ಗೊತ್ತಿದೆ. ವಿನಾಕಾರಣ ಅವರಿಗೆ ತೊಂದರೆ ಕೊಡೋದು, ಕಳಪೆ ಕಾಮಗಾರಿ ವಿಚಾರಣೆ ನಡೆಸುವುದು ನನಗೆ ಇಷ್ಟವಿಲ್ಲ. ಈಗ ಕೆಲಸ ಮಾಡುವವರು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕೆಬಿಜೆಎನ್ನೆಲ್ ಗುತ್ತಿಗೆದಾರರ ಕಂಪನಿಯಾಗಿದೆ ಎಂದು ಅಸಹನೆ ತೋಡಿಕೊಂಡ ಶಾಸಕರು, ಎಎಲ್‌ಬಿಸಿಯಿಂದ ಶೇ. 70ರಷ್ಟು ಜಮೀನುಗಳಿಗೆ ನೀರು ತಲುಪುತ್ತಿಲ್ಲ. ಯರಝರಿವರೆಗೆ ನೀರಾವರಿಯಾಗಿದೆ. ಕೋಳೂರ ಬಳಿ ಅಲ್ಲಲ್ಲಿ ನೀರು ಹೋಗುತ್ತದೆ. ಎಎಲ್‌ಬಿಸಿ ಕಮಾಂಡಿಂಗ್ ಪ್ರದೇಶಕ್ಕೆ ನೀರು ತಲುಪುವ ವ್ಯವಸ್ಥೆ ಕೈಗೊಳ್ಳಬೇಕು.
ಇದಕ್ಕಾಗಿ ಎಎಲ್‌ಬಿಸಿ ಮುಖ್ಯ ಕಾಲುವೆ ಬಲಪಡಿಸಬೇಕು. ಎಫ್ ಐಸಿ, ಡಿಸ್ಟ್ರೀಬ್ಯೂಟರ್, ಲ್ಯಾಟರಲ್ ಹೊಸದಾಗಿ ನಿರ್ಮಿಸಬೇಕು. ಇದಕ್ಕಾಗಿ ಹೆಚ್ಚುವರಿ ಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ತಿಳಿಸಿದರು.
ತಾಲೂಕು ವ್ಯಾಪ್ತಿಯ ಆಲಮಟ್ಟಿ ಎಡದಂಡೆ ಕಾಲುವೆ, ಚಿಮ್ಮಲಗಿ ಪೂರ್ವ ಕಾಲುವೆ ಅಡಿ ನೀರಾವರಿ ಕಾಮಗಾರಿ ಗುಣಮಟ್ಟ ಕಳಪೆ ಆಗುವುದನ್ನು ಸಹಿಸುವುದಿಲ್ಲ ಬೃಹತ್ ನೀರಾವರಿ ಯೋಜನೆಗಳಿಗೆ ಭೂಮಿ ಕಳೆದುಕೊಂಡ ಪ್ರತಿಯೊಬ್ಬ ಸಂತ್ರಸ್ತ ರೈತನ ಜಮೀನಿಗೆ ನೀರು ಕೊಡಬೇಕು. ಇದು ಸರ್ಕಾರದ ಕರ್ತವ್ಯವೂ ಆಗಿದೆ. ನೀರಾವರಿ ಅಧಿಕಾರಿಗಳು ಜಾಗೃತರಾಗಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ಕೆಲವು ಕಾಮಗಾರಿ, ಕೆರೆ ತುಂಬುವ ಯೋಜನೆ ವಿಷಯದಲ್ಲಿ ಅಧಿಕಾರಿಗಳು ಶಾಸಕರಿಗೆ ಕಾನೂನಿನ ನಿಯಮ ತಿಳಿಸಿಕೊಡಲು ಬಂದಾಗ ಸಿಡಿಮಿಡಿಗೊಂಡ ಶಾಸಕರು ನನಗೆ ಕಾನೂನು ಪಾಠ ಹೇಳಬೇಡಿ. ಒಟ್ಟಾರೆ ನೀರಾವರಿ ಕೆಲಸ ಆಗಬೇಕು ಎಂದರು.
ನೀರಾವರಿ ಉದ್ದೇಶಕ್ಕೆ ಜಮೀನು ಕಳೆದುಕೊಂಡ ಸಂತ್ರಸ್ತ ರೈತರು ಕನಿಷ್ಠ ಮೂಲಸೌಕರ್ಯಗಳಿಲ್ಲದೇ
ಹತಾಶರಾಗಿದ್ದಾರೆ. ಪುನರ್ವಸತಿ ಹಳ್ಳಿಗಳು ದನದ ಕೊಟ್ಟಿಗೆಯಂತಿವೆ. ಕಾಲುವೆ ಕೊನೆ ಹಂತದ
ಜಮೀನಿನವರೆಗೂ ನೀರು ಹೋಗುತ್ತಿಲ್ಲ. ಅಧಿಕಾರಿಗಳು ಇರೋದು ರೈತರ ಸಲುವಾಗಿಯೇ ಹೊರತು ಗುತ್ತಿಗೆದಾರರ ಸಲುವಾಗಿ ಅಲ್ಲ ಅನ್ನೋದನ್ನ ಅರಿಯಿರಿ ಎಂದು ಎಂದರು.
ತಾಲೂಕಿನಲ್ಲಿ ಇರುವ ಕೆರೆಗಳ ಮಾಹಿತಿ ಪಡೆದ ಶಾಸಕರು, ಮುದ್ದೇಬಿಹಾಳ ಪಟ್ಟಣಕ್ಕೆ ಹತ್ತಿರ ಇರುವ ಗೆದ್ದಲಮರಿ ಕೆರೆಯನ್ನು ಪಿಕ್ನಿಕ್ ಸ್ಪಾಟ್ ಮಾಡುವ ಯೋಚನೆ ಇದೆ. ಈಗಾಗಲೇ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ವಿಜಯಪುರದ ಬೇಗಂ ತಾಲಾಬ್ ಮಾದರಿಯಲ್ಲಿ ಅಭಿವೃದ್ದಿಪಡಿಸಬೇಕಿದೆ. ಇದಕ್ಕಾಗಿ ಕೆರೆ ಹೂಳೆತ್ತುವುದು ಸೇರಿ ಅಗತ್ಯ ಕಾಮಗಾರಿಗಳ ಕ್ರಿಯಾಯೋಜನೆ ತಯಾರಿಸಬೇಕು ಎಂದರು.
ಗೆದ್ದಲಮರಿ, ಅಡವಿ ಹುಲಗಬಾಳ, ಮಾದಿನಾಳ, ಹೊಕ್ರಾಣಿ, ಮಡಿಕೇಶ್ವರ ಕೆರೆಗಳು ದೊಡ್ಡ ಕೆರೆಗಳು. ಇವುಗಳನ್ನು
ಜಿಲ್ಲಾ ಪಂಚಾಯಿತಿ, ಸಣ್ಣ ನೀರಾವರಿ ಇಲಾಖೆಯಿಂದ ನೀರಾವರಿ ಇಲಾಖೆಗೆ ಹಸ್ತಾಂತರಿಸಿ ಅಭಿವೃದ್ಧಿಗೊಳಿಸುವ
ಕುರಿತು ಪತ್ರ ಬರೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನೆರಬೆಂಚಿ, ಹಡಲಗೇರಿ, ಅರಸನಾಳ, ಹಿರೇಮುರಾಳ ಕೆರೆಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಟೆಂಡರ್‌ಗೂ ಮುನ್ನ ಅಧಿಕಾರಿಗಳು ಸರ್ವೇ ಮಾಡಿಲ್ಲ. ತರಾತುರಿಯಲ್ಲಿ ಟೆಂಡರ್ ಕರೆಯಲಾಗಿದೆ. ಈ ಕೆರೆಗಳ ಡಿಪಿಆರ್ ಮಾಹಿತಿ ಸಲ್ಲಿಸಬೇಕು. ಕೆರೆ ತುಂಬಿಸಿದ ಮೇಲೆ ಸೋರಿಕೆ ಆಗದಂತೆ ನೋಡಿಕೊಳ್ಳಬೇಕು. ತಮದಡ್ಡಿ, ಬಳಗಾನೂರ ಸೇರಿ ಆ ಭಾಗದಲ್ಲಿ ಬರುವ ಕೆರೆಗಳ ಪ್ರಗತಿ ಮಾಹಿತಿ ಕೊಡಬೇಕು ಎಂದು ಸೂಚಿಸಿದರು.
ಆಲಮಟ್ಟಿ ಕೆಬಿಜೆಎನ್ನೆಲ್ ಕಾಲುವೆ ವಿಭಾಗದ ಕಾರ್ಯನಿರ್ವಾಹಕ ಅಬಿಯಂತರ ಎಂ.ಸಿ. ಛಬ್ಬಿ, ಎಎಲ್ ಬಿಸಿ ಸಬ್ ಡಿವಿಜನ್-1ರ ಎಇಇ ಎಂ.ಸಿ. ಡುಳ್ಳಿ, ಎನ್.ಬಿ.ನಾಡಗೌಡ, ಬಿ.ಎಸ್.ಪ್ಯಾಟಿಗೌಡರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ
Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು
ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ವಿಜಯಪುರ ಬಂದ್: ಬಸ್ ಸಂಚಾರ ಸ್ಥಗಿತ, ತೆರೆಯದ ಅಂಗಡಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Toxic: ಯಶ್ ಬರ್ತ್ ಡೇಗೆ ʼಟಾಕ್ಸಿಕ್ʼನಿಂದ ಸಿಗಲಿದೆ ಬಿಗ್ ಅಪ್ಡೇಟ್; ಫ್ಯಾನ್ಸ್ ಥ್ರಿಲ್
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Koppala: ಬಂದ್ ಕರೆಗೆ ಅಂಗಡಿ- ಮುಂಗಟ್ಟು ಬಂದ್
Chhattisgarh: ಪತ್ರಕರ್ತ ಮುಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹೈದರಾಬಾದ್‌ನಲ್ಲಿ ಬಂಧನ
Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.