ಕಾಲುಸಂಕದಿಂದ ಮುಕ್ತಿ ಕಾಣದ ಕಲ್ಲಣ್ಕಿ – ಕುಂಜಳ್ಳಿ
Team Udayavani, Jun 30, 2018, 6:00 AM IST
ಬೈಂದೂರು: ಸರಕಾರ ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದರೂ ಸಹ ಇಂದಿಗೂ ಮೂಲ ಸೌಕರ್ಯದ ಕೊರತೆಯಿಂದ ಹೈರಾಣಾಗಿರುವ ಹಲವಾರು ನಿದರ್ಶನಗಳಿವೆ. ಕಳೆದ ಹತ್ತಾರು ವರ್ಷಗಳಿಂದ ಸಂಪರ್ಕ ಸೇತುವೆಗಾಗಿ ಹೋರಾಟ ನಡೆಸುತ್ತಿದ್ದ ಬೈಂದೂರು ಸಮೀಪದ ಕಲ್ಲಣ್ಕಿ – ಕುಂಜಳ್ಳಿನ ಜನತೆ ಈ ವರ್ಷವು ಮರದ ಹಲಗೆಯಿಂದ ನಿರ್ಮಿಸಿದ ತೂಗು ಸೇತುವೆಯ ಮೂಲಕ ಮಳೆಗಾಲ ಕಳೆಯಬೇಕಿದೆ.
ಬೈಂದೂರು ಹಾಗೂ ಯಡ್ತರೆ ಗ್ರಾಮ ಪಂಚಾಯತ್ ಗಡಿ ಭಾಗದಲ್ಲಿರುವ ಕಲ್ಲಣ್ಕಿ, ಕುಂಜಳ್ಳಿ, ಮಧ್ದೋಡಿ, ತೋಕ್ತಿ ಸೇರಿದಂತೆ ಮೊದಲಾದ ಕುಗ್ರಾಮಗಳು ಬೈಂದೂರು ಪೇಟೆಯಿಂದ ಸುಮಾರು 13 ಕಿ.ಮೀ. ದೂರದಲ್ಲಿದೆ.
ಇಲ್ಲಿನ ಸಾರ್ವಜನಿಕರು, ವಿದ್ಯಾರ್ಥಿಗಳು ಪ್ರತಿದಿನ ಬೈಂದೂರಿಗೆ ಬರಬೇಕಾದರೆ ಗಂಗನಾಡು ಹೊಳೆಯನ್ನು ದಾಟಿ ಬರ ಬೇಕಾಗಿದೆ. ಆದರೆ ಮಳೆಗಾಲದಲ್ಲಿ ಈ ಹೊಳೆಯಲ್ಲಿ ನೀರಿನ ಸೆಳೆತ ಹೆಚ್ಚಾಗಿದ್ದು ಹೊಳೆ ದಾಟಲು ಇಲ್ಲಿನ ಸ್ಥಳೀಯರು ಮರದ ದಿಮ್ಮಿಗಳನ್ನು ಬಳಸಿ ತಾತ್ಕಾಲಿಕ ಕಾಲುಸಂಕ ನಿರ್ಮಿಸಿಕೊಂಡಿದ್ದಾರೆ. ಕೆಲವೊಮ್ಮೆ ಮಳೆ ಹೆಚ್ಚಾದಾಗ ಈ ಮರದ ಕಾಲುಸಂಕ ನದಿಪಾಲಾಗುತ್ತದೆ.
ಈ ಭಾಗದಲ್ಲಿ ಸುಮಾರು 350ರಿಂದ 400 ಪರಿಶಿಷ್ಟ ಜಾತಿ ಸೇರಿದಂತೆ ವಿವಿಧ ಸಮುದಾಯಕ್ಕೆ ಸೇರಿದ ಮನೆಗಳಿವೆ.ಸುಮಾರು ಒಂದು ಸಾವಿರಕ್ಕೂ ಅಧಿಕ ಜನಸಂಖ್ಯೆಯಿದೆ. ಇಲ್ಲಿ ಪ್ರತಿದಿನ ನೂರಾರು ವಿದ್ಯಾರ್ಥಿಗಳು ಈ ಕಾಲು ಸಂಕದ ಮೂಲಕ ಶಾಲಾ ಕಾಲೇಜಿಗೆ ಹೋಗಬೇಕಾಗಿದೆ. ಮಳೆಗಾಲದಲ್ಲಿ ಪ್ರತಿದಿನವೂ ಇಲ್ಲಿನ ಜನತೆ ಯಾತನಮಯ ಜೀವನ ನಡೆಸಬೇಕಾಗಿದೆ.
ದುರ್ಗಮ ಪ್ರದೇಶವಾದ ಕಾರಣ
ಇಲಾಖೆಯ ನಿರ್ವಹಣೆಯ ಕೊರತೆ ಯಿಂದ ಸಮರ್ಪಕ ವಿದ್ಯುತ್ ದೊರೆಯುತ್ತಿಲ್ಲ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.
ಬೈಂದೂರಿನಿಂದ ಮಧ್ದೋಡಿಯ ತನಕ ಡಾಮರುಗೊಂಡ ರಸ್ತೆಯಿದೆ. ಕಲ್ಲಣ್ಕಿ, ಕುಂಜಳ್ಳಿ, ತೋಕ್ತಿ ಮೊದ
ಲಾದ ಊರುಗಳಿಗೆ ರಸ್ತೆ, ಸೇತುವೆಯೂ ಇಲ್ಲ. ಈಗಾಗಲೇ ಶಾಸಕರು, ಸಂಸದರು, ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳಿಗೂ ಮನವಿ ಸಲ್ಲಿಸಿ ದ್ದಾರೆ.
ಮುಂದಿನ ದಿನದಲ್ಲಾದರೂ ಕ್ಷೇತ್ರದ ನೂತನ ಶಾಸಕರು ಸೇರಿದಂತೆ ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಇಲ್ಲಿನ ಜನತೆಯ ಸಮಸ್ಯೆಗೆ ಸ್ಪಂದಿಸಬೇಕಾಗಿದೆ
ಗಮನಕ್ಕೆ ತರಲಾಗಿದೆ
ಕಲ್ಲಣ್ಕಿ ಕುಂಜಳ್ಳಿ ಜನರು ಕಳೆದ ಹಲವು ವರ್ಷಗಳಿಂದ ಸೇತುವೆಗಾಗಿ ಬೇಡಿಕೆ ನೀಡುತ್ತಿದ್ದಾರೆ.ಪಂಚಾಯತ್ ವ್ಯಾಪ್ತಿಯಲ್ಲಿ ಸೇತುವೆ ನಿರ್ಮಾಣ ಸಾಧ್ಯವಿಲ್ಲ.ಹೀಗಾಗಿ ಸರಕಾರದ ಅನುದಾನ ನೀಡುವ ಬಗ್ಗೆ ಈಗಾಗಲೇ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ.ಸೇತುವೆ ನಿರ್ಮಾಣ ಈ ಭಾಗಕ್ಕೆ ಅತ್ಯಗತ್ಯವಾಗಿದೆ.
– ನಾಗರಾಜ ಶೆಟ್ಟಿ,ಗ್ರಾ.ಪಂ. ಸದಸ್ಯ
ನಿತ್ಯದ ಗೋಳು
ಕಳೆದ ಹತ್ತಾರು ವರ್ಷಗಳಿಂದ ಇಲ್ಲಿನ ಹೊಳೆಗೆ ಸೇತುವೆ ನಿರ್ಮಿಸಿಕೊಡುವಂತೆ ಜನಪ್ರತಿನಿಧಿಗಳೂ ಸೇರಿದಂತೆ ಇಲಾಖೆಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದೇವೆ.ಸೇತುವೆ ಸಮಸ್ಯೆ ನಿತ್ಯದ ಗೋಳಾಗಿದೆ. ಜನಪ್ರತಿನಿಧಿಗಳು ಸ್ಪಂದಿಸುವ ಭರವಸೆ ಇದೆ.
– ಜೋಸೆಫ್ ಸ್ಥಳೀಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Bengaluru: ಮನೆಯ ಮುಂದೆ ಕುಳಿತು ಮೊಬೈಲ್ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!
Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.