ಕುಂದಾಪುರ: ಮುಂದುವರಿದ ವರುಣನ ಆರ್ಭಟ


Team Udayavani, Jun 30, 2018, 6:00 AM IST

kundapur-rain-800.jpg

ಕುಂದಾಪುರ: ಕುಂದಾಪುರ, ಬೈಂದೂರು ಭಾಗದಲ್ಲಿ ಶುಕ್ರ ವಾರವೂ ವರುಣನ ಆರ್ಭಟ ಮುಂದುವರಿದಿದ್ದು, ಹಲವು ಕಡೆಗಳಲ್ಲಿ ಮತ್ತೆ ಕೃಷಿ ಪ್ರದೇಶಗಳು ಜಲಾವೃತಗೊಂಡಿವೆ. 

ಮನೆ ಗೋಡೆ ಕುಸಿತ
ಅಂಕದಕಟ್ಟೆಯ ವರ್ಣರಕೇರಿಯ ಯಶೋದಾ ಅವರ ಮನೆಯು ಭಾರೀ ಗಾಳಿ- ಮಳೆಯಿಂದಾಗಿ ಗೋಡೆ ಕುಸಿದಿದ್ದು, ಸುಮಾರು 50 ಸಾವಿರ ರೂ. ನಷ್ಟ ಸಂಭವಿಸಿದೆ. 

ತುಂಬಿ ಹರಿಯುತ್ತಿದೆ ನದಿಗಳು
ಕುಂದಾಪುರ ಬೈಂದೂರು ಭಾಗದ ಪಂಚ ನದಿಗಳಾದ ಸೌಪರ್ಣಿಕಾ, ಕುಬಾj, ವಾರಾಹಿ, ಚಕ್ರ, ಕಾಶಿ ನದಿಗಳು ತುಂಬಿ ಹರಿಯುತ್ತಿದ್ದು, ಕೆಲವು ಕಡೆಗಳಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
 
ಅನೇಕ ಕಡೆಗಳಲ್ಲಿ ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಯಿಲ್ಲದ ಕಾರಣ ರಸ್ತೆಗಳಲ್ಲಿಯೇ ನೀರು ಹರಿಯುತ್ತಿದ್ದು, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.ತಲ್ಲೂರು ಸಮೀಪದ ರಾ. ಹೆದ್ದಾರಿ 66ರಿಂದ ಸುಪ್ರೀಂ ಹಿಂಭಾಗದ ರಸ್ತೆಯಲ್ಲಿಯೇ ನೀರು ಹರಿದು ಹೋಗುತ್ತಿದ್ದು, ರಸ್ತೆ ತೋಡಿನಂತೆ ಭಾಸವಾಗುತ್ತಿದೆ. 

ಇಡೂರು-ಕುಂಜ್ಞಾಡಿ, ವಂಡ್ಸೆ, ಚಿತ್ತೂರು ಪರಿಸರದಲ್ಲಿ  ಕೃಷಿಭೂಮಿ ಜಲಾವೃತ
ಕೊಲ್ಲೂರು:
ಇಡೂರು-ಕುಂಜ್ಞಾಡಿ, ಹೊಸೂರು, ವಂಡ್ಸೆ, ಚಿತ್ತೂರು, ಜಾಡಿ, ದೇವಲ್ಕುಂದ ಸಹಿತ ನೂಜಾಡಿ, ಕೆರಾಡಿಯಲ್ಲಿ ಜೂ. 29ರಂದು ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಕೃಷಿ ಪ್ರಧಾನ ಭೂಮಿ ಜಲಾವೃತಗೊಂಡಿದ್ದು ಕೃಷಿ ನಾಶವಾಗಿದೆ.

ಬಹುತೇಕ ತಗ್ಗು ಪ್ರದೇಶಗಳಲ್ಲಿ ನೀರಿನ ಹೊರ ಹರಿವಿಗೆ ಸಮರ್ಪಕವಾದ ಒಳಚರಂಡಿಯ ಕೊರತೆಯಿಂದಾಗಿ ಆ ಭಾಗದ ಕೃಷಿ ಭೂಮಿ ಜಲಾವೃತಗೊಂಡಿದೆ. ಕೊಲ್ಲೂರು, ಹಾಲ್ಕಲ್‌, ಜಡ್ಕಲ್‌, ಮುದೂರು ಸಹಿತ ಪಶ್ಚಿಮ ಘಟ್ಟದ ತಪ್ಪಲಲ್ಲಿ ಭಾರೀ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ 4 ದಿನಗಳಿಂದ ಈ ಭಾಗದಲ್ಲಿ ದಿನೇ ದಿನೇ ಮಳೆ ಹೆಚ್ಚುತ್ತಿದ್ದು ಸೌಪರ್ಣಿಕ ಹಾಗೂ ಕಾಶೀ ಹೊಳೆ ಅಪಾಯ ಮಟ್ಟಕ್ಕೆ ಏರಿದೆ.

ಸೋರುತ್ತಿರುವ ಕೊಡಚಾದ್ರಿ ಸರ್ವಜ್ಞ ಪೀಠ
ಶಂಕರಾಚಾರ್ಯರ ತಪೋಭೂಮಿ ಯಾಗಿರುವ ಕೊಡಚಾದ್ರಿ ಬೆಟ್ಟದಲ್ಲಿನ ಸರ್ವಜ್ಞ ಪೀಠವು ಭಾರೀ ಮಳೆಯಿಂದಾಗಿ ಸೋರುತ್ತಿದ್ದು  ನಿತ್ಯ ಪೂಜೆಗೆ ತೆರಳುವ ಪೂಜಾರಿಯವರಿಗೆ ಮುಸಲಧಾರೆಯಲ್ಲಿ ಪೂಜೆ ಮಾಡಬೇಕಾದ ಸಂದಿಗ್ಧ ಪರಿಸ್ಥಿತಿ ಕಂಡುಬಂದಿದೆ. ಜಿಲ್ಲಾಡಳಿತವು ಇದಕ್ಕೊಂದು ಪರ್ಯಾಯ ವ್ಯವಸ್ಥೆ ಒದಗಿಸಬೇಕೆಂದು ಜೋಗಿ ಸಮಾಜದ ಪ್ರಮುಖರು ಆಗ್ರಹಿಸಿದ್ದಾರೆ.

ನೀರಿನಿಂದ ಭರ್ತಿಯಾದ ಹೆದ್ದಾರಿ !
ಕುಂದಾಪುರ:
ಮಳೆ ಬಂದಾಗ ಹಳ್ಳ, ನದಿ ಭರ್ತಿಯಾಗುವುದು ಸಹಜ. ಆದರೆ ಕುಂದಾಪುರ ನಗರದಲ್ಲಿ ಹಾಗಲ್ಲ. ಇಲ್ಲಿ ಮಳೆ ಬಂದರೆ ಹೆದ್ದಾರಿ ಭರ್ತಿಯಾಗುತ್ತದೆ!

ಕಳೆದ ನಾಲ್ಕು ದಿನಗಳಿಂದ ಕುಂದಾಪುರದಲ್ಲಿ ಮಳೆಯಾಗುತ್ತಿದ್ದು ಬಿಡದೆ ಮಳೆಯಾದಾಗಲೆಲ್ಲ ಹೆದ್ದಾರಿ ಹಾಗೂ ಹೆದ್ದಾರಿ ಬದಿಯಲ್ಲಿ ನೀರು ನಿಂತಿರುತ್ತದೆ. 

ಸಂಗಮ್‌ನಿಂದ ಹೆದ್ದಾರಿ ಹೊಂಡ ಆರಂಭವಾಗಿದ್ದು ಬಸೂÅರು ಮೂರುಕೈವರೆಗೂ ಮುಂದುವರಿದಿದೆ. ಶಾಸಿŒ ಸರ್ಕಲ್‌ ಬಳಿ ಅರ್ಧ ಪೂರೈಸಿದ ಫ್ಲೈ ಒವರ್‌ ಕಾಮಗಾರಿಯಿಂದಾಗಿ ವಾಹನಗಳ ಸುಗಮ ಓಡಾಟಕ್ಕೆ ತೊಂದರೆಯಾಗಿದೆ. ಜತೆಗೆ ಅಲ್ಲಲ್ಲಿ ಬಿದ್ದ ಭಾರೀ ಗಾತ್ರದ ಹೊಂಡಗಳು. ಇದರಿಂದಾಗಿ ಸಣ್ಣ ಚಕ್ರಗಳ ವಾಹನಗಳು, ದ್ವಿಚಕ್ರ, ತ್ರಿಚಕ್ರ ವಾಹನಗಳು ಓಡಾಡಲು ಸವಾರರು ಭೀತಿ ಪಡುವಂತಾಗಿದೆ. ಧುತ್ತನೆ ಬರುವ ಭಾರೀ ಗಾತ್ರದ ವಾಹನಗಳು ಗಾಬರಿ ಹುಟ್ಟಿಸುತ್ತಿವೆ. ಮಳೆ ನೀರು ಸಂಗ್ರಹವಾಗಿ ಎಲ್ಲೆಲ್ಲಿ ಹೊಂಡ ಇದೆ ಎಂದು ತಿಳಿಯುತ್ತಿಲ್ಲ. ಸರ್ವಿಸ್‌ ರಸ್ತೆಗೆ ತಿರುಗುವ ಎಲ್ಲ ಕಡೆಯೂ ನೀರು ಸಂಗ್ರಹವಾಗಿರುತ್ತದೆ. ರಾಷ್ಟ್ರೀಯ ಹೆದ್ದಾರಿ ಇಲಾಖೆಯ ನಿರ್ಲಕ್ಷ್ಯಕ್ಕೆ ಅಮಾಯಕರು ಬೆಲೆ ತೆರಬೇಕಾಗಿದೆ.

ಗಂಗೊಳ್ಳಿ: ಶಾಲಾ ವಠಾರ ಜಲಾವೃತ 
ಗಂಗೊಳ್ಳಿ:
 ಕಳೆದ 2-3 ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಗಂಗೊಳ್ಳಿ ಖಾರ್ವಿ ಕೇರಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರ ಜಲಾವೃತಗೊಂಡಿದೆ. 

ಶಾಲೆ ಸುತ್ತಲೂ ನೀರು ತುಂಬಿ ಕೊಂಡಿರುವುದರಿಂದ ಮಕ್ಕಳು ಶಾಲೆಗೆ ಬರಲು ತೊಂದರೆಯಾಗುತ್ತಿದೆ. ಶಾಲಾ ವಠಾರ ತಗ್ಗು ಪ್ರದೇಶವಾಗಿರುವುದರಿಂದ ಮಳೆ ನೀರು ಈ ಪರಿಸರದಲ್ಲಿ ಸಂಗ್ರಹಗೊಳ್ಳುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಖಾರ್ವಿಕೇರಿ ಪ್ರದೇಶದಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಿಸಲಾಗಿದ್ದು, ಮಳೆ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಮಾಡದಿರುವುದರಿಂದ ಮಳೆ ನೀರು ನಿಂತಿದೆ. 

ಸ್ಪಂದಿಸದ ಸ್ಥಳೀಯಾಡಳಿತ ಶಾಲೆಯ ವಠಾರವಿಡೀ ನೀರು ನಿಂತು ಮಕ್ಕಳಿಗೆ ತೊಂದರೆಯಾಗುತ್ತಿದ್ದರೂ, ಸ್ಥಳೀಯಾಡಳಿತ ಮಾತ್ರ ಈವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಹೆತ್ತವರು  ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಟಾಪ್ ನ್ಯೂಸ್

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Ajit Pawar supports Devendra Fadnavis; CM tussle continues in Maharashtra

Politics: ಫಡ್ನವೀಸ್‌ ಗೆ ಬೆಂಬಲ ನೀಡಿದ ಅಜಿತ್;‌ ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Sudeep: ‘Max’ release date fixed: Production company wakes up to Kichchan’s anger

Sudeep: ʼಮ್ಯಾಕ್ಸ್‌ʼ ರಿಲೀಸ್‌ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ

Bidar: Waqf should be removed from India : Yatnal

‌Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್

Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

kambala2

Kambala Time Table: ಡಿ.13ರ ವರೆಗೆ ಸಾಂಪ್ರದಾಯಿಕ ಕಂಬಳ ಹಬ್ಬ

Naxal-Rehablitation

Vikram Gowda Encounter: ನಕ್ಸಲ್‌ ಪುನರ್ವಸತಿ, ಶರಣಾಗತಿ ಸಮಿತಿ ಭೇಟಿ, ಪರಿಶೀಲನೆ

barkuru-Kamabala

Kambala: ಆರು ಶತಮಾನಗಳ ಇತಿಹಾಸ ಹೊಂದಿರುವ ಬಾರ್ಕೂರು ಕಂಬಳ

Police

Karkala: ಎಸ್‌ಪಿ ಕಚೇರಿ ಮುತ್ತಿಗೆ ಹೇಳಿಕೆ ಆರೋಪ: ಪ್ರಕರಣ ದಾಖಲು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Ajit Pawar supports Devendra Fadnavis; CM tussle continues in Maharashtra

Politics: ಫಡ್ನವೀಸ್‌ ಗೆ ಬೆಂಬಲ ನೀಡಿದ ಅಜಿತ್;‌ ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Sudeep: ‘Max’ release date fixed: Production company wakes up to Kichchan’s anger

Sudeep: ʼಮ್ಯಾಕ್ಸ್‌ʼ ರಿಲೀಸ್‌ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ

Bidar: Waqf should be removed from India : Yatnal

‌Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.