ಮೊಡಂಕಾಪು: ಬೇಕಾಗಿದೆ ಪ್ರಯಾಣಿಕರ ತಂಗುದಾಣ

Team Udayavani, Jun 30, 2018, 2:00 AM IST

modnkapu-29-6.jpg

ಬಂಟ್ವಾಳ: ಮೊಡಂಕಾಪು ಸುಸಜ್ಜಿತ ಪ್ರಯಾಣಿಕರ ತಂಗುದಾಣ ಸೌಕರ್ಯ ಒದಗಿ ಬರಬೇಕಾಗಿದೆ. ಸುಮಾರು 300 ವರ್ಷಗಳ ಹಿಂದೆಯೇ ಈ ಊರಿನಲ್ಲಿ ಶೈಕ್ಷಣಿಕ ಕೇಂದ್ರ ಆರಂಭಗೊಂಡಿತ್ತು ಎಂಬುದು ಇತಿಹಾಸದ ದಾಖಲೆಯಿಂದ ತಿಳಿದು ಬರುತ್ತದೆ. ಪಲ್ಲಮಜಲು, ಪರಾರಿ, ಮಿತ್ತಪರಾರಿ, ರಾಜೀವಪಳಿಕೆ, ಕಾಮಾಜೆ, ಕುಪ್ಪಿಲ, ದುಗನಕೋಡಿ, ಬೆದ್ರಗುಡ್ಡೆ, ಗೋಲಿನೆಲ ಊರುಗಳನ್ನು ಸುತ್ತುವರಿದ ಪ್ರದೇಶ ಮೊಡಂಕಾಪು. ಸಾಕಷ್ಟು ಜನಸಂಖ್ಯೆ ಹೊಂದಿರುವ ಈ ಊರಿನ ಜನರಿಗೆ ಮೂಲ ಸೌಕರ್ಯಗಳಲ್ಲಿ ಒಂದಾದ ಪ್ರಯಾಣಿಕರ ತಂಗುದಾಣವನ್ನು ಪುರಸಭೆ ಇನ್ನೂ ಒದಗಿಸಿಲ್ಲ. ಬಂಟ್ವಾಳ ಲಯನ್ಸ್‌ ಕ್ಲಬ್‌ ಪ್ರಾಯೋಜಕತ್ವದಲ್ಲಿ ಬಂಟ್ವಾಳ ಅನಂತ ಮಲ್ಯ ಚಾರಿಟೆಬಲ್‌ ಟ್ರಸ್ಟ್‌  ಕೊಡುಗೆಯಾಗಿ ನೀಡಿದ ಚಿಕ್ಕ ಪ್ರಯಾಣಿಕರ ತಂಗುದಾಣ ಪೊಳಲಿ-ಬೆಂಜನಪದವು ಕಡೆಗೆ ಹೋಗುವ ಜನರಿಗೆ ಆಶ್ರಯವಾಗಿದೆ.

ಶೈಕ್ಷಣಿಕ ಕೇಂದ್ರ
ದೀಪಿಕಾ ಪ್ರೌಢಶಾಲೆ, ಇನ್ಫೆಂಟ್‌ ಜೀಸಸ್‌ ಇಂಗ್ಲಿಷ್‌ ಮಾಧ್ಯಮ ಶಾಲೆ, ಕಾರ್ಮೆಲ್‌ ಕಾನ್ವೆಂಟ್‌ ಪ್ರೌಢಶಾಲೆ, ಕಾರ್ಮೆಲ್‌ ಪದವಿಪೂರ್ವ ಕಾಲೇಜು, ಕಾರ್ಮೆಲ್‌ ಕಾನ್ವೆಂಟ್‌ ಪದವಿ ಕಾಲೇಜು ಹೀಗೆ ಹಲವು ಶಾಲಾ-ಕಾಲೇಜಿರುವ ಇಲ್ಲಿನ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಬಸ್‌ ಗಾಗಿ ಕಾಯಲು ಸೂಕ್ತವಾದ ತಂಗುದಾಣವೇ ಇಲ್ಲ. ಬಿಸಿಲಲ್ಲಿ ಒಣಗಿ ಮಳೆಗಾಲದಲ್ಲಿ  ಒದ್ದೆಯಾಗಿ ಬಸ್ಸನ್ನು ಕಾಯಬೇಕಾದ ಸ್ಥಿತಿ ಇದೆ. ಇಷ್ಟೊಂದು ಜನರು ಓಡಾಡುವ ಮೊಡಂಕಾಪಿನಲ್ಲಿ ಪುರಸಭೆಯು ಪ್ರಯಾಣಿಕರ ತಂಗುದಾಣವನ್ನು ನಿರ್ಮಾಣ ಮಾಡಿದರೆ ಜನರಿಗೆ ತುಂಬಾ ಅನುಕೂಲವಾಗುವುದು.

ರಸ್ತೆಯೇ ಬಸ್‌ ನಿಲ್ದಾಣ
ಮೊಂಡಂಕಾಪಿನಿಂದ ಬಿ.ಸಿ. ರೋಡ್‌ಗೆ ಅಥವಾ ಬೇರೆ ಕಡೆ ಹೋಗಬೇಕಾದರೆ ಜನರಿಗೆ ರಾಜೀವಪಳಿಕೆ ಪರಿಸರದವರು ಮೊಡಂಕಾಪು ಹಾಸ್ಟೆಲ್‌ ಬಳಿ, ದುಗನಕೋಡಿ ಪರಿಸರದವರು ಪಕ್ಕದಲ್ಲಿರುವ ಹೊಟೇಲ್‌ ಬಳಿ, ಕಾರ್ಮೆಲ್‌ ಕಾಲೇಜು ಪದವಿ ವಿದ್ಯಾರ್ಥಿಗಳು ಹಾಗೂ ಚರ್ಚ್‌ಗೆ ಬರುವವರು ಪಕ್ಕದಲ್ಲಿರುವ ಎಂ.ಜೆ.ಎಂ. ಕಾಂಪ್ಲೆಕ್ಸ್‌ನ ಎದುರು, ಪಲ್ಲಮಜಲು ಪರಿಸರದವರು ಅಯ್ಯಪ್ಪ ಮಂದಿರದ ಬಳಿ, ಕಾರ್ಮೆಲ್‌ ಕಾನ್ವೆಂಟಿನ ಎದುರು ಅಲ್ಲಿನ ಮಕ್ಕಳು, ಕುಪ್ಪಿಲ -ಪರಾರಿ-ಮಿತ್ತಪರಾರಿ ಪರಿಸರದವರು ರೈಲ್ವೇ ಬ್ರಿಡ್ಜ್ ಬಳಿ ನಿಂತು ಬಸ್‌ ಹಿಡಿಯುತ್ತಾರೆ.

ಬಸ್‌ ಬೇ ಅವಶ್ಯ
ಸಾರ್ವಜನಿಕರ ಅಪೇಕ್ಷೆಯನ್ನು ಗಮನಕ್ಕೆ ತೆಗೆದುಕೊಳ್ಳಲಾಗಿದೆ. ಶಾಲಾ ಮಕ್ಕಳ ಹಿತದೃಷ್ಟಿಯಿಂದ ನಿರ್ದಿಷ್ಟ ಸ್ಥಳದಲ್ಲಿ ಬಸ್‌ ನಿಲುಗಡೆ ಸೆಂಟರ್‌ ಈ ಪ್ರದೇಶದಲ್ಲಿ ಬೇಕಾಗಿದೆ. ಶಾಲಾ ವಿದ್ಯಾರ್ಥಿಗಳು ಆಯಾಯ ಕೇಂದ್ರ ಸನಿಹ ನಿಲ್ಲುವುದರಿಂದ ವಾಹನ ಚಾಲಕರೂ ಅಲ್ಲಿಂದ ಬಸ್ಸಿಗೆ ಹತ್ತಿಸಿ, ಇಳಿಸಿಕೊಂಡು ಹೋಗುವುದು ನಡೆದಿದೆ. ಮಳೆ ಮತ್ತು ಬಿಸಿಲಿನ ಹೊತ್ತಿಗೆ ಇಂತಹ ಪ್ರಯಾಣಿಕರ ನಿಲುಗಡೆಗೆ ಬಸ್‌ ಬೇ ಸೌಕರ್ಯ ಅವಶ್ಯವಾಗಿದ್ದು, ಆಡಳಿತವು ಪ್ರಸ್ತಾವವನ್ನು ಗಮನಿಸುವುದು. 
– ಪಿ. ರಾಮಕೃಷ್ಣ ಆಳ್ವ, ಅಧ್ಯಕ್ಷರು, ಬಂಟ್ವಾಳ ಪುರಸಭೆ

ಟಾಪ್ ನ್ಯೂಸ್

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

1-ct

C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Sullia: ಅಸೌಖ್ಯದಿಂದ ಮಹಿಳೆ ಸಾವು

Sullia: ಅಸೌಖ್ಯದಿಂದ ಮಹಿಳೆ ಸಾವು

Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ

Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ

Puttur: ಅತ್ಯಾ*ಚಾರ ಪ್ರಕರಣ: ಆರೋಪಿಗೆ ಜಾಮೀನು

Puttur: ಅತ್ಯಾ*ಚಾರ ಪ್ರಕರಣ: ಆರೋಪಿಗೆ ಜಾಮೀನು

2

Bantwal: ಪುರಸಭೆ ಆಸ್ತಿ ರಕ್ಷಣೆಗೆ ಸದಸ್ಯರ ಆಗ್ರಹ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-cbl

Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Sullia: ಅಸೌಖ್ಯದಿಂದ ಮಹಿಳೆ ಸಾವು

Sullia: ಅಸೌಖ್ಯದಿಂದ ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.