ಲಕ್ಷದಲ್ಲೊಂದು ದ್ವೀಪ!
Team Udayavani, Jul 1, 2018, 6:00 AM IST
ಅತ್ಯಂತ ಕಡಿಮೆ ವೆಚ್ಚದಲ್ಲಿ ಲಕ್ಷದ್ವೀಪಕ್ಕೆ ಹೋಗಿ ರಜೆ ಕಳೆದು ಬರಬಹುದು ಅನ್ನುವುದು ಬಹುಮಂದಿಗೆ ತಿಳಿದಿರಲಿಕ್ಕಿಲ್ಲ. ಹೌದು, ಲಕ್ಷದ್ವೀಪದ ಸಮೂಹ ದ್ವೀಪಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.
ಲಕ್ಷದ್ವೀಪವು 39 ನಡುಗಡ್ಡೆ ಹಾಗೂ ದ್ವೀಪಗಳನ್ನು ಒಳಗೊಂಡಿದೆ. ಪ್ರವಾಸಿಗರ ಪಾಲಿಗಂತೂ ಇದು ಭೂಮಿಯ ಮೇಲಿನ ಸ್ವರ್ಗ. ಸೂರ್ಯನ ಪ್ರಭೆಯಲ್ಲಿ ಮರಳಿನೊಂದಿಗೆ ಕಾಲ ಕಳೆಯಲು, ವಿಹರಿಸಲು ಬಯಸುವವರಿಗಂತೂ ಇದು ನೆಚ್ಚಿನ ತಾಣ. ಸುಮಾರು 4200 ಚ. ಕಿ. ಮೀ. ವಿಸ್ತಾರದಲ್ಲಿ ಇಲ್ಲಿ ಸಮುದ್ರದ ನೀರಿನಿಂದ ನಿರ್ಮಾಣವಾಗಿರುವ ಸರೋವರ ಇದೆ. 36 ಚದರ್ ಕಿ. ಮೀ.ನಷ್ಟು ವಿಶಾಲವಾದ ನಡುಗಡ್ಡೆ ಪ್ರದೇಶ ಇಲ್ಲಿದೆ. ಒಟ್ಟು ಈ ದ್ವೀಪ ಪ್ರದೇಶ 132 ಕಿ. ಮೀ. ಉದ್ದನೆಯ ಕರಾವಳಿ ತೀರ ಆಕರ್ಷಣೆಯ ಕೇಂದ್ರವಾಗಿ ಲಭಿಸಿದೆ. ಇಲ್ಲಿನ ಈ ವಿಶಾಲ ಸ್ಥಳದಲ್ಲಿ ಸಾಕಷ್ಟು ಕಡಲ ತೀರಗಳು, ಜಲಕ್ರೀಡೆಗೆ ಸಂಬಂಧಿಸಿದ ಚಟುವಟಿಕೆಗಳು ನಿತ್ಯ ನಿರಂತರವಾಗಿವೆ.
ನಿಸರ್ಗದತ್ತ ಸೌಂದರ್ಯ ಹಾಗೂ ಆಕರ್ಷಣೆ ಲಕ್ಷದ್ವೀಪ ಮೂಲ ಬಂಡವಾಳವಾಗಿದೆ. ಇಲ್ಲಿನ ಎರಡು ಪ್ರಮುಖ ನಡುಗಡ್ಡೆಗಳಾದ ಅಗತ್ತಿ ಹಾಗೂ ಬಂಗಾರಂ ಅತ್ಯಂತ ಪ್ರವಾಸಿ ಆಕರ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಅಗತ್ತಿಯು ಇಲ್ಲಿನ ಡೊಮೆಸ್ಟಿಕ್ ವಿಮಾನನಿಲ್ದಾಣವನ್ನು ಒಳಗೊಂಡಿದ್ದು ಅತ್ಯಂತ ಪ್ರಸಿದ್ಧ ನಡುಗಡ್ಡೆ ಎನಿಸಿದೆ. ಈ ದ್ವೀಪ ಸಮೂಹದಲ್ಲಿಯೇ ಮದ್ಯಪಾನಕ್ಕೆ ಅವಕಾಶ ಇರುವ ಏಕೈಕ ದ್ವೀಪ ಇದಾಗಿದೆ. ನೀವು ಅಲ್ಲಿದ್ದ ಸಂದರ್ಭದಲ್ಲಿ ಕಡಲ ತೀರದಲ್ಲಿ ನಿಮಗೆ ಉತ್ತಮ ಸ್ಥಳೀಯ ಖಾದ್ಯಗಳು ಸಿಗುತ್ತವೆ. ಲಕ್ಷದ್ವೀಪದ ನಾಗರಿಕರು ಸಮುದ್ರ ಜೀವಿಗಳ ಸ್ವಾದಿಷ್ಟ ತಿನಿಸು ಸಿದ್ಧಪಡಿಸುವ ಕಲೆ ಹೊಂದಿದ್ದಾರೆ. ಈ ದ್ವೀಪವು ವಿಶ್ವದಲ್ಲಿ ಸಾಕಷ್ಟು ಪ್ರಸಿದ್ಧ ಟೂನಾ ಮೀನು ಹಿಡಿಯುವ ತಾಣವೂ ಆಗಿದೆ.
ಇಲ್ಲಿನ ಸಮುದ್ರ ಜೀವಿಗಳು ಅಂದರೆ ಮೀನು ಮತ್ತಿತರ ಜೀವಿಗಳ ಆಹಾರ ಹೇರಳವಾಗಿ ಸಿಗುತ್ತದೆ. ಈ ದ್ವೀಪ ಸಮೂಹದ ಪ್ರಮುಖ ರಫ್ತು ಉದ್ಯಮವೂ ಇದನ್ನೇ ಅವಲಂಬಿಸಿದೆ. ಮೀನುಗಾರಿಕೆಯ ಸ್ವಾನುಭವವನ್ನು ಕೂಡ ಇಲ್ಲಿ ಪಡೆಯಬಹುದು. ಸ್ಕೂಬಾ ಡೈವಿಂಗ್‌ತಾಣ ಕೂಡ ಇಲ್ಲಿನ ಅತ್ಯಂತ ಜನಪ್ರಿಯ ಹಾಗೂ ಪ್ರಮುಖ ಆಕರ್ಷಣೆ.
ಇಲ್ಲಿನ ಮೋಜಿನ ತಾಣಗಳು ಪ್ರವಾಸಿಗರಿಗೆ ನೈಜ ಹಾಗೂ ಮನೋಲ್ಲಾಸದ ಅನುಭವ ನೀಡುತ್ತವೆ. ನೀರಿನಾಳಕ್ಕೆ ಇಳಿದು ಈಜಲು, ನೀರಿಗೆ ಜಿಗಿಯಲು ಇಲ್ಲಿ ಸಾಕಷ್ಟು ತಾಣಗಳು ಸಿಗುತ್ತವೆ. ನೀರಿನೊಂದಿಗೆ ಮಜವಾಗಿ ಕಾಲ ಕಳೆಯುವ ಹೇರಳ ಅವಕಾಶ ಇಲ್ಲಿ ಬಂದರೆ ಸಿಗುತ್ತದೆ. ಆದರೆ, 30 ಮೀ. ಆಳದವರೆಗೆ ಮಾತ್ರ ತೆರಳಲು ಪರವಾನಿಗೆ ಇದೆ. ನಿರೀಕ್ಷೆಗೂ ಮೀರಿದ ತಾಣವನ್ನು ವೀಕ್ಷಿಸುವ, ಅಪರಿಮಿತ ಅನುಭವ ಹೊಂದುವ ಅವಕಾಶ ಇಲ್ಲಿ ದೊರೆಯುತ್ತದೆ. ಸಮುದ್ರದ ನೀರಿನಿಂದ ನಿರ್ಮಾಣವಾಗಿರುವ ಸರೋವರಗಳು ನೀಲಿ ಬಣ್ಣದ್ದಾಗಿವೆ. ಲಕ್ಷದ್ವೀಪದಲ್ಲಿನ ರೇಸಾರ್ಟ್‌ಗಳು ರಜಾಕಾಲೀನ ಅವಧಿ ಕಳೆಯಲು ಅನುಕೂಲವಾಗುವ ವಿಶೇಷ ಪ್ಯಾಕೇಜ್‌ಗಳನ್ನು ಪ್ರವಾಸಿಗರಿಗೆ ನೀಡುತ್ತವೆ
ಆಶಾ ಎಸ್. ಕುಲಕರ್ಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.