ಪ್ಯಾನ್ -ಆಧಾರ್ ಲಿಂಕ್‌ಗೆ ನೀಡಿದ್ದ ಗಡುವು ಅಂತ್ಯ
Team Udayavani, Jul 1, 2018, 6:00 AM IST
ನವದೆಹಲಿ: ಇನ್ನೂ ನೀವು ಪ್ಯಾನ್ ಸಂಖ್ಯೆಯನ್ನು ಆಧಾರ್ ಜೊತೆಗೆ ಲಿಂಕ್ ಮಾಡಿಲ್ಲವೇ? ಹಾಗಿದ್ದರೆ ಸಮಸ್ಯೆ ಎದುರಿಸುವುದು ಖಚಿತ. ಏಕೆಂದರೆ, ಪ್ಯಾನ್-ಆಧಾರ್ ಲಿಂಕ್ ಮಾಡಲು ಕೇಂದ್ರ ಸರ್ಕಾರ ನೀಡಿದ್ದ ಜೂ.30ರ ಗಡುವು ಶನಿವಾರವೇ ಪೂರ್ಣಗೊಂಡಿದೆ. ಗಡುವನ್ನು ವಿಸ್ತರಿಸುವ ಕುರಿತೂ ಸರ್ಕಾರ ಯಾವುದೇ ಘೋಷಣೆ ಮಾಡಿಲ್ಲ. ಈ ಹಿಂದೆ ಕೇಂದ್ರ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ಗಡುವನ್ನು 4 ಬಾರಿ ವಿಸ್ತರಿಸಿತ್ತು. ಜತೆಗೆ, 16.65 ಕೋಟಿ ಪ್ಯಾನ್ ಕಾರ್ಡ್‌ಗಳು ಹಾಗೂ 87.79 ಕೋಟಿ ಬ್ಯಾಂಕ್ ಖಾತೆಗಳು ಆಧಾರ್‌ಗೆ ಲಿಂಕ್ ಆಗಿವೆ ಎಂದು ಸರ್ಕಾರ ಹೇಳಿತ್ತು.
ಮುಂದೇನು?
ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡದೇ ಇದ್ದರೆ, ನಿಮ್ಮ ಪ್ಯಾನ್ ಸಂಖ್ಯೆ ಅಮಾನ್ಯಗೊಳ್ಳಬಹುದು. ಹೀಗಾಗಿ ನೀವು ಆದಾಯ ತೆರಿಗೆ ವೆಬ್‌ಸೈಟ್‌ಗೆ ಲಾಗ್‌ಇನ್ ಆಗಲು ಸಾಧ್ಯ ವಾಗದೇ ಇರಬಹುದು
ಆಧಾರ್-ಪ್ಯಾನ್ ಲಿಂಕ್ ಮಾಡದೇ ಇರುವವರು ಇನ್ನು ಮುಂದೆ ಆದಾಯ ತೆರಿಗೆ ರಿಟರ್ನ್Õ ಸಲ್ಲಿಕೆ ಮಾಡಲು ಆಗುವುದಿಲ್ಲ
ಒಂದು ವೇಳೆ ರಿಟರ್ನ್ ಸಲ್ಲಿಕೆ ಸಾಧ್ಯವಾದರೂ, ಅದರ ನಂತರದ ಪ್ರಕ್ರಿಯೆ ಸ್ಥಗಿತಗೊಳ್ಳಬಹುದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.