ಸುಳ್ಯ: ಪುರಸಭೆಯಾಗುವ ಕನಸು ನನೆಗುದಿಗೆ


Team Udayavani, Jul 1, 2018, 10:58 AM IST

1-july-5.jpg

ಸುಳ್ಯ: ಸುಳ್ಯ ನಗರ ಪಟ್ಟಣವಾಗಿ ಬದಲಾಗುತ್ತಿದೆ. ಈಗಿನ ನಗರ ಪಂಚಾಯತ್‌ ಅವಧಿ ಮುಂದಿನ ಮಾ. 10ಕ್ಕೆ ಕೊನೆಗೊಳ್ಳಲಿದೆ. ಇನ್ನು ಎಂಟು ತಿಂಗಳಲ್ಲಿ ನ.ಪಂ. ಚುನಾವಣೆ ಬರಲಿದೆ. ಸುಳ್ಯವನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ನಡೆದಿಲ್ಲ. ಆಡಳಿತದ ನಿರಾಸಕ್ತಿ ಮತ್ತು ಅಧಿಕಾರಿಗಳ ಉದಾಸೀನದಿಂದ ಅದು ನನೆಗುದಿಗೆ ಬಿದ್ದಿದೆ.

ಸುಳ್ಯ ನಗರ ಪಂಚಾಯತ್‌ಗೆ 2013ರ ಮಾ. 7ರಂದು ಚುನಾವಣೆ ನಡೆದಿತ್ತು. ಮಾ. 11ರಂದು ಮತ ಎಣಿಕೆ ನಡೆದು, ಫಲಿತಾಂಶ ಪ್ರಕಟವಾಗಿತ್ತು. ಆದರೆ ಅಧ್ಯಕ್ಷ ಉಪಾಧ್ಯಕ್ಷತೆಗೆ ಮೀಸಲಾತಿ ನಿಗದಿಪಡಿಸುವಾಗ ತಡವಾದ ಕಾರಣ ಚುನಾವಣೆಯಾಗಿ ಒಂದು ವರ್ಷದ ಬಳಿಕ ಅಂದರೆ 2014ರ ಮಾ. 11ರಂದು ನೂತನ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ ನಡೆದಿತ್ತು. ಅಂದಿನಿಂದ ಆರಂಭವಾದ ಚುನಾಯಿತ ಸದಸ್ಯರ ಅವಧಿ 2019ರ ಮಾ. 10ಕ್ಕೆ ಮುಗಿಯುತ್ತದೆ. 2018ರ ಡಿಸೆಂಬರ್‌ನಲ್ಲಿ ಚುನಾವಣೆ ಪ್ರಕ್ರಿಯೆ ಆರಂಭಗೊಂಡು, 2019ರ ಫೆಬ್ರವರಿಯಲ್ಲಿ ಚುನಾವಣೆ ಸಾಧ್ಯತೆ ಇದೆ.

ಮೇಲ್ದರ್ಜೆ ಚಿಂತನೆ
ಸುಳ್ಯ ನಗರದ ಘನತ್ಯಾಜ್ಯ ವಿಲೇವಾರಿ ಪೆರಾಜೆ ಸಮೀಪದ ಕಲ್ಚರ್ಪೆಯಲ್ಲಿ ಆಗುತ್ತಿದೆ. ಆಲೆಟ್ಟಿ ಗ್ರಾಮ ವ್ಯಾಪ್ತಿಗೆ ಇದು ಬರುತ್ತದೆ. ಪಯಸ್ವಿನಿ ನದಿಯ ಬದಿಯಲ್ಲಿ ಆಲೆಟ್ಟಿ ಗ್ರಾಮದ ಪರಿವಾರಕಾನ, ಅರಂಬೂರು, ಪಾಲಡ್ಕ ಮತ್ತು ಕಲ್ಚರ್ಪೆಗಳನ್ನು ಸುಳ್ಯ ನಗರ ಪಂಚಾಯತ್‌ಗೆ ಸೇರಿಸಿಕೊಂಡು ಸುಳ್ಯವನ್ನು ಜನಸಂಖ್ಯೆಯ ಆಧಾರದಲ್ಲಿ ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಬೇಕೆಂಬ ಚಿಂತನೆ ಈ ಹಿಂದೆ ನಡೆದಿತ್ತು. ಅರಂಬೂರು ಕಲ್ಚರ್ಪೆಯ ಜನ ಪಂಚಾಯತ್‌, ಸೊಸೈಟಿಗಳಿಗೆ ತೆರಳಬೇಕಿದ್ದರೆ ಸುಳ್ಯಕ್ಕೆ ಬಂದು ಆಲೆಟ್ಟಿಗೆ ಹೋಗಬೇಕಾದ ಅನಿವಾರ್ಯತೆ ಇದ್ದಿದ್ದರಿಂದ ಈ ಭಾಗವನ್ನು ಸುಳ್ಯ ನಗರಕ್ಕೆ ಸೇರಿಸುವ ಬಗ್ಗೆ ಜನತೆ ತಾತ್ವಿಕ ಒಪ್ಪಿಗೆ ಸೂಚಿಸಿದ್ದರು.

ಸುಳ್ಯ ನಗರ ಪಂಚಾಯತ್‌ನಿಂದ ಪ್ರಸ್ತಾವನೆ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ, ಅಭಿಪ್ರಾಯ ತಿಳಿಸಲು ಜಿಲ್ಲಾಧಿಕಾರಿಯಿಂದ ಆಲೆಟ್ಟಿ ನಗರ ಪಂಚಾಯತ್‌ಗೆ ಪತ್ರ ಬಂದಿತ್ತು. ಆಲೆಟ್ಟಿ ನಗರ ಪಂಚಾಯತ್‌ ನಿರಾಕ್ಷೇಪಣ ನಿರ್ಣಯ ಕೈಗೊಂಡಿತ್ತು. ಸುಳ್ಯ ತಾಲೂಕು ಪಂಚಾಯತ್‌ ಇದಕ್ಕೆ ಒಪ್ಪಿಗೆಯನ್ನೂ ಸೂಚಿಸಿತ್ತು. ಆಲೆಟ್ಟಿ ಗ್ರಾಮ ವ್ಯಾಪ್ತಿಯಲ್ಲಿರುವ ಕಲ್ಚರ್ಪೆ, ಪಾಲಡ್ಕ, ಅರಂಬೂರು, ಪರಿವಾರಕಾನಗಳ ಜತೆಗೆ ನಾಗಪಟ್ಟಣ ದೇವಾಲಯದ ಸುತ್ತಮುತ್ತ ತಮಿಳು ಕಾಲನಿ ಸಹಿತ ಕೆಎಫ್‌ಡಿಸಿ ನಿರೀಕ್ಷಣಾ ಮಂದಿರದ ವರೆಗಿನ ಪ್ರದೇಶವನ್ನು ಸುಳ್ಯ ನಗರಕ್ಕೆ ಸೇರಿಸಲು ಆಲೆಟ್ಟಿ ನಗರ ಪಂಚಾಯತ್‌ ಒಪ್ಪಿಗೆ ನೀಡಿತ್ತು.

ದೊಡ್ಡ ಪ್ರಕ್ರಿಯೆ
ಆಲೆಟ್ಟಿ ಗ್ರಾಮವನ್ನು ವಿಭಜಿಸಿ ಸುಳ್ಯ ಗ್ರಾಮಕ್ಕೆ ಸೇರಿಸಬೇಕಾದರೆ ವಿಭಜನೆಗೊಳ್ಳುವ ಪ್ರದೇಶಗಳು ಮತ್ತು ಅಲ್ಲಿನ ಸರ್ವೆ ನಂಬರ್‌ ಗಳನ್ನೆಲ್ಲ ಉಲ್ಲೇಖೀಸಿ ಕ್ರಮಬದ್ಧವಾದ ಪ್ರಸ್ತಾವನೆಯನ್ನು ಸಿದ್ಧಗೊಳಿಸಿ, ನ.ಪಂ. ಸಭೆಯಲ್ಲಿ ಅನುಮೋದನೆ ಪಡೆದು, ಜಿಲ್ಲಾಧಿಕಾರಿಗಳಿಗೆ ಕಳುಹಿಸಿ, ಅಲ್ಲಿಂದ ಸರಕಾರಕ್ಕೆ ಸಲ್ಲಿಕೆಯಾಗಿ, ಕಂದಾಯ ಇಲಾಖೆಯ ಒಪ್ಪಿಗೆ ಪಡೆದು, ಬಳಿಕ ಗೆಜೆಟ್‌ ನೋಟಿಫಿಕೇಶನ್‌ ಆಗಿ, ಅನುಷ್ಠಾನಗೊಳಿಸಬೇಕಾಗುತ್ತದೆ. 

ಚಂದ್ರಕುಮಾರ್‌ ಮುಖ್ಯಾಧಿಕಾರಿಯಾಗಿದ್ದಾಗ ಈ ಪ್ರಕ್ರಿಯೆಗೆ ಚಾಲನೆ ದೊರಕಿತ್ತು. ಅವರು ವರ್ಗಾವಣೆಗೊಂಡ ಬಳಿಕ ನನೆಗುದಿಗೆ ಬಿದ್ದಿದೆ. ಜನಪ್ರತಿನಿಧಿಗಳು ನಿರಾಸಕ್ತಿಯನ್ನು ತೊರೆದು, ಮುತುವರ್ಜಿಯಿಂದ ಪ್ರಯತ್ನ ಆರಂಭಿಸಿದರೆ, ಅಧಿಕಾರಿಗಳು ಗೊಂದಲದಿಂದ ಹೊರಬಂದು ಕಡತ ಸಿದ್ಧಗೊಳಿಸಿದರೆ, ಮುಂದಿನ ಚುನಾವಣೆಯ ವೇಳೆಗೆ ಸುಳ್ಯ ಪುರಸಭೆಯಾಗಲು ಸಾಧ್ಯವಿದೆ ಎಂಬುದು ರಾಜಕೀಯ ಚಿಂತಕರ ಅಭಿಪ್ರಾಯ.

ವಾರ್ಡ್‌ಗಳ ಸಂಖ್ಯೆ ಏರಿಕೆ
ನ.ಪಂ. ಅಥವಾ ಪುರಸಭೆಯ ವ್ಯಾಪ್ತಿಯಲ್ಲಿ 1,000 ಜನಸಂಖ್ಯೆಗೆ ಒಬ್ಬ ಸದಸ್ಯ ಇರಬೇಕು. ಇದುವರೆಗೆ ಸುಳ್ಯ ನ.ಪಂ.ನಲ್ಲಿ 18 ವಾರ್ಡ್‌ಗಳು ಇದ್ದು, 2011ರ ಜನಗಣತಿಯ ಪ್ರಕಾರ 19,958 ಮಂದಿ ಇರುವುದರಿಂದ ವಾರ್ಡ್‌ಗಳನ್ನು ಪುನರ್‌ ವಿಂಗಡಣೆ ಮಾಡಿ 20ಕ್ಕೆ ಹೆಚ್ಚಿಸಲಾಗಿದೆ. ಮುಂದಿನ ಚುನಾವಣೆಯಲ್ಲಿ ಇದು ಜಾರಿಗೆ ಬರುತ್ತದೆ. ಜಯನಗರ ವಾರ್ಡ್‌, ಜಟ್ಟಿಪಳ್ಳ ವಾರ್ಡ್‌ ಮತ್ತು ಬೋರುಗುಡ್ಡೆ ವಾರ್ಡ್‌ಗಳನ್ನು ವಿಭಜಿಸಲಾಗಿದೆ. ಇನ್ನುಳಿದ ಕೆಲವು ವಾರ್ಡ್‌ಗಳಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿ 20 ವಾರ್ಡ್‌ಗಳನ್ನು ರಚಿಸಲಾಗಿದೆ. ಮುಂದಿನ ಚುನಾವಣೆಗೆ ವಾರ್ಡ್‌ ಮೀಸಲಾತಿಯ ಕರಡುಪ್ರತಿಯೂ ಬಿಡುಗಡೆಗೊಂಡಿದೆ.

42 ಜನ ಕಡಿಮೆ!
2011ನೇ ಜನಗಣತಿಯಂತೆ ಸುಳ್ಯ ನಗರದಲ್ಲಿ 19,958 ಜನಸಂಖ್ಯೆ ಇದ್ದು, ಪುರಸಭೆಯಾಗಲು 42 ಮಂದಿ ಕಡಿಮೆ ಇದ್ದರು. ಈಗ 20,000 ದಾಟಿದ್ದರೂ ಅದು ಅಧಿಕೃತಗೊಳ್ಳುವುದು 2021ರ ಜನಗಣತಿಯ ಬಳಿಕ. ಆಲೆಟ್ಟಿ ಗ್ರಾಮದ ಪ್ರಸ್ತಾವಿತ ಪ್ರದೇಶಗಳನ್ನು ಸುಳ್ಯ ನಗರಕ್ಕೆ ಸೇರಿಸಿದರೆ ನಗರದ ಜನಸಂಖ್ಯೆ ಈಗಲೇ 23,000 ದಾಟುತ್ತದೆ.

ಪ್ರಸ್ತಾವ ಸಲ್ಲಿಸಿಯಾಗಿದೆ
ಸುಳ್ಯ ನ.ಪಂ. ಅನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವವನ್ನು ಜಿಲ್ಲಾಧಿಕಾರಿ, ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದೆ. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ನಿರ್ಣಯವೂ ಆಗಿದೆ. ಜತೆಯಲ್ಲಿ ವಾರ್ಡ್‌ ವಿಂಗಡನೆಯೂ ಆಗಿದೆ. ಬಳಿಕ ಅದನ್ನು ಹಿಂಬಾಲಿಸಿಲ್ಲ.
– ಶೀಲಾವತಿ ಮಾಧವ
ಅಧ್ಯಕ್ಷರು, ಸುಳ್ಯ ನ.ಪಂ.

ಪ್ರಗತಿಯಲ್ಲಿದೆ
ಸುಳ್ಯ ನಗರ ಪಂಚಾಯತ್‌ ಅನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವ ಪ್ರಗತಿಯಲ್ಲಿದೆ. 
– ಗೋಪಾಲ ನಾಯ್ಕ
ಮುಖ್ಯಾಧಿಕಾರಿ, ಸುಳ್ಯ ನ.ಪಂ.

ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

Rapper Badshah: ಬಾಲಿವುಡ್‌ ಗಾಯಕ ಬಾದ್‌ಶಾ ಒಡೆತನದ ಬಾರ್‌ & ಕ್ಲಬ್ ಹೊರಗೆ ಬಾಂಬ್‌ ಸ್ಪೋಟ

Rapper Badshah: ಬಾಲಿವುಡ್‌ ಗಾಯಕ ಬಾದ್‌ಶಾ ಒಡೆತನದ ಬಾರ್‌ & ಕ್ಲಬ್ ಹೊರಗೆ ಬಾಂಬ್‌ ಸ್ಪೋಟ

2-thirthahalli

Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?

IPL: RCB buys young Sehwag amid confusion; Who is this Swastik Chikara

IPL: ಗೊಂದಲದಲ್ಲಿ ಮರಿ ಸೆಹ್ವಾಗ್‌ ನನ್ನು ಖರೀದಿಸಿದ ಆರ್‌ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ

Essar Group: ಎಸ್ಸಾರ್ ಗ್ರೂಪ್ ನಿ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Rapper Badshah: ಬಾಲಿವುಡ್‌ ಗಾಯಕ ಬಾದ್‌ಶಾ ಒಡೆತನದ ಬಾರ್‌ & ಕ್ಲಬ್ ಹೊರಗೆ ಬಾಂಬ್‌ ಸ್ಪೋಟ

Rapper Badshah: ಬಾಲಿವುಡ್‌ ಗಾಯಕ ಬಾದ್‌ಶಾ ಒಡೆತನದ ಬಾರ್‌ & ಕ್ಲಬ್ ಹೊರಗೆ ಬಾಂಬ್‌ ಸ್ಪೋಟ

8

Hampankatte: ಸಿಟಿ ಮಾರ್ಕೆಟ್‌ ರಸ್ತೆಗೆ ಬೇಕಿದೆ ಕಾಯಕಲ್ಪ

7

Mangaluru: ಪಿ.ಎಂ. ರಾವ್‌ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?

IPL: RCB buys young Sehwag amid confusion; Who is this Swastik Chikara

IPL: ಗೊಂದಲದಲ್ಲಿ ಮರಿ ಸೆಹ್ವಾಗ್‌ ನನ್ನು ಖರೀದಿಸಿದ ಆರ್‌ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.