ಸುಬ್ರಹ್ಮಣ್ಯ: 60 ಮಂದಿಯಿಂದ ವ್ಯಸನಮುಕ್ತಿ ಸಂಕಲ್ಪ
Team Udayavani, Jul 1, 2018, 12:33 PM IST
ಸುಬ್ರಹ್ಮಣ್ಯ: ಶ್ವೇತವರ್ಣದ ಪಂಚೆ ಅಂಗಿ ತೊಟ್ಟು ವರನಂತೆ ಕಾಣುವ ಪತಿ ದೇವರು. ಕೈಯಲ್ಲಿ ಹಸಿರುಬಳೆ, ಮುಡಿಯಲ್ಲಿ ಮಲ್ಲಿಗೆ ಹೂ ತೊಟ್ಟು ಹೊಸ ಸೀರೆಯಲ್ಲಿ ನವವಧುವಿನಂತೆ ಕಂಗೊಳಿಸುತ್ತಿದ್ದ ಪತ್ನಿ. ಇಬ್ಬರ ಮೊಗದಲ್ಲೂ ನಗು. 60 ಮಂದಿಗೂ ಹೊಸ ದಾಂಪತ್ಯಕ್ಕೆ ಕಾಲಿಟ್ಟ ಸಂಭ್ರಮವಿತ್ತು. ಇಂತಹ ಸಂದರ್ಭಕ್ಕೆ ವೇದಿಕೆಯಾಗಿದ್ದು ಕೊಲ್ಲಮೊಗ್ರು ಶ್ರೀ ಮಯೂರವಾಹನ ಕಲಾ ಮಂದಿರ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಹಾಗೂ ಸಂಘಟನೆಗಳ ನೇತೃತ್ವದಲ್ಲಿ ಕೊಲ್ಲಮೊಗ್ರುವಿನಲ್ಲಿ ಹಮ್ಮಿಕೊಂಡಿದ್ದ 1,214ನೇ ಮದ್ಯವರ್ಜನ ಶಿಬಿರ.
ಶಿಬಿರದಲ್ಲಿ ಶುಕ್ರವಾರ ನಡೆದ ಕುಟುಂಬದ ದಿನ ಕಾರ್ಯಕ್ರಮದಲ್ಲಿ 60 ಮಂದಿ ಜೋಡಿಗಳಿಗೆ ಮಂತ್ರಘೋಷಣೆಗಳ ಮಧ್ಯೆ ಸಾವಿರಾರು ಮಂದಿ ಅಕ್ಷತೆ ಹಾಕಿ ಹರಸಿದರು.
ಎಂಟು ದಿನಗಳ ಶಿಬಿರ
ಮದ್ಯಪಾನ ಎಂಬ ವ್ಯಸನಕ್ಕೆ ದಾಸರಾಗಿ ಬದುಕಿನ ಅರ್ಥವನ್ನೆ ಕಳಕೊಂಡ 60 ವ್ಯಸನಿಗಳು ಮದ್ಯವರ್ಜನ ಶಿಬಿರ ಸೇರಿ ಎಂಟು ದಿನಗಳಲ್ಲಿ ಸರಿದಾರಿಗೆ ಮರಳಿದ್ದರು. ಶಿಬಿರದ ಅಂತಿಮ ದಿನ ಸತಿ-ಪತಿಯರನ್ನು ಒಂದುಗೂಡಿಸಿ ಉತ್ತಮ ಜೀವನಕ್ಕೆ ಕಾಲಿರಿಸುವಂತೆ ಮಾಡಲು ಮದುವೆ ಸಂಭ್ರಮದಂತೆ ನಡೆದ ಕುಟುಂಬ ದಿನದ ಆ ಕ್ಷಣದ ಕಾರ್ಯಕ್ರಮ ವ್ಯಸನಮುಕ್ತರನ್ನು ಭಾವುಕರನ್ನಾಗಿಸಿತು.
ಮೂಢನಂಬಿಕೆ, ಕಾಯಿಲೆ
ಪ್ರೇತ, ಭೂತ, ದೈವಕ್ಕೆ ಮೊರೆ ಹೋದವರು 17 ಮಂದಿ, ಕೆಮ್ಮು, ದಮ್ಮು ಔಷ ಧಿಗೆಂದು ಮದ್ಯ ಸೇವಿಸುತ್ತಿದ್ದ ಇಬ್ಬರು, ಬಾಣಂತಿಗೆ ಹೆಂಗಸಿಗೆ ಹೊಡೆದವರು 2, ಮಾಟ ಮಂತ್ರ ಪ್ರಭಾವಕ್ಕೆ ಒಳಗಾಗಿ ಕುಡಿತ ಬಿಡಿಸಲು ಪ್ರಯತ್ನಿಸಿದವರು 21 ಮಂದಿ, ಸಾರಾಯಿ ಅಂಗಡಿಯಲ್ಲಿದ್ದು ಕುಡಿತ ಕಲಿತವರು 5 ಮಂದಿ. ಅನಧಿಕೃತ ಕಳ್ಳಭಟ್ಟಿ ಸೇವನೆಯಲ್ಲಿ ತೊಡಗಿದ್ದವರು 7 ಮಂದಿ ಹಾಗೂ ರೌಡಿಸಂನಲ್ಲಿ ಭಾಗಿಯಾದವರು 5 ಮಂದಿ ಶಿಬಿರಾರ್ಥಿಗಳಲ್ಲಿ ಸೇರಿದ್ದರು. ಈ ಪೈಕಿ ಬೆಳಗ್ಗೆ ಎದ್ದೊಡನೆ ಕುಡಿಯುವ ಚಟ ಹೊಂದಿದ್ದ 18 ಜನರೂ ಇದ್ದರು. ಪತ್ನಿಯ ಕರಿಮಣಿ ಸರ ಮಾರಿ ಆ ದುಡ್ಡಿನಲ್ಲಿ ಕುಡಿಯುತ್ತಿದ್ದ 19 ಜನರಿದ್ದರು. ಮಕ್ಕಳಿಂದ ಮದ್ಯ ತರಿಸಿ ಕುಡಿಯುವವರೂ ಇದ್ದರು. ಬೇರೆಯವರಲ್ಲಿ ಹಣ ಕೇಳಿ ಕುಡಿಯುತ್ತಿದ್ದವರೂ 29 ಜನರಿದ್ದರು. ಅಪರಾಧ ಪ್ರಕರಣಗಳಲ್ಲಿ ಸಿಲುಕಿದ ಕೆಲವರೂ ಕುಡಿತದ ಚಟ ಅಂಟಿಸಿಕೊಂಡಿದ್ದರು. ಕುಡಿತಕ್ಕೆ ಹಣ ಹೊಂದಿಸಲು ಕಳ್ಳತನ ಪ್ರಕರಣಗಳಲ್ಲೂ ಭಾಗಿಯಾಗಿದ್ದರು.
ಈ ಪೈಕಿ 10 ಜನರಲ್ಲಿ ಬ್ಯಾಂಕ್ ಖಾತೆಯೂ ಇಲ್ಲ. ಮೂವರಿಗೆ ಇರುವುದು ಸೋಗೆ ಮನೆ. ನಾಲ್ವರು ಇರುವುದು ಬಾಡಿಗೆ ಮನೆಯಲ್ಲಿ. ಕುಡಿತದಿಂದ ಅವಮಾನ ಅನುಭವಿಸಿ ಮೂವರ ಮನೆಗಳಲ್ಲಿ ಆತ್ಮಹತ್ಯೆ ಪ್ರಕರಣಗಳೂ ನಡೆದಿವೆ.
ಗಾಂಜಾಕ್ಕೂ ಬಲಿ
ಕುಡಿತದೊಂದಿಗೆ ಬೀಡಿ, ಸಿಗರೇಟು, ತಂಬಾಕು, ನಶ್ಯ ಗುಟ್ಕಾ ಇತ್ಯಾದಿ ವ್ಯಸನಗಳಿಗೆ 59 ಮಂದಿ ಒಳಗಾಗಿದ್ದರು. ಇಬ್ಬರು ಗಂಧದ ಕಳ್ಳ ವ್ಯಾಪಾರದಲ್ಲಿ ಭಾಗಿಯಾಗಿದ್ದರು. ಏಳು ಜನ ಗಾಂಜಾ ಸೇವಿಸುತ್ತಿದ್ದರೆ, ಒಬ್ಬರು ಚರಸ್ ಬಳಸುತ್ತಿದ್ದರು. ಈಗ ಅವರೆಲ್ಲ ಹೊಸ ಬದುಕಿನ ತುಡಿತದಲ್ಲಿದ್ದಾರೆ.
60 ಶಿಬಿರಾರ್ಥಿಗಳು
ಎಂಟು ದಿನಗಳು ನಡೆದ ಶಿಬಿರದಲ್ಲಿ ಉತ್ತಮ ಚಿಕಿತ್ಸೆ, ಆಧ್ಯಾತ್ಮ ಚಿಂತನೆ ಹಾಗೂ ಯೋಗಶಿಕ್ಷಣ ಪಡೆದುಕೊಂಡು
ಹೊಸ ಜೀವನಕ್ಕೆ ಕಾಲಿಟ್ಟರು. ಹೊಸ ಬದುಕು ಕಟ್ಟಲು ಸತಿಪತಿಗಳಿಂದ ಈ ದಿನ ಪ್ರತಿಜ್ಞೆ ಮಾಡಿಸಲಾಯಿತು. ಶಿಬಿರಾರ್ಥಿಗಳಲ್ಲಿ 18 ವರ್ಷದಿಂದ 63 ವರ್ಷದ ವಯಸ್ಸಿನವರಿದ್ದರು. ಮದುವೆ ಆಗದವರು 20 ಮಂದಿ, ಮದುವೆ ಆದವರು 40 ಮಂದಿ, ಒಂದೇ ಕುಟುಂಬದವರು 12 ಮಂದಿ ಶಿಬಿರಾರ್ಥಿಗಳಾಗಿದ್ದರು.
ಮರಳಿ ಬದುಕಿಗೆ
ವ್ಯಸನಕ್ಕೆ ಬಲಿಯಾದ ಅದೆಷ್ಟೋ ಮಂದಿಗೆ ಮರಳಿ ಬದುಕು ಕೊಟ್ಟಿರುವುದು ಮದ್ಯವರ್ಜನ ಶಿಬಿರದ ಮೂಲ ಉದ್ದೇಶ
ಈಡೇರಿಸಿದೆ.
– ದಿವಾಕರ ಪೂಜಾರಿ
ಶಿಬಿರಾಧಿಕಾರಿ
ಹೊಸ ಅಧ್ಯಾಯ
ಶಿಬಿರ ನನ್ನನ್ನು ಹೊಸ ವ್ಯಕ್ತಿಯಾಗಿ ರೂಪಿಸಿದೆ. ಜೀವನದ ಹೊಸ ಅಧ್ಯಾಯ ಇಂದಿನಿಂದ ಆರಂಭಗೊಂಡಿದೆ.
-ನಿತೀಶ್‌ಕುಮಾರ್ ಬಾಳುಗೋಡು
ಶಿಬಿರಾರ್ಥಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Desi Swara: ಮುದ್ದಣ್ಣನ ಶ್ರೀ ರಾಮಾಶ್ವಮೇಧಂ ಪುಸ್ತಕ ಸಮರ್ಪಣೆ
ತನಿಖೆಗೆ ನನ್ನ ಸಹಕಾರವಿದೆ… ಈ ವಿಚಾರದಲ್ಲಿ ಪತ್ನಿ ಹೆಸರು ತರಬೇಡಿ: ರಾಜ್ ಕುಂದ್ರಾ
Yadagiri: ಸಂಸದ, ಸಚಿವ, ಶಾಸಕರಿದ್ದರೂ ಅಧಿಕಾರಿಗಳು ಗೈರು; ಸಿಟ್ಟಾದ ಸಚಿವ ದರ್ಶನಾಪುರ
Bengaluru: ಕಬ್ಬನ್ ಪಾರ್ಕ್‌ನಲ್ಲಿ ಪುಷ್ಪ ಪ್ರದರ್ಶನ
S.Africa: ಫಿಕ್ಸಿಂಗ್ ಕೇಸ್‌ನಲ್ಲಿ ಜೈಲು ಪಾಲಾದ ದ. ಆಫ್ರಿಕಾದ ಮಾಜಿ ನಂಬರ್ 1 ಬೌಲರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.