ಅಂಕಿ-ಅಂಶ ಕಲೆ ಹಾಕದೇ ಯೋಜನೆ ರೂಪಿಸಲು ಅಸಾದ್ಯ
Team Udayavani, Jul 1, 2018, 5:23 PM IST
ಬಾಗಲಕೋಟೆ: ಕ್ರಿಯಾ ಯೋಜನೆಯನ್ನು ರೂಪಿಸುವಲ್ಲಿ ಪ್ರತಿಯೊಂದು ಹಂತದಲ್ಲಿಯೂ ಪೂರ್ವ ತಯಾರಿ ಮಾಡಿಕೊಂಡು ಸಂಗ್ರಹವಾದ ಮಾಹಿತಿ ಸತ್ಯಾಸತ್ಯತೆ ಪರಿಶೀಲಿಸಿ, ನಿಖರತೆ ಕಾಯ್ದುಕೊಂಡಾಗ ಮಾತ್ರ ಆಡಳಿತಾತ್ಮಕ ಅಂಕಿ-ಅಂಶಗಳಲ್ಲಿ ಗುಣಮಟ್ಟದ ಕಾಯ್ದುಕೊಳ್ಳಲು ಸಾಧ್ಯ ಎಂದು ಜಿಪಂ ಮುಖ್ಯ ಯೋಜನಾ ಧಿಕಾರಿ ಎನ್.ಕೆ.ಗೋಠೆ ಹೇಳಿದರು. ನಗರಸಭೆಯ ಸಭಾಭವನದಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿ ಕಾರಿಗಳ ಕಾರ್ಯಾಲಯದ ವತಿಯಿಂದ ಹಮ್ಮಿಕೊಂಡ ಮಹಾನ್ ಸಾಂಖ್ಯಿಕ ತಜ್ಞ ಪ್ರೊ.ಪಿ.ಸಿ.ಮಹಾಲನೋಬಿಸ್ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂಕಿ ಅಂಶಗಳನ್ನು ಕಲೆಹಾಕದೇ ಕ್ರಿಯಾ ಯೋಜನೆಯನ್ನು ರೂಪಿಸಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಆಡಳಿತಾತ್ಮಕ ಅಂಕಿ-ಅಂಶಗಳ ಗುಣಮಟ್ಟ ಖಾತ್ರಿಗೊಳಿಸುವಲ್ಲಿ ಸಾಂಖ್ಯಿಕ ಇಲಾಖೆಯ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಜವಾಬ್ದಾರಿ ಮುಖ್ಯವಾಗಿದೆ ಎಂದರು. ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಯೋಜನಾ ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು, ಯೋಜನೆಗಳ ಅನುಷ್ಠಾನದಲ್ಲಿ ಸಾಂಖ್ಯಿಕ ವಿಷಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇದ್ದು, ಕಾರ್ಯನಿರ್ವಹಿಸುವ ಅಧಿಕಾರಿ, ಸಿಬ್ಬಂದಿ ಜವಾಬ್ದಾರಿ ಹೆಚ್ಚಾಗಿದೆ. ಆದ್ದರಿಂದ ಸಾಂಖ್ಯಿಕ ಇಲಾಖೆಯ ಎಲ್ಲ ಸಿಬ್ಬಂದಿ ಕ್ರಿಯಾಶೀಲರಾಗಿ ಕೆಲಸ ನಿರ್ವಹಿಸುವ ಅಗತ್ಯವಿದೆ ಎಂದು ತಿಳಿಸಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಜಿ.ಎಚ್.ದಿವಟರ ಅತಿಥಿ ಉಪನ್ಯಾಸ ನೀಡಿ, ಜಗತ್ತಿನ ಎಲ್ಲ ಕ್ಷೇತ್ರಗಳಲ್ಲಿ ಸಂಖ್ಯಾಶಾಸ್ತ್ರವು ಬಳಕೆಯಾಗುತ್ತಿದೆ. ಗೃಹಿಣಿಯ ಮನೆ ಬಳಕೆಗೆ ಖರೀದಿಸುವ ದಿನಸಿ ಪ್ರಮಾಣದಿಂದ ಹಿಡಿದು ರಸ್ತೆ ಬದಿಯ ವ್ಯಾಪಾರಸ್ಥರು, ದೈನಂದಿನ ಖರ್ಚಿಗೆ ಹಣ ಬೇಡುವ ವಿದ್ಯಾರ್ಥಿಗಳು, ಮಕ್ಕಳು, ಮಾಸಿಕ ವೆಚ್ಚವನ್ನು ಸರಿದೂಗಿಸುವ ದಿಸೆಯಲ್ಲಿ ಸರ್ಕಾರಿ ನೌಕರರು, ರೈತರು, ಕಾರ್ಮಿಕರು ತಮ್ಮ ದೈನಂದಿನ ಜೀವನದಲ್ಲಿ ಸಂಖ್ಯಾಶಾಸ್ತ್ರವನ್ನು ಅರಿತೋ ಅರಿಯದೆಯೋ ಬಳಸುತ್ತಿದ್ದಾರೆ. ಸಾಗರ ಗರ್ಭದ ಸಂಶೋಧನೆಗಳು, ಅಂತರಿಕ್ಷ ಸಂಶೋಧನೆಗಳು, ವೈದ್ಯಕೀಯ ಸಮುದಾಯ ಅಭಿವೃದ್ಧಿ ಸೇರಿದಂತೆ ಪ್ರತಿಯೊಂದು ಕ್ಷೇತ್ರಕ್ಕೂ ಸಂಖ್ಯಾಶಾಸ್ತ್ರವು ಅನಿವಾರ್ಯವಾಗಿದೆ. ಸಂಖ್ಯಾಶಾಸ್ತ್ರವನ್ನು ಬಳಸದಿರುವ ಕ್ಷೇತ್ರ ಕಾಣಲು ಸಾಧ್ಯವಿಲ್ಲ ಎಂದು ಹೇಳಿದರು.
ಆಡಳಿತಾತ್ಮಕ ಅಂಕಿ-ಅಂಶಗಳಿಗೆ ಸಂಬಂಧಿಸಿದಂತೆ ಸಮುದಾಯ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಮ್ಮಿಕೊಳ್ಳುವ ವಿವಿಧ ಗಣತಿ, ಸಮೀಕ್ಷೆಗಳು, ವಿವಿಧ ಇಲಾಖೆಗಳಿಂದ ಗಣಕೀಕರಣಗೊಳ್ಳುತ್ತಿರುವ ದಾಖಲೆಗಳು ಆಡಳಿತಾತ್ಮಕ ಅಂಕಿ-ಅಂಶಗಳ ಭಾಗವಾಗಿದ್ದು, ಕಂದಾಯ ಇಲಾಖೆಯ ಭೂಮಿ, ಇ-ಕ್ಷಣ, ನೋಂದಣಿ ಇಲಾಖೆಯ ಕಾವೇರಿ, ಗ್ರಾಮೀಣಾಭಿವೃದ್ಧಿ ಇಲಾಖೆಯ ಪಂಚತಂತ್ರ, ಕೃಷಿ ಮತ್ತು ಸಾಂಖ್ಯಿಕ ಇಲಾಖೆಯಿಂದ ಬಳಸಲಾಗುತ್ತಿರುವ ಸಂರಕ್ಷಣೆ ತಂತ್ರಾಂಶಗಳು ಆಡಳಿತಾತ್ಮಕ ಅಂಕಿ-ಅಂಶಗಳಿಗೆ ಮಹತ್ವದ ದಾಖಲೆಗಳಾಗಿವೆ ಎಂದರು.
ಪ್ರತಿಯೊಂದು ಸಮೀಕ್ಷೆ, ಗಣತಿ ಕಾರ್ಯಗಳಲ್ಲಿ ನಿಗದಿಪಡಿಸಿದ ಅವಧಿಯಲ್ಲಿ ಮಾಹಿತಿ ಸಂಗ್ರಹಣೆ, ಪರಿಶೀಲನೆ ಕೈಗೊಳ್ಳುವುದು ಪ್ರಸ್ತುತ ತಂತ್ರಜ್ಞಾನ ಯುಗದಲ್ಲಿ ಅಗತ್ಯವಾಗಿದೆ. ಕ್ಷೇತ್ರ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೂಲ ಕಾರ್ಯಕರ್ತರು ಶ್ರದ್ಧೆ, ನಿಷ್ಠೆಯಿಂದ ಕಾರ್ಯ ನಿರ್ವಹಿಸಿದಾಗ ಮಾತ್ರ ಆಡಳಿತಾತ್ಮಕ ಅಂಕಿ-ಅಂಶಗಳ ಗುಣಮಟ್ಟ ಖಾತ್ರಿಗೊಳಿಸಲು ಸಾಧ್ಯ. ಸಾಂಖ್ಯಿಕ ಇಲಾಖೆ ಸಂಗ್ರಹಿಸುವ ಪರಿಶೀಲಿಸುವ ಪ್ರತಿಯೊಂದು ಮಾಹಿತಿ ವಸ್ತುನಿಷ್ಠವಾಗಿ ಇರುವುದನ್ನು ಖಾತ್ರಿಪಡಿಸಿಕೊಂಡು ಆಡಳಿತದಲ್ಲಿ ಗುಣಮಟ್ಟ ಸುಧಾರಣೆಯಾದರೆ ಮಾತ್ರ ಸಮಾಜದ ಮತ್ತು ಸಮುದಾಯದ ಅಭಿವೃದ್ಧಿಗೆ ದಾರಿದೀಪವಾಗಲಿದೆ ಎಂದರು.
ಸಂಖ್ಯಾ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಆರ್. ಬಾಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಜಿಪಂ ಸಿಪಿಒ ಎನ್.ಕೆ.ಗೋಠೆ ಮತ್ತು ತಾಲೂಕು ಮಟ್ಟದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಮುಧೋಳ ತಾಲೂಕಿನ ಸಾಂಖ್ಯಿಕ ನಿರೀಕ್ಷಕ ಬಿ.ಎನ್.ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಸಾಂಖ್ಯಿಕ ನಿರೀಕ್ಷಕರಾದ ಡಿ.ಎಸ್.ತೆಗ್ಗಿ, ಟಿ.ಎಸ್.ಬೆಳ್ಳಟ್ಟಿ, ಸವಿತಾ ಕೌಜಲಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಹಾಯಕ ಸಾಂಖ್ಯಿಕ ಅಧಿಕಾರಿ ಎಂ.ಎಸ್. ಬಡಿಗೇರ ಸ್ವಾಗತಿಸಿದರು. ಮಲ್ಲಿಕಾರ್ಜುನ ಬಡಿಗೇರ ನಿರೂಪಿಸಿದರು. ಸಾಂಖ್ಯಿಕ ನಿರೀಕ್ಷಕ ಎಂ.ಎಚ್.ಚಿಮ್ಮನಕಟ್ಟಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.