“ಅಂಚೆ ಚೀಲವೇ ಸಮೃದ್ಧ ಸಾಹಿತ್ಯದ ಖಜಾನೆ
Team Udayavani, Jul 2, 2018, 6:45 AM IST
ಉಡುಪಿ: ಸಾಹಿತ್ಯವನ್ನು ಪಸರಿಸುವ ಕೆಲಸ ಅಂಚೆ ಇಲಾಖೆಯಿಂದ ನಡೆಯುತ್ತದೆ. ಅಂಚೆ ಚೀಲವೇ ಸಮೃದ್ಧ ಸಾಹಿತ್ಯದ ಖಜಾನೆ ಎಂದು ಉಡುಪಿ ವಿಭಾಗದ ಅಂಚೆ ಅಧೀಕ್ಷಕ, ಪ್ರಥಮ ಅಂಚೆ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ರಾಜಶೇಖರ ಭಟ್ ಅಭಿಪ್ರಾಯಪಟ್ಟರು.
ಶನಿವಾರ ಅಂಚೆ ಮನೋರಂಜನ
ಕೂಟ ಉಡುಪಿ, ಮಣಿಪಾಲ ಮತ್ತು ಕುಂದಾಪುರ ಇವರ ಸಹಯೋಗದಲ್ಲಿ ಉಡುಪಿ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದ ಡಾ| ಶಿವರಾಮ ಕಾರಂತ ವೇದಿಕೆಯಲ್ಲಿ ಜರಗಿದ ಪ್ರಥಮ ಅಂಚೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಧುನಿಕ ದಿನಗಳಲ್ಲಿ ಮಿಂಚಂಚೆ, ಗಣಕ ಯಂತ್ರಗಳು ಸಂದೇಶಗಳನ್ನು ಶರವೇಗದಲ್ಲಿ ತಲುಪಿಸಿದರೂ ಕೂಡ ಬಹುಕಾಲದ ದಾಖಲೀಕರಣದ ಮಾನ್ಯತೆ ಇರುವುದು ಅಂಚೆಗೆ ಮಾತ್ರ. ಅಂಚೆಗೂ ಸಾರಸ್ವತ ಲೋಕಕ್ಕೂ ಅವಿನಾಭಾವ ಸಂಬಂಧವಿದೆ. ಜನರ ಭಾವನೆಗಳು ಪತ್ರಗಳ ಮೂಲಕ ಅಕ್ಷರ ರೂಪ ತಾಳುತ್ತವೆ. ಸಾಹಿತ್ಯ ಕ್ಷೇತ್ರದ ಅನೇಕ ಮಂದಿ ಪ್ರತಿಭಾವಂತರು ಅಂಚೆ ಇಲಾಖೆಯಲ್ಲಿದ್ದಾರೆ. ಅವರಿಗೆ ವೇದಿಕೆ ಸೃಷ್ಟಿಸಿಕೊಡಬೇಕು ಮತ್ತು ಅವರಿಂದ ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆ ದೊರೆಯಬೇಕು ಎಂಬ ಉದ್ದೇಶದಿಂದ ಪ್ರಥಮ ಬಾರಿಗೆ ಅಂಚೆ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದರು.
ಉದ್ಘಾಟನೆ ನೆರವೇರಿಸಿದ ಅಂಬಲ ಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ, ಸಮ್ಮೇಳನ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಡಾ| ನಿ.ಬೀ. ವಿಜಯ ಬಲ್ಲಾಳ್ ಮಾತನಾಡಿ, “ಅಂಚೆ ಇಲಾಖೆಯ ಮೇಲಿನ ಜನರ ವಿಶ್ವಾಸ, ಗೌರವ ಇಂದಿಗೂ ಕಡಿಮೆಯಾಗಿಲ್ಲ. ಅಚ್ಚ ಕನ್ನಡದಲ್ಲಿ ಬರೆದು ಮಾತನಾಡಿದರೆ ಕನ್ನಡ ಉಳಿಯುತ್ತದೆ. ಜತೆಗೆ ಹಳೆಗನ್ನಡದ ಪದ, ಸಾಹಿತ್ಯವನ್ನು ಉಳಿಸುವ ಪ್ರಯತ್ನಗಳು ಕೂಡ ಸಾಹಿತ್ಯ ಸಂಘಗಳಿಂದ ನಡೆಯಬೇಕಿದೆ’ ಎಂದರು.
ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಇಂತಹ ಸಮ್ಮೇಳನ ಪ್ರತೀ ವರ್ಷ ನಡೆಯಬೇಕು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಟ್ಟಡ ಸೇರಿದಂತೆ ಸಾಹಿತ್ಯ ಚಟುವಟಿಕೆಗಳಿಗೆ ಪೂರ್ಣ ಸಹಕಾರ, ಬೆಂಬಲ ನೀಡುತ್ತೇನೆ ಎಂದು ಹೇಳಿದರು.
ಸ್ವಾಗತ ಸಮಿತಿಯ ಗೌರವ ಸಲಹೆಗಾರ ಸುಧಾಕರ ಜಿ. ದೇವಾಡಿಗ, ಅಧ್ಯಕ್ಷ ಸೂರ್ಯನಾರಾಯಣ ರಾವ್, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಕುದಿ ವಸಂತ ಶೆಟ್ಟಿ, ಪತ್ರಕರ್ತ ಎಸ್. ನಿತ್ಯಾನಂದ ಪಡ್ರೆ, ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಉಪಸ್ಥಿತರಿದ್ದರು.
ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಜನಾರ್ದನ್ ಕೊಡವೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ ಅಂಚೆ ಅಧೀಕ್ಷಕರಾದ ಜಯರಾಮ ಶೆಟ್ಟಿ ವಂದಿಸಿ ಶ್ರೀನಾಥ್ ಬಸೂÅರು ನಿರ್ವಹಿಸಿದರು. ವಿಚಾರಗೋಷ್ಠಿ, ಕವಿ ಗೋಷ್ಠಿ, ಭಾವಲಹರಿ, ಸಾಂಸ್ಕೃತಿಕ ಸಿಂಚನ, ಅಂಚೆ ಚೀಟಿಗಳ ಪ್ರದರ್ಶನ ಮೊದಲಾದವುಗಳು ಜರಗಿದವು.
ಸೀಮೋಲ್ಲಂಘನ
ಪ್ರಥಮ ಬಾರಿಗೆ ಅಂಚೆ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಮೂಲಕ ಕನ್ನಡ ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲೇ ಮೊದಲ ಬಾರಿಗೆ ಸೀಮೋಲ್ಲಂಘನ ಮಾಡಿದಂತಾಗಿದೆ. ವಿಶ್ವಮಾನ್ಯವಾಗುತ್ತಿರುವ ಭಾರತಕ್ಕೆ ಅಂಚೆ ಇಲಾಖೆಯ ಕೊಡುಗೆ ಮಹತ್ವದ್ದು. ಇದು ಕಾರ್ಯತತ್ಪರತೆ , ಪ್ರಾಮಾಣಿಕತೆಯ ಅದ್ವಿತೀಯ ಇಲಾಖೆ. ಪತ್ರದ ಒಕ್ಕಣೆಗಳೇ ಸಾಹಿತ್ಯಗಳಾಗಿವೆ. ತುಳುನಾಡಿನ ಪರಂಪರೆಯ ಚಾರಿತ್ರಿಕ ದಾಖಲೀಕರಣವಾಗಬೇಕು. ಜಗದ್ಗುರು ಮಧ್ವಾಚಾರ್ಯರ ಅಂಚೆ ಚೀಟಿ ತರುವ ಪ್ರಯತ್ನಗಳಾಗಬೇಕು.
– ರಘುಪತಿ ಭಟ್,ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.