ಇನ್ನೂ ತೆರವಾಗಿಲ್ಲ ಅಂಗನವಾಡಿ ಆವರಣದ ಮರಳು, ಜಲ್ಲಿ ರಾಶಿ!
Team Udayavani, Jul 2, 2018, 2:15 AM IST
ಉಪ್ಪಿನಂಗಡಿ: ತಣ್ಣೀರುಪಂತ ಗ್ರಾಮದ ಅಂಗನವಾಡಿ ಆವರಣದಲ್ಲಿ ಮೂರು ತಿಂಗಳಿಂದ ರಾಶಿ ಬಿದ್ದಿರುವ ಮರಳನ್ನು ತೆರವುಗೊಳಿಸುಂತೆ ಗ್ರಾ.ಪಂ. ಅಧ್ಯಕ್ಷರೇ ಸೂಚನೆ ನೀಡಿದ್ದರೂ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ಸಿಕ್ಕಿಲ್ಲ. ಅಂಗನಾಡಿ ಆವರಣದಲ್ಲಿ ಮರಳು ರಾಶಿ ಹಾಕಿದ್ದರಿಂದ ಮಕ್ಕಳ ಆಟ, ಓಡಾಟಕ್ಕೆ ಕಷ್ಟವಾಗುತ್ತಿರುವ ಬಗ್ಗೆ ‘ಸುದಿನ’ ವರದಿ ಪ್ರಕಟಿಸಿತ್ತು. ರಸ್ತೆ ನಿರ್ಮಾಣ ಕಾಮಗಾರಿಗೆಂದು ಗುತ್ತಿಗೆದಾರರೊಬ್ಬರು ಮರಳು, ಜಲ್ಲಿ ತಂದು ಅಂನವಾಡಿ ಆವರಣದಲ್ಲಿ ಶೇಖರಿಸಿ ಇಟ್ಟಿದ್ದರು. ಮೂರು ತಿಂಗಳಾದರೂ ತೆರವುಗೊಳಿಸದ ಕಾರಣ ನೀರು ನಿಂತು ಮಕ್ಕಳಿಗೆ ಸಮಸ್ಯೆಯಾಗಿತ್ತು. ವರದಿ ಪ್ರಕಟಗೊಂಡ ಬೆನ್ನಲ್ಲೇ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯೇ ಕೃತಕ ಚರಂಡಿ ಮುಚ್ಚುವ ಅನಿವಾರ್ಯತೆ ಒದಗಿತು. ಪ್ರವೇಶದ್ವಾರದ ಗೇಟನ್ನೂ ಮುಚ್ಚಬೇಕಾಯಿತು.
ಪತ್ರಿಕೆಯೊಂದಿಗೆ ಮಾತನಾಡಿದ್ದ ಕರಾಯ ಗ್ರಾ.ಪಂ. ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಗುತ್ತಿಗೆದಾರರು ಅಂಗನವಾಡಿ ಆವರಣದಲ್ಲಿ ಜಲ್ಲಿ, ಮರಳು ಸಂಗ್ರಹಿಸಿದ್ದು ಸರಿಯಲ್ಲ. ಸಂಬಂಧಪಟ್ಟ ಗುತ್ತಿಗೆದಾರರನ್ನು ಸಂಪರ್ಕಿಸಿ, ವಾರದೊಳಗೆ ತೆರವುಗೊಳಿಸುವುದಾಗಿ ತಿಳಿಸಿದ್ದರು. ಆದರೆ, 10 ದಿನ ಕಳೆದರೂ ಮಕ್ಕಳು ಹಿಂಬಾಗಿಲಿನ ಮೂಲಕವೇ ಓಡಾಡುವ ಸ್ಥಿತಿ ತಪ್ಪಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ತತ್‌ಕ್ಷಣವೇ ಮರಳು, ಜಲ್ಲಿ ತೆರವುಗೊಳಿಸಿ, ಅಂಗನವಾಡಿಗೆ ಆರೋಗ್ಯಕರ ವಾತಾವರಣ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
Amparu: ಬೈಕ್ ಸ್ಕಿಡ್; ಸವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವು
KAUP: ಧರ್ಮಗ್ರಂಥಗಳಷ್ಟೇ ಸಂವಿಧಾನವೂ ಪವಿತ್ರ: ನಿಕೇತ್ ರಾಜ್ ಮೌರ್ಯ
Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.