ಹಳೆಯದನ್ನು ಕೈಬಿಟ್ಟು ಹೊಸ ಪ್ರಸ್ತಾವನೆಗೆ ಮುಂದಾದ ಪಾಲಿಕೆ


Team Udayavani, Jul 2, 2018, 2:35 AM IST

palike-prastavane-1-7.jpg

ಮಹಾನಗರ: ಜಪ್ಪು ಮಹಾಕಾಳಿಪಡ್ಪುವಿನಲ್ಲಿ 24 ಕೋ.ರೂ.ಗಳ ಚತುಷ್ಪಥ ರಸ್ತೆ/ ರೈಲ್ವೇ ಓವರ್‌ ಬ್ರಿಡ್ಜ್ ನ ಸ್ತಾವನೆಯನ್ನು ‘ಆರ್ಥಿಕ ಹೊರೆ’ಯ ಕಾರಣದಿಂದ ಕೈಬಿಟ್ಟ ಮಂಗಳೂರು ಪಾಲಿಕೆ, ಈಗ ರೈಲ್ವೇ ಅಂಡರ್‌ಪಾಸ್‌ ಮಾಡಿ, ದ್ವಿಪಥ ರಸ್ತೆ ಅಭಿವೃದ್ಧಿಯ ಗುರಿ ಇರಿಸಿ 10 ಕೋ.ರೂ.ಗಳ ಪ್ರಸ್ತಾವನೆಯನ್ನು ರಾಜ್ಯ ಸರಕಾರಕ್ಕೆ ಕಳುಹಿಸಿದೆ. ಸುದೀರ್ಘ‌ ಕಾಲದ ಬೇಡಿಕೆಯಾಗಿ ರುವ ಈ ಯೋಜನೆ ಅನುಷ್ಠಾನ ಕುರಿತು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದ ಪರಿಣಾಮ ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರ ಸಮಸ್ಯೆ ಕೇಳುವವರೇ ಇಲ್ಲ.

ಪಾಲಿಕೆಯು 10 ಕೋ.ರೂ.ಗಳ ಯೋಜನ ವೆಚ್ಚವನ್ನು ಗಮನದಲ್ಲಿರಿಸಿ ಹೊಸ ಪ್ರಸ್ತಾವನೆಯನ್ನು ಆರು ತಿಂಗಳ ಹಿಂದೆ ರಾಜ್ಯದ ಇನ್‌ಫ್ರಾಸ್ಟ್ರಕ್ಚರ್‌ ಡೆವಲಪ್‌ಮೆಂಟ್‌ ಡಿಪಾರ್ಟ್‌ಮೆಂಟ್‌ ಗೆ (ಐಡಿಡಿ) ಕಳುಹಿಸಿತ್ತು. 5 ಕೋ.ರೂ. ವೆಚ್ಚದಲ್ಲಿ ಅಂಡರ್‌ ಪಾಸ್‌ ಹಾಗೂ ಇನ್ನುಳಿದ 5 ಕೋ.ರೂ.ಗಳಲ್ಲಿ ಅಕ್ಕ ಪಕ್ಕದ ರಸ್ತೆ ಅಭಿವೃದ್ಧಿಪಡಿಸುವ ಉದ್ದೇಶವಿತ್ತು. ಆದರೆ ಈ ಪ್ರಸ್ತಾವನೆಗೆ ಜೀವ ನೀಡುವ ಕೆಲಸ ಇನ್ನೂ ಆಗಿಲ್ಲ. ಇದರ ಬೆನ್ನು ಹಿಡಿದು ಯೋಜನೆ ಕಾರ್ಯಗತ ಮಾಡುವತ್ತ ಯಾರೂ ವಿಶೇಷ ಕಾಳಜಿ ವಹಿಸಿದಂತಿಲ್ಲ. ಹೀಗಾಗಿ ಪ್ರಸ್ತಾವನೆ ಕಡತದಲ್ಲಿಯೇ ಬಾಕಿಯಾಗಿದೆ.

ಆರಂಭದಲ್ಲಿ 24 ಕೋ.ರೂ. ಯೋಜನೆ
ಇದಕ್ಕೂ ಮೊದಲು ಇಲ್ಲಿ ಚತುಷ್ಪಥ ರಸ್ತೆ ಹಾಗೂ ರೈಲ್ವೇ ಓವರ್‌ ಬ್ರಿಡ್ಜ್ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು. ಇದಕ್ಕಾಗಿ ಪಾಲಿಕೆಯಿಂದ 24 ಕೋ.ರೂ.ಗಳ ಪ್ರಸ್ತಾವನೆ ಸಿದ್ಧಪಡಿಸಿ, ರೈಲ್ವೇ ಇಲಾಖೆಗೆ ಕಳುಹಿಸಲಾಗಿತ್ತು. ಶೇ.50:50ರಂತೆ ಪಾಲಿಕೆ ಹಾಗೂ ರೈಲ್ವೇ ಇಲಾಖೆಯು ಹಣ ಜೋಡಿಸಲು ಉದ್ದೇಶಿಸಲಾಗಿತ್ತು. ಆದರೆ, ಇಷ್ಟು ಮೊತ್ತ ಭರಿಸಿ ಯೋಜನೆ ಮಾಡಲು ರೈಲ್ವೇಗೆ ಅವಕಾಶವಿಲ್ಲ. ಹೀಗಾಗಿ ಪೂರ್ಣ ಹಣವನ್ನು ಪಾಲಿಕೆಯೇ ಭರಿಸಬೇಕು ಎಂದು ಪ್ರಸ್ತಾವನೆಯನ್ನು ರೈಲ್ವೇ ಇಲಾಖೆಯು ಪಾಲಿಕೆಗೆ ವಾಪಸ್‌ ಕಳುಹಿಸಲಾಗಿತ್ತು. ಆದರೆ, 24 ಕೋ.ರೂ.ಗಳನ್ನು ಪಾಲಿಕೆಗೆ ಭರಿಸಲು ಸಾಧ್ಯವಿಲ್ಲ ಎಂಬ ಕಾರಣ ನೀಡಿ ಪಾಲಿಕೆಯು ಪ್ರಸ್ತಾವನೆಯನ್ನು ಬದಲಿಸಲು ತೀರ್ಮಾನಿಸಿತು. 

ಹೀಗಾಗಿ ತೊಕ್ಕೊಟ್ಟು ಭಾಗದಿಂದ ರಾಷ್ಟ್ರೀಯ  ಹೆದ್ದಾರಿಯಿಂದ ಮಹಾ ಕಾಳಿ ಪಡ್ಪುವಿಗೆ ಸಂಪರ್ಕಿಸುವ ರಸ್ತೆಯನ್ನು ಚತುಷ್ಪಥ ರೀತಿಯಲ್ಲಿ ವಿಸ್ತರಿಸಿ ಮಹಾಕಾಳಿಪಡ್ಪುವಿನಲ್ಲಿ ರೈಲ್ವೇ ಓವರ್‌ಬ್ರಿಡ್ಜ್ ಮಾಡುವ ಯೋಜನೆಯನ್ನು ಕೈ ಬಿಡಲಾಗಿದೆ. ಬದಲಾಗಿ 10 ಕೋ.ರೂ. ವೆಚ್ಚದಲ್ಲಿ ಅಂಡರ್‌ ಪಾಸ್‌ ಹಾಗೂ ರಸ್ತೆ ಅಭಿವೃದ್ಧಿಗೆ ಉದ್ದೇಶಿಸಲಾಗಿದೆ.

ಈ ಮಧ್ಯೆ, ಮಂಗಳೂರು ಸೆಂಟ್ರಲ್‌ ರೈಲ್ವೇ ನಿಲ್ದಾಣದಿಂದ ನೇತ್ರಾವತಿ ಸೇತುವೆಯವರೆಗಿನ ರೈಲ್ವೇ ಹಳಿಯನ್ನು ದ್ವಿಪಥಗೊಳಿಸುವ ಕಾಮಗಾರಿಗೆ ಈಗಾಗಲೇ ಟೆಂಡರ್‌ ಕರೆದಿದ್ದು, 15 ದಿನಗಳಲ್ಲಿ ಕೆಲಸ ಪ್ರಾರಂಭಗೊಳ್ಳಲಿದೆ. ಸುಮಾರು 38 ಕೋಟಿ ರೂ. ವೆಚ್ಚದ ಈ ಯೋಜನೆ ಇನ್ನೆರಡು ವರ್ಷಗಳಲ್ಲಿ ಪೂರ್ತಿಯಾಗುವ ನಿರೀಕ್ಷೆ ಇದೆ. ದ್ವಿಪಥ ಪೂರ್ಣಗೊಂಡರೆ, ಜಪ್ಪು ಮಹಾಕಾಳಿ ಪಡ್ಪು ಭಾಗದಲ್ಲಿ ವಾಹನಗಳು ಸಾಲು ನಿಲ್ಲುವ ಪ್ರಮೇಯ ಸ್ವಲ್ಪ ಕಡಿಮೆಯಾಗಲೂಬಹುದು. 

6 ಲೈನ್‌ ರಸ್ತೆ ?
ತೊಕ್ಕೊಟ್ಟಿನಿಂದ ಜಪ್ಪಿನ ಮೊಗರು- ಮಹಾಕಾಳಿಪಡ್ಪು-  ಮಾರ್ಗನ್ಸ್‌ಗೇಟ್‌ ರಸ್ತೆಯನ್ನು ಆರು ಪಥ ಅಥವಾ ಚತುಷ್ಪಥಗೊಳಿಸುವ ನಿಟ್ಟಿನಲ್ಲಿ ಸಂಸದರು, ಜನಪ್ರತಿನಿಧಿಗಳ ಜತೆ ಕೇಂದ್ರ ರೈಲ್ವೇ ಸಚಿವರನ್ನು ಭೇಟಿಯಾಗಿ ಶೇ. 50:50ರ ಅನುಪಾತದಲ್ಲಿ ಅನುದಾನ ಒದಗಿಸುವಂತೆ ಮನವಿ ಮಾಡಲಾಗುವುದು ಎಂದು ಸಚಿವ ಯು.ಟಿ. ಖಾದರ್‌ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸ್ಮಾರ್ಟ್‌ಸಿಟಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದರು. ಅನುದಾನ ದೊರೆಯದಿದ್ದಲ್ಲಿ ರಾಜ್ಯ ಸರಕಾರ ಅಥವಾ ಪಾಲಿಕೆ ವತಿಯಿಂದ ಭರಿಸಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂಬ ಸುಳಿವು ನೀಡಿದ್ದರು. ಸಚಿವರ ಈ ಹೇಳಿಕೆ ಮಹಾಕಾಳಿಪಡ್ಪು, ಮೋರ್ಗನ್‌ ಗೇಟ್‌ ಭಾಗದಿಂದ ಬರುವ ನೂರಾರು ವಾಹನ ಸವಾರರಿಗೆ ಹೊಸ ನಿರೀಕ್ಷೆಯನ್ನೂ ಮೂಡಿಸಿದೆ. ಆದರೆ, ಈ ಮಾತೂ ಕೂಡ ಕಡತದಲ್ಲಿಯೇ ಬಾಕಿಯಾಗದಿರಲಿ ಎಂಬುದು ಸ್ಥಳೀಯರ ಆಗ್ರಹ.

ನಿತ್ಯ 46 ರೈಲು ಸಂಚಾರ!
ಕೇರಳ – ಮಂಗಳೂರು ಮಧ್ಯೆ ಪ್ರತಿನಿತ್ಯ ಸುಮಾರು 46ರಷ್ಟು ರೈಲುಗಳು ಸಂಚರಿಸುತ್ತವೆ. ಈ ರೈಲು ಮಹಾಕಾಳಿಪಡ್ಪು ಮೂಲಕ ಸಾಗುವ ಕಾರಣದಿಂದ ಇಲ್ಲಿ ರಸ್ತೆ ಸಂಚಾರ ಆ ಸಂದರ್ಭ ಸ್ಥಗಿತಗೊಳ್ಳುತ್ತದೆ. ನಿತ್ಯ ಸುಮಾರು 50ರಷ್ಟು ಬಾರಿ ಈ ಕಾರಣಕ್ಕಾಗಿ ರಸ್ತೆ ಬ್ಲಾಕ್‌ ಆಗಿ ತೊಕ್ಕೊಟ್ಟು-ಮಂಗಳೂರು ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವ ಪ್ರಮೇಯ ಇಲ್ಲಿ ನಿತ್ಯದ ಸಂಗತಿ.

— ದಿನೇಶ್‌ ಇರಾ

ಟಾಪ್ ನ್ಯೂಸ್

yashapal

Udupi: ಮಹಾಲಕ್ಷ್ಮೀ ಕೋ-ಆಪ್‌ ಬ್ಯಾಂಕ್‌ ಆರ್‌ಬಿಐ ನಿಯಮದಂತೆ ನಡೆಯುತ್ತಿದೆ: ಶಾಸಕ ಯಶ್‌ಪಾಲ್‌

sulya-kadaba

Elephant: ಕಡಬದ ಐನೆಕಿದು, ಸುಳ್ಯದ ಉಬರಡ್ಕ ಮಿತ್ತೂರು ಗ್ರಾಮದಲ್ಲಿ ಕಾಡಾನೆ ಹಾವಳಿ

Mahe-Convo

MAHE Convocation: ಕ್ಲಿಕ್‌ ಮಾಡುವ ಮೊದಲೇ ಯೋಚಿಸಿ: ಡಾ.ಇಂದ್ರಜಿತ್‌ ಭಟ್ಟಾಚಾರ್ಯ ಸಲಹೆ

1-shah

Rahul Gandhi ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ: ಅಮಿತ್‌ ಶಾ

rahul-gandhi

GST; ಬಡವರನ್ನು ಕೊ*ಲ್ಲಲು ಮೋದಿಯ ಅಸ್ತ್ರ: ರಾಗಾ ಹೇಳಿದ್ದೇನು?

Kharge (2)

Mallikarjuna Kharge; ದೇಶ ಒಗ್ಗೂಡಿಸಲು ಪ್ರಾಣ ತ್ಯಾಗ ಮಾಡಿದ್ದು ಕಾಂಗ್ರೆಸ್‌ ನಾಯಕರು

Priyank-Kharghe

Covid Scam: ಕೋವಿಡ್‌ ಹಗರಣಕ್ಕೆ ತಾರ್ಕಿಕ ಅಂತ್ಯ ಅಗತ್ಯ: ಸಚಿವ ಪ್ರಿಯಾಂಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ

Mangaluru: ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ

Mulki: ಚಿನ್ನಾಭರಣ ಕಳವು ಆರೋಪಿಯ ಸೆರೆ

Mulki: ಚಿನ್ನಾಭರಣ ಕಳವು ಆರೋಪಿಯ ಸೆರೆ

06

Ullala: ಸ್ಕೂಟಿ ಸ್ಕಿಡ್‌: ರಸ್ತೆಗೆ ಬಿದ್ದ ಮಹಿಳೆ ಮೇಲೆ ಚಲಿಸಿದ ಲಾರಿ!

ಪಕ್ಷಿಕೆರೆಯಲ್ಲೊಂದು ಘೋರ ದುರಂತ: ಪತ್ನಿ, ಮಗುವನ್ನು ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಪತಿ

ಪಕ್ಷಿಕೆರೆಯಲ್ಲೊಂದು ಘೋರ ದುರಂತ: ಪತ್ನಿ, ಮಗುವನ್ನು ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಪತಿ!

8-mng

Charmadi Ghat ಹೆದ್ದಾರಿ ದ್ವಿಪಥಗೊಳಿಸಲು 343.74  ಕೋಟಿ ರೂ. ಬಿಡುಗಡೆ: ಸಂಸದ ಕ್ಯಾ. ಚೌಟ

MUST WATCH

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

ಹೊಸ ಸೇರ್ಪಡೆ

yashapal

Udupi: ಮಹಾಲಕ್ಷ್ಮೀ ಕೋ-ಆಪ್‌ ಬ್ಯಾಂಕ್‌ ಆರ್‌ಬಿಐ ನಿಯಮದಂತೆ ನಡೆಯುತ್ತಿದೆ: ಶಾಸಕ ಯಶ್‌ಪಾಲ್‌

sulya-kadaba

Elephant: ಕಡಬದ ಐನೆಕಿದು, ಸುಳ್ಯದ ಉಬರಡ್ಕ ಮಿತ್ತೂರು ಗ್ರಾಮದಲ್ಲಿ ಕಾಡಾನೆ ಹಾವಳಿ

Mahe-Convo

MAHE Convocation: ಕ್ಲಿಕ್‌ ಮಾಡುವ ಮೊದಲೇ ಯೋಚಿಸಿ: ಡಾ.ಇಂದ್ರಜಿತ್‌ ಭಟ್ಟಾಚಾರ್ಯ ಸಲಹೆ

1-shah

Rahul Gandhi ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ: ಅಮಿತ್‌ ಶಾ

rahul-gandhi

GST; ಬಡವರನ್ನು ಕೊ*ಲ್ಲಲು ಮೋದಿಯ ಅಸ್ತ್ರ: ರಾಗಾ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.