ಶೋಷಣೆಯಿಂದ ಮನಸ್ಸಿಗೆ ಘಾಸಿ
Team Udayavani, Jul 2, 2018, 10:28 AM IST
ಕಲಬುರಗಿ: ಶರಣರ ನಾಡು ಕಲ್ಯಾಣದ ಈ ನೆಲದಲ್ಲಿರುವ ನಾವು ಹೆಮ್ಮೆ ಪಡುವ ಬದಲು ದೌರ್ಜನ್ಯ, ಶೋಷಣೆ
ಕಂಡು ಮನಸ್ಸುಗಳು ರೋಸಿ ಹೋಗಿ ವಿಷ ಬೀಜದ ಗುಂಪಿನಲ್ಲಿ ಒಡೆದು ಹೋಗಿದ್ದೇವೆ ಎಂದು ಲೇಖಕಿ ಹಾಗೂ
ಕನ್ನಡ ಪ್ರಾಧ್ಯಾಪಕಿ ಡಾ| ಶೈಲಜಾ ಬಾಗೇವಾಡಿ ಕಳವಳ ವ್ಯಕ್ತಪಡಿಸಿದರು.
ನಗರದ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ರವಿವಾರ ಇಲ್ಲಿಯ ಕಲಾಮಂಡಳದ ಸಭಾಂಗಣದಲ್ಲಿ ನಡೆದ
115 ಕವಿಗಳು ಬರೆದ ಜಿಲ್ಲಾ ಮಟ್ಟದ ಪ್ರಾತಿನಿಧಿಕ ಕವನ ಸಂಕಲನ ಕಾವ್ಯ ಸಂಭ್ರಮ ಕೃತಿ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಪರಿಚಯ ಮಾಡಿದ ಅವರು, ಜಾತಿ ವಿಷ ಬೀಜದ ಬಿತ್ತಿರುವ ಹಿನ್ನೆಲೆಯಲ್ಲಿ ನಾವೆಲ್ಲ ದ್ವೀಪಗಳಲ್ಲಿ ಬದುಕುವಂತಾಗಿದೆ ಎಂದು ಹೇಳಿದರು.
ಈ ಭಾಗದ ಕವಿಗಳಲ್ಲಿ ಅಂತಃಶಕ್ತಿಯಿದೆ. ಹೊಸ ತಲೆಮಾರಿನ ಅರಳುತ್ತಿರುವ ಕುಸುಮಗಳ ಸುಂದರ ಪುಷ್ಟಗುತ್ಛ ಇದಾಗಿದೆ. ಪ್ರಬುದ್ಧ ಲೇಖಕರು, ಗಟ್ಟಿ ಬರಹಗಾರರು ಈ ಕವನಸಂಕಲನದಲ್ಲಿದ್ದಾರೆ ಎಂದು ಹೇಳಿದರು.
ಕೃತಿ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಸಾಹಿತಿ ಸಿದ್ದರಾಮ ಪೊಲೀಸ್‌ಪಾಟೀಲ, ಕವನಗಳು ಜನರ ಮನಸ್ಸು ಮುಟ್ಟುವಂತಾದಲ್ಲಿ ಮಾತ್ರ ಕವಿಗಳ ಶ್ರಮಕ್ಕೆ ಬೆಲೆ ಬರುತ್ತದೆ. ಹಿರಿಯ, ಕಿರಿಯ ಸಾಹಿತಿಗಳಿಗೆ ವೇದಿಕೆ ಕಲ್ಪಿಸಿರುವ ಕಾವ್ಯಸಂಭ್ರಮ ಕೃತಿ ಬೆಂಗಳೂರಿನ ಸಾಹಿತಿಗಳಿಗೂ ತಲುಪುವಂತಾಗಬೇಕು ಎಂದು ಹೇಳಿದರು. ಹಿರಿಯ ಪತ್ರಕರ್ತ ಮತ್ತು ಕಸಾಪ ಮಾಜಿ ಅಧ್ಯಕ್ಷ ಪಿ.ಎಂ. ಮಣ್ಣೂರು ಅಧ್ಯಕ್ಷತೆ ಮತ್ತು ಹೊನ್ನಕಿರಣಗಿ ಪೂಜ್ಯ ಚಂದ್ರಗುಂಡ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
ಕಾವ್ಯಸಂಭ್ರಮ ಸಂಪಾದಕ ಬಿ.ಎಚ್. ನಿರಗುಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಅವಿಭಜಿತ ಕಲಬುರಗಿ
ಜಿಲ್ಲೆಯ 115 ಕವಿಗಳ ಕವಿತೆಗಳ ಸಂಕಲನವನ್ನು ಪ್ರಾತಿನಿಧಿಕವಾಗಿ ತರುವ ಮೂಲಕ ಇಲ್ಲಿಯ ಕಾವ್ಯಶಕ್ತಿ¿åನ್ನು
ಒಂದೆಡೆ ಸಂಗ್ರಹಿಸಿದ್ದೇನೆ. ಮುಂದಿನ ದಿನಗಳಲ್ಲಿ ಕಾವ್ಯಸಂಭ್ರಮದ ಎರಡನೇ ಭಾಗವನ್ನು ಪ್ರಕಟಿಸುವುದಾಗಿ
ಹೇಳಿದರು. ಸಿಂಡಿಕೇಟ್ ಸದಸ್ಯ ಮಹಾಂತೇಶ ಕೌಲಗಿ, ಹಿರಿಯರಾದ ರವೀಂದ್ರ ಕರ್ಜಗಿ, ಅನಂತ ಹರಸೂರ,
ಸುಬ್ರಾವ ಕುಲಕರ್ಣಿ, ಝರಣಪ್ಪ ಚಿಂಚೋಳಿ, ಡಾ| ಎಸ್.ಎಸ್. ಗುಬ್ಬಿ, ಶಿವಕವಿ ಹಿರೇಮಠ, ಪ್ರೊ|
ಶಿವರಾಜ ಪಾಟೀಲ, ನರಸಿಂಗರಾವ ಹೇಮನೂರ, ನಾಗೇಶ ಕೊಳ್ಳಿ, ಡಾ| ಲಿಂಗರಾಜ ಶಾಸ್ತ್ರಿ, ವಿ.ಆರ್. ಚಾಂಬಾಳ,
ಬಿ.ಆರ್. ಅಣ್ಣಾಸಾಗರ, ಅಬ್ಟಾಸಲಿ ನದಾಫ್, ಭೀಮರಾವ ಹೇಮನೂರ, ರಾಜಶೇಖರ ಮಾಂಗ್, ಈರಣ್ಣ ನಾವಿ,
ಶರಣಬಸವ ಅನವಾರ ಇದ್ದರು. ಸುರೇಶ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು. ಕಿರಣ ಪಾಟೀಲ ಅವರು ಗೀತ ಗಾಯನ ನಡೆಸಿಕೊಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ
Kalaburagi: ಭೀಮಾ ನದಿಗೆ ಬಿದ್ದ ಕಬ್ಬಿನ ಲಾರಿ: ಲಾರಿ ಚಾಲಕ ನಾಪತ್ತೆ
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಖರ್ಗೆ ಹೆಸರು ಅನಗತ್ಯವಾಗಿ ತರಲಾಗಿದೆ; ಚೆನ್ನಾರೆಡ್ಡಿ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.