ಕೆಸರುಗದ್ದೆ ಕ್ರೀಡೆಯಿಂದ ಕೃಷಿ ಬದುಕು ಸ್ಮರಿಸುವಂತಾಗಲಿ: ಚಂದಯ್ಯ
Team Udayavani, Jul 2, 2018, 10:42 AM IST
ಸಸಿಹಿತ್ಲು : ಕೆಸರುಗದ್ದೆ ಕ್ರೀಡೆಯಿಂದ ಕೃಷಿ ಬದುಕನ್ನು ಸ್ಮರಿಸುವಂತಾಗಬೇಕು. ಪರಂಪರೆಯು ಯುವ ಸಮುದಾಯವನ್ನು ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಸಂಘಟಿಸುವ ವೇದಿಕೆಯಾಗಿದೆ ಎಂದು ಸಸಿಹಿತ್ಲುವಿನ ಅಗ್ಗಿದಕಳಿಯ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಗೌರವಾಧ್ಯಕ್ಷ ಚಂದಯ್ಯ ಬಿ. ಕರ್ಕೇರ ಹೇಳಿದರು. ಸಸಿಹಿತ್ಲುವಿನ ಅಗ್ಗಿದಕಳಿಯ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಆಶ್ರಯದಲ್ಲಿ ನಾಲ್ಕನೇ ವರ್ಷದ ಗ್ರಾಮದ ಗೌಜಿ ಕೆಸರುಗದ್ದೆ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಂಬಯಿಯ ರಿತಿ ಕೇಶವ ಅಂಚನ್‌ಉದ್ಘಾಟಿಸಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಹಾಬಲ ಪೂಜಾರಿ ಕಡಂಬೋಡಿ ಅವರು ಕ್ರೀಡಾ ಕೂಟಕ್ಕೆ ಚಾಲನೆ ನೀಡಿದರು. ಪಾಲಿಕೆ ಸದಸ್ಯೆ ಪ್ರತಿಭಾ ಕುಳಾಯಿ ಶುಭ ಹಾರೈಸಿದರು. ಉದ್ಯಮಿ ಹರೀಶ್ ಮುಂಚೂರು, ಪಡುಪಣಂಬೂರು ವ್ಯ.ಸ.ಸಂ.ಅಧ್ಯಕ್ಷ ಎಸ್.ಎಸ್. ಸತೀಶ್ ಭಟ್ ಕೊಳುವೈಲು, ಮಹಿಳಾ ವಿಭಾಗದ ಅಧ್ಯಕ್ಷೆ ಶುಭಾ ಪ್ರೇಮ್‌ನಾಥ್, ಸಹ ಸಂಚಾಲಕರಾದ ಮಧು ಕುಕ್ಯಾನ್, ನಾಗೇಶ್ ಸಾಲ್ಯಾನ್, ರವೀಂದ್ರ ಕೋಟ್ಯಾನ್, ಧನ್‌ರಾಜ್ ಕೋಟ್ಯಾನ್, ಪ್ರೇಮ್‌ನಾಥ್ ಸಾಲ್ಯಾನ್, ಪದ್ಮನಾಭ ಕುಕ್ಯಾನ್, ಪ್ರದೀಪ್ ಎಸ್.ಆರ್., ಯುವವಾಹಿನಿ ಅಧ್ಯಕ್ಷ ಯಶವಂತ ಪೂಜಾರಿ, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲ್, ರಂಗಕರ್ಮಿ ಪರಮಾನಂದ ಸಾಲ್ಯಾನ್, ಸಾರಂತಾಯ ಗರೋಡಿಯ ಕಾಂತು ಲಕ್ಕಣ ಗುರಿಕಾರ ಯಾನೆ ಯಾದವ ಜಿ. ಬಂಗೇರ, ಹಳೆಯಂಗಡಿ ಗ್ರಾ.ಪಂ. ಸದಸ್ಯರಾದ ಅನಿಲ್ ಕುಮಾರ್, ಗುಣವತಿ, ನಿವೃತ್ತ ಯೋಧ ಮಾಧವ ಕಿಲ್ಪಾಡಿ, ಶುಭ ರಾಜೇಂದ್ರ, ಸುನಿಲ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ಅಧ್ಯಕ್ಷ ಪ್ರಕಾಶ್ ಕುಮಾರ್ ಬಿ.ಎನ್. ಸ್ವಾಗತಿಸಿ, ಸಂಚಾಲಕ ರಮೇಶ್ ಪೂಜಾರಿ ಚೇಳಾಯಿರು ಪ್ರಸ್ತಾವಿಸಿದರು. ಕಾರ್ಯದರ್ಶಿ ನರೇಶ್ ನಿರೂಪಿಸಿದರು.
ವಿವಿಧ ಸ್ಪರ್ಧೆ
ಹಗ್ಗ ಜಗ್ಗಾಟ, ಪಿರಮಿಡ್ ರಚಿಸಿ ಮಡಕೆ ಒಡೆಯುವುದು, ಜಾನಪದ ನೃತ್ಯ, ಕೆಸರುಗದ್ದೆ, ಹಿಮ್ಮುಖ, ಕೊಡಪಾನ, ರಿಲೇ, ಮೂರು ಮತ್ತು ಐದು ಕಾಲಿನ ಓಟ, ನಿಧಿ ಶೋಧ, ಸಂಗೀತ ಕುರ್ಚಿ ಸ್ಪರ್ಧೆ ನಡೆಯಿತು. ಕ್ರೀಡಾಕೂಟದಲ್ಲಿ ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲೆಯಿಂದ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress: ಇದೇ ಅವಧಿಯಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗ್ತಾರೆ: ಶಾಸಕ ಶಿವಗಂಗಾ
Chhattisgarh: ಮೂವರು ನಕ್ಸಲರ ಎನ್‌ಕೌಂಟರ್… ವರ್ಷ ಆರಂಭದಲ್ಲೇ 9 ನಕ್ಸಲರು ಉಡೀಸ್
Ajekar: ಎಷ್ಟು ದಿನ ಟವರ್ ನೋಡ್ಕೊಂಡಿರ್ಲಿ, ನಮ್ಗೆ ಬೇಗನೆ ಕನೆಕ್ಷನ್ ಕೊಡಿ ಸ್ವಾಮಿ!
Champions Trophy: ಬಾಂಗ್ಲಾದೇಶ ತಂಡ ಪ್ರಕಟ; ಇಬ್ಬರು ಹಿರಿಯ ಆಟಗಾರರಿಗೆ ಇಲ್ಲ ಸ್ಥಾನ
Kundapura: ಕೋಡಿ ಸಮುದ್ರ ತೀರದಲ್ಲಿ ಶೌಚಾಲಯ ಸಿದ್ಧವಾದರೂ ಪ್ರವಾಸಿಗರ ಬಳಕೆಗೆ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.