“ಸಹಜ’ವಾದ ಆನ್‌ಲೈನ್ ರಿಟರ್ನ್ ಫೈಲಿಂಗ್ ನೀವೇ ಮಾಡಿ
Team Udayavani, Jul 2, 2018, 11:50 AM IST
ವೈಯಕ್ತಿಕ ನೆಲೆಯಲ್ಲಿ ಸಂಬಳ/ಪೆನ್ಶನ್ ಆದಾಯ, ಗರಿಷ್ಟ ಒಂದು ಮನೆಯ ಗೃಹಸಂಬಂಧಿ ಆದಾಯ, ಇತರ ಆದಾಯ, ರೂ. 5000 ಮೀರದ ಕೃಷಿ ಆದಾಯ, ರೂ 50 ಲಕ್ಷ ಮೀರದ ಒಟ್ಟು ಆದಾಯ ಅಥವಾ ಯಾವುದೇ ಮಿತಿ ಇಲ್ಲದೆ ಕರ ಮಾಫಿಯುಳ್ಳ ಆದಾಯ ಹೊಂದಿದವರು ಐಟಿಆರ್-1/ಸಹಜ್ ಫಾರ್ಮ್ನ್ನು ಬಳಸಬಹುದು. ಬಹುತೇಕ ನೌಕರರಿಗೆ ವೇತನ/ಪೆನ್ಶನ್ ಹಾಗೂ ಕೆಲವೊಂದು ಇತರ ಆದಾಯ (ಬಹುತೇಕ ಬಡ್ಡಿ) ಮಾತ್ರವೇ ಇರುವ ಕಾರಣ ಅಂಥವರಿಗೆ ಈ ಫಾರ್ಮ್ ಸೂಕ್ತ.
ಕಡ್ಡಾಯ ಆಡಿಟ್ ಇರುವ ಬಿಸಿನೆಸ್ ಹಾಗೂ ಪ್ರೊಫೆಶನಲ್ ವ್ಯಕ್ತಿಗಳಿಗೆ ರಿಟರ್ನ್ ಫೈಲಿಂಗ್ ಮಾಡಲು ಕೊನೆಯ ದಿನಾಂಕ ಸೆಪ್ಟೆಂಬರ್ 30. ಆದರೆ ಸಂಬಳ ಮತ್ತಿತರ ಸೀಮಿತ ಆದಾಯವುಳ್ಳ ಬಹುತೇಕ ಜನಸಾಮಾನ್ಯರೆಲ್ಲರಿಗೆ ಅದು ಜುಲೈ 31.
ಯಾವ ರೀತಿಯ ಆದಾಯ ಉಳ್ಳವರು ಯಾವ ಫಾರ್ಮನ್ನು ಉಪಯೋಗಿಸತಕ್ಕದ್ದು ಎನ್ನುವುದರ ಬಗ್ಗೆ ಇಲಾಖೆಯಿಂದ ವಿವರಣೆ ಇದೆ. ಇರುವ ನಾಲ್ಕು ಫಾರ್ಮುಗಳಲ್ಲಿ ಜನಸಾಮಾನ್ಯರ ವತಿಯಿಂದ ಅತ್ಯಂತ ಜಾಸ್ತಿ ಉಪಯೋಗಿಸಲ್ಪಡುವ ಫಾರ್ಮ್ ಅಂದರೆ ಅದು ಐಟಿಆರ್-1 ಅಥವಾ ಸಹಜ್ ಫಾರ್ಮ್.
ಐಟಿಆರ್-1/ಸಹಜ್ ಫಾರ್ಮ್
ವೈಯಕ್ತಿಕ ನೆಲೆಯಲ್ಲಿ ಸಂಬಳ/ಪೆನ್ಶನ್ ಆದಾಯ, ಗರಿಷ್ಟ ಒಂದು ಮನೆಯ ಗೃಹಸಂಬಂಧಿ ಆದಾಯ, ಇತರ ಆದಾಯ, ರೂ. 5000 ಮೀರದ ಕೃಷಿ ಆದಾಯ, ರೂ. 50 ಲಕ್ಷ ಮೀರದ ಒಟ್ಟು ಆದಾಯ ಅಥವಾ ಯಾವುದೇ ಮಿತಿ ಇಲ್ಲದೆ ಕರ ಮಾಫಿಯುಳ್ಳ ಆದಾಯ ಹೊಂದಿದವರು ಈ ಫಾರ್ಮನ್ನು ಉಪಯೋಗಿಸಬಹುದು. ಬಹುತೇಕ ನೌಕರರಿಗೆ ವೇತನ/ಪೆನ್ಶನ್ ಹಾಗೂ ಕೆಲವೊಂದು ಇತರ ಆದಾಯ (ಬಹುತೇಕ ಬಡ್ಡಿ) ಮಾತ್ರವೇ ಇರುವ ಕಾರಣ ಅಂಥವರಿಗೆ ಈ ಫಾರ್ಮ್ ಸೂಕ್ತ. ಒಂದು ಸ್ವಂತ ವಾಸದ ಅಥವಾ ಬಾಡಿಗೆಗೆ ನೀಡಿದ ಮನೆಯಿದ್ದವರೂ ಇದನ್ನು ಉಪಯೋಗಿಸಬಹುದಾಗಿದೆ.
ಈ ಫಾರ್ಮನ್ನು ತುಂಬಿ ಆದಾಯ ತೆರಿಗೆಯ ರಿಟರ್ನ್ ಹೇಳಿಕೆಯನ್ನು ಕಾಗದದ ಫಾರ್ಮ್ ತುಂಬಿ ಭೌತಿಕವಾಗಿಯೂ ಸಲ್ಲಿಸಬಹುದು; ಆನ್‌ಲೈನ್ ಆಗಿ ಕಂಪ್ಯೂಟರ್ ಮೂಲಕವೂ ಸಲ್ಲಿಸಬಹುದು. ರೂ. 5 ಲಕ್ಷದ ಗ್ರಾಸ್ ಆದಾಯದ ಒಳಗಿನ
ವರಿಗೆ ಮಾತ್ರ ಈ ರೀತಿ ಕಾಗದದ ಹಾಳೆಯಲ್ಲಿ ರಿಟರ್ನ್ ಸಲ್ಲಿಕೆ ಮಾಡುವ ಅವಕಾಶ ನೀಡಲಾಗಿದೆ. ಜಾಲತಾಣದಲ್ಲಿ ಸಲ್ಲಿಕೆ ರೂ. 5 ಲಕ್ಷಕ್ಕಿಂತ ಜಾಸ್ತಿ ಆದಾಯ ಇರುವವರಿಗೆ ಹಾಗೂ ತೆರಿಗೆಯ ರಿಫಂಡ್ ಪಡೆಯಲು ಅರ್ಹರಾದವರಿಗೆ ಮಾತ್ರ ಕಡ್ಡಾಯ ವಾದರೂ ಇದನ್ನು ಇತರರೂ ಮಾಡಬಹುದು.
ಆನ್‌ಲೈನ್ ಫೈಲಿಂಗ್
ಮೊತ್ತಮೊದಲಾಗಿ ಆದಾಯ ತೆರಿಗೆಯ ಜಾಲತಾಣ www.incometaxindiaefiling.gov.inಗೆ ಹೋಗಿ ಲಾಗಿನ್ ಬಟನ್ ಒತ್ತಿ. ನೀವು ಈಗಾಗಲೇ ರಿಜಿಸ್ಟರ್ ಮಾಡಿಕೊಂಡಿದ್ದಲ್ಲಿ ನಿಮ್ಮ ಪ್ಯಾನ್ ನಂಬರ್, ಪಾಸ್‌ವರ್ಡ್ ಬಳಸಿಕೊಂಡು ಲಾಗಿನ್ ಆಗಿಬಿಡಿ. ರಿಜಿಸ್ಟರ್ ಆಗಿರದ ಕುಳವಾರುಗಳು ಮೊತ್ತಮೊದಲು ಈ ಜಾಲತಾಣದಲ್ಲಿ ರಿಜಿಸ್ಟರ್ ಆಗಿರಬೇಕಾದದ್ದು ಅವಶ್ಯ. ಕೇವಲ ಪ್ಯಾನ್ ನಂಬರ್ ಹೊಂದಿರುವ ಕೂಡಲೇ ಜಾಲತಾಣದಲ್ಲಿ ನಿಮ್ಮ ಖಾತೆ ರಿಜಿಸ್ಟ್ರೇಶನ್ ಆಗಿರುವುದಿಲ್ಲ. (ಲಾಗಿನ್ ಆಗುವ ಸಂದರ್ಭ ದಲ್ಲಿ ಜಾಲತಾಣ ನಿಮ್ಮ ಆಧಾರ್ ನಂಬರ್ ಲಿಂಕ್ ಮಾಡಿಕೊಳ್ಳಲು ಅಥವಾ ನಿಮ್ಮ ವಿಳಾಸ ವಿವರಗಳನ್ನು ಪರಿಷ್ಕರಿಸಲು ಕೇಳಬಹುದು. ಆಧಾರ್ ಲಿಂಕ್ ಆಗಿದ್ದರೆ ಕೇಳುವುದಿಲ್ಲ).
ಇ-ಫೈಲಿಂಗ್
ಮೇಲೆ ತಿಳಿಸಿದ ಇ-ಫೈಲಿಂಗ್ ಜಾಲತಾಣದಲ್ಲಿ ಲಾಗಿನ್ ಆಗಿ ಒಳಹೊಕ್ಕ ಕೂಡಲೇ ಕಾಣಿಸಿಕೊಳ್ಳುವ ಪರದೆಯಲ್ಲಿ ನಿಮ್ಮ ಪ್ಯಾನ್ ನಂಬರ್, ಬೇಕಾದ ಐಟಿಆರ್ ಫಾರ್ಮ್ ನಂಬರ್, ಅಸೆಸೆ¾ಂಟ್ ವರ್ಷ (ಸದ್ರಿ 2018-19, ಅಂದರೆ ವಿತ್ತ ವರ್ಷ 2017-18; ದಯವಿಟ್ಟು ಗಮನಿಸಿ), ಮೋಡ್ (ಆನ್‌ಲೈನ್ ತಯಾರಿ ಅಥವಾ XML upload), ರಿಟರ್ನ್ ವೆರಿಫಿಕೇಶನ್ ರೀತಿ (ಆಧಾರ್, ಇವಿಸಿ ಯಾ ಫಾರ್ಮ್-ವಿ) ಇಂತಿಷ್ಟು ಆಯ್ಕೆಗಳನ್ನು ತುಂಬಿ ಮುಂದಕ್ಕೆ ಹೋಗಿರಿ. ಮುಂದೆ ತೆರೆದುಕೊಳ್ಳುವ ಸ್ಕ್ರೀನಿನಲ್ಲಿ ಸೂಚನೆಗಳ ಪುಟ ಸಹಿತ ಇನ್ನು 5 ಪುಟಗಳು ಇರುತ್ತವೆ. ಅವುಗಳನ್ನು ಒಂದೊಂದಾಗಿ ತೆರೆದು ಮಾಹಿತಿಗಳನ್ನು ತುಂಬಿರಿ.
1. ವೈಯಕ್ತಿಕ ಮಾಹಿತಿ
ಈ ಪುಟದಲ್ಲಿ ಹೆಸರು, ಪ್ಯಾನ್ ನಂಬರ್, ಲಿಂಗ, ವಿಳಾಸ, ಸ್ಟೇಟಸ್, ಇ-ಮೈಲ್, ಮೊಬೈಲ್, ಆಧಾರ್ ನಂಬರ್ ಇತ್ಯಾದಿ ವಿವರಗಳನ್ನು ತುಂಬಿರಿ. ಅಲ್ಲೇ ಕೆಳಗೆ ನಿಮ್ಮ ಎಂಪ್ಲಾಯಿ ಕೆಟಗರಿ, ರೆಸಿಡೆಂಟ್/ಎನ್ನಾರೈ, ಟ್ಯಾಕ್ಸ್ ರಿಫಂಡ್/ಪಾವತಿ
ಬಾಕಿ ಇದೆ ಯಾ ಇಲ್ಲ, ಈ ಸಲ್ಲಿಕೆಯು ಕೊನೆ ದಿನಾಂಕದ ಮೊದಲೋ ನಂತರವೋ ಅಥವಾ ಇನ್ಯಾವುದಾದರು
ಕಾರಣಕ್ಕೆ ಪರಿಷ್ಕೃತವೋ, ಅಲ್ಲದೆ ನೀವು ಪೋರ್ಚುಗೀಸ್ ಕಾನೂನಿನಡಿ ಬರುತ್ತೀರಾ ಇತ್ಯಾದಿ ವಿವರಗಳನ್ನು ಆಯ್ದು ನಮೂದಿಸಬೇಕು.
2. ಆದಾಯದ ವಿವರಗಳು
ಈ ಪುಟದಲ್ಲಿ ಸಂಬಳದ ಆದಾಯ, ಗೃಹ ಸಂಬಂಧಿ ಆದಾಯ ಹಾಗೂ ಈ ಇತರ ಆದಾಯಗಳ ಮೊತ್ತವನ್ನು ನಮೂದಿ
ಸಿರಿ. ಈ ವರ್ಷದ ಸಲ್ಲಿಕೆಯಲ್ಲಿ ಇವೆರಡೂ ವಿಷಯಗಳಲ್ಲಿ ಕೆಲ ವಿವರಗಳನ್ನು ನಾವೇ ತುಂಬಬೇಕಾಗಿದೆ. ಸಂಬಳದ ಆದಾಯದ ಅಡಿಯಲ್ಲಿ ಸ್ಯಾಲರಿ, ಅಲೋವೆನ್ಸಸ್, ಪರ್ಕ್ಸ್ ಮೌಲ್ಯ, ಸಂಬಳದ ಬದಲಿನ ಪ್ರಾಫಿಟ್ ಹಾಗೂ ಸೆಕ್ಷನ್ 16 ಅಡಿಯಲ್ಲಿ ವೃತ್ತಿ ತೆರಿಗೆಯ ವಿವರಗಳನ್ನು ತುಂಬಬೇಕು.
ಗೃಹ ಸಂಬಂಧಿ ಆದಾಯದ ಅಡಿಯಲ್ಲಿ ಅಂತಹ ಆದಾಯ ಇದ್ದಲ್ಲಿ ಮಾತ್ರ ಆ ಮನೆಯ ನಮೂನೆ (ಸ್ವಂತವಾಸ ಯಾ ಬಾಡಿಗೆಗೆ ನೀಡಿದ್ದು) ಆದಾಯ (ಸಿಕ್ಕಿದ್ದು/ಸಿಗಬೇಕಾದ್ದು/ಸಿಗುವಂತದ್ದು), ಸ್ಥಳೀಯ ತೆರಿಗೆ ಪಾವತಿ ಸಿದ್ದು ವಿವರಗಳನ್ನು ತುಂಬಿದರೆ ಸಾಕು ವಾರ್ಷಿಕ ಮೌಲ್ಯ ಬರುತ್ತದೆ. ಬಾಡಿಗೆಗೆ ನೀಡಿದ ಮನೆ ಆಗಿದ್ದರೆ ಅದರ ಶೇ.30 ಸ್ಟಾಂಡರ್ಡ್ ಡಿಡಕ್ಷನ್ ಕಳೆಯಲಾಗುತ್ತದೆ. ಸ್ವಂತ ವಾಸದ ಮನೆಗೆ ಬಾಡಿಗೆ ಆದಾಯ ಶೂನ್ಯವಾದ ಕಾರಣ ಈ ಸೌಲಭ್ಯ ಇಲ್ಲ. ಅವಲ್ಲದೆ ಹೌಸಿಂಗ್ ಲೋನ್ ಪಡೆದವ ರಾಗಿದ್ದರೆ ಅದರ ಮೇಲಣ ಬಡ್ಡಿ ಪಾವತಿಸಿದ್ದು/ಪಾವತಿಸ ಬೇಕಾದದ್ದರ ಮೌಲ್ಯವನ್ನು ತುಂಬಿರಿ. ಹಾಗೆ ತುಂಬಿದರೆ ಒಟ್ಟಾರೆ ಮನೆಮಟ್ಟು ಆದಾಯದ ಮೌಲ್ಯ ದೊರಕುತ್ತದೆ.
ಅದಲ್ಲದೆ ಬ್ಯಾಂಕ್ ಬಡ್ಡಿ ಇತ್ಯಾದಿ ಇತರ ಆದಾಯಗಳಿದ್ದರೆ ಅದರ ಮೊತ್ತವನ್ನೂ ಅಲ್ಲೇ ಕೆಳಗಿನ ಕೋಣೆಯಲ್ಲಿ ನಮೂದಿಸಿರಿ.
ಈಗ ಅದರ ಕೆಳಗೆ ಆದಾಯ ತೆರಿಗೆ ರಿಯಾಯಿತಿಗಾಗಿ ಮಾಡಿದ ಎಲ್ಲಾ ಹೂಡಿಕೆ/ಖರ್ಚುಗಳನ್ನೂ ನಮೂದಿಸಿ. ಇದರಲ್ಲಿ 80ಸಿ, ಸಿಸಿಸಿ, ಸಿಸಿಡಿ(1)/(1ಬಿ)/(2), ಸಿಸಿಜಿ, ಡಿ, ಡಿಡಿ, ಡಿಡಿಬಿ, ಇ, ಇಇ, ಟಿಟಿಎ, ಯು, ಜಿಜಿ, ಟಿಟಿಎ ಇತ್ಯಾದಿ ಎಲ್ಲಾ ಕರ ವಿನಾಯಿತಿಯ ಸೆಕ್ಷನ್ನುಗಳಡಿಯಲ್ಲಿ ಮಾಡಿದ ಹೂಡಿಕೆ/ಪಾವತಿಯನ್ನು ತುಂಬಿರಿ. ಈ ಸೆಕ್ಷನ್ನುಗಳ ವಿವರಗಳೂ ಅಲ್ಲೇ ಲಭ್ಯವಾಗಿದೆ. (ಹಳೆಯ ಕಾಕು ಕಟ್ಟಿಂಗ್ ಕೂಡಾ ರೆಫರ್ ಮಾಡಬಹುದು).
ಅದರ ಕೆಳಭಾಗದಲ್ಲಿ ಕಂಪ್ಯೂಟರ್ ನಿಮ್ಮ ಕರ ಲೆಕ್ಕ ಹಾಕಿ ಅದರ ಮೊತ್ತವನ್ನು ನಮೂದಿಸುತ್ತದೆ. ಮೂಲ ಕರ, ಸೆಸ್, ಬಡ್ಡಿ ಇತ್ಯಾದಿ ವಿವರಗಳು ಸಿಗುತ್ತವೆ.
3. ಕರ ವಿವರಗಳು
ಈ ಪುಟದಲ್ಲಿ ಇದುವರೆಗೆ ಕಟ್ಟಿದ ಆದಾಯ ಕರ , ಟಿಡಿಎಸ್, ಎಡ್ವಾನ್ಸ್ ಟ್ಯಾಕ್ಸ್ ಹಾಗೂ ಅಂತಿಮವಾಗಿ ಕಟ್ಟಿದ ಸೆಲ#… ಅಸೆಸೆ¾ಂಟ್ ಟ್ಯಾಕ್ಸ್ ಮತ್ತು ಅವುಗಳ ಬಿಎಸ್‌ಆರ್ ಕೋಡ್, ಚಲನ್ ನಂಬರ್, ದಿನಾಂಕ, ಮೊತ್ತ ಇತ್ಯಾದಿಗಳನ್ನು ನಮೂದಿಸಿ. ಈ ವಿವರಗಳನ್ನು ನಮೂದಿಸುವ ಮೊದಲು ಫಾರ್ಮ್ 16, 16ಎ ಹಾಗೂ 26ಎಎಸ್‌ಗಳನ್ನೂ ಪರಿಶೀಲಿಸಿ ಕೊಳ್ಳಿ. ಅವುಗಳಲ್ಲಿ ಆ ವಿವರಗಳು ಇರುತ್ತವೆ.
4. 80ಜಿ
ಈ ಸೆಕ್ಷನ್‌ಗೆ ಪ್ರತ್ಯೇಕವಾಗಿ ಒಂದು ಪುಟವನ್ನು ಮೀಸಲಿಟ್ಟಿದ್ದಾರೆ. ನೀವು ಕರ ವಿನಾಯಿತಿ ಉಳ್ಳ ದೇಣಿಗೆ ಕೊಟ್ಟಿದ್ದರೆ
ಅದರ ವಿವರಗಳನ್ನು ಇಲ್ಲಿ ತುಂಬಬೇಕು. ಶೇ.100 ಹಾಗೂ ಶೇ.50 ವಿನಾಯಿತಿಗಳುಳ್ಳ (ಮಿತಿ ಇರುವ ಹಾಗೂ ಮಿತಿ ಇಲ್ಲದ) ಎÇÉಾ ದೇಣಿಗೆಗಳ ವಿವರಗಳನ್ನು (ಹೆಸರು, ವಿಳಾಸ, ಪ್ಯಾನ್ ನಂಬರ್, ಮೊತ್ತ) ಇಲ್ಲಿ ತುಂಬಿ.
5. ಕಟ್ಟಿದ ಕರ ಮತ್ತು ಪರಿಶೀಲನೆ
ಈ ಪುಟದಲ್ಲಿ ನೀವು ಕಟ್ಟಿದ ಒಟ್ಟು ಕರಮೊತ್ತ, ಕಟ್ಟಬೇಕಾದ ಮೊತ್ತ, ಬಾಕಿ ಕಟ್ಟಬೇಕಾದ/ರಿಫಂಡ್ ಮೊತ್ತ ಇತ್ಯಾದಿಗಳ ವಿವರಗಳು ಅದರಷ್ಟಕ್ಕೇ ಲೆಕ್ಕ ಹಾಕಿ ಬರುತ್ತವೆ.
ಅದಾದ ಬಳಿಕ ಈ ಪುಟದಲ್ಲಿ ನಿಮ್ಮ ಇಡೀ ವರ್ಷದ ಕರಮುಕ್ತ ಆದಾಯದ ಬಗ್ಗೆ ವಿವರಗಳನ್ನು ತುಂಬಬೇಕಾ ಗುತ್ತದೆ. ರೂ. 5,000 ಮೀರದ ಕೃಷಿ ಆದಾಯ ಹಾಗೂ ಸೆಕ್ಷನ್ 10(38) ಅಡಿಯಲ್ಲಿ ಬರುವ ದೀರ್ಘಕಾಲಿಕ ಕರಮುಕ್ತ ಷೇರು ಆದಾಯ ಹಾಗೂ ಸೆಕ್ಷನ್ 10(34) ಅಡಿಯಲ್ಲಿ ಬರುವ ಕರಮುಕ್ತವಾದ ಡಿವಿಡೆಂಡ್ ಆದಾಯ ಮತ್ತು ಇನ್ನಿತರ ಯಾವುದೇ ಕರಮುಕ್ತ ಆದಾಯದ ಬಗ್ಗೆ ನಮೂದಿಸಬೇಕು. ಈ ಬಗ್ಗೆ ಅಲ್ಲಿ ಒಂದು ಉದ್ದದ ಪಟ್ಟಿಯೇ ಇದೆ. ಕರಮುಕ್ತ ಆದಾಯವಾದ್ದರಿಂದ ಇವುಗಳನ್ನು ಕರ ಲೆಕ್ಕಕ್ಕೆ ತೆಗೆದುಕೊಳ್ಳದಿದ್ದರೂ ಕೇವಲ ಮಾಹಿತಿಗಾಗಿ ಇವುಗಳನ್ನು ತುಂಬತಕ್ಕದ್ದು. ಭವಿಷ್ಯತ್ತಿನಲ್ಲಿ ನಿಮ್ಮಲ್ಲಿರುವ ಒಟ್ಟಾರೆ ಧನ ಸಂಪತ್ತನ್ನು ಸಮರ್ಥಿಸಲು ಈ ಮಾಹಿತಿಗಳು ಸಹಾಯ ವಾದೀತು. ನಿಮ್ಮ ಖಾತೆಗೆ ಬಂದಿರುವ ದೊಡ್ಡ ಮೊತ್ತವನ್ನು ತಾಳೆ ಹಾಕಲೂ ಇದು ಸಹಾಯಕವಾದೀತು.
ಅಷ್ಟೇ ಅಲ್ಲದೆ ಇನ್ನೂ ಕೆಳಗೆ ಕಳೆದ ವಿತ್ತ ವರ್ಷದಲ್ಲಿ ಚಾಲನೆಯಲ್ಲಿ ಇದ್ದ ನಿಮ್ಮ ಎಲ್ಲಾ ಎಸ್‌ಬಿ ಖಾತೆಗಳ ನಂಬರ್, ಬ್ಯಾಂಕ್ ಹೆಸರು ಹಾಗೂ ಕೋಡ್ ಅನ್ನು ನಮೂದಿಸಿರಿ. ಖಾತೆಯಲ್ಲಿನ ಮೊತ್ತವನ್ನು ತುಂಬುವ ಅವಶ್ಯಕತೆ ಇಲ್ಲ. ರಿಫಂಡ್ ಬರುವುದಿದ್ದರೆ ಅದು ಯಾವ ಖಾತೆಗೆ ಬರಬೇಕು ಎನ್ನುವುದನ್ನೂ ಅಲ್ಲಿ ಗುರುತಿಸಿರಿ.
ಎಲ್ಲದಕ್ಕೂ ಕೊನೆಗೆ ನಿಮ್ಮ ಹೆಸರು, ತಂದೆಯ ಹೆಸರು, ಸ್ಥಳ, ದಿನಾಂಕಗಳನ್ನು ನಮೂದಿಸಿ ಎಲ್ಲಾ ಮಾಹಿತಿಗಳನ್ನು ದೃಡೀಕರಿಸಿ.
ಈ ಎಲ್ಲಾ ಮಾಹಿತಿಗಳನ್ನು ತುಂಬುತ್ತಿರುವಾಗಲೂ ಎಲ್ಲಾ ಪುಟಗಳ ಕೆಳಗೆಯೂ ಕಾಣುವ ಸೇವ್ ಬಟನ್ ಅನ್ನು
ಅಗಾಗ್ಗೆ ಒತ್ತಿ ಮಾಹಿತಿಗಳನ್ನು ಉಳಿಸಿಕೊಳ್ಳಿ. ಎಲ್ಲಾ ಮಾಹಿತಿ ಗಳನ್ನು ಸಂಪೂರ್ಣವಾಗಿ ತುಂಬಿದ ಬಳಿಕ ಸಬಿ¾ಟ್ ಬಟನ್ ಒತ್ತಿ ನಿಮ್ಮ ರಿಟರ್ನ್ ಹೇಳಿಕೆಯನ್ನು ಸಲ್ಲಿಸಿಬಿಡಿ.
ವೆರಿಫಿಕೇಶನ್/ದೃಢೀಕರಣ
ಸಬಿ¾ಟ್ ಬಟನ್ ಒತ್ತಿದಾಗ ನಿಮ್ಮ ಹೇಳಿಕೆ ಆದಾಯ ತೆರಿಗೆ ಇಲಾಖೆಯ ಕಂಪ್ಯೂಟರಿನಲ್ಲಿ ಸಲ್ಲಿಕೆಯಾಗಿ ಅದು ನಿಮಗೊಂದು ಟ್ರಾನ್ಸಾಕ್ಷನ್ ನಂಬರನ್ನು ನೀಡುತ್ತದೆ. ಅಲ್ಲದೆ ನಿಮ್ಮ ಇ-ಮೈಲ್‌ಗೆ ರಶೀದಿ ಫಾರ್ಮ್ ಆದ ಫಾರ್ಮ್-ವಿಯನ್ನು ಹುಟ್ಟು ಹಾಕುತ್ತದೆ.
ಈಗ ಈ ಫಾರ್ಮ್-ವಿ ಅನ್ನು ದೃಢೀಕರಿಸಬೇಕು. ಇದಕ್ಕಾಗಿ ಕೆಲವು ಆನ್‌ಲೈನ್ ಹಾದಿಗಳಿವೆ. ಇದರ ಬಗ್ಗೆ ನೀವು ಈಗಾಗಲೇ ಪುಟ 1ರಲ್ಲಿಯೇ ಆಯ್ಕೆ ಕೊಟ್ಟಿರುತ್ತೀರಿ.
– ನಿಮ್ಮ ಆಧಾರ್ ನಂಬರ್ ಮೂಲಕ: ನಿಮ್ಮ ಆಧಾರ್ ನೋಂದಾ ಯಿತ ಮೊಬೈಲ್ ನಂಬರಿಗೆ ಒಂದು ಒಟಿಪಿ ಹೋಗುತ್ತದೆ. ಅದನ್ನು ಇಲ್ಲಿ ದೃಢೀಕರಣ ಪುಟದಲ್ಲಿ ನಮೂದಿಸಿದರೆ ನಿಮ್ಮ ವೆರಿಫಿಕೇಶನ್ ಸಂಪೂರ್ಣವಾಗುತ್ತದೆ.
– ಕರ ಇಲಾಖೆ ಕಳುಹಿಸುವ ಇವಿಸಿ ಕೋಡ್ ನಮೂದಿಸುವ ಮೂಲಕ: ಇವಿಸಿ ಕೋಡ್ ಅನ್ನು ನಿಮ್ಮ ನೆಟ್ ಬ್ಯಾಂಕಿಂಗ್ ಮೂಲಕ, ಬ್ಯಾಂಕ್ ಖಾತೆಯ ಮೂಲಕ, ಎಟಿಎಂ ಮೂಲಕ, ಡಿಮ್ಯಾಟ್ ಖಾತೆ ಇತ್ಯಾದಿಗಳ ಮೂಲಕ ಪಡೆದುಕೊಳ್ಳಲು ಸಾಧ್ಯವಿದೆ.
– ಈ ರೀತಿಯ ಆನ್‌ಲೈನ್ ಪದ್ಧತಿ ಸಾಧ್ಯವಾಗದವರು ವಿ ಫಾರ್ಮಿನ ಅಚ್ಚು ತೆಗೆದು ಸಹಿ ಹಾಕಿ ಅದರಲ್ಲಿ ನೀಡಿದ ಬೆಂಗಳೂರಿನ ವಿಳಾಸಕ್ಕೆ ಅದನ್ನು 120 ದಿನಗಳೊಳಗೆ ಕಳುಹಿಸಿರಿ. ದೃಢೀಕರಣದ ಬಳಿಕವೇ ನಿಮ್ಮ ಸಲ್ಲಿಕೆ ಸಂಪೂರ್ಣವಾಗುತ್ತದೆ.
– ಜಯದೇವ ಪ್ರಸಾದ ಮೊಳೆಯಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.