ನಾಗರಿಕ ಜಗತ್ತಿನ ನದಿ ಹಂತಕರು


Team Udayavani, Jul 2, 2018, 12:28 PM IST

jagattina.jpg

ಬೆಟ್ಟದ ನಡುವಿನಲ್ಲಿ ಜನಿಸಿದ ಪುಟ್ಟ ಝರಿ ಹೊಳೆಯಾಗಿ, ನದಿಯಾಗಿ, ದೂರ ಸಾಗರದ ಜೊತೆಯಾಗಿದೆ. ಆದರೆ, ಇಂದು ಸಾಗರ ಸೇರುವ ಮುಂಚೆಯೇ ಕೃಷಿ, ಉದ್ಯಮ, ನಗರಗಳು ಸಂಪೂರ್ಣ ನೀರು ಹೀರುತ್ತಿವೆ.  ನೀರು ನಮ್ಮ ಆರೋಗ್ಯ-ಆರ್ಥಿಕತೆಯ ಮೂಲವಾಗಿದೆ. ನದಿಯ ಲಾಭದಲ್ಲಿ ಇಷ್ಟು ವರ್ಷ ಬೆಳೆದ ನಾವು ಅದನ್ನು ಜಲಮಾಲಿನ್ಯದ ತಿಪ್ಪೆಯನ್ನಾಗಿ, ಪ್ಲಾಸ್ಟಿಕ್‌ ತ್ಯಾಜ್ಯದ ಗುಂಡಿಯನ್ನಾಗಿ ಇದನ್ನು ಮಾರ್ಪಡಿಸಿದ್ದೇವೆ. ಭೀಮಾ ತೀರದ ಹಂತಕರ ಬಗ್ಗೆ ಎಲ್ಲರಿಗೂ ಗೊತ್ತಿದೆ. ನಾಗರಿಕ ಜಗತ್ತಿನ ನದಿ ಹಂತಕರ ಪರಿಚಯ ಇಲ್ಲಿದೆ.

ಹದಿನೈದು ವರ್ಷಗಳ ಹಿಂದಿನ ಘಟನೆ. ಸಾಗರದ ತಾಳಗುಪ್ಪ ರಸ್ತೆಯಂಚಿನಲ್ಲಿ  ಬೈಕ್‌ ನಿಲ್ಲಿಸಿ ಮಾತಾಡುತ್ತಿದ್ದೆವು. ಹೆದ್ದಾರಿಯಲ್ಲಿ ಓಡುವ ಕಾರಿನಿಂದ ಕೆಂಪು ದ್ರವ ಟಾರು ರಸ್ತೆಯ ಉದ್ದಕ್ಕೂ ಸುರಿಯುತ್ತ ಹೋಯ್ತು. ಥಟ್ಟನೆ ಯಾರೋ ಕಾರಿನಿಂದ ರಕ್ತ ಬೀಳುತ್ತಿದೆ ಎಂದರು. ಕಾರಿನಲ್ಲಿ ಹೆಣ ಸಾಗಿಸುತ್ತಿದ್ದಾರೆ, ಕೊಲೆ ಮಾಡಿ ಒಯ್ಯುತ್ತಿರಬೇಕೆಂದು ಇನ್ನೊಬ್ಬರು ಹೇಳಿದರು. ಅರೆಕ್ಷಣದಲ್ಲಿ, ಪತ್ತೇದಾರಿ ಪುರುಷೋತ್ತಮರಾಗಿ ಕಾರು ಹಿಂಬಾಲಿಸಿ ಹೊರಟೆವು. ಚಾಲನೆಯ ರೀತಿ, ಆ ಕಾರಿನ ವೇಗ ನಮ್ಮ ಅನುಮಾನಗಳನ್ನು ಇನ್ನಷ್ಟು ಹೆಚ್ಚಿಸಿತು. ಮತ್ತಷ್ಟು ವೇಗದಲ್ಲಿ ಹಿಂಬಾಲಿಸಿದೆವು. ಜೋಗ ಜಲಪಾತಕ್ಕಿಂತ ಸ್ವಲ್ಪ ಹಿಂದೆ, ಶರಾವತಿ ನದಿ ತಿರುವಿನಲ್ಲಿ, ರಸ್ತೆಯ ಒಳಹೋಗಿ ಗಿಡಗಂಟಿಗಳ ನಡುವೆ ಕಾರು ನಿಂತಿತು. ತಕ್ಷಣ ಬೈಕ್‌ ನಿಲ್ಲಿಸಿ ಮರಗಳ ಮರೆಯಲ್ಲಿ ಅಡಗಿದೆವು.   

ಈಗ ಕ್ಲೈಮ್ಯಾಕ್ಸ್‌ ಹಂತ….ಕಾರಿನಿಂದ ಇಬ್ಬರು ಕೆಳಗಿಳಿದು ಡಿಕ್ಕಿಯಿಂದ ಗೋಣಿ ಚೀಲ ಇಳಿಸಿದರು. ಚೀಲ ಒದ್ದೆಯಾಗಿ ರಕ್ತದ ಕಲೆ ಢಾಳಾಗಿ ಕಾಣಿಸಿತು. ಹೆಣವನ್ನು ಚೀಲದಲ್ಲಿರಿಸಿ ತಂದಿದ್ದಾರೆಂಬುದಕ್ಕೆ ಅನುಮಾನ ಬಲವಾಯ್ತು. ಚೀಲ ಎತ್ತಿ  ಹಳ್ಳಕ್ಕೆ ಎಸೆದರು. ಅವರಲ್ಲಿ ಕೆಲಸ ಮುಗಿಸಿದ ತೃಪ್ತಿ ಇತ್ತು. ತಕ್ಷಣ ಎದುರು ನಿಲ್ಲಲು ಭಯವಾಗಿ ಕಾರಿನ ನಂಬರ್‌ ನೋಡಿದೆವು. ಚೀಲ ಎಸೆದವರು ದೂರ ಹೋಗುತ್ತಲೇ ಭಯದಿಂದ ಶೋಧಕ್ಕೆ ಇಳಿದೆವು. ಬಿಚ್ಚಿ ನೋಡಿದರೆ ಬಾಟಲ್‌, ಸೂಜಿ, ಮಾತ್ರೆಗಳು! ಟಾನಿಕ್‌ ಬಾಟಲಿ ಒಡೆದಿದ್ದರಿಂದ ಕೆಂಪು ದ್ರವ  ದಾರಿಯಲ್ಲಿ ಸೋರಿತ್ತು. ಅದರಲ್ಲಿ ಕೊಲೆಯ ಕೃತ್ಯ ಹುಡುಕಿ ನಾವು  ಬೇಸ್ತು ಬಿದ್ದಿದ್ದೆವು. ಆಸ್ಪತ್ರೆ ತ್ಯಾಜ್ಯಗಳನ್ನು ಚೀಲದಲ್ಲಿ ತಂದು ನದಿಗೆ ಎಸೆದಿದ್ದವರು ಆರಾಮಾಗಿ ಅಲ್ಲಿನ ಸನಿಹದ ಹಳ್ಳದಲ್ಲಿ ಕಾರು ತೊಳೆಯುತ್ತಿದ್ದರು. ಹೋಗಿ ಆ ವೈದ್ಯ ಮಹಾಶಯರನ್ನು ಮಾತಾಡಿಸಿದೆ.  ಎರಡು ಮೂರು ತಿಂಗಳಿಗೊಮ್ಮೆ ಹಾಳಾದ ಔಷಧ ತ್ಯಾಜ್ಯ ತಂದು ಎಸೆಯುವ ವಿಚಾರವನ್ನು, ಅದೆಲ್ಲಾ ತೀರಾ ಸಹಜ ಎಂಬಂತೆ ತಿಳಿಸಿದರು. ನದಿಯ ಪ್ರವಾಹದಲ್ಲಿ ಎಲ್ಲವೂ ತೇಲಿ ಹೋಗುತ್ತವೆ. ಮಳೆಗಾಲದ ನಂತರ ನೋಡಿದರೆ ಇಲ್ಲಿ ಏನೂ ಇರುವುದಿಲ್ಲವೆಂದರು. ಅವರಲ್ಲಿ ಯಾವ ತಪ್ಪಿನ ಭಯವಿರಲಿಲ್ಲ. ಇದನ್ನೆಲ್ಲಾ ಆಸ್ಪತ್ರೆಯಲ್ಲಿ ಇಡಲಾಗುವುದಿಲ್ಲ, ನಗರಸಭೆ ಕಸದ ಡಬ್ಬಿಗೆ ಹಾಕಲಾಗುವುದಿಲ್ಲ. ಆಸ್ಪತ್ರೆ ತ್ಯಾಜ್ಯ ನಿರ್ವಹಣೆ ನಿಯಮ ಅನುಸರಿಸಿ ಬಡ ವೈದ್ಯರು ವೃತ್ತಿ ನಿರ್ವಹಿಸುವುದು ಬಹಳ ಕಷ್ಟವೆಂದರು. ದೂರದಲ್ಲಿರುವ ನದಿಗೆ ಎಸೆಯುವುದೇ ಪರಿಹಾರವೆಂದು ಪರಿಸ್ಥಿತಿ ವಿವರಿಸಿದರು.

ವೈದ್ಯ ಮಹಾಶಯರೆದುರು ವಿಷಯದ ಕುರಿತು ಚರ್ಚಿಸಲು, ಸರಿತಪ್ಪುಗಳ ವಾದ ಮಂಡಿಸಲು ಸೋತು ತೆಪ್ಪಗೆ ಮರಳಿದೆವು.

ಪರಿಸರ ವಿಚಾರದಲ್ಲಿ ಆರೋಗ್ಯ ವಿಜಾnನ ಓದಿದವರಿಗೆ ತಿಳುವಳಿಕೆ ನೀಡುವ ದುಃಸ್ಥಿತಿ ಬಂದಿದೆ. ಇದಾದ ಬಳಿಕ ಆಸ್ಪತ್ರೆ ತ್ಯಾಜ್ಯ ನಿರ್ವಹಣೆ ಕುರಿತು ಅಧ್ಯಯನ ನಡೆಸಲು ಆರಂಭಿಸಿದಾಗ ಹಳ್ಳಿಯ ದವಾಖಾನೆಗಳಿಗೆ ಹೋಗಿ ಬಳಸಿದ ಸೂಜಿ, ಸೀರಿಂಜ್‌ಗಳನ್ನು ಅವರು ಏನು ಮಾಡುತ್ತಾರೆಂದು ವಿಚಾರಿಸುತ್ತಿದ್ದೆ. ಬಳಸಿದ ನಂತರ ಎಲ್ಲವನ್ನೂ ಹೊಳೆ ಹಳ್ಳಕ್ಕೆ ಎಸೆಯುವುದಾಗಿ ಥಟ್ಟನೆ ಕೆಲವರು ಉತ್ತರಿಸುತ್ತಿದ್ದರು. ಇಂಜೆಕ್ಷನ್‌, ಸೂಜಿಗಳನ್ನು ಎಸೆದ ಹಳ್ಳದ ತಿಳಿ ನೀರಿನಲ್ಲಿ ಆ ಸಂಗತಿ ಗೊತ್ತಿಲ್ಲದೆ ಈಜಲು ದುಮುಕುವ ಮಕ್ಕಳ ಪರಿಸ್ಥಿತಿ ಏನಾಗಬಹುದೆಂದು ವೈದ್ಯರಿಗೆ ವಿವರಿಸಬೇಕಾಯ್ತು. ಕಸಕಡ್ಡಿ, ಪ್ಲಾಸ್ಟಿಕ್‌, ಬಲುº, ಬಾಟಲು, ಪ್ಯಾಕಿಂಗ್‌ ಸಾಮಗ್ರಿ, ರದ್ದಿ ಪೇಪರ್‌…. ಒಟ್ಟಿನಲ್ಲಿ ಬೇಡದ ಎಲ್ಲವನ್ನೂ  ಹೊಳೆ-ಹಳ್ಳಗಳಿಗೆ ಎಸೆಯುವುದು ಸರಳ ದಾರಿಯಾಗಿದೆ. ಇವರಲ್ಲಿ ಕೃಷಿಕರು, ವೈದ್ಯರು, ವರ್ತಕರು, ವಿದ್ಯಾರ್ಥಿಗಳೆಂಬ ಬೇಧವಿಲ್ಲ.

ಚಾಕಲೇಟ್‌, ಗುಟ್ಕಾ, ಚಿಪ್ಸ್‌, ಬಿಸ್ಕೆಟ್‌ ಪೊಟ್ಟಣಗಳೆಲ್ಲ ಬೀದಿಗೆ ಬಿದ್ದು ನದಿ ಸೇರುತ್ತಿವೆ.  ಇಂದಿಗೆ 30-40 ವರ್ಷಗಳ ಹಿಂದೆ ಮಳೆಗಾಲದ ಪ್ರವಾಹ ತೋಟ-ಗದ್ದೆಗಳಿಗೆ ನುಗ್ಗಿದಾಗ ಮರದ ದಿಮ್ಮಿ, ತರಗೆಲೆಗಳು ರಾಶಿ ರಾಶಿಯಾಗಿ ಬೀಳುತ್ತಿದ್ದವು. ಈಗ ಕಾಲಿಡಲಾರದ ಪ್ಲಾಸ್ಟಿಕ್‌ ತ್ಯಾಜ್ಯ ಹೇಸಿಗೆ ಹುಟ್ಟಿಸುತ್ತಿದೆ. ಕರಾವಳಿ ನದಿ ದಂಡೆಯ ಇಕ್ಕೆಲಗಳಲ್ಲಿ ಗಿಡಗಂಟಿಗಳಿಗೆ ಕೆಂಪು, ಹಸಿರು, ಕಪ್ಪು ಪತಾಕೆಯಂತೆ ಪ್ಲಾಸ್ಟಿಕ್‌ ಚೀಲಗಳನ್ನು ನೋಡಬಹುದು. ಬಲುº, ಟ್ಯೂಬ್‌ ಲೈಟ್‌, ಥರ್ಮೋಕೋಲ್‌ , ಮಕ್ಕಳ ಆಟಿಕೆ ಚೂರುಗಳು ನಾಗರಿಕ ಜಗತ್ತಿನ ನದಿ ನಿರ್ಲಕ್ಷ್ಯದ ಸಾಕ್ಷ್ಯವಾಗಿ ಕಾಣಿಸುತ್ತಿವೆ.

ನಗರದಂಚಿನ ಹಳ್ಳಿಗಳ ಗದ್ದೆ ಬಯಲಿಗೆ ಪ್ರವಾಹ ಬಂದರೆ ಬಲುº, ಬಾಟಲ್‌ಗ‌ಳ ರಾಶಿ ಕೃಷಿಕರನ್ನು ಭೂಮಿಗೆ ಕಾಲಿಡಲು ಹೆದರಿಸುತ್ತದೆ. ನಗರದ ಕೊಳೆಯಲ್ಲಾ ಹೊಳೆಯಾಗಿ ಹರಿದು ನದಿಗಳನ್ನು  ತ್ಯಾಜ್ಯದ ಬೀಡಾಗಿಸಿವೆ.

ಅರಣ್ಯದಲ್ಲಿ ಜನಿಸುವ ನದಿಗಳು ಕೃಷಿ ಭೂಮಿ, ಹಳ್ಳಿ, ಪೇಟೆಗಳನ್ನು ಬಳಸಿ ಹರಿಯುತ್ತ ಹೋದಂತೆ ಅದರ ಒಡಲಿಗೆ ಮಾಲಿನ್ಯ ಸೇರುತ್ತದೆ. ಭದ್ರಾವತಿ, ದಾಂಡೇಲಿ, ಹರಿಹರ, ಶಿವಮೊಗ್ಗ, ಕೊಪ್ಪಳ, ಮಂಡ್ಯ, ಮೈಸೂರು ಹೀಗೆ ಎಲ್ಲೆಡೆ ಇದನ್ನು ನೋಡಬಹುದು. ಬೆಂಗಳೂರಿನ ವೃಷಭಾವತಿ, ಹುಬ್ಬಳ್ಳಿಯ ಬೇಡ್ತಿ ಎಲ್ಲದರ ಕಥೆಯೂ ಒಂದೇ ! ಸಾವಿರಾರು ವರ್ಷಗಳ ಹಿಂದೆ ನದಿಯ ನೀರು ನಂಬಿ ನಗರಗಳು, ತೀರ್ಥಕ್ಷೇತ್ರಗಳು ಜನಿಸಿವೆ. ಪ್ರವಾಸಿಗರ ಒತ್ತಡದಿಂದ ಸ್ನಾನಘಟ್ಟಗಳಲ್ಲಿ ಬಿಸಾಡಿದ ಬಟ್ಟೆ-ಕಸಗಳು ನದೀತಟವನ್ನು ಕೊಳಚೆ ಗುಂಡಿಯಾಗಿಸಿವೆ. ಅಮಾವಾಸ್ಯೆ, ಹುಣ್ಣಿಮೆಯ ಪೂಜೆಗಳು, ಜಾತ್ರೆಗಳಲ್ಲಂತೂ ಕಸದ ಸಮಸ್ಯೆ ಇನ್ನಷ್ಟು ಜಾಸ್ತಿ. ಧಾರವಾಡದ ಯಮನೂರಿನ ಹಳ್ಳದ ಸ್ನಾನದಲ್ಲಿ ಭಕ್ತರ ಭಕ್ತಿ ಹಾಗೂ ನೀರಿನ ಮಾಲಿನ್ಯದ ಮುಖ ನೋಡಿದರೆ ಬೇಜಾರಾಗುತ್ತದೆ. ನದಿಯಲ್ಲಿ ಮುಳುಗೆದ್ದು ದೇವರ ದರ್ಶನಕ್ಕೆ ಹೊರಡುವ ಭಕ್ತರ ದಂಡು ಕಣ್ಮುಚ್ಚಿ ಕಸ ಎಸೆದು ನದಿ ಜೀವ ಹಿಂಡುತ್ತಿದೆ. ತಲಕಾವೇರಿಯಿಂದ ಶ್ರೀರಂಗಪಟ್ಟಣದವರೆಗೂ ಪವಿತ್ರ ತಾಣಗಳು ಹಲವಿದೆ. ಎಸೆದ ಪ್ಲಾಸ್ಟಿಕ್‌ ನದಿ ಪಾತ್ರ, ಕಲ್ಲು ಬಂಡೆ, ಗಿಡಗಂಟಿಗಳಲ್ಲಿ ಶೇಖರಣೆಯಾಗಿವೆ.

ಪ್ರಮುಖ ಪ್ರವಾಸಿ ತಾಣಗಳಲ್ಲಿ ನೀರು ವಿಶೇಷ ಆಕರ್ಷಣೆ. ಈಗ ಮೂರು ನಾಲ್ಕು ದಶಕಗಳ ಹಿಂದೆ ಜಲಪಾತ ವೀಕ್ಷಣೆಗೆ ಹೋಗುವವರು ಯಾರೂ ಕುಡಿಯಲು ನೀರು ಒಯ್ಯುತ್ತಿರಲಿಲ್ಲ. ಅಲ್ಲಿನ ಝರಿ ನೀರನ್ನೇ ಕುಡಿಯುತ್ತಿದ್ದರು. ಈಗ ಪ್ರಸಿದ್ಧ ಜೋಗ್‌ ಜಲಪಾತದಲ್ಲಿ ಕುಡಿಯುವ ನೀರಿನ ವ್ಯಾಪಾರ ಪ್ರಮುಖವಾಗಿದೆ. ಹರಿಯುವ ನೀರು ನಿಂತಾಗ ಹಾವಸೆ ಬೆಳೆಯುತ್ತದೆ. ಉಪಯೋಗಿಸುವ ಡಿಟರ್ಜೆಂಟ್‌ಗಳು ಜಲಮಾಲಿನ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತವೆ.

ಹೋಟೆಲ್‌,ರಸ್ತೆ ಕಾಲುವೆಗಳಲ್ಲಿನ ತ್ಯಾಜ್ಯದ ನೀರು ನೇರ ನದಿಗೆ ಸೇರುವುದನ್ನು ಎಲ್ಲೆಡೆಯೂ ನೋಡಬಹುದು. ನದಿ ಹೇಗೆ ಹಾಳಾಗುತ್ತದೆಯೆಂದು ನೋಡಲಾರದಷ್ಟು ಕುರುಡುತನ ಅಕ್ಷರಸ್ಥರಿಗೆ ಬಂದಿದೆ. ಒಮ್ಮೆ ಕಾಳಿ ನದಿಯ ಕೊಡಸಳ್ಳಿ ಅಣೆಕಟ್ಟೆಯ ಹಿನ್ನೀರಿನಲ್ಲಿ ದೋಣಿಯೇರಿ ಹೊರಟಿದ್ದೆವು. ನೀರಿನಲ್ಲಿ ಕೈಯ್ನಾಡಿಸುತ್ತ ಹೋದಂತೆ ಕೈಯೆÂಲ್ಲ ತುರಿಕೆ ಶುರುವಾಯ್ತು. ಮುಳುಗಡೆ ಸಂದರ್ಭದಲ್ಲಿ ನದಿಯ ಒಡಲು ಸೇರಿದ ಮರ, ಬಿದಿರು ಕೊಳೆತು ನೀರು ಹಾಳಾಗಿತ್ತು.

ಕೊನೆಗೆ ನದಿ ದಂಡೆಗೆ ಬಂದು ತೆಂಗಿನ ಮರವೇರಿ ಎಳ್ನೀರಿನಲ್ಲಿ ಕೈತೊಳೆದು ಕೊಂಡೆವು! ಇನ್ನೊಮ್ಮೆ ಸುಂದರ ಶರಾವತಿ ನದಿಯಲ್ಲಿ ತೇಲುತ್ತ ನೀರಾಟ ಮಾಡುವಾಗಲೂ ಇದೇ ಕಥೆ.  ನದಿ ದಂಡೆ ನೋಡುವಂತೆ ಅಂಬಿಗರು ಹೇಳಿದರು.

ಶೌಚಾಲಯದ ಸಾಲು ಕಾಣಿಸಿತು, ನೇರ ನದಿಗೆ ಸೇರುವ ಭಯಾನಕ ನೋಟ ನಡುಕ ಹುಟ್ಟಿಸಿತು.  ಜಲ ಜಾಗೃತಿಯಲ್ಲಿ ನಾವು ಎಷ್ಟು ಹಿಂದುಳಿದಿದ್ದೇವೆ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ? ತುಂಗಭದ್ರಾ, ಕಾವೇರಿ ನದಿಯ ಭತ್ತದ ಸೀಮೆಯಲ್ಲಂತೂ ಬಳಸುವ ಅಪಾರ ರಾಸಾಯನಿಕ ಕೀಟನಾಶಕಗಳು ನೇರವಾಗಿಯೇ ನದಿ ಸೇರುತ್ತಿವೆ. ಇವಕ್ಕೆ ನಿಯಂತ್ರಣ ಹೇರುವುದು ಸಾಧ್ಯವೇ?

ನೇತ್ರಾವತಿ, ಕಾವೇರಿ, ಕಬನಿ ಸೇರಿದಂತೆ ಹಲವು ನದಿ ಮಡಿಲಿನ ಕಸ ಎತ್ತಲು ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವಾ ಬ್ರಿಗೇಡ್‌ ತಂಡ ಕಾರ್ಯನಿರ್ವಸುತ್ತಿದೆ. ಇತ್ತೀಚೆಗೆ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದಲ್ಲಿ ನೂರಾರು ಜನ ನದಿಗಿಳಿದು ರಾಶಿ ರಾಶಿ ಪ್ಲಾಸ್ಟಿಕ್‌ ತ್ಯಾಜ್ಯ ಎತ್ತಿದ್ದಾರೆ. ರಾಜ್ಯದ ವಿವಿಧೆಡೆ ನದಿ ಪರಿಸ್ಥಿತಿ ಗಮನಿಸಿದ ಹಲವು ಸಂಘಟನೆಗಳು ಈ ಕಾರ್ಯದಲ್ಲಿ ಶ್ರಮಿಸುತ್ತಿವೆ.  ಟನ್‌ಗಟ್ಟಲೆ ಪ್ಲಾಸ್ಟಿಕ್‌ ಎತ್ತಿ ನದಿ ಉಳಿಸುವ ಕಾರ್ಯ ಒಂದೆಡೆ ನಡೆಯುತ್ತಿದ್ದರೆ ಇದ್ಯಾವುದನ್ನೂ ಗಮನಿಸಿದ ಒಂದು ವರ್ಗ ಅದೇ ನದಿಯ ಒದಲಿಗೆ ಕಸ  ಎಸೆಯುವ ಕಾರ್ಯದಲ್ಲಿ ಮಗ್ನವಾಗಿದೆ. ನದಿ ದಂಡೆಯ ಪ್ರವಾಸಿ ತಾಣಗಳನ್ನು ಪ್ಲಾಸ್ಟಿಕ್‌ ಮುಕ್ತವಾಗಿಸಲು ಮುಂದಾಗದಿದ್ದರೆ ನದಿಗಳು ಇನ್ನಷ್ಟು ನರಕವಾಗುವುದರಲ್ಲಿ ಸಂದೇಹವಿಲ್ಲ. ಜಲ ಮಾಲಿನ್ಯ, ಪರಿಸರ ಮಾಲಿನ್ಯ ತಡೆಗೆ ಕಾನೂನುಗಳಿವೆ. ಆದರೆ  ಬೃಹತ್‌ ಉದ್ಯಮಗಳಿಗೆ ನಿಯಂತ್ರಣ ಹೇರಲು ಯಾರಿಗೂ ಧೈರ್ಯವಿಲ್ಲ. ರಾಜಕಾರಣಿ, ಅಧಿಕಾರಿಗಳ ಮೂಲ ಬಂಡವಾಳ ಇವುಗಳ ಮಾಲಿನ್ಯದಲ್ಲಿದೆ.  ಕಸ ನಿರ್ವಹಣೆಯಲ್ಲಿ ಕಾನೂನಿಗಿಂತ ಸ್ವಯಂ ನಿಯಂತ್ರಣ ನೀತಿಸಂಹಿತೆ ಕಾರ್ಯ ಮುಖ್ಯವಾದುದು. ನದಿಯನ್ನು ಪವಿತ್ರತಾಣವೆಂದು ಕೊಂಡಾಡುವ, ಪ್ರತಿಯೊಂದು ನದಿಯ ಹಿನ್ನೆಲೆಗೂ ಪುರಾಣ ಕಥೆ ಹೇಳುವ ನಾವು ನಮ್ಮ ನಡುವಳಿಕೆಗಳಲ್ಲಿ ಶಿಸ್ತು  ಅಳವಡಿಸಿಕೊಳ್ಳಬೇಕು. ಕಸ ಎಸೆಯುವ ದುಷ್ಕೃತ್ಯ ಮಾಡುವ ಮುಂಚೆ ನದಿಯಂಚಿನಲ್ಲಿ ಕೈಮುಗಿಯುವ ದೇವರು ನೆನಪಾಗಬೇಕು. ವ್ಯಕ್ತಿಗತ ಶಿಸ್ತಾಗಿ ಕಸ ನಿರ್ವಹಣೆ ಪ್ರಜ್ಞೆ ಬೆಳೆಯಬೇಕು. ಶುದ್ಧ ಕುಡಿಯುವ ನೀರಿನ ಬಗ್ಗೆ ನಾವೆಲ್ಲರೂ ಯಾವಾಗಲೂ ಮಾತಾಡುತ್ತೇವೆ. ಮಳೆಗಿಂತ ಶುದ್ಧ ನೀರಿಲ್ಲ, ಇವನ್ನು ಭೂಮಿಗೆಲ್ಲ ಹಂಚುವ ನದಿಗಳನ್ನು ಸ್ವತ್ಛವಾಗಿಸಿಕೊಳ್ಳುವುದು ಮೊದಲ ಕೆಲಸವಾಗಿದೆ. ನದಿದಂಡೆಯ ಅರಣ್ಯ, ನದಿ ಪಾತ್ರದ ಕಲ್ಲು, ಮರಳು ಉಳಿಸಿದರೆ ನಿಸರ್ಗ ನಮಗಿಂತ ಚೆನ್ನಾಗಿ ನೀರನ್ನು ಶುದ್ಧೀಕರಿಸುತ್ತದೆ.  ನದಿಗಳನ್ನು ಶುದ್ಧವಾಗಿಸುವ ತಿಳಿ ಮನಸ್ಸು ಅರಳಿಸುವ ಶಿಕ್ಷಣ ನಾಡಿಗೆಲ್ಲ ಬೇಕಾಗಿದೆ.  

ಕಾರವಾರ ಕಡಲ ತೀರದಲ್ಲಿ ಇತ್ತೀಚೆಗೆ ರಾಶಿ ರಾಶಿ ಕಸ ತೇಲಿ ಬಂದಿತು. ಬಾಟಲ್‌, ಬಲುº, ಥರ್ಮೊಕೋಲ್‌ ಸೇರಿದಂತೆ ತ್ಯಾಜ್ಯ ಲೋಕದ ವರ್ಣಮಯ ಜಗತ್ತಿನ ಅನಾವರಣವಾಯ್ತು. ಮೀನುಗಾರರಂತೂ,  ಬಲೆಯಲ್ಲಿ ಮೀನಿನ ಬದಲು ಪ್ಲಾಸ್ಟಿಕ್‌ ತ್ಯಾಜ್ಯಗಳು ಬಿದ್ದು ಲಕ್ಷಾಂತರ ರೂಪಾಯಿ ನಷ್ಟವಾಯೆ¤ಂದು ಬೊಬ್ಬೆ ಇಟ್ಟರು. ಕಡಲ ತಡಿಯಲ್ಲಿ ಕಸ ಜಮೆಯಾಗುವುದು ವಾರ್ಷಿಕ ಸಹಜ ಕ್ರಿಯೆ. ಅಲೆಗಳ ಅಬ್ಬರದಲ್ಲಿ ಬೇಲೆಗೆ ಬಂದು ಬೀಳುವ ವಸ್ತುಗಳಲ್ಲಿ ಭೂಮಿಗೆ ಕರಗುವುದು ಹಿಂದೆ ಜಾಸ್ತಿ ಇತ್ತು. ಈಗ ಹತ್ತಾರು ವರ್ಷ ಉಳಿಯುವ ತ್ಯಾಜ್ಯಗಳಿಂದ ಮಾಲಿನ್ಯ ಪರಿಣಾಮ ಕಾಡುತ್ತಿದೆ. ಇಂದಿನ ಕೊಳ್ಳುಬಾಕ ಸಂಸ್ಕೃತಿಯಲ್ಲಿ ನಮಗರಿಲ್ಲದೇ ಕಸದ ಸೃಷ್ಟಿಕರ್ತರಾಗಿ, ನದಿ ಹಂತಕರಾಗಿ ಬೆಳೆದಿದ್ದೇವೆ. ನಮ್ಮ ಕಸವನ್ನು ಬೇರೆಯವರು ಎತ್ತಲೆಂಬ ಮನಸ್ಸು ವ್ಯಾಪಿಸಿದೆ. ಯಾರಿಗೂ ಅಪರಾಧ ಪ್ರಜ್ಞೆ ಮಾತ್ರ ಕಾಡುತ್ತಿಲ್ಲ.

ನದಿ ಚಿಂತನೆ ಮುಂದಿನ ಭಾಗ- ಬೆಂಗಳೂರಿಗೆ ಶರಾವತಿ ಬೇಕೇ?

– ಶಿವಾನಂದ ಕಳವೆ

ಟಾಪ್ ನ್ಯೂಸ್

Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್‌!

Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್‌!

Aircel-Maxis Case: ಏರ್‌ಸೆಲ್‌-ಮ್ಯಾಕ್ಸಿಸ್‌ ಕೇಸಿನಲ್ಲಿ ಚಿದಂಬರಂ ವಿರುದ್ಧ ವಿಚಾರಣೆ ತಡೆ

Aircel-Maxis Case: ಏರ್‌ಸೆಲ್‌-ಮ್ಯಾಕ್ಸಿಸ್‌ ಕೇಸಿನಲ್ಲಿ ಚಿದಂಬರಂ ವಿರುದ್ಧ ವಿಚಾರಣೆ ತಡೆ

Bhagyanagar: ಹೈದರಾಬಾದ್‌ ಅಲ್ಲ, ಭಾಗ್ಯನಗರ: ಆರೆಸ್ಸೆಸ್‌ ಮತ್ತೆ ಹಕ್ಕೊತ್ತಾಯ

Bhagyanagar: ಹೈದರಾಬಾದ್‌ ಅಲ್ಲ, ಭಾಗ್ಯನಗರ: ಆರೆಸ್ಸೆಸ್‌ ಮತ್ತೆ ಹಕ್ಕೊತ್ತಾಯ

Mahayuthi

Exit Poll: ಮಹಾರಾಷ್ಟ್ರ: ಬಿಜೆಪಿ ನೇತೃತ್ವಕ್ಕೆ ಮತ್ತೆ ಅಧಿಕಾರ, ಜಾರ್ಖಂಡ್‌ನಲ್ಲಿ ಪೈಪೋಟಿ?

Minister K. N. Rajanna: ಸದ್ಯಕ್ಕಂತೂ ಸಚಿವ ಸಂಪುಟ ಪುನಾರಚನೆ ಇಲ್ಲ

Minister K. N. Rajanna: ಸದ್ಯಕ್ಕಂತೂ ಸಚಿವ ಸಂಪುಟ ಪುನಾರಚನೆ ಇಲ್ಲ

Lakshmi Hebbalkar: “ಎಪಿಎಲ್‌, ಬಿಪಿಎಲ್‌ನವರಿಗೆ ಗೃಹಲಕ್ಷ್ಮಿ ಹಣ ಬಂದೇ ಬರುತ್ತೆ’

Lakshmi Hebbalkar: “ಎಪಿಎಲ್‌, ಬಿಪಿಎಲ್‌ನವರಿಗೆ ಗೃಹಲಕ್ಷ್ಮಿ ಹಣ ಬಂದೇ ಬರುತ್ತೆ’

ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್‌ ಸೈಕ್ಲೋನ್‌, 6 ಲಕ್ಷ ಮನೆಗಳಿಗೆ ವಿದ್ಯುತ್‌ ಕಡಿತ

ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್‌ ಸೈಕ್ಲೋನ್‌, 6 ಲಕ್ಷ ಮನೆಗಳಿಗೆ ವಿದ್ಯುತ್‌ ಕಡಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್‌!

Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್‌!

Aircel-Maxis Case: ಏರ್‌ಸೆಲ್‌-ಮ್ಯಾಕ್ಸಿಸ್‌ ಕೇಸಿನಲ್ಲಿ ಚಿದಂಬರಂ ವಿರುದ್ಧ ವಿಚಾರಣೆ ತಡೆ

Aircel-Maxis Case: ಏರ್‌ಸೆಲ್‌-ಮ್ಯಾಕ್ಸಿಸ್‌ ಕೇಸಿನಲ್ಲಿ ಚಿದಂಬರಂ ವಿರುದ್ಧ ವಿಚಾರಣೆ ತಡೆ

Bhagyanagar: ಹೈದರಾಬಾದ್‌ ಅಲ್ಲ, ಭಾಗ್ಯನಗರ: ಆರೆಸ್ಸೆಸ್‌ ಮತ್ತೆ ಹಕ್ಕೊತ್ತಾಯ

Bhagyanagar: ಹೈದರಾಬಾದ್‌ ಅಲ್ಲ, ಭಾಗ್ಯನಗರ: ಆರೆಸ್ಸೆಸ್‌ ಮತ್ತೆ ಹಕ್ಕೊತ್ತಾಯ

Mahayuthi

Exit Poll: ಮಹಾರಾಷ್ಟ್ರ: ಬಿಜೆಪಿ ನೇತೃತ್ವಕ್ಕೆ ಮತ್ತೆ ಅಧಿಕಾರ, ಜಾರ್ಖಂಡ್‌ನಲ್ಲಿ ಪೈಪೋಟಿ?

Minister K. N. Rajanna: ಸದ್ಯಕ್ಕಂತೂ ಸಚಿವ ಸಂಪುಟ ಪುನಾರಚನೆ ಇಲ್ಲ

Minister K. N. Rajanna: ಸದ್ಯಕ್ಕಂತೂ ಸಚಿವ ಸಂಪುಟ ಪುನಾರಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.