ವಿಶ್ವದಲ್ಲೇ ಪ್ರಥಮ: ಚೀನದಿಂದ ಸ್ಟಾರ್ ವಾರ್ ಗನ್, 1 ಕಿ.ಮೀ.ಗುರಿ
Team Udayavani, Jul 2, 2018, 4:23 PM IST
ಬೀಜಿಂಗ್: ಮಿಲಿಟರಿ ದೈತ್ಯ ಶಕ್ತಿಯನ್ನು ಹೊಂದಿರುವ ಚೀನ ಇದೀಗ ವಿಶ್ವದಲ್ಲೇ ಸರ್ವ ಪ್ರಥಮವಾಗಿ ಲೇಸರ್ ಬೀಮ್ “ಸ್ಟಾರ್ ವಾರ್ ಗನ್” ಗಳನ್ನು ಅಭಿವೃದ್ಧಿ ಪಡಿಸಿದೆ.
ಝಡ್ಕೆಝಡ್ಎಂ-500 ಎಂಬ ಸಂಕೇತ ನಾಮವನ್ನು ಹೊಂದಿರವ ಈ ಸ್ಟಾರ್ ವಾರ್ ಗನ್ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ತನ್ನ ಗುರಿಯನ್ನು ಕ್ಷಣಾರ್ಧದಲ್ಲಿ ಭೇದಿಸಬಲ್ಲುದು.
ಎನರ್ಜಿ ಬೀಮ್ ಬಳಸುವ ಈ ಗನ್ ಫೈರಿಂಗ್ ಗೆ ಗುರಿಯಗುವ ವ್ಯಕ್ತಿಯು ಕ್ಷಣಾರ್ಧದಲ್ಲಿ ಸುಟ್ಟು ಕರಕಲಾಗುತ್ತಾನೆ; ಆತನ ಚರ್ಮ, ಜೀವಕೋಶಗಳು ಭಸ್ಮವಾಗಿ ಹೋಗುತ್ತವೆ ಎಂದು ವರದಿಗಳು ತಿಳಿಸಿವೆ.
ಸೌತ್ ಚೈನಾ ಮಾರ್ನಿಂಗ್ ಪೋಸ್ಟ್’ ವರದಿಯ ಪ್ರಕಾರ ಈ ಸ್ಟಾರ್ ವಾರ್ ಗನ್ ಎನ್ನುವುದು ಲೇಸರ್ ಅಸಾಲ್ಟ್ ರೈಫಲ್ ಆಗಿದೆ. ಸ್ಟಾರ್ ವಾರ್ ಸರಣಿ ಚಲನಚಿತ್ರಗಳಲ್ಲಿ ಈ ಬಗೆಯ ಲೇಸರ್ ಬೀಮ್ ಗನ್ಗಳನ್ನು ವೈಜ್ಞಾನಿಕ ಪರಿಕಲ್ಪನೆಯ ರೂಪದಲ್ಲಿ ತೋರಿಸಲಾಗಿತ್ತು.
ಇದೀಗ ಚೀನ ಈ ಬಗೆಯ ಲೇಸರ್ ಬೀಮ್ ಗನ್ಗಳನ್ನು ತನ್ನ ಸಂಶೋಧನೆಯ ಮೂಲಕ ಸಾಕ್ಷಾತ್ಕರಿಸಿದೆ. ವಿಶ್ವದ ಸರ್ವಪ್ರಥಮ ಸ್ಟಾರ್ ವಾರ್ ಗನ್ ವಿನ್ಯಾಸಗೊಳಿಸಿ ಪರಿಚಯಿಸಿರುವ ಮೊದಲ ದೇಶ ಎಂಬ (ಅಪ) ಖ್ಯಾತಿಗೆ ಪಾತ್ರವಾಗಿದೆ.
ಎಕೆ 47 ಗನ್ಗಳನ್ನು ಬಹುವಾಗಿ ಹೋಲುವ ಈ ಲೇಸರ್ ಬೀಮ್ ಗನ್ಗಳು ಸುಮಾರು ಮೂರು ಕಿಲೋ ತೂಗುತ್ತವೆ. ಆದರೆ ಪರಿಣಾಮದಲ್ಲಿ ಈ ಲೇಸರ್ ಬೀಮ್ ಗನ್ಗಳನ್ನು ಮೀರಿಸುವ ಗನ್ಗಳು ವಿಶ್ವದಲ್ಲಿ ಎಲ್ಲಿಯೂ, ಯಾವ ದೇಶದ ಬಳಿಯೂ ಈ ವರೆಗೆ ಇಲ್ಲ.
ಈ ಲೇಸರ್ ಬೀಮ್ ಗನ್ ಮೂಲಕ ಫೈರಿಂಗ್ ಮಾಡಿದಾಗ ಸಾಮಾನ್ಯ ಕಣ್ಣಿಗೆ ಅದರಿಂದ ಹೊರಡುವ ಜ್ವಲನ ಶಕ್ತಿಯು ಕಾಣುವುದೇ ಇಲ್ಲ.
ಒಂದು ಬಾರಿಗೆ ಎರಡು ಸೆಕೆಂಡುಗಳ ಕಾಲ ಫೈರಿಂಗ್ ಮಾಡಬಲ್ಲ ಈ ಲೇಸರ್ ಬೀಮ್ ಗನ್ನಿಂದ 1,000 ಸಲ ಫೈರಿಂಗ್ ಮಾಡಬಹುದಾಗಿದೆ. ಈ ಗನ್ಗಳನ್ನು ಕಾರು, ಬೋಟುಗಳು, ವಿಮಾನಗಳ ಮೇಲ್ಭಾಗಕ್ಕೆ ಜೋಡಿಸಿ ವೈವಿಧ್ಯಮಯ ಕಾರ್ಯಾಚರಣೆಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಬಳಸಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ
Pakistan: ಪಾಕ್ ಸೇನೆ ಮತ್ತು ಇಮ್ರಾನ್ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್ ಐ
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Census: ಇರಾಕ್ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್ನ ಕೃಷ್ಣದಾಸ್ ಸೆರೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ
Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್
Pro Kabaddi: ಯೋಧಾಸ್ಗೆ ತಲೈವಾಸ್ ಆಘಾತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.