ಧಾರ್ಮಿಕ ಕಾವ್ಯಗಳಿಂದ ಮನಃ ಪರಿವರ್ತನೆ: ಶಂಕರಾನಂದ ಶ್ರೀ
Team Udayavani, Jul 2, 2018, 5:46 PM IST
ಹಾನಗಲ್ಲ: ವಿವೇಕದ ಜೀವನ ವಿಧಾನವೇ ಬದುಕಿನ ಯಶಸ್ಸಾಗಿದ್ದು, ಸಾಹಿತ್ಯ ಸಂಸ್ಕೃತಿಯ ಓದು ನಮ್ಮ ಜ್ಞಾನ ಕ್ಷಿತಿಜವನ್ನು ವಿಸ್ತಾರಗೊಳಿಸುತ್ತದೆ ಎಂದು ಹೋತನಹಳ್ಳಿ ಸಿದ್ಧಾರೂಢಮಠದ ಶಂಕರಾನಂದ ಶ್ರೀಗಳು ಹೇಳಿದರು.
ವೆಂಕಟೇಶ್ವರ ದೇವಸ್ಥಾನದಲ್ಲಿ ವಿವೇಕ ಜಾಗ್ರತ ಬಳಗ ಆಯೋಜಿಸಿದ್ದ ಓದುಗರ ಸಮಾವೇಶದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ವೇದ ಉಪನಿಷತ್ತು, ಭಗವದ್ಗೀತೆಯಾದಿ ಧಾರ್ಮಿಕ ಕಾವ್ಯಗಳು ನಮ್ಮ ಮನಸ್ಸನ್ನು ವಿಕಾರದಿಂದ ಬಿಡಿಸಿ ಸಕಾರಾತ್ಮಕ ನಡೆಗೆ ತರಲು ಸಹಕಾರಿಯಾಗಿವೆ. ಒಳ್ಳೆಯದನ್ನು ಓದುವ, ಅರಿಯುವ, ಅಳವಡಿಸಿಕೊಳ್ಳುವ, ನಡೆ-ನುಡಿಗೆ ಸಾಕಾರವಾಗಿ ಸ್ವೀಕರಿಸುವ ಮನಸ್ಸು ಬೇಕಾಗುತ್ತದೆ. ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ಮನುಷ್ಯ ಮೃಗವಾಗುತ್ತಿರುವ ಸಂದರ್ಭದಲ್ಲಿ ಧರ್ಮ ಮಾರ್ಗಮಾತ್ರ ಪರಿವರ್ತನೆ ತರಬಲ್ಲದು. ಇದಕ್ಕೆ ಧಾರ್ಮಿಕ ಮನೋಭಾವದ, ಸಮಚಿತ್ತದ ಸಂಘಟನೆಗಳು ಸೇವೆ ಸಲ್ಲಿಸುತ್ತಿರುವುದು ಪ್ರಶಂಶನೀಯ ಎಂದ ಅವರು, ದೇಶದ ನಾನಾ ಸಂತರು ಸತ್ಪುರುಷರ ವಾಣಿಗಳನ್ನು ವಿವೇಕ ಸಂಪದ ಸೇರಿದಂತೆ ನಾಡಿನ ಪತ್ರಿಕೆಗಳ ಮೂಲಕ ಅರಿತು ಅನುಸರಿಸುವಂತಾಗಬೇಕು ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಎಲ್ ಐಸಿ ಅಧಿಕಾರಿ ಪ್ರಹ್ಲಾದ ಸಾಂಬ್ರಾಣಿ, ಮಕ್ಕಳಲ್ಲಿ ಮೊದಲು ಓದುವ ಹವ್ಯಾಸ ಬೆಳಸಬೇಕು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ ಎಂಬ ಹಿರಿಯರ ವಾಣಿಯನ್ನು ಪಾಲಕರಾದವರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಬೆಳೆಸುವುದೆ ಒಂದು ಸಾಹಸ ಎಂಬ ಅರಿವು ನಮಗಿರಲಿ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವೇಕ ಜಾಗ್ರತ ಬಳಗದ ಅಧ್ಯಕ್ಷ ರವಿ ಲಕ್ಷ್ಮೇಶ್ವರ, ನೀತಿ ಪಾಠಗಳಿಲ್ಲದ ಇಂದಿನ ಶಿಕ್ಷಣ ಯಾಂತ್ರಿಕ ಹಾಗೂ ಭಾವನಾತ್ಮಕ ಸಂಬಂಧಗಳಿಲ್ಲದ ಕೃತಕ ವ್ಯವಸ್ಥೆ ಪೋಷಿಸುತ್ತಿರುವುದು ವಿಷಾದನೀಯದ. ಮನೆ, ಕುಟುಂಬ, ದೇವರು, ಧರ್ಮದ ಕಲ್ಪನೆ ದೂರವಾಗಿ ಕೇವಲ ಹಣ ಬಾಚುವ ತಂತ್ರಗಳನ್ನು ಕಲಿಸುವ ಶಿಕ್ಷಣ ಈಗ ಕಾಣುತ್ತಿರುವುದು ಭವಿಷ್ಯದಲ್ಲಿ ಸಾಮಾಜಿಕ ದುರಂತಕ್ಕೆ ಸಾಕ್ಷಿ ಎಂದರು.
ಡಿವೈನ್ ಪಾರ್ಕನ ಅಧಿಕಾರಿ ಶಿವಶಂಕರಪ್ಪ ಬ್ಯಾಡಗಿ, ಹನುಮಂತಪ್ಪ ಬಂಗೇರಾ, ಯಲ್ಲಮ್ಮ ಕಬ್ಬೂರ, ಶ್ವೇತಾ ನಾಗರವಳ್ಳಿ, ವಿ.ವಿ.ಬಂಕಾಪೂರ ಮಾತನಾಡಿದರು. ರೂಪಾ ಸಾಂಬ್ರಾಣಿ ಸ್ವಾಗತಿಸಿದರು. ಲೀಲಾವತಿ ಗುಡಿ ನಿರೂಪಿಸಿದರು. ಪಿ.ಪುಷ್ಪಾ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
KLE Technological University: ಮುರುಗೇಶ್ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.