ಅಂಗನವಾಡಿ ಎದುರಲ್ಲೇ ತ್ಯಾಜ್ಯ: ಸಾಂಕ್ರಾಮಿಕ ರೋಗ ಭೀತಿ


Team Udayavani, Jul 3, 2018, 6:00 AM IST

0207kpe3.jpg

ಕಾಪು: ಎಲ್ಲೂರು ಗ್ರಾ.ಪಂ. ವ್ಯಾಪ್ತಿಯ ಕುಂಜೂರು ದುರ್ಗಾ ನಗರದಲ್ಲಿರುವ ಅಂಗನವಾಡಿಯ ಮುಂಭಾಗದಲ್ಲಿ ತ್ಯಾಜ್ಯದ ಕೊಂಪೆ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಅಂಗನವಾಡಿ ಮಕ್ಕಳಿಗೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.

ಕುಂಜೂರು ದುರ್ಗಾ ನಗರದಲ್ಲಿರುವ ನೂರಾರು ಮನೆಗಳಲ್ಲಿ ಸಂಗ್ರಹವಾಗುವ ಕಸ ತ್ಯಾಜ್ಯ ವಸ್ತುಗಳನ್ನು ಅಂಗನವಾಡಿ ಮುಂಭಾಗದಲ್ಲಿರುವ ರೈಲ್ವೇ ಟ್ರಾÂಕ್‌ ಬಳಿಯಿರುವ ಖಾಲಿ ಪ್ರದೇಶದಲ್ಲಿ ಎಸೆದು ಹೋಗುತ್ತಿರುವುದು ಇಲ್ಲಿ ತ್ಯಾಜ್ಯದ ಕೊಂಪೆ ಬೆಳೆಯಲು ಮುಖ್ಯ ಕಾರಣವಾಗಿದೆ.

ಅಂಗನವಾಡಿಯ ಮುಂಭಾಗದಲ್ಲಿ ಮೊದಲು ಸಣ್ಣದಾಗಿದ್ದ ತ್ಯಾಜ್ಯದ ಕೊಂಪೆ ಈಗ ವಿಸ್ತಾರವಾಗಿ ಬೆಳೆಯುತ್ತಿದ್ದು, ಪರಿಸರದ ಜನರಲ್ಲಿ ಅಸಹ್ಯಕರ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿದೆ. 

ಕೇವಲ ಕಸ ಮಾತ್ರ ಅಲ್ಲ 
ಅಂಗನವಾಡಿ ಮುಂಭಾಗದ ಖಾಲಿ ಪ್ರದೇಶದಲ್ಲಿ ಜನ ಕೇವಲ ಕಸ ಮಾತ್ರ ಎಸೆದು ಹೋಗುತ್ತಿಲ್ಲ. ಬದಲಾಗಿ ಪ್ಲಾಸ್ಟಿಕ್‌ ತ್ಯಾಜ್ಯ, ಮನೆಯಲ್ಲಿ ಬಳಸಿ ಉಳಿಕೆಯಾಗುವ ಅನ್ನ, ಸಾಂಬಾರು ಇತ್ಯಾದಿ ತಿಂಡಿ ಪದಾರ್ಥಗಳು, ಡೈಪರ್ ಮತ್ತು ನ್ಯಾಪಿRನ್‌ಗಳು, ಹಳೇ ಬಟ್ಟೆಗಳು, ಮೀನು, ಕೋಳಿ, ಮಾಂಸದ ತ್ಯಾಜ್ಯಗಳನ್ನೂ ಇಲ್ಲಿಗೆ ತಂದು ಎಸೆದು ಹೋಗುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.ಮಕ್ಕಳು, ಪರಿಸರದ ಬಗ್ಗೆ ಜನರ ಕಾಳಜಿ ಬಹಿರಂಗ
ಗ್ರಾ.ಪಂ. ವತಿಯಿಂದ ಪಣಿಯೂರು ಶಾಲಾ ಕ್ರೀಡಾಂಗಣದ ಬಳಿಯಲ್ಲಿ ಅಧಿಕೃತವಾದ ಕಸದ ಹೊಂಡವನ್ನು ನಿರ್ಮಿಸಲಾಗಿದ್ದರೂ, ಅಲ್ಲಿವರೆಗೆ ಹೋಗಿ ಕಸ ಎಸೆಯಲು ಉದಾಸೀನತೆ ತೋರುವ ದುರ್ಗಾ ನಗರ ಕಾಲನಿಯ ಜನತೆ ಕಾಲೊನಿಯ ಮಕ್ಕಳು ತೆರಳುವ ಅಂಗನವಾಡಿಯ ಮುಂಭಾಗದಲ್ಲೇ ಎಸೆದು ಹೋಗುತ್ತಿರುವುದು ಜನತೆಯ ಪರಿಸರ ಮತ್ತು ಪುಟ್ಟ ಮಕ್ಕಳ ಬಗ್ಗೆ ಹೊಂದಿರುವ ಕಾಳಜಿಯನ್ನು ಎತ್ತಿ ತೋರಿಸುವಂತಿದೆ.

ತುಂಬಿದೆ ಕಸದ ಹೊಂಡ
ಎಲ್ಲೂರು ಗ್ರಾ.ಪಂ. ವತಿಯಿಂದ ಶಾಲಾ ಮೈದಾನದ ಬಳಿಯಲ್ಲಿ ವಾಟರ್‌ ಟ್ಯಾಂಕ್‌ ಬಳಿ ಸುಂದರವಾಗಿ ನಿರ್ಮಿಸಲಾಗಿರುವ ತ್ಯಾಜ್ಯದ ಗುಂಡಿ ಕೂಡಾ ತುಂಬಿ ತುಳುಕುತ್ತಿದೆ. ಅಲ್ಲಿ ಕೂಡಾ ಹೊಂಡದ ಹೊರ ಭಾಗದಲ್ಲೇ ಕಸವನ್ನು ಎಸೆದು ಹೋಗುತ್ತಿದ್ದು, ಎಸೆದು ಹೋದ ಕಸ ತ್ಯಾಜ್ಯಗಳನ್ನು ಬೆಕ್ಕು ಮತ್ತು ನಾಯಿಗಳು ಹೊರಗೆಳೆದು ಹಾಕುತ್ತಿವೆ. ಆ ಮೂಲಕ ಪರಿಸರ ಕುಲಗೆಡುತ್ತಿದೆ.

ರೋಗದ ಭೀತಿ 
ಅಂಗನವಾಡಿ ಮುಂಭಾಗದಲ್ಲಿ ಶೇಖರಣೆಯಾಗುತ್ತಿರುವ ತ್ಯಾಜ್ಯದಿಂದಾಗಿ ಎಳೆಯ ಮಕ್ಕಳಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ತ್ಯಾಜ್ಯದ ವಾಸನೆಯಿಂದ ಮಕ್ಕಳನ್ನು ಹೊರಗೆ ಬಿಡುವುದು ಅಸಾಧ್ಯವಾಗಿದೆ. ಇಲ್ಲಿನ ತ್ಯಾಜ್ಯವನ್ನು ಹಲವು ಬಾರಿ ಗ್ರಾ.ಪಂ. ಮೂಲಕವಾಗಿ, ಕೆಲವೊಮ್ಮೆ ಸ್ಥಳೀಯ ಕುಂಜೂರು ನ್ಪೋರ್ಟ್ಸ್ ಕ್ಲಬ್‌ ಮೂಲಕವಾಗಿ ಶುಚಿಗೊಳಿಸಲಾಗಿದ್ದರೂ  ಸ್ಥಳೀಯರು ಮತ್ತೆ ತ್ಯಾಜ್ಯ ತಂದು ಸುರಿಯುತ್ತಿದ್ದಾರೆ. ಇಲ್ಲಿ ಈಗ ಮತ್ತೆ ತ್ಯಾಜ್ಯ ಸಂಗ್ರಹಣೆಯಾಗಿರುವ ಬಗ್ಗೆ ಗ್ರಾಮ ಪಂಚಾಯತ್‌ಗೂ ಮಾಹಿತಿ ನೀಡಲಾಗಿದೆ.
–  ಜ್ಯೋತಿ,ದುರ್ಗಾ ನಗರ ಅಂಗನವಾಡಿ ಶಿಕ್ಷಕಿ

ವಿಲೇವಾರಿಗೆ ಕ್ರಮ 
ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣಾ ಘಟಕವನ್ನು ತೆರೆಯಲು ಚಿಂತನೆ ನಡೆಸಲಾಗಿದ್ದು, ಈ ಬಗ್ಗೆ ಸರಕಾರೀ ಸ್ಥಳ ಮಂಜೂರಾತಿ ಮಾಡುವಂತೆ ತಹಶೀಲ್ದಾರರಿಗೆ ಪತ್ರ ಬರೆಯಲಾಗುವುದು. ಸಂಸ್ಕರಣಾ ಘಟಕ ಮಂಜೂರಾದ ಬಳಿಕ ತ್ಯಾಜ್ಯವನ್ನು ಅಲ್ಲಿಗೆ ವರ್ಗಾಯಿಸಿ, ಅದನ್ನು ಸಂಪನ್ಮೂಲವಾಗಿ ಬಳಸಿ ಕೊಳ್ಳಲು ಅವಕಾಶವಿದೆ. ಕುಂಜೂರು ಅಂಗನವಾಡಿ ಬಳಿಯಲ್ಲಿ ಸಂಗ್ರಹವಾಗಿರುವ ತ್ಯಾಜ್ಯವನ್ನು ಕೂಡಲೇ ಶುಚಿಗೊಳಿಸಲು ಮತ್ತು ಅಲ್ಲಿ ಕಸ ಎಸೆಯದಂತೆ ನಿರ್ಬಂಧ ವಿಧಿಸಿ ಎಚ್ಚರಿಕೆ ಫಲಕ ಹಾಕಲಾಗುವುದು. 
– ಮಮತಾ ಶೆಟ್ಟಿ ,ಪಿಡಿಒ,ಎಲ್ಲೂರು 

ಟಾಪ್ ನ್ಯೂಸ್

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

PM Modi

PM Care Fund:ಈ ವರ್ಷ ದೇಣಿಗೆ ಕುಸಿತ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!

PUNJAB

Jagjit Singh Dallewal: ರೈತ ನಾಯಕನನ್ನು ಆಸ್ಪತ್ರೆಗೆ ದಾಖಲಿಸಲು ಡಿ.31ರ ಗಡುವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

1-can

Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ

5

Udupi: ತಂಡಗಳ ನಡುವೆ ಹಲ್ಲೆ; ಪ್ರಕರಣ ದಾಖಲು

4

Malpe: ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

14

Padubidri: ವೃದ್ಧ ದಂಪತಿಗೆ ಸುರಕ್ಷಿತ ಕಾಲು ಸಂಕದ ಭರವಸೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

1-can

Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ

saavu

ಮಂಜನಾಡಿ ಗ್ಯಾಸ್‌ ಸ್ಫೋ*ಟ ಪ್ರಕರಣ : ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ

1-tallur

ತಲ್ಲೂರು: ಪಿಕಪ್‌- ಕಾರು ಢಿಕ್ಕಿ

1-gooli

Gangolli:ಅರ್ಧ ಗಂಟೆಗೂ ಹೆಚ್ಚು ಭೀತಿ ಮೂಡಿಸಿದ ಗೂಳಿ ಕಾಳಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.