ಕರಾವಳಿಯಲ್ಲಿ ಹವಾ ಸೃಷ್ಟಿಸುತ್ತಿದೆ ಹುಲಿ ಮುಖ ವರ್ಣಿಕೆಯ ಹೆಲ್ಮೆಟ್ !
Team Udayavani, Jul 4, 2018, 2:49 PM IST
ಮಹಾನಗರ: ಈ ಹಿಂದೆ ಕರಾವಳಿ ಮೂಲದ ಕರಣ್ ಆಚಾರ್ಯ ಅವರು ರಚಿಸಿದ ಹನುಮಂತನ ಚಿತ್ರ ದೇಶದೆಲ್ಲೆಡೆ ಹೊಸ ಟ್ರೆಂಡ್ ಸೃಷ್ಟಿಸಿತ್ತು. ಇದೀಗ ಅದೇ ರೀತಿ ಕುತ್ತಾರ್ ಮೂಲದ ಯುವಕನೊಬ್ಬ ಹುಲಿ ಮುಖ ವರ್ಣಿಕೆಯ ಹೆಲ್ಮೆಟ್ ಧರಿಸಿ ಗಮನ ಸೆಳೆಯುತ್ತಿದ್ದಾನೆ.
ವಿದ್ಯಾರ್ಥಿಯಾದ ಆಕಾಂಕ್ಷ್ ಹುಲಿ ಮುಖ ಹೋಲುವ ಹೆಲ್ಮೆಟ್ ಧರಿಸಿ ಜನರನ್ನು ಆಕರ್ಷಿಸುತ್ತಿದ್ದಾರೆ. ಐಎಸ್‌ಒ ಮಾರ್ಕ್‌ನ ಹೆಲ್ಮೆಟ್ ಖರೀದಿಸಿದ ಆಕಾಂಕ್ಷ್ ಅವರು ಹುಲಿ ಬಣ್ಣದಂತೆ ಪೈಂಟ್ ಮಾಡಿ ಕೊಡಿ ಎಂದು ಕಲಾವಿದ ಉಮೇಶ್ ಬೋಳಾರ್ ಅವರಲ್ಲಿ ತಿಳಿಸಿದ್ದರು. ಆದರೆ ಉಮೇಶ್ ಅವರು ಧರ್ಮೋಫೋಮ್, ಗಮ್‌ಗಳನ್ನು ಬಳಸಿ ಹುಲಿಯ ಮುಖದಂತೆ ಹೆಲ್ಮೆಟ್‌ನ್ನು ಸಿದ್ಧಪಡಿಸಿದ್ದು, ಆರು ತಿಂಗಳ ಹಿಂದೆಯೇ ಹೆಲ್ಮೆಟ್ ತಯಾರಾಗಿದ್ದರೂ ಕೆಲವು ದಿನಗಳಿಂದ ಅದನ್ನು ಬಳಸುತ್ತಿದ್ದೇನೆ ಎಂದು ಆಕಾಂಕ್ಷ್ ಉದಯವಾಣಿ ಸುದಿನಕ್ಕೆ ತಿಳಿಸಿದ್ದಾರೆ. ಅಜ್ಜ ಹುಲಿ ವೇಷಾಧಾರಿಯಾಗಿದ್ದರಿಂದ ಚಿಕ್ಕಂದಿನಿಂದಲೇ ಹುಲಿ ಬಗ್ಗೆ ಆಕರ್ಷಣೆ ಇತ್ತು. ಹಾಗಾಗಿ ಹುಲಿ ಮುಖದಂತಹ ಹೆಲ್ಮೆಟ್ ಮಾಡಿಸಿಕೊಂಡೆಎನ್ನುವ ಆಕಾಂಕ್ಷ್ , ನಗರದ ಖಾಸಗಿಕಾಲೇಜೊಂದರಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ.
ಸಾಮಾಜಿಕ ಜಾಲತಾಣಗಳಲ್ಲಿ ಹುಲಿ ಹೆಲ್ಮೆಟ್ ವೈರಲ್
ಕೆಲವು ದಿನಗಳಿಂದ ವಾಟ್ಸಾಪ್, ಫೇಸ್‌ಬುಕ್‌ಗಳಲ್ಲಿ ಈ ಹುಲಿ ಹೆಲ್ಮೆಟ್ ನ ಫೋಟೋ ವೈರಲ್ ಆಗುತ್ತಿದೆ. ಆಕಾಂಕ್ಷ್ ಅವರು ಹೆಲ್ಮೆಟ್ ಧರಿಸಿ ಸಂಚರಿಸುತ್ತಿರುವುದನ್ನು ಕೆಲವರು ಅಚ್ಚರಿಯಿಂದ ನೋಡುತ್ತಿದ್ದರೆ ಇನ್ನೂ ಕೆಲವರು ಬೈಕ್ ನಿಲ್ಲಿಸಿ ಆ ಹೆಲ್ಮೆಟ್ ಧರಿಸಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.
ಪರಿಶೀಲಿಸಿ ಕ್ರಮ
ವಾಹನಗಳ ಆಲ್ಟ್ರೇಶನ್ ಬಗ್ಗೆ ಈ ಹಿಂದೆ ಕೇಳಿದ್ದೆ. ಆದರೆ ಹೆಲ್ಮೆಟ್ ಆಲ್ಟ್ರೇಶನ್ ಬಗ್ಗೆ ಯಾವ ರೀತಿ ಕ್ರಮ ತೆಗೆದುಕೊಳ್ಳಬಹುದು ಎಂದು ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ.
– ಮಂಜುನಾಥ ಶೆಟ್ಟಿ
ಸಂಚಾರಿ ವಿಭಾಗದ ಎಸಿಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.