ಮನೆಮಂದಿಗೆ ಬೇಡವಾದಳೆ ತಾಯಿ?! ಮಹಿಳೆಯನ್ನು ಸೇರಿಸಿಕೊಳ್ಳದ ಕುಟುಂಬ
Team Udayavani, Jul 5, 2018, 6:00 AM IST
ಉಡುಪಿ: ಈಕೆಯ ವಯಸ್ಸು 47ವರ್ಷ.ಪತಿ,ಇಬ್ಬರು ಮಕ್ಕಳಿದ್ದಾರೆ.ಸಹೋದರ, ಸಹೋದರಿಯರೂ ಇದ್ದಾರೆ. ಆದರೆ ಈಕೆ ಈಗ “ಅನಾಥೆ’.ಸಮಾಜ ಸೇವಕಿ ಯೋರ್ವರ ಮನೆಯಲ್ಲಿ ವಾಸ,ಪೊಲೀಸ್ ಠಾಣೆಗೆ ಅಲೆದಾಟ.ಮನೆಗೆ ಸೇರಿಸಿಕೊಳ್ಳಿ ಎಂದು ಗೋಗರೆದರೂ ಕುಟುಂಬ ಕಿವಿ ಕೊಡುತ್ತಿಲ್ಲ.ಕಣ್ಣೆತ್ತಿ ನೋಡುತ್ತಿಲ್ಲ.
ಮಂದಾರ್ತಿ ಸಮೀಪದ ಮಹಿಳೆಯೊಬ್ಬರು ಮನೆಬಿಟ್ಟು ಬಂದು ನಾಲ್ಕು ತಿಂಗಳಾಯಿತು. ಈಕೆ ಮಾನಸಿಕವಾಗಿ ಸರಿಯಿಲ್ಲ ಎಂಬುದು ಮನೆಯವರ ದೂರು. ಉಡುಪಿಗೆ ಆಗಮಿಸಿದ್ದ ಈಕೆಯ ಕುರಿತು ಸಾರ್ವಜನಿಕರು ಸಮಾಜಸೇವಕ ವಿಶು ಶೆಟ್ಟಿ ಅವರಿಗೆ ಮಾಹಿತಿ ನೀಡಿದ್ದರು. ಅವರು ಪೊಲೀಸರು ಮತ್ತು ಮಹಿಳಾ ಸಾಂತ್ವನ ಕೇಂದ್ರದ ಸಹಕಾರದಲ್ಲಿ ಚಿಕಿತ್ಸೆ ನೀಡಿ ಆಕೆ ಗುಣಮುಖವಾದರು. ಈ ಬಗ್ಗೆ ಮನೆಯವರಿಗೆ ಮಾಹಿತಿ ನೀಡಲಾಯಿತು. ಆದರೆ ಮನೆಯವರು ಈಕೆಯನ್ನು ಸೇರಿಸಿಕೊಳ್ಳಲು ಸಿದ್ಧರಿಲ್ಲ. ಪರಿಪರಿಯಾಗಿ ಮನವರಿಕೆ ಮಾಡಿದರೂ ಪ್ರಯೋಜನವಾಗದೆ ಇದ್ದಾಗ ಈಗ ಪೊಲೀಸರಿಗೆ ಮನವಿ ನೀಡಲಾಗಿದೆ.
ಪೊಲೀಸರು ಮನೆಯವರನ್ನು ವಿಚಾರಿಸಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಪ್ರಸ್ತುತ ಈ ಮಹಿಳೆಗೆ ಸಮಾಜ ಸೇವಕಿಯೋರ್ವರು ತಮ್ಮ ಮನೆಯಲ್ಲಿ ಆಶ್ರಯ ಕಲ್ಪಿಸಿದ್ದಾರೆ. ಮಹಿಳೆಗೆ ಕಾಲೇಜು ವಿದ್ಯಾಭ್ಯಾಸ ಮಾಡುವ ಇಬ್ಬರು ಹೆಣ್ಮಕ್ಕಳಿದ್ದಾರೆ. ಪತಿ ಬೆಂಗಳೂರಿನಲ್ಲಿ ಉದ್ಯೋಗಿ. ಸಹೋದರ, ಸಹೋದರಿಯರು, ಇತರ ಸಂಬಂಧಿಗಳು ಊರಿನಲ್ಲೇ ಇದ್ದಾರೆ. ಆದರೆ ಯಾರೊಬ್ಬರು ಕೂಡ ಮಹಿಳೆಯನ್ನು ಸೇರಿಸಿಕೊಳ್ಳಲು ಮುಂದಾಗುತ್ತಿಲ್ಲ. ಕಾನೂನು ಪ್ರಕಾರ ಮನೆಯವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಅವಕಾಶವಿದೆ. ಅದನ್ನು ಮಾಡುತ್ತೇವೆ ಎಂದಿದ್ದಾರೆ ಪೊಲೀಸರು.
ಮಹಿಳೆಯನ್ನು ನಿರ್ಲಕ್ಷಿಸಿದ ಕುಟುಂಬದ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ಮನವಿ ಸಲ್ಲಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕರಾವಳಿಯಲ್ಲಿ ಕಾಶ್ಮೀರಿ ಕೇಸರಿ ಬೆಳೆದ ಟೆಕ್ಕಿಗಳು; ಹೊಸ ಪ್ರಯೋಗದಲ್ಲಿ ಮೊದಲ ಯಶಸ್ಸು !
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
ಆನ್‌ಲೈನ್‌ನಲ್ಲಿ ಅಧಿಕ ಲಾಭಾಂಶದ ಆಮಿಷ: ಬ್ಯಾಂಕ್ ಮ್ಯಾನೇಜರ್‌ಗೆ ಲಕ್ಷಾಂತರ ರೂ. ವಂಚನೆ
Udupi: ಹೂಡೆ ಬೀಚ್‌ನಲ್ಲಿ ಪ್ರವಾಸಿಗರ ಮೇಲೆ ಸ್ಥಳೀಯರಿಂದ ಹಲ್ಲೆ
Hiriydaka: ಒಟಿಪಿ ನೀಡಿ 5 ಲಕ್ಷ ರೂ. ಕಳೆದುಕೊಂಡ ಯುವತಿ
MUST WATCH
ಹೊಸ ಸೇರ್ಪಡೆ
Gadaga: ನರಗುಂದ ಬಳಿ ಭೀಕರ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವು
Virtual ; ಟರ್ಕಿಯಯಲ್ಲಿ ವರ, ಹಿಮಾಚಲದಲ್ಲಿ ವಧು : ಆನ್ ಲೈನ್ ನಲ್ಲೇ ನಿಖ್ಹಾ!
Deepfake: ಇನ್ಫಿ ಮೂರ್ತಿ, ಅಂಬಾನಿ ಡೀಪ್‌ಫೇಕ್ ವಿಡಿಯೋ ಬಳಸಿ 82.7 ಲಕ್ಷ ರೂ. ವಂಚನೆ
Explainer-US Result: ಅಧ್ಯಕ್ಷ ಗಾದಿ ಯಾರಿಗೆ; ಟ್ರಂಪ್ ಮುನ್ನಡೆ, 7 ರಾಜ್ಯಗಳು ನಿರ್ಣಾಯಕ!
Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.