ಯೋಜನೆಗಳನ್ನು ಪಡೆದುಕೊಳ್ಳುವಲ್ಲಿ ಕೊರಗ ಸಮುದಾಯ ಹಿಂದೇಟು


Team Udayavani, Jul 5, 2018, 7:50 AM IST

0407klre1.jpg

ಕೋಟೇಶ್ವರ: ಕೊರಗ ಸಮುದಾಯದ ಅಭಿವೃದ್ಧಿಗೆ ಸರಕಾರ ಸಾಕಷ್ಟು ಯೋಜನೆಗಳನ್ನು ಅನುಷ್ಠಾನ ಗೊಳಿಸಿದೆ. ಆದರೆ ಅದನ್ನು ಪಡೆದು ಕೊಳ್ಳುವಲ್ಲಿ ಸಮುದಾಯ ಹಿಂದೇಟು ಹಾಕುತ್ತಿದೆ. ಶಿಕ್ಷಣದ ಕೊರತೆ, ಕೀಳರಿಮೆ, ಅಂಜಿಕೆಯಿಂದ ಯುವ ಜನತೆ ಕೂಡ ಮುಂದೆ ಬರುತ್ತಿಲ್ಲ. ಇದನ್ನು ಗಮನಿಸಿದ ಜಿಲ್ಲಾಡಳಿತ ಕೊರಗ ಸಮುದಾಯಕ್ಕೆ ಮನೋಸ್ಥೈರ್ಯ ನೀಡುವ ನಿಟ್ಟಿನಲ್ಲಿ ಆಯ್ದ ಗ್ರಾ.ಪಂ. ಮಟ್ಟದಲ್ಲಿ ಪ್ರತೀ ವಾರ ಸಭೆ ನಡೆಸಿ ಸಮಸ್ಯೆಗಳ ಪರಿಹಾರಕ್ಕೆ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಮುಂದಾಗಿದೆ ಎಂದು  ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಹೇಳಿದರು.

ಗೋಪಾಡಿ ಗ್ರಾ.ಪಂ., ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ,  ಕೊರಗ ಸಂಘಟನೆ ಉಡುಪಿ ಇವರ ಆಶ್ರಯದಲ್ಲಿ ರೋಶನಿ ಧಾಮದಲ್ಲಿ  ಜು. 4ರಂದು ನಡೆದ ಕೊರಗ ಸಮುದಾಯದ ಯುವ ಜನತೆಗೆ ಶೈಕ್ಷಣಿಕ ಹಾಗೂ ಆರೋಗ್ಯ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೊರಗ ಸಮುದಾಯದ ವಿದ್ಯಾರ್ಥಿಗಳು 10ನೇ ತರಗತಿಗೆ ಮುಂಚೆ ಶಾಲೆ ಬಿಡುವುದು ಸರಿಯಲ್ಲ. ಕನಿಷ್ಠ 10ನೇ ತರಗತಿಯ ತನಕವಾದರೂ ಓದಬೇಕು. ಇವತ್ತು ನಿಮ್ಮಲ್ಲಿಯ ಕೌಶಲ್ಯ ಅಭಿವೃದ್ಧಿಗೆ ವಿಫುಲ ಅವಕಾಶಗಳಿವೆ. ಅವುಗಳನ್ನು ಸದುಪಯೋಗ ಮಾಡಿಕೊಳ್ಳಿ ಎಂದರು.

ನಿಮ್ಮ ಸಮುದಾಯದ ಕಲೆ, ಕರಕುಶಲ ಕೌಶಲಗಳು ಗೌರವಾರ್ಹವಾದುದು. ಅದನ್ನು ಸದ್ಬಳಕೆ ಮಾಡಿಕೊಳ್ಳಲು ಅವಕಾಶ ಗಳಿವೆ. ಕೊರಗ ಸಮುದಾಯದ  ವಿಚಾರದಲ್ಲಿ ಗೋಪಾಡಿ ಗ್ರಾ.ಪಂ.  ವಿಶೇಷ ಆಸಕ್ತಿ ವಹಿಸಿದೆ ಎಂದರು.

ಕೊರಗರು ಮುಗª ಜನರು ಕಾರ್ಯಕ್ರಮ ಉದ್ಘಾಟಿಸಿದ  ಜಿ.ಪಂ.ಸದಸ್ಯೆ ಶ್ರೀಲತಾ ಸುರೇಶ ಶೆಟ್ಟಿ ಮಾತನಾಡಿ, ಕೊರಗ ಸಮುದಾಯದ ಜನ ಬಹಳ ಮುಗ್ಧರು. ಇದನ್ನು ದುರುಪಯೋಗ ಮಾಡಿಕೊಳ್ಳುವ ಅಪಾಯವೂ ಇದೆ. ಅಂಜಿಕೆ, ಶಿಕ್ಷಣಕ್ಕೆ ಪ್ರಾಮುಖ್ಯತೆ ಕೊಡದೆ ಇರುವುದು, ಜಾಗೃತಿ ಕೊರತೆಯೂ ಅವರ ಪ್ರಗತಿಯ ಹಿನ್ನೆಡೆಗೆ ಕಾರಣ ಎಂದರು.

ಗ್ರಾ.ಪಂ.ಅಧ್ಯಕ್ಷೆ ಸರಸ್ವತಿ ಪುತ್ರನ್‌ ಅಧ್ಯಕ್ಷತೆ ವಹಿಸಿ ಮತನಾಡಿ,  ಗೋಪಾಡಿ ಗ್ರಾ.ಪಂ. ಕೊರಗ ಸಮುದಾಯದ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡಿದೆ. ಕೊರಗ ಕಾಲೊನಿಗಳಿಗೆ ಭೇಟಿ ನೀಡಿ ಅವರ ಸಮಸ್ಯೆ ಆಲಿಸಿದ್ದೇವೆ. ಸಾಧ್ಯವಾದಷ್ಟು ಪರಿಹಾರ ಮಾಡುವ ಕೆಲಸವೂ ಆಗಿದೆ. ಗೋಪಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ  8,9 ನೇ ತರಗತಿಗೆ ಶಾಲೆ ಬಿಟ್ಟ ಕೊರಗ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಟ್ಯೂಷನ್‌ ನೀಡಿ ಎಸೆಸೆಲ್ಸಿ ಪರೀಕ್ಷೆ ಯನ್ನು ಬರೆಸುವ ಕಾರ್ಯ ಮಾಡುತ್ತಿದ್ದೇವೆ. ಇದಕ್ಕೆ ಒಬ್ಬರು ನುರಿತ ಶಿಕ್ಷಕರ ಆವಶ್ಯಕತೆ ಇದೆ ಎಂದರು.

ಜಿ.ಪಂ. ಕಾರ್ಯನಿರ್ವಹಣಾ ಧಿಕಾರಿ ಶಿವಾನಂದ ಕಾಪಸಿ, ತಾ.ಪಂ. ಸದಸ್ಯೆ ವೈಲೆಟ್‌ ಬರೆಟ್ಟೋ, ಗ್ರಾ.ಪಂ. ಉಪಾಧ್ಯಕ್ಷೆ ಕಲ್ಪನಾ ಭಾಸ್ಕರ, ಕೊರಗ ಸಂಘಟನೆ ಅಧ್ಯಕ್ಷ ಗಣೇಶ, ಗ್ರಾ.ಪಂ.ಸದಸ್ಯೆ ಬಬಿತಾ,  ಸಂಪನ್ಮೂಲ ವ್ಯಕ್ತಿ ನರೇಂದ್ರ ಕುಮಾರ್‌ ಕೋಟ, ಸಮಗ್ರ ಗಿರಿಜನ ಯೋಜನೆಯ ಇಲಾಖಾ ಅಧಿಕಾರಿ ಉಪಸ್ಥಿತರಿದ್ದರು.

ಸರಸ್ವತಿ ಪುತ್ರನ್‌ ಸ್ವಾಗತಿಸಿ, ಕೊರಗ ಸಂಘಟನೆಯ ಗಣೇಶ ಬಾರಕೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ  ಗಣೇಶ ಕಾರ್ಯ ಕ್ರಮ ನಿರ್ವಹಿಸಿದರು.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ganesha Chaturthi: ಆರೂರು: 35ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ… ವಿವಿಧ ಕಾರ್ಯಕ್ರಮ

ಆರೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ: ಸೆ.9ರಂದು ಪ್ರಥಮ ವರ್ಷದ ಲೋಬಾನ ಸೇವೆ ಹುಲಿವೇಷ ಕುಣಿತ

16-kumbashi

Ganesh Chaturthi; ಆನೆಗುಡ್ಡೆ: ಸಂಭ್ರಮದ ಶ್ರೀ ವಿನಾಯಕ ಚತುರ್ಥಿ; ಹರಿದು ಬಂದ ಭಕ್ತ ಸಮೂಹ

ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !

Kaup ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !

Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ

Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ

Udupi ಗೀತಾರ್ಥ ಚಿಂತನೆ-29 ಭಗವದವತಾರದ ಉದ್ದೇಶವೇನು?

Udupi ಗೀತಾರ್ಥ ಚಿಂತನೆ-29; ಭಗವದವತಾರದ ಉದ್ದೇಶವೇನು?

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.