ಎಮಿರೆಟ್ಸ್ ನಿರ್ಧಾರ ಬದಲು
Team Udayavani, Jul 5, 2018, 6:00 AM IST
ದುಬೈ/ನವದೆಹಲಿ: ವಿಮಾನ ಸೇವೆಯಲ್ಲಿ “ಹಿಂದೂ ಊಟ’ ನೀಡುವುದಿಲ್ಲ ಎಂದು ಘೋಷಿಸಿದ್ದ ದುಬೈನ ಎಮಿರೆಟ್ಸ್ ವಿಮಾನ ಸಂಸ್ಥೆ ತನ್ನ ನಿಲುವು ಬದಲಾಯಿಸಿದೆ. ಜತೆಗೆ ಯಥಾ ಸ್ಥಿತಿಯನ್ನು ಮುಂದುವರಿಸುವುದಾಗಿ ಬುಧವಾರ ಘೋಷಣೆ ಮಾಡಿದೆ. ಗ್ರಾಹಕರು ಸೂಚಿಸಿದ ಅಭಿಪ್ರಾಯ ಪ್ರಕಾರ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿತ್ತು.
“ಹಿಂದೂ ಗ್ರಾಹಕರು ಟಿಕೆಟ್ ಕಾಯ್ದಿರಿಸುವ ಸಂದರ್ಭದಲ್ಲಿ ಭಾರತದ ಇತರ ಪ್ರಾಂತೀಯವಾಗಿ ಲಭ್ಯವಿರುವ ಸಸ್ಯಾಹಾರ ಅಥವಾ ಮಾಂಸಾಹಾರ ಊಟ ಕಾಯ್ದಿರಿಸಬಹುದು ಎಂದು ಹೇಳಿದೆ. ಗ್ರಾಹಕರ ಆಯ್ಕೆ ಮತ್ತು ಆರೋಗ್ಯವನ್ನು ಅನುಸರಿಸಿಕೊಂಡು ಊಟದ ಅಗತ್ಯವನ್ನು ಪೂರೈಸಲಿದೆ. ಸಸ್ಯಾಹಾರಿಗಳಿಗಾಗಿ ಜೈನ್ ಸಮುದಾಯದ ಆಹಾರ ವ್ಯವಸ್ಥೆಯೂ ಇದೆ. ಜತೆಗೆ ಬೀಫ್ ಅಥವಾ ಹಂದಿ ಮಾಂಸ ರಹಿತ ಮಾಂಸಾಹಾರ ಆಹಾರದ ಪೂರೈಕೆ ಮುಂದು ವರಿಯಲಿದೆ ಎಂದಿತ್ತು.
ಎಮಿರೆಟ್ಸ್ ವಿಮಾನ ಯಾನ ಸಂಸ್ಥೆ ಮಂಗಳವಾರ ಘೋಷಣೆ ಮಾಡಿದ ಈ ಕ್ರಮ ಹಲವಾರು ಮಂದಿಯ ಅಚ್ಚರಿಗೆ ಕಾರಣವಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನವದೆಹಲಿಯ ಟ್ರಾವೆಲ್ ಏಜೆಂಟ್ “ವಿಮಾನದಲ್ಲಿ ಪ್ರಯಾಣಿಸುವ ಎಲ್ಲರಿಗೂ ಅಲ್ಲಿನ ಆಹಾರ ವ್ಯವಸ್ಥೆ ಗೊತ್ತಿರುವುದಿಲ್ಲ. ಒಟ್ಟು ಪ್ರಯಾಣಿಕರ ಪೈಕಿ ಬೆರಳೆಣಿಕೆ ಮಂದಿ ಮಾತ್ರ ಯಾವತ್ತೂ ವಿಮಾನದಲ್ಲಿಯೇ ಪ್ರಯಾಣಿಸುತ್ತಾರೆ. ಅಂಥವರಿಗೆ ಮಾತ್ರ ಈ ವ್ಯತ್ಯಾಸ ಗೊತ್ತಾಗುತ್ತದೆ. ಕೆಲವರು ಮಾಂಸಾಹಾರಿಗಳಾಗಿದ್ದರೂ, ಬೀಫ್ ಆಯ್ಕೆ ಮಾಡಿಕೊಳ್ಳುವುದಿಲ್ಲ. ಇದೊಂದು ಗೊಂದಲಕ್ಕೆ ಕಾರಣವಾಗಲಿದೆ’ ಎಂದು ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
PM Modi ಭೇಟಿಯಾಗಿ ವಿಶೇಷ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ
Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು
Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi: ಸ್ಥಾಪಕರು ಜೀವನ ಪಾಠ ಮಾಡಿದ್ದ ಎಂಜಿಎಂ ಕಾಲೇಜಿಗೆ ಅಮೃತೋತ್ಸವ
Kollur: ದ್ವಿಪಥ ರಸ್ತೆ ನಿರ್ಮಾಣಕ್ಕೆ ಅಂಗಡಿ ಮುಂಗಟ್ಟು ತೆರವು ಆರಂಭ
Kundapura: ವಿಶ್ವ ವಿಖ್ಯಾತ ಮರವಂತೆಯಲ್ಲಿ ಬಸ್ ನಿಲ್ದಾಣವೇ ಇಲ್ಲ !
”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್
Puttur: ಗ್ರಾಮ ಚಾವಡಿಗೆ 150 ವರ್ಷ ಹಳೆಯ ಕಟ್ಟಡವೇ ಗತಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.