ಕುಮಾರಮಂಗಲ ನಿವೇಶನ: ಮೂಲ ದಾಖಲೆಗಳೇ ಇಲ್ಲ!
Team Udayavani, Jul 5, 2018, 2:30 AM IST
ಸವಣೂರು: ಪುಣ್ಚಪ್ಪಾಡಿ ಗ್ರಾಮದ ಕುಮಾರಮಂಗಲದಲ್ಲಿ ಗ್ರಾ.ಪಂ. ಗುರುತಿಸಿದ ನಿವೇಶನದ ಗಡಿಗುರುತು ಮಾಡದೇ ಫಲಾನುಭವಿಗಳಿಗೆ ಸಮಸ್ಯೆಯಾಗುತ್ತಿದ್ದು, ಗಡಿ ಗುರುತು ಮಾಡಲು ಸರ್ವೇ ಇಲಾಖೆ ಬಳಿ ಕುಮಾರಮಂಗಲ ನಿವೇಶನದ ದಾಖಲೆಗಳ ನಕಾಶೆಯೇ ಇಲ್ಲ ಎಂಬ ಮಾಹಿತಿ ಲಭಿಸಿದೆ. ಗಡಿ ಗುರುತು ಮಾಡದಿರುವ ಕಾರಣ ಫಲಾನುಭವಿಗಳಿಗೆ ಸಮಸ್ಯೆಯಾಗುತ್ತಿರುವ ಕುರಿತು ಸುದಿನ ಜೂ. 25ರಂದು ವರದಿ ಪ್ರಕಟಿಸಿ, ಇಲಾಖೆಯನ್ನು ಎಚ್ಚರಿಸಿತ್ತು.
ಈ ಸಂಬಂಧ ಗ್ರಾ.ಪಂ. ಕೂಡ ತಾ.ಪಂ., ಕಂದಾಯ ಇಲಾಖೆ, ಸಹಾಯಕ ಆಯುಕ್ತರ ಕಚೇರಿ ಹಾಗೂ ಸರ್ವೇ ಇಲಾಖೆಯನ್ನು ಸಂಪರ್ಕಿಸಿ, ಸಮಸ್ಯೆ ಪರಿಹರಿಸಲು ಪ್ರಯತ್ನಿಸಿದೆ. ಹಳೆ ನಕಾಶೆ ಸಿಗದಿರುವುದರಿಂದ ಹೊಸದಾಗಿ ನಕಾಶೆ ತಯಾರಿಸುವ ಸಲುವಾಗಿ ತಾ.ಪಂ.ಗೆ ಮನವಿ ಮಾಡಲಾಗಿದೆ. ಕಡತವು ಅಲ್ಲಿಂದ ಕಡಬ ತಹಶೀಲ್ದಾರ್ ಕಚೇರಿಗೆ ರವಾನೆಯಾಗಲಿದ್ದು, ಆಮೇಲಷ್ಟೇ ಗಡಿಗುರುತು ನಡೆಯಬೇಕಿದೆ.
ಫಲಾನುಭವಿಗಳ ತೊಳಲಾಟ
ನಿವೇಶನ ನೀಡದೆ ಹಕ್ಕುಪತ್ರ ನೀಡಿದರೆ ಮನೆ ಕಟ್ಟುವುದಾದರೂ ಹೇಗೆ? ಹಲವು ವರ್ಷಗಳ ಬಳಿಕ ಹಕ್ಕುಪತ್ರ ಕೈಸೇರಿದೆ. ಗಡಿಗುರುತು ಮಾಡದೆ ತಮಗೆ ಯಾವ ನಿವೇಶನ ಎಂದು ತಿಳಿಯುತ್ತಿಲ್ಲ. ಸಮಸ್ಯೆ ಪರಿಹಾರವಾದರೆ 24 ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ.
ಸೂಕ್ತ ದಾಖಲೆ
ನಿವೇಶನದ ಸೂಕ್ತ ದಾಖಲೆ ರಚನೆ ಮಾಡಿಕೊಡುವಂತೆ ಗ್ರಾ.ಪಂ.ಗೆ ತಿಳಿಸಲಾಗಿದ್ದು, ಕಡತ ವಿಲೇವಾರಿ ಕೆಲಸಗಳು ನಡೆಯುತ್ತಿವೆ. ದಾಖಲೆ ತಯಾರಾದ ಕೂಡಲೇ ಎಲ್ಲ ಫಲಾನುಭವಿಗಳಿಗೂ ಹಂಚಿಕೆಯಾದ ನಿವೇಶನದ ಗಡಿಗುರುತು ಮಾಡಲಾಗುವುದು ಎಂದು ಸರ್ವೇಯರ್ ಶಿವಣ್ಣ ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.