ಯಕ್ಷಗಾನ, ಭೂತಾರಾಧನೆಯ ಗ್ರಂಥ ಬರೆದ ಜಪಾನ್ ವಿದ್ವಾಂಸ !
Team Udayavani, Jul 5, 2018, 3:55 AM IST
ಮಂಗಳೂರು: ಯಕ್ಷಗಾನವನ್ನು ವಿಶ್ವಾದ್ಯಂತ ಪಸರಿಸಬೇಕು ಎನ್ನುವುದು ವ್ಯಾಪಕವಾಗಿರುವಂತೆಯೇ ಜಪಾನಿನ ವಿದ್ವಾಂಸ ಪ್ರೊ| ಸುಮಿಯೊ ಮೊರಿಜಿರಿ ಅವರು ಯಕ್ಷಗಾನ ಹಾಗೂ ಭೂತಾರಾಧನೆ ಕುರಿತು ಅಧ್ಯಯನ ನಡೆಸಿ ಜಪಾನಿ ಭಾಷೆಯಲ್ಲಿ ಪುಸ್ತಕ ಬರೆದು ಗಮನ ಸೆಳೆದಿದ್ದಾರೆ. ತೆಂಕುತಿಟ್ಟು ಯಕ್ಷಗಾನ ವೇಷಗಳ ಪ್ರತಿಕೃತಿಗಳ ವಸ್ತು ಸಂಗ್ರಹಾಲಯವನ್ನೂ ಜಪಾನ್‌ನ ವಾಸಿದಾ ವಿವಿಯಲ್ಲಿ ಸ್ಥಾಪಿಸಿದ್ದಾರೆ.
ಸುಮಿಯೊ ಮೊರಿಜಿರಿ ಅವರು ಜಪಾನ್ ನ ವಾಸಿದಾ ವಿ.ವಿ.ಯ ನಿವೃತ್ತ ಪ್ರಾಧ್ಯಾಪಕರು. ‘ವಾಸಿದಾ ನಾಟಕದ ಮನೆ’ ಎಂಬ ಕೇಂದ್ರ ಸ್ಥಾಪಿಸಿ ಅದರ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. 1994ರಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇರಿದ ಮೊರಿಜಿರಿ ಉತ್ತರ ಕರ್ನಾಟಕದ ಜಾನಪದ ಕಲೆಗಳ ಅಧ್ಯಯನ ನಡೆಸಿದರು. 1996ರಲ್ಲಿ ಮಂಗಳೂರು ವಿ.ವಿ. ಕನ್ನಡ ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇರಿದ ಬಳಿಕ ಕರಾವಳಿಯ ಜಾನಪದ, ಕಲೆ, ಸಂಸ್ಕೃತಿ ಬಗ್ಗೆ ಅಧ್ಯಯನ ನಡೆಸಿದ್ದಾರೆ.
ಮಂಗಳೂರಿನಲ್ಲಿ ಸಮ್ಮಾನ
ಸೋಮೇಶ್ವರ ಉಚ್ಚಿಲದ ಕಲಾ ಗಂಗೋತ್ರಿ ಯಕ್ಷಗಾನ ಕೇಂದ್ರದ ವತಿಯಿಂದ ಜು. 7ರಂದು ಸಂಜೆ 4ಕ್ಕೆ ಮಂಗಳೂರಿನ ಡಾನ್ ಬಾಸ್ಕೊ ಸಭಾಂಗಣದಲ್ಲಿ ಪ್ರೊ| ಸುಮಿಯೊ ಮೊರಿಜಿರಿ ಅವರಿಗೆ ಸಮ್ಮಾನ ಸಮಾರಂಭವನ್ನು ಆಯೋಸಲಾಗಿದೆ. ಹಂಪಿ ವಿ.ವಿ.ಯ ವಿಶ್ರಾಂತ ಕುಲಪತಿ ಪ್ರೊ| ಬಿ.ಎ. ವಿವೇಕ್ ರೈ ಅಧ್ಯಕ್ಷತೆ ವಹಿಸಲಿದ್ದು, ಹಾವೇರಿಯ ಜಾನಪದ ವಿ.ವಿ. ವಿಶ್ರಾಂತ ಕುಲಪತಿ ಪ್ರೊ| ಕೆ. ಚಿನ್ನಪ್ಪ ಗೌಡ ಅತಿಥಿಯಾಗಿ ಭಾಗವಹಿಸುವರು. ಹೊಸದಿಲ್ಲಿಯ JNU ಕನ್ನಡ ಪೀಠ ಅಧ್ಯಕ್ಷ ಪ್ರೊ| ಪುರುಷೋತ್ತಮ ಬಿಳಿಮಲೆ ಅಭಿನಂದನ ಭಾಷಣ ಮಾಡುವರು. ಸಂಜೆ 4ಕ್ಕೆ ಶ್ರೀ ದುರ್ಗಾ ಮಕ್ಕಳ ಮೇಳ ಕಟೀಲು ಇವರಿಂದ ಪೂರ್ವರಂಗ ಪ್ರದರ್ಶನ, ಸಂಜೆ 5.15ಕ್ಕೆ ಸಭಾ ಕಾರ್ಯಕ್ರಮ, ಸಂಜೆ 6.30ರಿಂದ ಯಕ್ಷಗಾನ ಕೇಂದ್ರ ಉಡುಪಿ ಇವರಿಂದ ಬನ್ನಂಜೆ ಸಂಜೀವ ಸುವರ್ಣ ನಿರ್ದೇಶನದಲ್ಲಿ ಬಡಗುತಿಟ್ಟು ಯಕ್ಷಗಾನ ‘ವಾಲಿ ಮೋಕ್ಷ’ ಪ್ರದರ್ಶನಗೊಳ್ಳಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕಲಾ ಗಂಗೋತ್ರಿ ಅಧ್ಯಕ್ಷ ಯು. ಸತೀಶ ಕಾರಂತ ತಿಳಿಸಿದರು. ದಯಾನಂದ ಪಿಲಿಕೂರು, ಕೆ.ಎ. ಶೆಟ್ಟಿ, ಕೃಷ್ಣಪ್ಪ ಕೋಟೆಕಾರ್, ಕೆ. ಸದಾಶಿವ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.