ಜಿಯೋ ಫೈಬರ್ ಬ್ರಾಡ್ಬಾಂಡ್ ಆರಂಭ: ಮುಕೇಶ್ ಅಂಬಾನಿ ಘೋಷಣೆ
Team Udayavani, Jul 5, 2018, 11:41 AM IST
ಮುಂಬಯಿ : ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಮುಕೇಶ್ ಅಂಬಾನಿ ಅವರು ಗೃಹ ಮತ್ತು ಉದ್ಯಮ ಸಂಸ್ಥೆಗಳಿಗಾಗಿ ಜಿಯೋ ಫೈಬರ್ ಬ್ರಾಡ್ ಬ್ಯಾಂಡ್ ಸೇವೆಯನ್ನು ಆರಂಭಿಸಿದ್ದಾರೆ.
ಈ ಮೂಲಕ ಆರ್ಐಎಲ್ ಫೈಬರ್-ಟು ದ -ಹೋಮ್ ಸೇವಾ ಕ್ಷೇತ್ರಕ್ಕೆ ಕಾಲಿಟ್ಟಂತಾಗಿದೆ. ಕಳೆದ ವರ್ಷದಿಂದ ಈಚೆಗೆ ರಿಲಯನ್ಸ್ ಜಿಯೋ ಗ್ರಾಹಕರ ಸಂಖ್ಯೆ ದುಪ್ಪಟ್ಟಾಗಿದ್ದು ಅದೀಗ 21.5 ಕೋಟಿ ಆಗಿದೆ ಎಂದು ಮುಕೇಶ್ ಅಂಬಾನಿ ಇದೇ ವೇಳೆ ಪ್ರಕಟಿಸಿದರು.
ಮುಂಬಯಿಯಲ್ಲಿ ನಡೆದ ಆರ್ಐಎಲ್ನ 41ನೇ ಎಜಿಎಂನಲ್ಲಿ ಭಾಷಣ ಮಾಡುತ್ತಾ ಮುಕೇಶ್ ಅಂಬಾನಿ ಈ ವಿಷಯವನ್ನು ಪ್ರಕಟಿಸಿದರು. ರಿಲಯನ್ಸ್ ಈಗ ತನ್ನ ಸುವರ್ಣ ದಶಕದಲ್ಲಿದೆ ಎಂದವರು ಹೇಳಿದರು. ರಿಲಯನ್ಸ್ ಜಿಯೋ ಡೇಟಾ ಬಳಕೆ 240 ಕೋಟಿ ಜಿಬಿ ಆಗಿರುವುದನ್ನು ಕಂಡಿದೆ ಎಂದವರು ಹೇಳಿದರು.
“ದೇಶದ 1,100 ನಗರಗಳಲ್ಲಿ ಹರಡಿಕೊಂಡಿರುವ ಮನೆಗಳಿಗೆ ಮತ್ತು ಉದ್ಯಮ ಸಂಸ್ಥೆಗಳಿಗೆ ಇದೀಗ ನಾವು ಫೈಬರ್ ಕನೆಕ್ಟಿವಿಟಿ ಯನ್ನು ಕಲ್ಪಿಸುತ್ತಿದ್ದೇವೆ’ ಎಂದು ಮುಕೇಶ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.