ಸಿಎಂ ಎಚ್‌ಡಿಕೆ ಸಮ್ಮಿಶ್ರ ಬಜೆಟ್‌;ರೈತ ಸಾಲ ಮನ್ನಾ:ಇಲ್ಲಿದೆ ಹೈಲೆಟ್ಸ್


Team Udayavani, Jul 5, 2018, 12:05 PM IST

hd-kumarswamy.jpg

ಬೆಂಗಳೂರು: ಮುಖ್ಯಮಂತ್ರಿ,ಹಣಕಾಸು ಖಾತೆ ಹೊಂದಿರುವ ಎಚ್‌.ಡಿ.ಕುಮಾರಸ್ವಾಮಿ ಅವರು ಗುರುವಾರ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್‌ ಮಂಡಿಸಿದರು. ಪ್ರಮುಖವಾಗಿ ಷರತ್ತುಗಳೊಂದಿಗೆ  ರೈತ ಸಾಲ ಮನ್ನಾ  ಮಾಡಿದ್ದಾರೆ. ಬಜೆಟ್‌ನಲ್ಲಿ ಪ್ರಮುಖವಾಗಿ ಜೆಡಿಎಸ್‌ ಪ್ರಾಬಲ್ಯದ ಹಾಸನ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಿಗೆ ಭರಪೂರ ಯೋಜನೆಗಳನ್ನು , ಅನುದಾನವನ್ನು ಘೋಷಿಸಿದ್ದಾರೆ. 

ಹೈಲೆಟ್ಸ್‌ 

2 ಲಕ್ಷದ 18 ಸಾವಿರದ 448 ಕೋಟಿ ರೂಪಾಯಿ ಬಜೆಟ್‌ ಗಾತ್ರ 

31.12.2017 ರ ವರೆಗಿನ ಎಲ್ಲಾ ಸುಸ್ತಿ ಸಾಲ ಮನ್ನಾ 

ಹಿಂದಿನ ಸರ್ಕಾರದ ಸಾಲಮನ್ನಾ ಬಾಕಿ ಪೂರ್ಣ ಪಾವತಿ 

ಕಳೆದ 3 ವರ್ಷಗಳಲ್ಲಿ  ಆದಾಯ ತೆರಿಗೆ ಕಟ್ಟಿರುವ ರೈತರಿಗೆ,ಸರ್ಕಾರಿ ಅಧಿಕಾರಿಗಳು, ಸಹಕಾರಿ ಕ್ಷೇತ್ರದ  ಅಧಿಕಾರಿಗಳು ದೊಡ್ಡ ಭೂ ಹಿಡುವಳಿಯಿರುವರಿಗೆ ಸಾಲ ಮನ್ನಾ ಅನ್ವಯವಾಗುವುದಿಲ್ಲ. 

ಸಾಲ ಮರು ಪಾವತಿಸಿದ ರೈತರಿಗೂ ಪ್ರಯೋಜನ. ಅವರ ಖಾತೆಗೆ 25,000 ರೂಪಾಯಿ ಹಾಕಲಿರುವ ಸರ್ಕಾರ. 

ರೈತರ ಪ್ರತೀ ಕುಟುಂಬಕ್ಕೆ 2 ಲಕ್ಷ ರೂಪಾಯಿ ಸಾಲ ಮನ್ನಾ.

ಒಟ್ಟು  34,000 ಕೋಟಿ ರೂಪಾಯಿ ಸಾಲ ಮನ್ನಾ 

ಹಳೆ ಸರ್ಕಾರ 4,165 ಕೋಟಿ ರೂ ಹಳೆ ಸಾಲ ಮನ್ನಾ ಪಾವತಿ ಬಾಕಿ ಉಳಿಸಿಕೊಂಡಿತ್ತು. ಅದನ್ನೂ ಪಾವತಿ ಮಾಡಲು ತೀರ್ಮಾನ 

ವಿಕಲಚೇತನರು ಪಡೆದಿರುವ 4 ಕೋಟಿ ರೂಪಾಯಿ ಸಾಲ ಮನ್ನಾ 

ಕೃಷಿ ವಲಯದಲ್ಲಿ  4.9 ರಷ್ಟು  ಬೆಳವಣಿಗೆ ನಿರೀಕ್ಷೆ 

ಆಂಧ್ರದ ಮಾದರಿಯಲ್ಲಿ  ಶೂನ್ಯ ಬಂಡವಾಳ ಕೃಷಿ ಪದ್ಧತಿ – ರೈತರು ಮಾರುಕಟ್ಟೆಯಿಂದ ಪರಿಕರ ಬಳಸುವುದಿಲ್ಲ. 50 ಕೋಟಿ ರೂ 

ಸಂಧ್ಯಾ ಸುರಕ್ಷಾ ಯೋಜನೆ ಮಾಸಿಕ ಮೊತ್ತ 600 ರಿಂದ 1000ಕ್ಕೆ ಏರಿಕೆ (65 ಮೀರಿದ ವೃದ್ಧರಿಗೆ ಅನ್ವಯ)

ಕೃಷಿಕರಿಗಾಗಿ ಉನ್ನತ ಸಮಿತಿ 

 ಇಸ್ರೆಲ್‌ ಮಾದರಿ ಕೃಷಿಗೆ 150 ಕೋಟಿ ರೂ ಮೀಸಲು . 

ಜನಪ್ರತಿನಿಧಿಗಳು ,ಅಧಿಕಾರಿಗಳು ಆರ್ಥಿಕ ಶಿಸ್ತು, ಅನಗತ್ಯ ದುಂದು ವೆಚ್ಚಗಳಿಗೆ ಕಡಿವಾಣ 

ದುಬಾರಿ ;

ಮದ್ಯದ ಮೇಲಿನ ತೆರಿಗೆ 4 % ಏರಿಕೆ 

ಡಿಸೇಲ್‌ ಮೇಲಿನ ಸೆಸ್‌ ಹೆಚ್ಚಳ -19 % ಸೆಸ್‌ 21 % ಗೆ ಏರಿಕೆ 

ಪೆಟ್ರೋಲ್‌ ದುಬಾರಿ -ಸೆಸ್‌ 30% ರಿಂದ 32 % ಹೆಚ್ಚಳ 

ವಿದ್ಯುತ್‌ ಯೂನಿಟ್‌ಗೆ 20 ಪೈಸೆ ಹೆಚ್ಚಳ 

ಹಿಂದಿನ ಸರ್ಕಾರದ ಅನ್ನಾಭಾಗ್ಯ ಸೇರಿದಂತೆ ಎಲ್ಲಾ ಯೋಜನೆಗಳು ಮುಂದುವರಿಕೆ 

ತೆಂಗು ಬೆಳೆಗಾರರ ಹಿತರಕ್ಷಣೆಗೆ 190 ಕೋಟಿ ರೂಪಾಯಿ 

ರಾಮನಗರದಲ್ಲಿ ಚಲನಚಿತ್ರ ವಿವಿ -30 ಕೋಟಿ 

ಹಾಸನ ಹಾಲು ಒಕ್ಕೂಟಕ್ಕೆ 50 ಕೋಟಿ ರೂ 

ಬೆಳ್ಳಂದೂರು ಕೆರೆ ಅಭಿವೃದ್ಧಿಗೆ 50 ಕೋಟಿ ರೂ 

ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು 

247 ಇಂದಿರಾ ಕ್ಯಾಂಟೀನ್‌ಗಳ ಸ್ಥಾಪನೆ

ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ- ಪ್ರಾಥಮಿಕ ಹಂತದಲ್ಲಿ 1000 ಶಾಲೆಗಳಲ್ಲಿ ಯೋಜನೆ ಜಾರಿ. ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ 

ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಬಯೋ ಮೆಟ್ರಿಕ್ಸ್‌ 5 ಕೋಟಿ ರೂ.

ಸರ್ಕಾರಿ ಶಾಲೆಗಳ ವಿಲೀನ

ಬೆಂಗಳೂರಿನ 6 ಕಡೆ ಎಲಿವೇಟೆಡ್‌ ಕಾರಿಡಾರ್‌ 

ಧಾರ್ಮಿಕ 

ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 25 ಕೋಟಿ ರೂಪಾಯಿ ಅನುದಾನ 

ಭಗೀರಥ, ಮಾದಾರ , ಭೋವಿ ಪೀಠ , ಕಾಗಿನೆಲೆ, ವಾಲ್ಮೀಕಿ , ದೇವಾಂಗ, ಕಂಬಾರ , ಹಡಪದ ಅಪ್ಪಣ್ಣ  ಸೇರಿದಂತೆ ಹಲವು ಪೀಠಗಳಿಗೆ 25 ಕೋಟಿ ರೂ ಅನುದಾನ 

ಇಳಿಕೆ 

ಅನ್ನಭಾಗ್ಯ ಅಕ್ಕಿ  ಒಬ್ಬರಿಗೆ 7 ಕೆ.ಜಿ ಯಿಂದ 5 ಕೆ.ಜಿಗೆ ಇಳಿಕೆ 
ರಿಯಾರಿತಿ ದರದಲ್ಲಿ ಅರ್ಧ ಕೆ.ಜಿ ತೊಗರಿಬೇಳೆ,1 ಕೆ.ಜಿ ಅಯೋಡಿನ್‌ ಉಪ್ಪು,1 ಕೆ.ಜಿ ತಾಳೆ ಎಣ್ಣೆ , 1 ಕೆ.ಜಿ ಸಕ್ಕರೆ.

ಇಂಧನ ಇಲಾಖೆ -14, 123 ಕೋಟಿ ರೂ ಮೀಸಲು 

ಗ್ರಾಮೀಣಾಭಿವೃದ್ಧಿ -14,449 ಕೋಟಿ ರೂ ಮೀಸಲು 

ನಗರಾಭಿವೃದ್ಧಿ -17,727ಕೋಟಿ ರೂ ಮೀಸಲು 

ಆಹಾರ ಮತ್ತು ನಾಗರಿಕ ಸರಬರಾಜು -3,866 ಕೋಟಿ ರೂ ಮೀಸಲು 

ಶಿಕ್ಷಣ 26,581ಕೋಟಿ ರೂ ಮೀಸಲು 

ಜಲಸಂಪನ್ಮೂಲ -18,142 ಕೋಟಿ ರೂ ಮೀಸಲು 

ಸಮಾಜ ಕಲ್ಯಾಣ -11,788 ಕೋಟಿ ರೂ ಮೀಸಲು 

ಲೋಕೋಪಯೋಗಿ ಇಲಾಖೆ -10,200 ಕೋಟಿ ರೂ 

ಒಳನಾಡ ಸಾರಿಗೆ  7,993 ಕೋಟಿ ರೂ 

ಕೃಷಿಗೆ  7,642 ಕೋಟಿ ರೂ ಮೀಸಲು 

ಕಂದಾಯ ಇಲಾಖೆ –  7,180 ಕೋಟಿ ರೂ ಮೀಸಲು 

ಮಹಿಳಾ ಮತ್ತು ಮಕ್ಕಳ ಕಲ್ಯಾಣ – 5,725 ಕೋಟಿ ರೂ ಮೀಸಲು 

ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ  9,317 ಕೋಟಿ ರೂ ಮೀಸಲು 

ವಸತಿ -3,942 ಕೋಟಿ ರೂ ಮೀಸಲು 

ಇತರೆ  ಇಲಾಖೆಗಳಿಗೆ 82, 196 ಕೋಟಿ ಅನುದಾನ 
 

ಟಾಪ್ ನ್ಯೂಸ್

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Ashok-Vijayendra

Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್‌ ಉತ್ಸವ’ ಮಾಡಲ್ಲ: ಬಿಜೆಪಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

10-tumkur

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

8

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.