ಹೆಬ್ರಿ: ಪ್ರಯೋಜನಕ್ಕಿಲ್ಲದ 108 ಆ್ಯಂಬ್ಯುಲೆನ್ಸ್ ಸೇವೆ
Team Udayavani, Jul 6, 2018, 6:00 AM IST
ಹೆಬ್ರಿ: ಜನರಿಗೆ ಉಪಯೋಗ ವಾಗಬೇಕಿದ್ದ 108 ಆ್ಯಂಬ್ಯುಲೆನ್ಸ್ ಸೇವೆಗೆ ಈಗ ಗ್ರಹಣ ಹಿಡಿದಿದೆ. ಕಳೆದ 9 ತಿಂಗಳಿಂದ ನರ್ಸ್ ಮತ್ತು ಇಲ್ಲದ್ದರಿಂದ ಆಂಬ್ಯುಲೆನ್ಸ್ ಸೇವೆ ಸ್ಥಗಿತಗೊಂಡಿದೆ. ಇದರಿಂದ ತುರ್ತು ಸಂದರ್ಭದಲ್ಲಿ ಸೇವೆ ಇಲ್ಲದೇ ಜನರಿಗೆ ಸಂಕಷ್ಟ ತಂದೊಡ್ಡಿದೆ.
ಉಡುಪಿ ಜಿಲ್ಲೆಯಲ್ಲಿ ಒಟ್ಟು 18 ಆ್ಯಂಬ್ಯುಲೆನ್ಸ್‌ಗಳಿದ್ದು, ಇದಕ್ಕೆ 45 ಜನ ಸಿಬ್ಬಂದಿಗಳ ಆವಶ್ಯಕತೆ ಇದೆ. ಆದರೆ ಈಗ ಸೇವೆಯಲ್ಲಿರುವ ಸಿಬ್ಬಂದಿ 25 ಮಂದಿ ಮಾತ್ರ. ಹೆಬ್ರಿಯಲ್ಲಿ ನರ್ಸ್ ಕೊರತೆ ಇದೆ. ನಿಯಮ ಪ್ರಕಾರ ನರ್ಸ್ ಇಲ್ಲದೇ ಸೇವೆ ಸಾಧ್ಯವಿಲ್ಲ. ಆದ್ದರಿಂದ ಆ್ಯಂಬ್ಯುಲೆನ್ಸ್ ಇದ್ದರೂ ಪ್ರಯೋಜನಕ್ಕೆ ಬಾರದಂತಾಗಿದೆ.
ಜೀವ ಉಳಿಸಲು ಆಗದು!
ಹೆಬ್ರಿಯಲ್ಲಿ ಆ್ಯಂಬ್ಯುಲೆನ್ಸ್ ವ್ಯವಸ್ಥೆ ಇಲ್ಲದ್ದರಿಂದ ದೂರದ ಕೊಕ್ಕರ್ಣೆ, ಪೆರ್ಡೂರು,ಅಜೆಕಾರಿನ ವಾಹನ ಗಳನ್ನು ಇಲ್ಲಿನ ಜನರು ಕಾಯಬೇಕಿದೆ. ತುರ್ತಾಗಿ ಸೇವೆ ಸಿಗದ್ದರಿಂದ ತುರ್ತು ಚಿಕಿತ್ಸೆ ಇಲ್ಲದೆ ಪ್ರಾಣ ಬಿಟ್ಟ ಪ್ರಸಂಗಗಳು ಇವೆ. ಇತ್ತೀಚೆಗೆ ಬೇಳಂಜೆ ಹಾಗೂ ಸಂತೆಕಟ್ಟೆ ಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದವರನ್ನು ಆಸ್ಪತ್ರೆಗೆ ದಾಖಲಿಸಲು ಆ್ಯಂಬ್ಯುಲೆನ್ಸ್ ಗೆ ಕರೆ ಮಾಡಿದರೂ, ವಾಹನ ಬರುವಾಗ ತಡವಾದ್ದರಿಂದ ಆಸ್ಪತ್ರೆಗೆ ಸೇರಿಸುವ ಮೊದಲೇ ಪ್ರಾಣಬಿಟ್ಟಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಇಲ್ಲಿನ ಆ್ಯಂಬ್ಯುಲೆನ್ಸ್ ಚಾಲಕರು ನರ್ಸ್ ಇಲ್ಲದೇ ರೋಗಿಯನ್ನು ಕೊಂಡೊಯ್ಯುವಂತಿಲ್ಲ ಎಂದಿದ್ದರೂ ಬಡ ರೋಗಿಯೊಬ್ಬರನ್ನು ತುರ್ತಾಗಿ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.
ಕ್ರಮಕ್ಕೆ ಸೂಚನೆ
ಸಿಬಂದಿ ಸಮಸ್ಯೆಯಿಂದ ತೊಂದರೆಯಾಗಿದ್ದು ಸಂಬಂಧಪಟ್ಟವರಿಂದ ವರದಿ ತರಿಸಿಕೊಂಡು ಕೂಡಲೇ ಸಮಸ್ಯೆ ಬಗೆಹರಿಸವಂತೆ ಸಂಬಂಧಪಟ್ಟವರಿಗೆ ಸೂಚಿಸಿದ್ದೇನೆ.
- ರೋಹಿಣಿ,
ಜಿಲ್ಲಾ ಆರೋಗ್ಯಾಧಿಕಾರಿ
ಸಿಬಂದಿ ನಿಲ್ಲುತ್ತಿಲ್ಲ
ಜಿಲ್ಲೆಯಲ್ಲಿರುವ 18 ಅಂಬುಲೆನ್ಸ್ ವಾಹನ ಗಳಿಗೆ ದಾದಿಯರ ನೇಮಕ ವಾಗಿತ್ತು.108ನಲ್ಲಿ ನಿರ್ದಿಷ್ಟ ಸಮಯ ಎಂದಿಲ್ಲ. ಕೆಲ ದಿನ ಕೆಲಸ ಮಾಡಿ ಬಳಿಕ ಬಿಡುವವರ ಸಂಖ್ಯೆ ಹೆಚ್ಚಾಗಿದೆ.
– ಗುರುರಾಜ್,
108 ಅಂಬುಲೆನ್ಸ್ ಮೇಲ್ವಿಚಾರಕರು
– ಹೆಬ್ರಿ ಉದಯಕುಮಾರ್ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.