ನವತಿ ವೀಣಾವಾದಕರ ಕೈಚಳಕ ಕೃಷ್ಣಾರ್ಪಣ


Team Udayavani, Jul 6, 2018, 6:00 AM IST

u-9.jpg

ಕರಾವಳಿಯಲ್ಲಿ ಬೆಂಗಳೂರು ಬಾನಿ, ಮೈಸೂರು ಬಾನಿ, ತಿರುವನಂತಪುರ ಬಾನಿ ಹೀಗೆ ನಾನಾ ಶೈಲಿಯ ಇಷ್ಟೊಂದು ವೀಣಾ ವಾದಕರಿರುವುದು, ಈ ಇರುವಿಕೆ ಗೊತ್ತಾದದ್ದೂ ವಿಶೇಷ.

ವೀಣೆ ಜನಪ್ರಿಯ ಸಂಗೀತೋಪಕರಣವಲ್ಲವಾದರೂ ಕೇವಲ ಕರಾವಳಿಯಲ್ಲಿರುವ 90 ವೀಣಾ ಕಲಾವಿದರನ್ನು ಕಲೆ ಹಾಕಿ ಅವರಿಂದ ಏಕಕಾಲದಲ್ಲಿ ವೀಣಾ ಝೇಂಕಾರ ಹೊರಡಿಸಿದ್ದು ಮಣಿಪಾಲದ ಡಾ|ಪಳ್ಳತಡ್ಕ ಕೇಶವ ಭಟ್‌ ಮೆಮೋರಿಯಲ್‌ ಟ್ರಸ್ಟ್‌ ಸಾಧನೆ. ಎರಡೇ ಜಿಲ್ಲೆಗಳ ಕರಾವಳಿಯಲ್ಲಿ ಬೆಂಗಳೂರು ಬಾನಿ, ಮೈಸೂರು ಬಾನಿ, ತಿರುವನಂತಪುರ ಬಾನಿ ಹೀಗೆ ನಾನಾ ಶೈಲಿಯ ಇಷ್ಟೊಂದು ವೀಣಾ ವಾದಕರಿರುವುದು, ಈ ಇರುವಿಕೆ ಗೊತ್ತಾದದ್ದೂ ವಿಶೇಷ. ಉಡುಪಿ ಶ್ರೀಕೃಷ್ಣಮಠದಲ್ಲಿ ಪರ್ಯಾಯ ಶ್ರೀಪಲಿಮಾರು ಮಠದ ಆಶ್ರಯದಲ್ಲಿ ಜು. 1ರಂದು ಟ್ರಸ್ಟ್‌ ನಡೆಸಿದ ಕಲಾಸ್ಪಂದನ ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ಈ ಐತಿಹಾಸಿಕವಾದ ಕಾರ್ಯಕ್ರಮ ಸಂಪನ್ನಗೊಂಡಿತು. 

ಕಾರ್ಯಕ್ರಮಕ್ಕೆ ವೀಣಾವೃಂದ ಎಂಬ ಹೆಸರು ಇಟ್ಟದ್ದು ಮತ್ತು ಶ್ರೀಕೃಷ್ಣಮಠದ ಸುತ್ತಲೂ ತುಳಸಿಯ ಸಂಸರ್ಗ ಕಾಣುತ್ತಿರುವುದು, ನಿತ್ಯವೂ ಲಕ್ಷ ತುಳಸಿ ಅರ್ಚನೆ ನಡೆಯುತ್ತಿರುವುದು ಸಂಬಂಧ ಹೊಂದಿದೆ. ವೃಂದೆ ಅಂದರೆ ತುಳಸಿ ಎಂದರ್ಥ, ಸಮೂಹ, ಗುಂಪು ಎನ್ನುವುದು ಇನ್ನೊಂದರ್ಥ. ಇವೆರಡೂ ಅರ್ಥ ಹೊಂದಿಕೆಯಾಗುವಂತೆ ವೀಣಾ ವೃಂದವನ್ನು ಆಯೋಜಿಸಲಾಯಿತು. 

ಸಮವಸ್ತ್ರದ ಪರಿಸರ ಸಂದೇಶ
ಎಲ್ಲ ಕಲಾವಿದರೂ ತುಳಸಿಯ ಸಂಕೇತವಾದ ಹಸಿರು ಬಣ್ಣದ ಸೀರೆಗಳನ್ನು ಉಟ್ಟಿದ್ದರು. ಇದರಲ್ಲಿ ತುಳಸಿ ದಳದ ಚಿತ್ರವೂ ಇದೆ. ಉದ್ಯಾವರದ ಜಯಲಕ್ಷ್ಮೀ ಸ್ಟೋರ್ಗೆ ಸಂಘಟಕಿ ಪವನ ಆಚಾರ್‌ ಹೋಗಿ ನೋಡಿದಾಗ ಇಂತಹ ಸೀರೆ ಉತ್ತಮವೆಂದೆನಿಸಿತು. 67 ಮಹಿಳಾ ಕಲಾವಿದರು, 13 ಜನ ಪುರುಷ ಕಲಾವಿದರಿಗೆ ಅಗತ್ಯದ ಉಡುಗೆಗಳನ್ನು ಸೂರತ್‌ನಿಂದ ತರಿಸಿಕೊಟ್ಟವರು ಅಂಗಡಿ ಮಾಲಕರು. ಇದು ಪರಿಸರಸಹ್ಯ ಸಂಕೇತವಾಗಿಯೂ ಮೂಡಿಬಂತು. 90 ವೀಣಾವಾದಕರು ಕಾರ್ಯಕ್ರಮ ನೀಡಲು ಅನುವಾಗುವಂತೆ ವೇದಿಕೆ ವಿನ್ಯಾಸ ಮಾಡಿಕೊಟ್ಟ ಕೀರ್ತಿ ಜೈ ಹನುಮಾನ್‌ ಎಂಟರ್‌ಪ್ರೈಸೆಸ್‌ನ ಉದಯ್‌ ಮತ್ತು ವಿಜಯ್‌ಗೆ ಸಲ್ಲಬೇಕು.

ಹತ್ತರ ಬಾಲಕರ ವೀಣಾವೈಭವ
ಮಂಗಳೂರು, ಉಡುಪಿ, ಪುತ್ತೂರು, ಸಾಲಿಗ್ರಾಮ, ಸುರತ್ಕಲ್‌, ಕಾರ್ಕಳ ಮೊದಲಾ ದೆಡೆಗಳಿಂದ ಕಲಾವಿದರು ವೈಣಿಕ ಸೇವೆಯನ್ನು ನಡೆಸಿದರು. ಇಲ್ಲೆಲ್ಲ ವೀಣೆಯನ್ನು ಕಲಿಸುವ ಶಾಲೆಗಳಿವೆ, ಕಲಿಯುವ ವಿದ್ಯಾರ್ಥಿಗಳಿದ್ದಾರೆ. ಇವರಲ್ಲಿ ಕೇವಲ ಹತ್ತು ವರ್ಷದ ಬಾಲಕರಿಂದ ಹಿಡಿದು ಹಿರಿಯ ಕಲಾವಿದರೂ ಇದ್ದರು. ಕಾರ್ಕಳದ ಪ್ರದ್ಯುಮ್ನ ಮತ್ತು ಅಭಿನವ ಕೇವಲ ಹತ್ತು ವರ್ಷದ ಬಾಲಕರು. ಹಿರಿಯ ವೀಣಾವಾದಕಿ ಜಯಲಕ್ಷ್ಮೀ ಸಾಣೂರು ಅವರು 68 ವರ್ಷದ ಹಿರಿಯರು, ಇವರು ವಿವಿಧೆಡೆ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದಾರಲ್ಲದೆ ತಮ್ಮ ಜ್ಞಾನವನ್ನು ಇನ್ನಷ್ಟು ವೃದ್ಧಿಸಿಕೊಳ್ಳುತ್ತಿರುವ ವಿದ್ಯಾರ್ಥಿನಿಯೂ ಹೌದು. ಇವರಲ್ಲಿ ಎ ಶ್ರೇಣಿ ಕಲಾವಿದೆ ಮಣಿಪಾಲದ ಅರುಣಾಕುಮಾರಿ, ಮಂಗಳೂರಿನ ಗೋಪಾಲ ಮುದ್ಗಲ್‌, ಪುತ್ತೂರಿನ ಮೀನಾಕ್ಷಿ, ವಿಪಂಚಿ ಬಳಗದ ರಾಮಕೃಷ್ಣನ್‌, ವೀಣಾ ಉಪಾಧ್ಯಾಯ, ಶಿಲ್ಪಾ ಜೋಷಿ, ಸುಮಂಗಲಾ ಹೆಬ್ಟಾರ್‌, ಜಯಲಕ್ಷ್ಮೀ ಸಾಣೂರು, ಮಣಿಪಾಲದ ಶಶಿಕಲಾ ಎನ್‌. ಭಟ್‌, . ಸುರತ್ಕಲ್‌ನ ಅರ್ಜುನ ಮುದ್ಲಾಪುರ ಮೊದಲಾದವರು ವೀಣಾ ವಾದನದ ಕಛೇರಿ ಕೊಡುವವರು.

12ನೆಯ ವರ್ಷಕ್ಕೆ ವೀಣಾವಾದನವನ್ನು ಆರಂಭಿಸಿದ ಯುವಕ ರಾಮಕೃಷ್ಣನ್‌ ವೀಣಾ ವಾದನ ನುಡಿಸಿದರೆ, ಅರ್ಜುನ್‌ ಎಂ., ಡಾ|ಬಾಲಕೃಷ್ಣನ್‌ ಆರ್‌., ವೈಭವ ಪೈ ಅವರು ಕ್ರಮವಾಗಿ ವೀಣೆ, ವೇಣು, ಪಿಟೀಲಿನ ಜುಗಲ್ಬಂದಿ ನಡೆಸಿದರು. ಇವರಿಗೆ ಡಾ|ಬಾಲಚಂದ್ರ ಆಚಾರ್‌, ಬಾಲಚಂದ್ರ ಭಾಗವತ್‌ ಮೃದಂಗ ಸಹಕಾರ ನೀಡಿದರು. ಹೋದ ವರ್ಷ ರಾಮದಾಸ ಆಚಾರ್ಯರ ಸಾಮವೇದ ಗಾಯನವನ್ನು ವೀಣೆಯಲ್ಲಿ ಪವನ ಆಚಾರ್‌ ನುಡಿಸಿ ಹೊಸ ದಾಖಲೆ ನಿರ್ಮಿಸಿದ್ದರೆ ಈ ಬಾರಿ ಕೇವಲ ಸಾಮವೇದ ಗಾಯನ ಮಾತ್ರ ನಡೆಸಲಾಯಿತು. ಮುಖ್ಯ ಕಛೇರಿಯನ್ನು ಯೋಗವಂದನಾ ನಡೆಸಿದರೆ, ಕಲಾಸ್ಪಂದನದ ವಿದ್ಯಾರ್ಥಿಗಳು “ರಾಘವೇಂದ್ರ ಮಹಿಮೆ’ ವೀಣಾ ನಾಟಕ ನಡೆಸಿಕೊಟ್ಟರು. ಇದರಲ್ಲಿ ವೈಭವ ಪೈಯವರ ನಿರ್ದೇಶನದಲ್ಲಿ ವಿದ್ಯಾರ್ಥಿ ಗಳು ರಾಘವೇಂದ್ರಸ್ವಾಮಿಗಳು ರಚಿಸಿದ ಸ್ತೋತ್ರ, “ಇಂದು ಎನಗೆ ಗೋವಿಂದ’ ದಾಸರ ಹಾಡು ಗಳನ್ನು ವೀಣೆಯಲ್ಲಿ ನುಡಿಸಿದರು ಮತ್ತು ಮೌಖೀಕ ವಾಗಿಯೂ ನಾಟಕವನ್ನು ಪ್ರದರ್ಶಿಸಿದರು. 90 ವೀಣಾ ವಾದಕರು ಸ್ತೋತ್ರ, ತ್ಯಾಗರಾಜರ ರಚನೆ, ಮಧ್ವಾಚಾರ್ಯ, ವಾದಿರಾಜರ ರಚ ನೆಗಳನ್ನು ಪ್ರಸ್ತುತಪಡಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.  

ಮೂರು ತಲೆಮಾರಿನ ಕಲಾವಿದರು
ವೀಣಾವೃಂದದಲ್ಲಿ ಹಿರಿಯ ಕಲಾವಿದರಾದ ಯೋಗವಂದನಾ ಬೆಂಗಳೂರು, ಪಾರಂಪಳ್ಳಿ ರಾಮಚಂದ್ರ ಐತಾಳ್‌, ಪುತ್ತೂರು ಮೀನಾಕ್ಷಿ ರಾವ್‌, ಮಣಿಪಾಲದ ಅರುಣಾಕುಮಾರಿ, ಜಯಲಕ್ಷ್ಮೀ ಭಟ್‌ ಸಾಣೂರು, ಸುಮಂಗಲಾ ಹಿರಿಯಡಕ, ಗೋಪಾಲ್‌ ಮುದ್ಗಲ್‌, ಮಂಗಳೂರು, ಸುನೀತಾ ಉಡುಪಿ, ಪವನ ಆಚಾರ್‌ ಒಟ್ಟು 9 ಹಿರಿಯ ಕಲಾವಿದರನ್ನು ಸಮ್ಮಾನಿಸಲಾಯಿತು. ಇವರಲ್ಲಿ ಪಾರಂಪಳ್ಳಿ ರಾಮಚಂದ್ರ ಐತಾಳರ ವಯಸ್ಸು 97. ಇವರ ಪುತ್ರಿ ಸುಮಂಗಲಿ, ಮೊಮ್ಮಗಳು ಸುಶ್ರಾವ್ಯ ವೀಣಾವಾದಕರು. ಈ ಮೂವರ ಸಮಾಗಮ ರಾಜಾಂಗಣದಲ್ಲಿ ನಡೆಯಿತು. ರಾಮಚಂದ್ರ ಐತಾಳರು ವಯಸ್ಸಿನ ಕಾರಣಕ್ಕಾಗಿ ವೀಣೆಯನ್ನು ನುಡಿಸಲಿಲ್ಲ. ಮಗಳು, ಮೊಮ್ಮಗಳು ವೀಣೆಯನ್ನು ನುಡಿಸಿ ಸಭಾಸದರ ಮೆಚ್ಚುಗೆ ಗಳಿಸಿದರು.

ರಾಷ್ಟ್ರಪತಿ ಕಲಾಂ ಮೆಚ್ಚಿದ್ದ ಕಲಾಬಳಗ
ಕಾರ್ಯಕ್ರಮದ ಸಂಘಟಕಿ ಪವನ ಆಚಾರ್‌ ಅವರು ಪಳ್ಳತಡ್ಕ ಕೇಶವ ಭಟ್ಟರ ಪುತ್ರಿ. ಸಸ್ಯವಿಜ್ಞಾನಿ ಕೇಶವ ಭಟ್ಟರು ಸಂಗೀತಾಭಿಮಾನಿಯಾಗಿದ್ದರೆ, ತಾಯಿ ದೇವಕಿ ಭಟ್‌ ಅವರು ಸ್ವತಃ ಗಾಯಕರು. ಪವನ ನೇತೃತ್ವದ ವಿಪಂಚಿ ಬಳಗ 2007ರ ಜೂನ್‌ 26ರಂದು ಡಾ|ಎ.ಪಿ.ಜೆ.ಅಬ್ದುಲ್‌ಕಲಾಂ ಅವರು ರಾಷ್ಟ್ರಪತಿಗಳಾಗಿದ್ದಾಗ ರಾಷ್ಟ್ರಪತಿ ಭವನದಲ್ಲಿ ಪಂಚವೀಣೆಯನ್ನು ನುಡಿಸಿ ಮೆಚ್ಚುಗೆ ಗಳಿಸಿಕೊಂಡವರು. 

ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

High-Court

Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ban

Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.