ಒಬ್ಬನೇ ವಿಲನ್‌ ಎರಡು ಟೀಸರ್‌

Team Udayavani, Jul 6, 2018, 6:00 AM IST

u-26.jpg

ಪ್ರೇಮ್‌ ನಿರ್ದೇಶನದ ಚಿತ್ರ ಅಂದಮೇಲೆ ಅಲ್ಲೊಂದು ಹೊಸತನ ಇದ್ದೇ ಇರುತ್ತೆ. ಅದರಲ್ಲೂ ಶಿವರಾಜಕುಮಾರ್‌ ಹಾಗೂ ಸುದೀಪ್‌ ಕಾಂಬಿನೇಷನ್‌ನ ಮೊದಲ ಚಿತ್ರ ಅಂದಮೇಲೆ ಕೇಳಬೇಕೇ? ಹೌದು, “ದಿ ವಿಲನ್‌’ ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು ಗೊತ್ತೇ ಇದೆ. ಚಿತ್ರರಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರೇಮ್‌ ಟೀಸರ್‌ ತೋರಿಸಲು ಟಿಕೆಟ್‌ ನಿಗದಿಪಡಿಸಿದ್ದು ವಿಶೇಷ. ಅಭಿಮಾನಿಗಳು ಮುಗಿಬಿದ್ದು ಟಿಕೆಟ್‌ ಖರೀದಿಸಿ, ತಮ್ಮ ಹೀರೋಗಳ ಟೀಸರ್‌ ವೀಕ್ಷಿಸಿದ್ದು ಮತ್ತೂಂದು ವಿಶೇಷ. ಅಷ್ಟಕ್ಕೂ ಪ್ರೇಮ್‌ ಟಿಕೆಟ್‌ ಇಟ್ಟಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಿರ್ದೇಶಕರ ಸಹಾಯಕ್ಕಾಗಿ. ಟಿಕೆಟ್‌ನಿಂದ ಗಳಿಸಿದ ಹಣವನ್ನು ಹಿರಿಯ ನಿರ್ದೇಶಕ ಎ.ಟಿ.ರಘು, ಬೂದಾಳ್‌ ಕೃಷ್ಣಮೂರ್ತಿ, ಹಿರೇಮಠ ಹಾಗೂ ಆನಂದ್‌.ಪಿ.ರಾಜು ವಿತರಣೆ ಮಾಡಲಾಯಿತು.

ಅದಕ್ಕೂ ಮುನ್ನ ಟೀಸರ್‌ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಹಾರೈಸಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, “ನನಗೆ ತಿಳಿದ ಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಟೀಸರ್‌ ವೀಕ್ಷಿಸಲು ಅಭಿಮಾನಿಗಳು ಟಿಕೆಟ್‌ ಖರೀದಿಸಿರುವುದು ಇದೇ ಮೊದಲು ಎನಿಸುತ್ತದೆ. ಕನ್ನಡ ಚಿತ್ರರಂಗ ಈಗ ಬೇರೆ ಭಾಷೆಯ ಚಿತ್ರರಂಗಕ್ಕೂ ಪೈಪೋಟಿ ನೀಡುವಂತೆ ಬೆಳೆದಿದೆ. ಈಗ ಇಲ್ಲಿ ಉತ್ತಮ ಚಿತ್ರಗಳು ತಯಾರಾಗುತ್ತಿವೆ. “ದಿ ವಿಲನ್‌’ ಚಿತ್ರದಲ್ಲಿ ಕನ್ನಡದ ಇಬ್ಬರು ದೊಡ್ಡ ಸ್ಟಾರ್‌ಗಳನ್ನು ತೋರಿಸಿರುವುದು ಸುಲಭದ ಮಾತಲ್ಲ. ನಿರ್ದೇಶಕರ ಶ್ರಮ ಇಲ್ಲಿ ಎದ್ದು ಕಾಣುತ್ತದೆ. ಇನ್ನು, ಐದು ಪರದೆಗಳಲ್ಲೂ ಏಕಕಾಲಕ್ಕೆ ಟೀಸರ್‌ ಬಿಡುಗಡೆ ಮಾಡಿ, ಟಿಕೆಟ್‌ನಿಂದ ಬಂದ ಹಣವನ್ನು ಹಿರಿಯ ನಿರ್ದೇಶಕರ ಸಹಾಯಕ್ಕೆ ಬಳಿಸುತ್ತಿರುವ ನಿರ್ಮಾಪಕರ ಯೋಚನೆಯೂ ಹೆಮ್ಮೆ ಪಡುವಂಥದ್ದು. ಈ ಚಿತ್ರ ಯಶಸ್ಸು ಗಳಿಸಲಿ’ ಎಂದು ಶುಭಕೋರಿದರು ಸಿಎಂ.

ಅಂದು ಶಿವರಾಜಕುಮಾರ್‌ ಸಿಕ್ಕಾಪಟ್ಟೆ ಖುಷಿಯಲ್ಲಿದ್ದರು. “ನಾನು ಮೊದಲ ಸಲ ಸುದೀಪ್‌ ಜೊತೆಗೆ ತೆರೆ ಹಂಚಿಕೊಂಡಿದ್ದೇನೆ. ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ. ನಾವು ನಮ್ಮ ಕೆಲಸ ಮಾಡಿದ್ದೇವೆ. ಇನ್ನೇನಿದ್ದರೂ ಅಭಿಮಾನಿಗಳು ಚಿತ್ರ ನೋಡಿ ತೀರ್ಪು ಕೊಡಬೇಕು’ ಅಂದರು ಶಿವರಾಜಕುಮಾರ್‌.

ಸುದೀಪ್‌ ಚಿತ್ರವೊಂದರ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ಹೋಗಿದ್ದರಿಂದ ಅವರು ಅಲ್ಲಿಂದಲೇ ವೀಡಿಯೋ ಕಳುಹಿಸಿ, ಆ ಮೂಲಕ ತಂಡಕ್ಕೆ ಹಾಗೂ ಟೀಸರ್‌ ಬಿಡುಗಡೆ ಮಾಡಿದ ಮುಖ್ಯಮಂತ್ರಿಗಳನ್ನು ಅಭಿನಂದಿಸಿದರು. ನಿರ್ದೇಶಕ ಪ್ರೇಮ್‌ ಕೂಡ ಅಂದು ಖುಷಿಯಲ್ಲಿದ್ದರು. “ನಾನು ಟೀಸರ್‌ ತೋರಿಸಲು ಟಿಕೆಟ್‌ ನಿಗದಿಪಡಿಸಿದ್ದು ತೊಂದರೆಯಲ್ಲಿರುವ ಹಿರಿಯ ನಿರ್ದೇಶಕರ ಸಹಾಯಕ್ಕಾಗಿ ಮಾತ್ರ. ಯಾರೂ ಅನ್ಯತಾ ಭಾವಿಸಬಾರದು. ಸರ್ಕಾರ ನಿರ್ದೇಶಕ ಸಂಘಕ್ಕೆ ಒಂದಷ್ಟು ಅನುದಾನ ಒದಗಿಸುವ ಮೂಲಕ ಅನಾರೋಗ್ಯದಲ್ಲಿರುವ ನಿರ್ದೇಶಕರ ಸಹಾಯಕ್ಕೆ ಮುಂದಾಗಬೇಕು ಎಂಬ ಮನವಿ ಇಟ್ಟರು. ಸುಮಾರು 1.47 ನಿಮಿಷದ ಎರಡು ಟೀಸರ್‌ ಬಿಡುಗಡೆಯಾಗುತ್ತಿದ್ದಂತೆಯೇ ಎಲ್ಲೆಡೆ ಚಪ್ಪಾಳೆ, ಕೇಕೆ ಮುಗಿಲು ಮುಟ್ಟಿತ್ತು. ಅಂದು ನಿರ್ಮಾಪಕ ಸಿ.ಆರ್‌.ಮನೋಹರ್‌ ಹಾಗೂ ಚಿತ್ರತಂಡ ವೇದಿಕೆಯೇರಿ ಸಿನಿಮಾ ಬಗ್ಗೆ ಮಾತಾಡುವ ಹೊತ್ತಿಗೆ ಸಮಯ ಮೀರಿತ್ತು.

ಟಾಪ್ ನ್ಯೂಸ್

BBK11: ಬಿಗ್‌ ಬಾಸ್‌ ಮನೆಯಲ್ಲಿ ಶೋಭಾ ಆರ್ಭಟಕ್ಕೆ ಗಪ್‌ ಚುಪ್‌ ಆದ ಮಂಜು.!

BBK11: ಬಿಗ್‌ ಬಾಸ್‌ ಮನೆಯಲ್ಲಿ ಶೋಭಾ ಆರ್ಭಟಕ್ಕೆ ಗಪ್‌ ಚುಪ್‌ ಆದ ಮಂಜು.!

Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ

Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

Siddu-Somanna

MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

BBK11: ಬಿಗ್‌ ಬಾಸ್‌ ಮನೆಯಲ್ಲಿ ಶೋಭಾ ಆರ್ಭಟಕ್ಕೆ ಗಪ್‌ ಚುಪ್‌ ಆದ ಮಂಜು.!

BBK11: ಬಿಗ್‌ ಬಾಸ್‌ ಮನೆಯಲ್ಲಿ ಶೋಭಾ ಆರ್ಭಟಕ್ಕೆ ಗಪ್‌ ಚುಪ್‌ ಆದ ಮಂಜು.!

3-hunsur

Hunsur: ಚಿನ್ನದ ಸರ ಅಪಹರಿಸಿದ್ದ ಇಬ್ಬರು ಆರೋಪಿಗಳ ಬಂಧನ

Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ

Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.