ಅರ್ಥವಾಗುವವರಿಗೆ ಮಾತ್ರ
Team Udayavani, Jul 7, 2018, 6:00 AM IST
“ಪಾರ್ಲೆಜಿಯಿಂದ ಗೂಗಲ್ ಜಿ ವರೆಗೆ ಇಲ್ಲಿ ಹೇಳಿದ್ದೇವೆ …’
– ನಿರ್ದೇಶಕ ಶಿವು ಸರಳಬೆಟ್ಟು ಹೀಗೆ ಹೇಳಿದರು. ಅವರ ಮಾತು ಅಲ್ಲಿಗೆ ನಿಲ್ಲಲಿಲ್ಲ. ಪಂಚಭೂತಗಳಿಂದ ಹಿಡಿದು ಹಿಂದಿನ ಕಾಲದ ಮೌಲ್ಯ, ಆದರ್ಶ, ಬದಲಾಗುತ್ತಿರುವ ಪ್ರವೃತ್ತಿ ಸೇರಿದಂತೆ ಅನೇಕ ವಿಚಾರಗಳನ್ನು ಮಾತನಾಡುತ್ತಾ ಬಂದರು. “ಇದು ನಾನು ಮಾಡಿದ ಕಥೆ ಎನ್ನುವುದಕ್ಕಿಂತ ನಮ್ಮ ಪೂರ್ವಿಕರು ಹೇಳಿದ ಕಥೆ ಎನ್ನಬಹುದು’ ಎಂದರು. ಚಿತ್ರದಲ್ಲಿ ಹೊಸತನವಿದೆ. ಆಧ್ಯಾತ್ಮವಿದೆ, ಮನರಂಜನೆ ಇದೆ … ಹೀಗೆ ಒಂದೇ ಸಮನೆ ಹೇಳುತ್ತಾ ಹೋದರು. ಅವರು ಹೇಳಿದ್ದು “ಜೀವನ ಯಜ್ಞ’ ಸಿನಿಮಾದ ಬಗ್ಗೆ. ಇದು ಶಿವು ಅವರ ಚೊಚ್ಚಲ ಸಿನಿಮಾ. ಸಿನಿಮಾ ಟೈಟಲ್‌ನಲ್ಲಿ “ಜಿ’ಯನ್ನು ದೊಡ್ಡದಾಗಿ ಬರೆದು ಅದರ ಮುಂದೆ “ವನ ಯಜ್ಞ’ ಎಂದು ಸೇರಿಸಲಾಗಿದೆ. ಅದಕ್ಕೆ ಕಾರಣ ನಿರ್ದೇಶಕರು ಈ ಚಿತ್ರದಲ್ಲಿ ಪಾರ್ಲೆಜಿಯಿಂದ ಹಿಡಿದು ಗೂಗಲ್ ಜಿ ವರೆಗೆ ಹೇಳಿದ್ದಾರಂತೆ. ನಿರ್ದೇಶಕ ಶಿವು ಅವರಿಗೆ ತನ್ನ ಸಿನಿಮಾ ಬಗ್ಗೆ ತುಂಬಾನೇ ಹೇಳಿಕೊಳ್ಳಬೇಕು, ಕಥೆ ಸಾರವನ್ನು ಪತ್ರಕರ್ತರಿಗೆ ಬಿಚ್ಚಿಡಬೇಕೆಂಬ ಹಂಬಲವೇನೋ ಇತ್ತು. ಆದರೆ, ಅವರು ಅದನ್ನು ಹೇಳುವಲ್ಲಿ ಎಡವುತ್ತಿದ್ದರು. ಸುತ್ತಿಬಳಸಿ, ಪಂಚಭೂತ, ಆಧ್ಯಾತ್ಮ, ಕಲಾತ್ಮಕ, ಕಮರ್ಷಿಯಲ್, ಪಾರ್ಲೆ-ಜಿ, ಗೂಗಲ್ ಜಿ … ಹೀಗೆ ಅನೇಕ ಅಂಶಗಳನ್ನು ಮಧ್ಯೆ ತಂದು ಸಾಕಷ್ಟು ಗೊಂದಲಮಯವಾಗಿಯೇ ಮಾತನಾಡಿದರು. ಅಂತಿಮವಾಗಿ ಈ ಸಿನಿಮಾದಲ್ಲಿ ಏನು ಹೇಳಲು ಹೊರಟಿರಬಹುದೆಂದು ಅರ್ಥಮಾಡಿಕೊಂಡವರಿಗೆ ಸಿಕ್ಕಿದ್ದಿಷ್ಟು, ಇಂದಿನ ಆಧುನಿಕ ಯುಗದಲ್ಲಿ ಹಳೆಯ ಮೌಲ್ಯಗಳನ್ನು ಮರೆಯುತ್ತಿದ್ದೇವೆ. ಅದನ್ನು ಮರೆಯದೇ ಹಿಂದಿನ ಕಾಲದ ಆದರ್ಶ, ಮೌಲ್ಯಗಳ ಜೊತೆ ಸಾಗಬೇಕೆಂಬುದನ್ನು ಹೇಳಲಾಗಿದೆ ಎಂದು. ಈ ಚಿತ್ರದಲ್ಲಿ 60ರಿಂದ 70 ಪಾತ್ರಗಳಿವೆಯಂತೆ. ಆದರೆ, ಚಿತ್ರದ ಪ್ರಮುಖ ನಾಲ್ಕು ಪಾತ್ರಗಳಿಗಷ್ಟೇ ಹೆಸರಿದೆಯಂತೆ.
ಚಿತ್ರದಲ್ಲಿ ಶೈನ್ ಶೆಟ್ಟಿ, ಮನೋಜ್ ಪುತ್ತೂರು, ರಮೇಶ್ ಭಟ್, ಸೌಜನ್ಯ ಹೆಗ್ಡೆ, ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರದಲ್ಲೊಂದು ಪ್ರಮುಖ ಪಾತ್ರ ಮಾಡಿರುವ ಶೈನ್ ಶೆಟ್ಟಿಗೆ, ನಿರ್ದೇಶಕರು ಏನು ಕಥೆ ಹೇಳಿದರೆಂದು ಅರ್ಥವಾಗಲೇ ಇಲ್ಲವಂತೆ. ಕೊನೆಗೆ ಅವರ ಪಾತ್ರವನ್ನಷ್ಟೇ ಕೇಳಿಕೊಂಡು, ಅದನ್ನು ಅರ್ಥೈಸಿ ನಟಿಸಿದರಂತೆ. ಮತ್ತೂಬ್ಬ ನಟ ಮನೋಜ್ ಪುತ್ತೂರು ಕೂಡಾ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಚಿತ್ರವನ್ನು ಕಿರಣ್ ರೈ ಹಾಗೂ ರಂಜನ್ ಶೆಟ್ಟಿ ಸೇರಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಆಸ್ಲೆ ಮೈಕೆಲ್ ಸಂಗೀತ, ಸುರೇಂದ್ರ ಪಣಿಯೂರು ಛಾಯಾಗ್ರಹಣವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
HDK ಕ್ಷೇತ್ರ ಬಿಟ್ಟು ಹೋಗಿದ್ದಕ್ಕೆ ಜನ ಕೊಟ್ಟ ತೀರ್ಪು: ಡಿಕೆಶಿ ಟಾಂಗ್
Chinnaswamy Stadium: ಚಿನ್ನಸ್ವಾಮಿ ಸ್ಟಾಂಡ್‌ಗಳಿಗೆ ದಿಗ್ಗಜರ ಹೆಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.