ಮೆಸ್ಕಾಂ ವಿತರಣ ಘಟಕಕ್ಕೆ  ನಿವೇಶನವೇ ಇಲ್ಲ!


Team Udayavani, Jul 6, 2018, 10:20 AM IST

6-july-2.jpg

ಉಪ್ಪಿನಂಗಡಿ: ಮೆಸ್ಕಾಂನ ವಿದ್ಯುತ್‌ ವಿತರಣ ಘಟಕಕ್ಕೆ ನಿವೇಶನ ನಿಗದಿಯಾಗದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಇಪ್ಪತ್ತು ವರ್ಷಗಳಿಂದ ವಿದ್ಯುತ್‌ ವಿತರಣ ಘಟಕಕ್ಕಾಗಿ ಬೇಡಿಕೆ ಇಡುತ್ತಿದ್ದರೂ ಈ ತನಕ ಈಡೇರಿಲ್ಲ. ಉಪ್ಪಿನಂಗಡಿ ವಿದ್ಯುತ್‌ ಶಾಖಾ ಕಚೇರಿ ಎಂಟಕ್ಕೂ ಮಿಕ್ಕ ಗ್ರಾಮ ವ್ಯಾಪ್ತಿಯ ಗೋಳಿತೊಟ್ಟು, ಅಲಂತಾಯ, ಬಜತ್ತೂರು, ಕೊçಲ, ರಾಮಕುಂಜ, ಹಿರೇಬಂಡಾಡಿ, 34ನೇ ನೆಕ್ಕಿಲಾಡಿ ಸಹಿತ 15,500 ಗ್ರಾಹಕರನ್ನು ಹೊಂದಿದ್ದು, ಮಾಸಿಕ 2 ಕೋಟಿ ರೂ.ಗೂ ಅಧಿಕ ಆದಾಯ ಗಳಿಸುತ್ತಿದೆ.

ಹುದ್ದೆ ಏರಿಕೆ, ಶಾಖೆ ಯಥಾಸ್ಥಿತಿ
ನಿಗಮದ ನಿಯಮದಂತೆ 7,000 ಗ್ರಾಹಕರಿರುವ ಶಾಖೆಗೆ ಕಿರಿಯ ಎಂಜಿನಿಯರ್‌, ಅದಕ್ಕಿಂತ ಹೆಚ್ಚು ಗ್ರಾಹಕರಿದ್ದರೆ ಶಾಖೆಯನ್ನು ಮೇಲ್ದರ್ಜೆ ಗೇರಿಸಿ, ಸಹಾಯಕ ಎಂಜಿನಿಯರ್‌ ನೇಮಿಸಬೇಕು. ಉಪ್ಪಿನಂಗಡಿಯಲ್ಲಿ ಹುದ್ದೆ ಏರಿಕೆ ಆಯಿತೇ ಹೊರತು ಸಮರ್ಪಕ ವಿದ್ಯುತ್‌ ಒದಗಿಸುವ ವಿತರಣ ಕೇಂದ್ರ ತೆರೆಯುವ ಪ್ರಯತ್ನವನ್ನೇ ಮಾಡಿಲ್ಲ. ಹಲವು ಕಿರಿಯ ಎಂಜಿನಿಯರ್‌ ಗಳು ಕರ್ತವ್ಯ ನಿರ್ವಹಿಸಿದ್ದು, ಬರುವ ವರ್ಷದಿಂದ ಸಮರ್ಪಕ ವಿದ್ಯುತ್‌ ಒದಗಿಸುವುದಾಗಿ ಗ್ರಾಮಸಭೆಗಳಲ್ಲಿ ಭರವಸೆ ನೀಡುವುದು ವಾಡಿಕೆಯ ಮಾತಾಗಿದೆ. ಈಗಲೂ ಪುತ್ತೂರಿನಿಂದಲೇ ವಿದ್ಯುತ್‌ ಸರಬರಾಜು ಆಗುವುದು. ಎಕ್ಸ್‌ಪ್ರೆಸ್‌ ಲೈನ್‌ ಬಂದರೆ ಮಾತ್ರ ಸಮಸ್ಯೆ ಸರಿಹೋದೀತು. ಬಳಿಕ ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಗ್ರಾಮದಲ್ಲಿ 110 ಕೆ.ವಿ. ವಿದ್ಯುತ್‌ ವಿತರಣೆ ಘಟಕ ಶೀಘ್ರ ರಚನೆಯಾಗಬೇಕು ಎಂಬ ಆಗ್ರಹವೂ ವ್ಯಕ್ತವಾಗಿದೆ.

ವಿದ್ಯುತ್‌ ಪೂರೈಕೆಗೆ ಸಮಸ್ಯೆ
ಪುತ್ತೂರಿನಿಂದ ವಿದ್ಯುತ್‌ ಪೂರೈಕೆಯಲ್ಲಿ ಆಗಾಗ ಸಣ್ಣಪುಟ್ಟ ತೊಡಕುಗಳು ಕಾಣಿಸಿಕೊಳ್ಳುತ್ತಿವೆ. ತಣ್ಣೀರುಪಂತ ವಿತರಣ ಕೇಂದ್ರದಲ್ಲಿ ಕಳಪೆ ಸಾಮಗ್ರಿಗಳ ಜೋಡಣೆಯಾಗಿದೆ ಎನ್ನುವ ಆರೋಪವಿದೆ. ಇಲ್ಲಿಂದ ಸಮರ್ಪಕ ವಿದ್ಯುತ್‌ ನಿರೀಕ್ಷೆ ಮಾಡಲಾಗದು. ನೆಲ್ಯಾಡಿ 33 ಕೆವಿ ಕೇಂದ್ರವಾಗಿದ್ದು, ಓವರ್‌ ಲೋಡ್‌ ಸಮಸ್ಯೆ ಸದಾ ಇರುತ್ತದೆ. ಇದೀಗ ಉಪ್ಪಿನಂಗಡಿ ಮಠ ಎಂಬ 38 ಕೆವಿ ವಿತರಣ ಕೇಂದ್ರ ಬೇಕು ಎನ್ನುತ್ತಾರೆಯೇ ಹೊರತು, ನಿವೇಶನ ಕ್ಕಾಗಿ ಹುಡುಕಾಟ ನಡೆದಿಲ್ಲ. ಈ ಮಧ್ಯೆ ನಿವೇಶನಕ್ಕಾಗಿ ಜನಪ್ರತಿನಿಧಿಗಳ ಸಲಹಾ ಸಮಿತಿ ಕಚೇರಿಗಳಿಗೆ ಅಲೆದಾಟ ನಡೆಸಿತ್ತು. ಈಗ ಸಮಿತಿಯೇ ರದ್ದುಕೊಂಡು ಕಡತ ಬಾಕಿ ಉಳಿದಿದೆ. ನಿವೇಶನ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. 33 ಕೆವಿ ವಿತರಣ ಕೇಂದ್ರ ಮಂಜೂರಾಗುವ ಹೊತ್ತಿಗೆ ಆ ನಿವೇಶನದಲ್ಲಿ ಅನಧಿಕೃತವಾಗಿ ಮನೆಗಳು ನಿರ್ಮಾಣವಾದರೂ ಅಚ್ಚರಿಯಿಲ್ಲ. ಅಂತಹ ಮನೆಗಳಿಗೆ 94 ಸಿ ಯೋಜನೆಯಡಿ ಅಕ್ರಮ -ಸಕ್ರಮ ಹಕ್ಕುಪತ್ರ ನೀಡಿದರೆ, ನಿವೇಶನ ಒಂದು ಹಕ್ಕುಪತ್ರ ಎರಡು ಆಗಲಿದ್ದು, ಸಮಸ್ಯೆಯಾಗಲಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಕಡತ ಬಾಕಿ
ನಿತ್ಯದ ವಿದ್ಯುತ್‌ ಸಮಸ್ಯೆ ಪರಿಹರಿಸಬೇಕಾದರೆ ವಿತರಣ ಕೇಂದ್ರ ಸ್ಥಾಪಿಸಬೇಕೆಂಬ ಪ್ರಸ್ತಾವ ಗ್ರಾಮಸಭೆ, ಜನಸಂಪರ್ಕ ಸಭೆಗಳಲ್ಲೂ ಆಗಿತ್ತು. ಅದಾಗ್ಯೂ ಎರಡು ವರ್ಷಗಳಿಂದ ಉಪ್ಪಿನಂಗಡಿ ಹಿರ್ತಡ್ಕ ಮಠ ಎಂಬಲ್ಲಿ ಸರ್ವೆ ನಂ. 170ರ ಗೋಮಾಳ ಜಾಗದಲ್ಲಿ ಸಾರ್ವಜನಿಕ ಸೇವೆಯಡಿ ಒಂದು ಎಕ್ರೆ 36 ಸೆಂಟ್ಸು ಜಾಗಕ್ಕಾಗಿ ಕೋರಿಕೆ ಸಲ್ಲಿಸಿತ್ತು. ಪರಿಶೀಲನೆ ನಡೆಸಿ, ವರದಿ ಸಲ್ಲಿಸಲು ಜಿಲ್ಲಾಧಿಕಾರಿ ತಾಲೂಕು ದಂಡಾಧಿಕಾರಿಗೆ ಕಳುಹಿಸಿರುವ ಕಡತ ಒಂದು ವರ್ಷದಿಂದ ಬಾಕಿ ಉಳಿದುಕೊಂಡಿದೆ.

ನೀರಾಕ್ಷೇಪಣಾ ಪತ್ರಕ್ಕಾಗಿ ನಿರೀಕ್ಷೆ
ಮೆಸ್ಕಾಂ ಸಬ್‌ಸ್ಟೇಶನ್‌ಗೆ ನಿವೇಶನಕ್ಕಾಗಿ ತಮ್ಮ ಕಚೇರಿಗೆ ಕಡತ ಸಲ್ಲಿಸಲಾಗಿದೆ. ಈಗಾಗಲೇ ಕಡತ ನಮ್ಮ ಕಚೇರಿಯಲ್ಲಿದ್ದು, ಸದ್ರಿ ಜಮೀನು ರಾಷ್ಟ್ರೀಯ ಹೆದ್ದಾರಿ 75 ಹಾಗೂ ಅರಣ್ಯ ಇಲಾಖಾ ಜಾಗಕ್ಕೆ ತಾಗಿಕೊಂಡಿದೆ. ಇದರಿಂದ ಎರಡೂ ಇಲಾಖೆಗಳ ನಿರಾಕ್ಷೇಪಣಾ ಪತ್ರಕ್ಕಾಗಿ ಕೋರಿಕೆ ಸಲ್ಲಿಸಲಾಗಿದೆ. ಈ ಎರಡು ಇಲಾಖೆಗಳ ಆಕ್ಷೇಪಣೆಗಳು ಇಲ್ಲದೇ ಇದ್ದಲ್ಲಿ, ಮೆಸ್ಕಾಂಗೆ ಕೋರಿದ ನಿವೇಶನ ಮಂಜೂರಾತಿಗೆ ಜಿಲ್ಲಾಧಿಕಾರಿಗಳಿಗೆ ಕಡತವನ್ನು ಕಳುಹಿಸಿಕೊಡಲಾಗುವುದು.
– ಅನಂತ ಶಂಕರ
ಪುತ್ತೂರು ತಾಲೂಕು ದಂಡಾಧಿಕಾರಿಗಳು

 ಎಂ.ಎಸ್‌. ಭಟ್‌

ಟಾಪ್ ನ್ಯೂಸ್

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

156

Nikhil Kumarswamy: ಸೋತ ನಿಖಿಲ್‌ಗೆ ಜಿಲ್ಲೆಯ ಪಕ್ಷ ಸಂಘಟನೆ ಹೊಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.