ಕೋಟಿಗದ್ದೆ ಸೇತುವೆ ದುರ್ಬಲ, ಹೊಸ ಸೇತುವೆಗೆ ಪ್ರಸ್ತಾವನೆ
Team Udayavani, Jul 6, 2018, 11:28 AM IST
ಈಶ್ವರಮಂಗಲ: ಪಂಚೋಡಿ-ಗಾಳಿಮುಖ ಜಿ.ಪಂ. ರಸ್ತೆಯ ಕೋಟಿಗದ್ದೆ ಎಂಬಲ್ಲಿರುವ ಕುಸಿಯುವ ಭೀತಿಯಲ್ಲಿರುವ ಸೇತುವೆಯನ್ನು ದ.ಕ.ಜಿ. ಪಂ. ಸ್ಥಾಯೀ ಸಮಿತಿಯ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ, ಜಿ.ಪಂ. ಎಂಜಿನಿಯರ್ ಗೋವರ್ಧನ ವೀಕ್ಷಣೆ ಮಾಡಿ, ಸ್ಥಿತಿಗತಿ ಬಗ್ಗೆ ಚರ್ಚೆ ನಡೆಸಿದರು. ಜು. 6ರಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಖಾರಿ ಡಾ| ರವಿ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಪರಿಸ್ಥಿತಿ ಕುರಿತು ನೀಡುವಂತೆ ಎಂಜಿನಿಯರ್‌ಗೆ ಜಿ.ಪಂ. ಸದಸ್ಯರು ಸೂಚಿಸಿದರು.
ಜಿ.ಪಂ. ಎಂಜಿನಿಯರ್ ಗೋವರ್ಧನ ಮಾತನಾಡಿ, ಸೇತುವೆಯ ಕಂಬಿಗಳಿಗೆ ತುಕ್ಕು ಹಿಡಿದಿರುವುದರಿಂದ ಸಾಮರ್ಥ್ಯ ಕಡಿಮೆ ಇದೆ. ಯಾವುದೇ ಸಂದರ್ಭದಲ್ಲಿ ಕುಸಿಯುವ ಸಾಧ್ಯತೆ ಇದೆ. ಸೇತುವೆ ಅಪಾಯದಲ್ಲಿರುವ ಬಗ್ಗೆ ಎಂಜಿನಿಯರ್ ವಿಭಾಗದ ಮುಖ್ಯ ಕಾರ್ಯನಿರ್ವಾಹಕರಿಗೆ ವರದಿ ಸಲ್ಲಿಸುತ್ತೇನೆ. ಅಲ್ಲಿಂದ ಜಿಲ್ಲಾಧಿಕಾರಿಗಳಿಗೆ ಹೋಗಿ,
ಸರಕಾರಕ್ಕೆ ಸಲ್ಲಿಸಲಾಗುತ್ತದೆ. ಸರಕಾರ ಅನುದಾನ ಸಿಕ್ಕಿದರೆ ನೂತನ ಸೇತುವೆ ನಿರ್ಮಾಣ ಮಾಡಲಾಗುವುದು. ಸೇತುವೆ ಸಾಮರ್ಥ್ಯವನ್ನು ಗುರುತಿಸುವಂತೆ ಮೇಲಧಿಕಾರಿಗಳಿಗೆ ಮನವಿ ಮಾಡಲಾಗುವುದು. ಘನವಾಹನಗಳ ಸಂಚಾರ ನಿರ್ಬಂಧಿಸುವ ಹಕ್ಕು ಜಿ.ಪಂ.ಗೆ ಇಲ್ಲ ಎಂದು ಹೇಳಿದರು. ಕೇರಳದ ಲೋಕೋಪಯೋಗಿ ಇಲಾಖೆ ಪಳ್ಳತ್ತೂರು ಸೇತುವೆ ಕಾಮಗಾರಿ ನಡೆಯುತ್ತಿದ್ದು, ವಾಹನ ಸಂಚಾರ ನಿರ್ಬಂಧಿಸಿರುವುದರಿಂದ ಅನಿವಾರ್ಯವಾಗಿ ನೆರೆಯ ರಾಜ್ಯವನ್ನು ಸಂಪರ್ಕಿಸುವ ಪಂಚೋಡಿ- ಗಾಳಿ ಮುಖ ರಸ್ತೆ ಯಲ್ಲಿ ವಾಹನ ಸಂಚಾರ ಅಧಿಕವಾಗಿದೆ.
ಸುದಿನ ವರದಿ ಫಲಶ್ರುತಿ
‘ಕುಸಿಯುವ ಭೀತಿಯಲ್ಲಿ ಕರ್ನೂರು- ಕೋಟಿಗದ್ದೆ ಸೇತುವೆ’ ಎಂಬ ಶೀರ್ಷಿಕೆಯಲ್ಲಿ ಬುಧವಾರ ಉದಯವಾಣಿಯ ‘ಸುದಿನ’ ದಲ್ಲಿ ಸಚಿತ್ರವರದಿ ಪ್ರಕಟವಾಗಿತ್ತು. ಇದನ್ನು ಗಮನಿಸಿದ ಅಧಿಕಾರಿಗಳು ವೀಕ್ಷಿಸಿದ್ದು, ಮೇಲಧಿಕಾರಿಗಳಿಗೆ ವರದಿ ಕಳುಹಿಸಲಿದ್ದಾರೆ. ನೆಟ್ಟಣಿಗೆಮುಟ್ನೂರು ಗ್ರಾ.ಪಂ. ಉಪಾಧ್ಯಕ್ಷ ಶ್ರೀರಾಮ್ ಪಕ್ಕಳ, ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯೆ ಸಲ್ಮಾ, ಗುತ್ತಿಗೆದಾರ ಮಹಮ್ಮದ್ ಉಪಸ್ಥಿತರಿದ್ದರು.
ಬ್ಯಾನರ್ ಆಳವಡಿಕೆ
ನೆಟ್ಟಣಿಗೆಮುಟ್ನೂರು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಪಂಚೋಡಿ-ಗಾಳಿಮುಖ ಜಿ.ಪಂ.
ರಸ್ತೆಯ ಪಂಚೋಡಿ ಜಂಕ್ಷನ್, ಕರ್ನೂರು, ಗಾಳಿಮುಖ ಜಂಕ್ಷನ್ ಈ ರಸ್ತೆಯಲ್ಲಿ ಘನ ವಾಹನಗಳು, ಟಿಪ್ಪರ್, ಬೋರ್‌ವೆಲ್ ಲಾರಿಗಳ ಸಂಚಾರಗಳನ್ನು 2018 ಸೆಪ್ಟಂಬರ್ ವರೆಗೆ ನಿಷೇಧಿಸಲಾಗಿದೆ. ತಪ್ಪಿದ್ದಲ್ಲಿ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಆದರೆ ಇದಕ್ಕೆ ಬೆಲೆ ಕೊಡದೇ ದಿನನಿತ್ಯ ಹಲವಾರು ಘನ ವಾಹನಗಳು ಸಂಚರಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್
Nikhil Kumarswamy: ಸೋತ ನಿಖಿಲ್‌ಗೆ ಜಿಲ್ಲೆಯ ಪಕ್ಷ ಸಂಘಟನೆ ಹೊಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.