ರಸ್ತೆ ದುರಸ್ತಿ ಇನ್ನೂ ಆಗಿಲ್ಲ, ಚರಂಡಿಯೂ ಇಲ್ಲ!
Team Udayavani, Jul 7, 2018, 6:15 AM IST
ಕುಂದಾಪುರ: ಮಳೆ ಬಂದರೆ ಸಾಕು ಕುಂದಾಪುರದ ರಾಷ್ಟ್ರೀಯ ಹೆದ್ದಾರಿ ಹೊಳೆಯಾಗುತ್ತದೆ. ಶುಕ್ರವಾರ ಮುಂಜಾನೆ ಸುರಿದ ಮಳೆಗೆ ಹೆದ್ದಾರಿಯಿಡೀ ನೀರು ತುಂಬಿ ರಸ್ತೆ ಯಾವುದು ರಸ್ತೆಯ ಅಂಚು ಯಾವುದು ಎಂದು ಅರಿಯದಂತೆ ಇತ್ತು.
ರಾಷ್ಟ್ರೀಯ ಹೆದ್ದಾರಿಗೆ ತೇಪೆ ಹಾಕುವ ಕಾರ್ಯ ಆರಂಭಗೊಂಡಿದೆ. ಆದರೆ ಇದು ಕಣ್ಣಿಗೆ ಮಣ್ಣೆರಚುವಂತೆ ಇದ್ದು ಪರಿಪೂರ್ಣ ತೇಪೆ ಕಾರ್ಯ ನಡೆಯಲೇ ಇಲ್ಲ. ಶಾಸ್ತ್ರಿ ಸರ್ಕಲ್ನಿಂದ ಬಸ್ರೂರು ಮೂರುಕೈ ವರೆಗೆ ತೇಪೆಯೇ ನಡೆದಿಲ್ಲ. ಶಾಸ್ತ್ರಿ ಸರ್ಕಲ್ನಿಂದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಸಂಗಂ ವರೆಗೆ ತುಸು ತೇಪೆ ನಡೆದಿದೆ. ಪೂರ್ಣಪ್ರಮಾಣದಲ್ಲಿ ತೇಪೆ ನಡೆಯದೇ ರಸ್ತೆಯ ಹೊಂಡಗಳು ಹಾಗೆಯೇ ಇವೆ.
ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಎಲ್ಲಿಯೂ ಚರಂಡಿಯೇ ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ. ಮುಖ್ಯ ರಸ್ತೆಯಿಂದ ಸರ್ವಿಸ್ ರಸ್ತೆಗೆ ಸೇರುವಲ್ಲಿ ಕೂಡಾ ನೀರು ನಿಲ್ಲುವ ಕಾರಣ ನೀರು ಸರಾಗವಾಗಿ ಹರಿಯದೇ ತೊಂದರೆಯಾಗುತ್ತಿದೆ. ವಿನಾಯಕ ಥಿಯೇಟರ್ ಬಳಿ ದ್ವಿಪಥ ರಸ್ತೆ ಆರಂಭವಾಗುವವರೆಗೆ ಇಂತಹ ಎಡವಟ್ಟು ಮುಂದು ವರಿದಿದೆ. ಫುಟ್ಪಾತ್ ಇಲ್ಲ, ರಸ್ತೆ ಬದಿಯೂ ನೀರು ನಿಲ್ಲುವುದರಿಂದ ಜನ ರಸ್ತೆಯಲ್ಲೇ ನಡೆಯುತ್ತಿದ್ದು, ವಾಹನಗಳು ಸಾಗುವ ವೇಳೆ ದಾರಿಹೋಕರಿಗೆ ಕೆಸರಿನ ಅಭಿಷೇಕವಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.