ಸಾಮಾಜಿಕ ಜಾಲತಾಣದಿಂದ ದೂರ: ವಿದ್ಯಾರ್ಥಿಗಳ ಪ್ರತಿಜ್ಞೆ!
Team Udayavani, Jul 7, 2018, 2:20 AM IST
ಪುತ್ತೂರು: ಸಾಮಾಜಿಕ ಜಾಲತಾಣ ಅನಿವಾರ್ಯ ಎನ್ನುವಷ್ಟರ ಮಟ್ಟಿಗೆ ಯುವ ಸಮುದಾಯ ಅದಕ್ಕೆ ಅಂಟಿಕೊಂಡಿರುವ ಈ ಸಂದರ್ಭದಲ್ಲಿ ಪುತ್ತೂರಿನ ಅಂಬಿಕಾ ವಿದ್ಯಾಲಯದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಕಾಲಘಟ್ಟ ಮುಗಿಯುವವರೆಗೆ ಸಾಮಾಜಿಕ ಜಾಲತಾಣಗಳನ್ನು ಬಳಸುವುದಿಲ್ಲ ಎಂದು ಸ್ವ- ಇಚ್ಛೆಯಿಂದ ಪ್ರತಿಜ್ಞೆ ಮಾಡಿದ್ದಾರೆ.
ವಿದ್ಯಾಲಯದ ಪಿಯುಸಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶುಕ್ರವಾರ ತಾವೇ ಸರಳ ಕಾರ್ಯಕ್ರಮ ಆಯೋಜಿಸಿ, ಶೈಕ್ಷಣಿಕ ಅವಧಿಯ ಬದುಕಿನಲ್ಲಿ ಸಾಮಾಜಿಕ ಜಾಲತಾಣವನ್ನು ಬಳಸುವುದಿಲ್ಲ ಎಂದು ತಂದೆ, ತಾಯಿ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ್ದಾರೆ. ಸಾಮಾಜಿಕ ಜಾಲತಾಣಗಳು ಯುವ ಸಮುದಾಯವನ್ನು ಅಡ್ಡ ಹಾದಿಯಲ್ಲಿ ಸಾಗುವಂತೆ ಪ್ರೇರೇಪಿಸುತ್ತವೆ. ಅನಪೇಕ್ಷಿತ ವಿಚಾರಗಳು ಹದಿಹರೆಯದ ಮನಸುಗಳನ್ನು ಕದಡುತ್ತಿವೆ. ಇದರಿಂದ ದೂರವಿರಬೇಕೆಂದು ಈ ವಿದ್ಯಾರ್ಥಿಗಳು ನಿರ್ಧರಿಸಿ ಪ್ರತಿಜ್ಞಾ ವಿಧಿ ಕೈಗೊಂಡಿದ್ದಾರೆ.
ಸಾಮಾಜಿಕ ಜಾಲತಾಣದಿಂದ ಆಗುತ್ತಿರುವ ದುರುಪಯೋಗ ತಡೆಯಲು ನಮ್ಮಿಂದ ಸಾಧ್ಯವಿಲ್ಲದಿದ್ದರೆ ನಾವೇ ಅದರಿಂದ ದೂರವಿದ್ದರೆ ಉತ್ತಮ. ಜಾಲತಾಣಗಳ ಬಳಕೆಯ ಕಾರಣದಿಂದ ಶಿಕ್ಷಣದ ಮೇಲಿನ ಗಮನ ಕಡಿಮೆಯಾಗುತ್ತಿದೆ. ಇದಕ್ಕಾಗಿ ನಾವೀಗ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದರು. ನಮ್ಮ ಉಪಕ್ರಮ ಆರಂಭಿಕ ಹೆಜ್ಜೆ. ಇದು ಮಾದರಿಯಾಗಲಿ ಎಂದು ವಿದ್ಯಾರ್ಥಿನಿಯರಾದ ಸಾಯಿಲಕ್ಷ್ಮೀ ಹಾಗೂ ಸೋನಮ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Mangaluru; ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ : ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.