ರಿಯಾಯಿತಿ ದರದಲ್ಲಿ ನಂದಿನಿ ಸಿಹಿ ಉತ್ಪನ್ನ
Team Udayavani, Jul 7, 2018, 2:15 PM IST
ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟವು (ಕೆಎಂಎಫ್) ತನ್ನ 20 ವಿವಿಧ ಸಿಹಿ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸುವ ಉದ್ದೇಶದಿಂದ “ನಂದಿಸಿ ಸಿಹಿ ಉತ್ಸವ’ ಹಮ್ಮಿಕೊಂಡಿದ್ದು, ಎಲ್ಲಾ ನಂದಿನಿ ಸಿಹಿ ಉತ್ಪನ್ನಗಳ ಮೇಲೆ ಶೇ.10 ರಿಯಾಯಿತಿ ನೀಡಿದೆ.
ಕೆಎಂಎಫ್ ಹಾಲಿನ ಜತೆ 64 ಬಗೆಯ ಹಾಲು ಉತ್ಪನ್ನಗಳನ್ನು ಸಿದ್ಧಪಡಿಸಿ ನಂದಿನಿ ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದು, ಅವುಗಳಲ್ಲಿ 20ಕ್ಕೂ ಹೆಚ್ಚು ಸಿಹಿ ಉತ್ಪನ್ನಗಳಿವೆ. ಆದರೆ, ಗ್ರಾಹಕರಿಗೆ ಮೈಸೂರು ಪಾಕ್, ಪೇಡಾ ಹೊರತು ಪಡಿಸಿ ಮತ್ಯಾವ ಸಿಹಿ ಪದಾರ್ಥಗಳ ಪರಿಚಯವಿಲ್ಲ. ಹೀಗಾಗಿ ಶುಕ್ರವಾರದಿಂದ ಜು.20 ವರೆಗೂ 15 ದಿನಗಳ ನಂದಿನಿ ಸಿಹಿ ಉತ್ಸವ ಎಂಬ ವಿಶೇಷ ಕಾರ್ಯಕ್ರಮದ ಆಯೋಜಿಸಿದೆ.
ಉತ್ಸವದ ಅಂಗವಾಗಿ ಬಾದಾಮ್ ಬರ್ಫಿ, ಕ್ಯಾಷೂÂಬರ್ಫಿ, ಕೇಸರ್ ಪೇಡಾ, ಚಾಕಲೇಟ್ ಬರ್ಫಿ, ಜಾಮೂನ್, ರಸಗುಲ್ಲಾ ಸೇರಿದಂತೆ ತನ್ನ ಎಲ್ಲಾ ಸಿಹಿ ಉತ್ಪನ್ನಗಳ ಮೇಲೆ ಶೇ.10 ರಿಯಾಯಿತಿ ನೀಡಿದೆ. ರಾಜ್ಯದ ಎಲ್ಲಾ ನಂದಿನಿ ಮಳಿಗೆಗಳಲ್ಲಿ ಗ್ರಾಹಕರು ಈ ಸೌಲಭ್ಯ ಪಡೆಯಬಹುದು ಎಂದು ಕೆಎಂಎಫ್ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ
Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.