ಸಣ್ಣ ತನದಿಂದ ಮಂದಿರ ನಿರ್ಮಾಣ ವಿಳಂಬ
Team Udayavani, Jul 7, 2018, 2:15 PM IST
ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬೇಕಾದ ಇಟ್ಟಿಗೆ, ಕಲ್ಲು ಕಂಬಗಳು ಸಿದ್ದಗೊಂಡಿದ್ದು, ಸಣ್ಣತನದ ರಾಜಕಾರಣ ಮಂದಿರ ನಿರ್ಮಾಣಕ್ಕೆ ಅಡ್ಡಿಯಾಗುತ್ತಿದೆ ಎಂದು ವಿಶ್ರಾಂತ ರಾಜ್ಯಪಾಲ ಡಾ.ಎಂ.ರಾಮಾ ಜೋಯಿಸ್ ವಿಷಾದ ವ್ಯಕ್ತಪಡಿಸಿದರು.
ಭಾರತೀಯ ವಿದ್ಯಾಭವನ ಹಾಗೂ ಇಸ್ಕಾನ್ ಬೆಂಗಳೂರು ವತಿಯಿಂದ ಇಸ್ಕಾನ್ ಮಲ್ಟಿ ವಿಷನ್ ಥಿಯೇಟರ್‌ನಲ್ಲಿ ಆಯೋಜಿಸಿರುವ “ರಾಮಾಯಣ ಸಂದೇಶ’, ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕೆಲವು ರಾಜಕಾಣಿಗಳ ಸಣ್ಣತನದ ಫಲವಾಗಿ ರಾಮಮಂದಿರ ನಿರ್ಮಾಣ ವಿಳಂಬವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದ್ದು, ಅತಿ ಶೀಘ್ರದಲ್ಲಿ ಇತ್ಯರ್ಥವಾಗುವ ಸಾಧ್ಯತೆ ಇದೆ. ಭವ್ಯವಾದ ರಾಮಮಂದಿರ ನಿರ್ಮಾಣಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಟ್ಟಿಗೆ, ಕಲ್ಲು ಕಂಬ ಸೇರಿದಂತೆ ಕೆತ್ತನೆಯ ಕಾರ್ಯಗಳು ಪೂರ್ಣಗೊಂಡಿದೆ. ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಿದ್ದಾರೆ ಎಂದು ಹೇಳಿದರು.
ಶ್ರೀರಾಮ ತನ್ನ ಕಷ್ಟದ ದಿನಗಳಲ್ಲೂ ಧರ್ಮದಂತೆ ನಡೆದುಕೊಂಡು, ರಾಜಧರ್ಮ ಪಾಲಿಸಿದ್ದಾನೆ. ಸಂವಿಧಾನದಲ್ಲಿ ಎಲ್ಲ ಗಂಡುಮಕ್ಕಳಿಗೂ ಸಮಾನ ಹಕ್ಕಿದ್ದರೆ ರಾಜಧರ್ಮದಲ್ಲಿ ಹಿರಿಯ ಮಗನಿಗೆ ವಿಶೇಷ ಆದ್ಯತೆ ಇರುತ್ತದೆ. ದಶರಥ ಮಹಾರಾಜನ ಹಿರಿಯ ಮಗನಾದ ಶ್ರೀರಾಮ, ತನಗೆ ರಾಜ್ಯಭಾರ ಸಿಗಲಿಲ್ಲ ಎಂದು ಎಲ್ಲಿಯೂ ವಿರೋಧ ವ್ಯಕ್ತಪಡಿಸಿಲ್ಲ. ಆದರೆ, ಇಂದಿನ ರಾಜಕಾರಣಿಗಳಾಗಿದ್ದರೆ ರಾಮ ಇನ್ನಷ್ಟು ದಿನ ವನವಾಸದಲ್ಲೇ ಇರಲಿ ಎನ್ನುತ್ತಿದ್ದರು ಎಂದು ವಿಶ್ಲೇಷಿಸಿದರು.
ಕರ್ನಾಟಕ ಸಂಸ್ಕೃತಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್ ಮಾತನಾಡಿ, ಶ್ರೀರಾಮ ಕುಟುಂಬ ಧರ್ಮವನ್ನು ಪ್ರತಿನಿಧಿಸಿದ್ದರೆ, ಶ್ರೀಕೃಷ್ಣ ಲೋಕಧರ್ಮದ ಪ್ರತಿನಿಧಿ. ಕುಟುಂಬ ಧರ್ಮ ಮತ್ತು ಲೋಕಧರ್ಮದ ನಡುವೆ ಸಾಮರಸ್ಯ ಬೆಸೆಯುವ ಕೆಲಸ ಇಂದು ಆಗಬೇಕು.
ವಾಲ್ಮೀಕಿ ರಾಮಾಯಣ, ವ್ಯಾಸರ ಮಹಾಭಾರತ, ಭಾಗವತ ಮಹಾಪುರಾಣವು ಇದೇ ತತ್ವ ಸಾರುತ್ತದೆ. ಕುಟುಂಬ ಧರ್ಮ ಛಿದ್ರವಾಗುತ್ತಿರುವ ಕಾಲಗಟ್ಟದಲ್ಲಿ ನಾವಿದ್ದೇವೆ. ಕುಟುಂಬ ಧರ್ಮವನ್ನು ಗಟ್ಟಿಯಾಗಿ ಹಿಡಿದು ಲೋಕಧರ್ಮವನ್ನು ಅದರೊಂದಿಗೆ ಜತೆಗೂಡಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿದ್ವಾಂಸರಾದ ಶಿಮ್ಲಾದ ಪ್ರೊ.ರಾಜೇಂದ್ರ ಮಿಶ್ರ, ವಾರಣಾಸಿಯ ಡಾ.ಕಾಮೇಶ್ವರ ಉಪಾಧ್ಯಾಯ, ದೆಹಲಿಯ ಪ್ರೊ.ಶಶಿಪ್ರಭಾ ಕುಮಾರ್, ಬೆಂಗಳೂರಿನ ಡಾ.ಎಸ್.ನಾಗರಾಜ್ ಅವರನ್ನು ಸನ್ಮಾನಿಸಲಾಯಿತು. ಭಾರತೀಯ ವಿದ್ಯಾಭವನದ ಅಧ್ಯಕ್ಷ ಎನ್.ರಾಮಾನುಜ, ಗೌರವ ಕಾರ್ಯದರ್ಶಿ ಎಸ್.ಕೆ.ರಾಘವನ್, ಇಸ್ಕಾನ್ ಅಧ್ಯಕ್ಷ ಮಧುಪಂಡಿತ್ ದಾಸ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.