ಅಡಿಕೆ ಮರದ ಪೀಠೋಪಕರಣ
Team Udayavani, Jul 7, 2018, 3:16 PM IST
ಬಹೂಪಯೋಗಿ ಅಡಿಕೆ ಮರವು ರೈತರಿಗೆ ಮಾತ್ರವಲ್ಲ ಕುಶಲಕರ್ಮಿಗಳಿಗೂ ವರದಾನವಾಗಿದೆ. ಇದರ ಹಾಳೆಯಿಂದ ಹಾಗೂ ಮರದಿಂದ ತಯಾರಿಸುವ ಪೀಠೋಪಕರಣಗಳಿಗೆ ಈಗ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇವೆ. ಅಡಿಕೆ ಮರದ ಪೀಠೋಪಕರಣಗಳ ಬಳಕೆಯಿಂದ ಮನೆಯ ಸೌಂದರ್ಯ ಹಾಗೂ ಶ್ರೀಮಂತಿಕೆ ವೃದ್ಧಿಯಾಗುವುದಲ್ಲದೆ ಮನೆಯೊಳಗೆ ಪರಿಸರ ಸ್ನೇಹಿ ವಾತಾವರಣ ನಿರ್ಮಿಸಬಹುದು.
ಏನು ತಯಾರಿಸಬಹುದು?
ಅಡಿಕೆ ಮರ, ಹಾಳೆಗಳಿಂದ ಮನೆಯ ಹೊರಾಂಗಣ ಗೇಟ್, ಮನೆಯ ಮೇಲ್ಛಾವಣಿ, ಟೇಬಲ್, ಕಬೋರ್ಡ್, ಮಂಚ ಹಾಗೂ ದೇವರಕೋಣೆಯ ಪೀಠ, ಮಂಟಪ, ತೂಗುವ ಮಂಚವನ್ನು ತಯಾರಿಸಬಹುದು.
ಗೆದ್ದಲು ಸಮಸ್ಯೆ ಇಲ್ಲ
ಅಡಿಕೆ ಮರದ ಪೀಠೋಪಕರಣಗಳ ಬಳಕೆ ಮನೆಯ ಪರಿಸರಕ್ಕೆ ಒಳ್ಳೆಯದು. ಅಡಿಕೆ ಮರದ ಪೀಠೋಪಕರಣಗಳನ್ನು ಸರಿಯಾಗಿ ಮೊದಲ ಮೂರು ವರ್ಷ ಚೆನ್ನಾಗಿ ನೋಡಿಕೊಂಡರೆ, ಸರಿ ಸುಮಾರು 20 ವರ್ಷಗಳ ಬಾಳಿಕೆ ಬರುತ್ತವೆ ಎನ್ನುತ್ತಾರೆ ಕುಶಲ ಕರ್ಮಿಗಳು. ಅಡಿಕೆ ಮರದ ಪೀಠೋಪಕರಣಗಳಿಗೆ ಗೆದ್ದಲಿನ ಸಮಸ್ಯೆ ಇರುವುದಿಲ್ಲ. ಇದರಿಂದಲೇ ಇದು ಹೆಚ್ಚು ದಿನ ಬಾಳಿಕೆ ಬರಲು ಸಾಧ್ಯ.
ಶಿವ ಸ್ಥಾವರಮಠ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.