ಮೆಟ್ಟಿಲುಗಳ ಅಂದ ಹೆಚ್ಚಿಸುವ ಸ್ಟಿಕರ್ಸ್
Team Udayavani, Jul 7, 2018, 3:34 PM IST
ಮನೆಯ ಗೋಡೆಗಳಿಗೆ ಬಣ್ಣದ ಬದಲು ವಾಲ್ ಸ್ಟಿಕ್ಕರ್ಗಳು ಅಂಟಿಕೊಂಡಿವೆ. ಈಗ ಇದೇ ಟ್ರೆಂಡ್ ಸ್ವಲ್ಪ ಬದಲಾಗಿ ಮನೆಯ ಮೆಟ್ಟಿಲುಗಳನ್ನೂ ಆವರಿಸಿವೆ. ಮನೆಯಲ್ಲಿ ಲಭ್ಯವಿರುವ ಸ್ಥಳವನ್ನು ಆಧರಿಸಿ, ಮನೆಯ ಮೆಟ್ಟಿಲುಗಳನ್ನು ಸುಂದರ ಮತ್ತು ಸ್ವಚ್ಛಂದವಾಗಿ ಕಾಣುವಂತೆ ಮಾಡುವುದೇ ಈ ಸ್ಟಿಕ್ಕರ್ಗಳ ಬಳಕೆಯ ಉದ್ದೇಶವಾಗಿದೆ.
ಮನೆಯ ಮೆಟ್ಟಿಲುಗಳಿಗೆ ಇಂತಹ ಸ್ಟಿಕ್ಕರ್ಗಳನ್ನು ಅಳವಡಿಸುವ ಮುನ್ನ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಮೆಟ್ಟಿಲುಗಳು ಇರುವ ಆಕಾರ, ವಿನ್ಯಾಸ ಮುಂತಾದ ವಿಷಯಗಳನ್ನು ಪರೀಕ್ಷಿಸಿಯೇ ಇವುಗಳನ್ನು ಅಂಟಿಸಬೇಕಾಗುತ್ತದೆ. ಕೆಲವೊಮ್ಮೆಮೆಟ್ಟಿಲುಗಳು ಹಳೆಯದಾಗಿದ್ದರೆ ಬಿರುಕುಗಳು ಬಂದಿರುವ ಸಾಧ್ಯತೆಗಳಿರುತ್ತವೆ. ಇವುಗಳ ದುರಸ್ತಿ ಬಳಿಕವೇ ಸ್ಟಿಕ್ಕರ್ಗಳನ್ನು ಅಳವಡಿಸಬೇಕು. ಇಲ್ಲದಿದಲ್ಲಿ ಒಂದು ಬಿರುಕು ಪೂರ್ತಿ ಮೆಟ್ಟಿಲುಗಳ ಅಂದ ಕೆಡಿಸುವ ಸಾಧ್ಯತೆ ಜಾಸ್ತಿ. ನಮ್ಮ ಅಭಿರುಚಿ, ಆಯ್ಕೆಗೆ ತಕ್ಕಂತೆ ಇಂದು ಮೆಟ್ಟಿಲುಗಳಿಗೆ ಅಂಟಿಸಬಹುದಾದ ಹಲವು ಬಗೆಯ ಸ್ಟಿಕ್ಕರ್ಗಳು ಮಾರುಕ್ಟೆಯಲ್ಲಿವೆ.
ಸ್ಫೂರ್ತಿದಾಯಕ ಶಬ್ದಗಳು
ಸ್ಫೂರ್ತಿದಾಯಕ ಶಬ್ದಗಳು ಬರೆದಿರುವ ಮೆಟ್ಟಿಲುಗಳ ಸ್ಟಿಕರ್ಸ್ ಗಳು ಇಂದು ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಪಡೆದಿವೆ. ಪ್ರತಿ ಮೆಟ್ಟಿಲುಗಳ ನಡುವೆ ಇಂತಹ ಸ್ಟಿಕರ್ಸ್ ಗಳನ್ನು ಅಂಟಿಸುವುದರಿಂದ, ಅವುಗಳು ನಮಗೆ ಸದಾ ಸ್ಫೂರ್ತಿ ತುಂಬುವುದರ ಜತೆ, ಮೆಟ್ಟಿಲುಗಳ ಅಂದ ಹೆಚ್ಚಿಸುತ್ತವೆ.
ಸೀನರಿಗಳು
ಪ್ರಕೃತಿ ಸೌಂದರ್ಯ ಬಿಂಬಿಸುವ ಜಲಪಾತ, ಹೊಳೆ, ಬೆಟ್ಟ-ಗುಡ್ಡಗಳು ಮುಂತಾದ ವಿನ್ಯಾಸವನ್ನು ಹೊಂದಿರುವ ಸ್ಟಿಕ್ಕರ್ಗಳು ಮೆಟ್ಟಿಲುಗಳ ಅಂದದದಜತೆ ಮನೆಯ ಅಂದ ಹೆಚ್ಚಿಸಲೂ ಸಹಕಾರಿಯಾಗಿವೆ. ಸದಾ ಪ್ರಕೃತಿ ನಡುವೆ ಜೀವಿಸಬೇಕೆಂದು ಹಂಬಲಿಸುವವರಿಗೆ ಇಂತಹ ಸ್ಟಿಕ್ಕರ್ಗಳು ಮುದ ನೀಡಬಲ್ಲವು.
ಪೈಂಟಿಂಗ್ಸ್
ಸಾಮಾನ್ಯವಾಗಿ ಮೆಟ್ಟಿಲುಗಳ ನಡುವೆ ಕಂಡು ಬರುವ ಖಾಲಿ ಜಾಗಕ್ಕೆ ಗೋಡೆಗಳಿಗೆ ಬಳಿಯುವಂತೆ ಬಣ್ಣವನ್ನು ಬಳಿಯಲಾಗುತ್ತೆ. ಆದರೆ ಇನ್ನು ಮುಂದೆ ಅವುಗಳಿಗೆ ಬಣ್ಣ ಬಳಿಯುವ ಗೋಜಿಗೆ ಹೋಗಬೇಕಿಲ್ಲ. ಪೈಂಟ್ ಗಳಿಗಿಂತ ಕಡಿಮೆ ದರದಲ್ಲಿ ಅದೇ ರೀತಿ ತೋರುವ ಸ್ಟಿಕ್ಕರ್ ಗಳು ದೊರೆಯುತ್ತಿವೆ. ಹೀಗಾಗಿ ಕಡಿಮೆ ಬಜೆಟ್‌ನಲ್ಲಿ ಮೆಟ್ಟಿಲುಗಳ ಅಂದ ಹೆಚ್ಚಿಸಬೇಕೆಂಬ ಹಂಬಲ ನಿಮ್ಮದಾಗಿದ್ದರೆ ಸ್ಟಿಕ್ಕರ್ಗಳೇ ಬೆಸ್ಟ್.
ಪ್ರಸನ್ನ ಹೆಗಡೆ
ಊರಕೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.